Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಅರಗು

August 10, 2005 - 2:42pm — T S GuruRaja

ಅರಗು

(ವೈಜ್ಞಾನಿಕ ಲೇಖನ)

ಪ್ರಾಚೀನ ಕಾಲದಲ್ಲಿಯೆ ಅರಗು ಮತ್ತು ಅರಗಿನ ಹಲವು ಉಪಯೋಗಗಳನ್ನು ಭಾರತೀಯರು ಅರಿತುಕೊಂಡಿದ್ದರೆಂದು ಅಥರ್ವವೇದದಲ್ಲಿ ಅರಗಿನ ಕುರಿತಾದ ಉಲ್ಲೇಖದಿಂದ ತಿಳಿದುಬರುತ್ತದೆ. ಮಹಾಭಾರತದ ಅರಗಿನ ಮನೆ (ಲಾಕ್ಷಾಗೃಹ)ಯ ಪ್ರಸಂಗ ಯಾರಿಗೆ ತಿಳಿದಿಲ್ಲ? ಭಾರತೀಯರಿಗೆ ಪರಿಚಿತವಾಗಿದ್ದ ಈ ವಸ್ತುವನ್ನು ಅರಬ್ಬಿ ನಾವಿಕರು ಪ್ರಪಂಚದ ಇತರೆಡೆಗೆ ಪರಿಚಯಿಸಿದರು.

ಲಾಕ್ಷಾತರು (ಲಾಕ್ಷಾತರು ಮುತ್ತುಗದ ಮರ, ವೈಜ್ಞಾನಿಕ ನಾಮದ್ವಯ ಬ್ಯೂಟಿಯಾ ಫ್ರಾಂಡೋಸ, ಬ್ಯೂಟಿಯಾ ಮಾನೋಸ್ವರ್ಮ, ಕುಟುಂಬ: ಪ್ಯಾಪಿಲಿಯೋ ನೇಸಿ) ವೃಕ್ಷವನ್ನಾಶ್ರಯಿಸಿ ಬದುಕುವ, (ಅರಗಿನ ಕೀಟ ಜಾಲಿ (ಅಕೇಶಿಯಾ ಅರೇಬಿಕ) ಬೋರೆ(ಜಿಜಿಪಸ್ ಜುಜಬ) ಹಾಗು ಸಾಲ್ (ಶೋರಿಯಾ ರೊಬಸ್ಟ) ಮುಂತಾದ ಮರಗಳನ್ನೂ ಸಹ ಆಶ್ರಯಿಸಿ ಬದುಕುತ್ತದೆ). ಹೋಮೋಪ್ಟಿರ ಕೀಟಗಳ ಗುಂಪಿಗೆ ಸೇರಿದ, ಅರಗಿನ ಕೀಟದ ವೈಜ್ಞಾನಿಕ ನಾಮದ್ವಯ ಲ್ಯಾಸಿಫೆರಲ್ಯಾಕ(ಟ್ಯಾಖಾರ್ಡಿಯ ಲ್ಯಾಕ). ಹೆಣ್ಣು ಕೀಟ ತನ್ನ ದೇಹದ ಚರ್ಮದಲ್ಲಿರುವ ಗ್ರಂಥಿಗಳಿಂದ ಸ್ರವಿಸುವ ಸ್ರಾವ, ಹೊರವಾತಾವರಣದ ಪ್ರಭಾವದಿಂದ ಗಟ್ಟಿಯಾಗುತ್ತದೆ. ಹೀಗೆ ಗಟ್ಟಿಯಾದ ಸ್ರಾವವೇ ಅರಗು.

ಪಾಕಿಸ್ಥಾನ, ಬರ್ಮ, ಶ್ರೀಲಂಕ, ಚೈನಾ, ಮಲಯಗಳಲ್ಲಿಯೂ ಕಂಡು ಬರುವ ಅರಗಿನ ಕೀಟದ ಸಂಖ್ಯಾ ಸಾಂದ್ರತೆ ಅಧಿಕವಾಗಿರುವುದು ಭಾರತದಲ್ಲಿ. ಇಂದಿಗೂ ಪ್ರಪಂಚದ ಅರಗಿನ ಉತ್ಪಾದನೆಯಲ್ಲಿ ಭಾರತದ್ದೆ ಮೇಲುಗೈ, ಸುಮಾರು ಶೇ. ೭೦ರಷ್ಟು. ವಾರ್ಷಿಕ ಉತ್ಪಾದನೆ ೩೦೦೦ಟನ್ ಗೂ ಹೆಚ್ಚು. ಮಧ್ಯಪ್ರದೇಶ, ಅಸ್ಸಾಮ್ ಹಾಗು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅರಗು ವಾಣಿಜ್ಯ ಬೆಳೆ. ಅರಗಿನಿಂದ ನಮ್ಮ ವಾರ್ಷಿಕ ವಿದೇಶಿ ವಿನಿಮಯ ಸುಮಾರು ರೂ ಹದಿನೈದು ಕೋಟಿ.

ಅರಗಿನ ಕೀಟವನ್ನು ಕುರಿತಾದ ಪ್ರಥಮ ವೈಜ್ಞಾನಿಕ ಅಧ್ಯಯನ ೧೭೦೯ರಲ್ಲಿ ಫ್ರಾನ್ಸಿನ ಪಾದ್ರಿ ಟ್ಯಾಖಾರ್ಡ್ ರಿಂದ ನಡೆಯಿತು. ಪ್ರಬುದ್ಧ ಹೆಣ್ಣು ಕೀಟ ಗಂಡು ಕೀಟದೊಂದಿಗೆ ಸಂಯೋಗಗೊಂಡ ನಂತರ ತನ್ನ ಸುತ್ತಲು ನಿರ್ಮಿಸಿಕೊಂಡ ಅರಗಿನ ಕವಚದಲ್ಲಿ ಸುಮಾರು ಮೂರುನೂರರಿಂದ ಐದುನೂರು ಮೊಟ್ಟೆಗಳನ್ನಿಡುತ್ತದೆ. ಕೆಲವೇ ಗಂಟೆಗಳಲ್ಲಿ ಮೊಟ್ಟಗಳಿಂದ ಹೊರ ಬರುವ ಕೆಂಪು ಬಣ್ಣದ ನಿಂಫ್ (ಡಿಂಬಕಗಳು), ಅರಗಿನ ಕವಚದಲ್ಲಿರುವ ಸೂಕ್ಷ್ಮ ರಂಧ್ರಗಳ ಮೂಲಕ, ಕವಚದಿಂದ ಹೊರಬಂದು, ಕೆಲಕಾಲ ಕೊಂಬೆಗಳ ಮೇಲೆಲ್ಲಾ ಚಲಿಸಿ, ಅಂತಿಮವಾಗಿ ಯೋಗ್ಯವಾದ ಕೊಂಬೆಯ ಮೇಲೆ ಸ್ಥಿತಿಗೊಂಡು, ತಮ್ಮ ಹೀರುನಳಿಕೆಯಿಂದ ಕೊಂಬೆಯ ರಸಸಾರವನ್ನು ಹೀರುತ್ತಾ ಮುಂದಿನ ಬೆಳವಣಿಗೆಯಲ್ಲಿ ತೊಡಗುತ್ತವೆ. ಡಿಂಬಕಗಳ ಮುಂದಿನ ಬೆಳವಣಿಗೆ ನಡೆಯುವುದು, ಅವುಗಳ ಚರ್ಮದ ಗ್ರಂಥಿಗಳಿಂದ ಸ್ರವಿಸಿದ ಸ್ರಾವ ಹೊರವಾತಾವರಣದ ಸಂಪರ್ಕದಿಂದ ಗಟ್ಟಿಯಾಗಿ ಉಂಟಾದ ಅರಗಿನ ಕವಚದಲ್ಲಿ. ಬೆಳವಣಿಗೆಯ ಹಂತದಲ್ಲಿ ಡಿಂಬಕಗಳು ಮೂರು ಬಾರಿ ಪೊರೆಯನ್ನು ಕಳಚುತ್ತವೆ.

ಬೆಳವಣಿಗೆ ಪೂರ್ಣಗೊಂಡ ನಂತರ ಕವಚದಿಂದ ಹೊರಹೊಮ್ಮುವ ಪ್ರಬುದ್ಧ ಕೀಟಗಳಲ್ಲಿ ಗಂಡು ಕೀಟಗಳ ಸಂಖ್ಯೆ ಸರಿಸುಮಾರು ಶೇ. ೩೦ರಿಂದ ೪೦ರಷ್ಟು, ಅಭಾವ ಕಾಲದಲ್ಲಿ ಈ ಸಂಖ್ಯೆ ಮತ್ತೂ ಕಡಿಮೆಯಾಬಹುದು. ಗಮ್ಡು ಕೀಟಗಳಲ್ಲಿ ಕೆಲವು ರೆಕ್ಕೆಗಳನ್ನು ಪಡೆದಿದ್ದರೆ, ಕೆಲವು ರೆಕ್ಕೆರಹಿತವಾಗಿರುತ್ತವೆ. ರೆಕ್ಕೆಗಳಿಂದ ಗಮ್ಡು ಕೀಟಗಳಿಗೆ ಗಮನಾಱವಾದಂತಹ ಯಾವ ಉಪಯೋಗವೂ ಇಲ್ಲದಿರುವುದರಿಂದ, ಈ ವ್ಯದ್ಯಾಸ ಹೆಚ್ಚು ಮಹತ್ವ ಪಡೆದಿಲ್ಲ (ಒಂದು ವೈಜ್ಞಾನಿಕ ವಿಶ್ಲೇಷಣೆಯ ಪ್ರಕಾರ, ಜೀವ ವಿಕಾಸ ಪಥದಲ್ಲಿ, ಮೂಲದಲ್ಲಿ ರೆಕ್ಕೆಗಳಿಂದ ಹಾರುತ್ತಿದ್ದ ಗಂಡು ಕೀಟ, ಕಾಲಕ್ರಮೇಣ ಸರಳೀಕೃತಗೊಂಡು ರೆಕ್ಕೆಗಳನ್ನು ಕಳೆದುಕೊಂಡಿತು. ಇಂದಿನ ಅರಗಿನ ಕೀಟ ಹಾರಲಶಕ್ತವಾದದ್ದು. ಕೆಲವು ಗಂಡು ಕೀಟಗಳಲ್ಲಿ ಇಂದಿಗೂ ಕಂಡು ಬರುವ ರೆಕ್ಕೆಗಳು, ಮೂಲ ಗುಣದ ಇಂದಿನ ತೋರ್ಪಡಿಕೆ.

ಗಂಡು ಕೀಟಗಳ ಜೀವಿತಾವಧಿ ಮೂರರಿಂದ ನಾಲ್ಕು ದಿನಗಳು. ಈ ಅವಧಿಯೊಳಗೆ ಗಂಡು ಕೀಟಗಳು ಮಿಂಚಿನಂತೆ ಚಲಿಸಿ ಆದಷ್ಟೂ ಹೆಣ್ಣು ಕೀಟಗಳೊಂದಿಗೆ ಸಂಯೋಗವನ್ನು ನಡೆಸುತ್ತವೆ. ಸಂಯೋಗದ ನಂತರ ಹೆಣ್ಣು ಕೀಟದ ಬೆಳವಣಿಗೆ ತೀವ್ರಗತಿಯಲ್ಲಿರುತ್ತದೆ. ಈ ಸಮಯದಲ್ಲಿ ಅರಗಿನ ಉತ್ಪಾದನೆಯೂ ಹೆಚ್ಚು. ಈ ರೀತಿಯಲ್ಲಿ ಉತ್ಪಾದನೆಗೊಂಡ ಅರಗು ಕೊಂಬೆಗಳ ಮೇಲೆ ಮುದ್ದೆ ಮುದ್ದೆಯಾಗಿ ಹರಡಿಕೊಳ್ಳುತ್ತದೆ. ಅರಗಿನ ಕವಚ ನಿರ್ಮಿಸಿಕೊಂಡ ಹೆಣ್ಣು ಕೀಟ ಮೊಟ್ಟೆಗಲನ್ನಿಡುವ ಕ್ರಿಯೆಯನ್ನು ಆರಂಭಿಸುತ್ತದೆ. ಜೀವನ ಚಕ್ರ ಹೀಗೆಯೆ ಮುಂದುವರೆಯುತ್ತದೆ. ಕೀಟದ ಜೀವನ ಚಕ್ರ ಹೊರ ವಾತಾವರಣದ ಉಷ್ಣತೆಯನ್ನನುಸರಿಸಿ ನಾಲ್ಕರಿಂದ ಎಂಟುವಾರಗಳಲ್ಲಿ ಪೂರ್ಣಗೊಳ್ಳುತ್ತದೆ. ಅರಗಿನ ಕೀಟದಲ್ಲಿ ವರ್ಷಕ್ಕೆ, ಬೇಸಿಗೆ ಹಾಗೂ ಚಳಿಗಾಲದ ಬ್ರೂಡ್ ಎಂಬ ಎರಡು ಚಕ್ರಗಳು ಬರುತ್ತವೆ.

ಹೀಗೆ ಉತ್ಪಾದನೆಗೊಂಡ ಅರಗನ್ನು ಮರದಿಂದ ಸಂಗ್ರಹಿಸಿ, ಸಂಸ್ಕರಿಸಿ ಬೇಕಾದ ಆಹಾರಕ್ಕೆ ಅಚ್ಚು ಹೊಯ್ಯಲಾಗುತ್ತದೆ. ಪ್ರಾಚೀನಕಾಲದಿಂದಲೂ ಭಾರತ ಹಾಗು ಪರ್ಷಿಯಾದಲ್ಲಿ, ಅರಗಿನಿಂದ ಉಣ್ಣೆಗೆ ಕೆಂಪು ಹಾಗೂ ಕೇಸರಿ ಬಣ್ಣ ಕಟ್ಟಲಾಗುತ್ತದೆ. ೧೯ನೇ ಶತಮಾನದ ಪ್ರಾರಂಭದಲ್ಲಿ ಅರಗಿಗೆ ಇದ್ದಂತಹ ಉಪಯೋಗಗಳು, ಇಂದಿನ ಆಧುನಿಕ ಸಂಶ್ಲೇಷಿತರಾಳಗಳ ಅಭಿವೃದ್ಧಿಯಿಂದ ಗಣನೀಯವಾಗಿ ಕ್ಷೀಣಿಸಿವೆ. ಆದರೂ, ಮೆರುಗೆಣ್ಣೆಗಳ, ಮೊಹರಿನ ಮೇಣದ, ಅಲೋಹ ಹಾಗೂ ಲೋಹ, ಲೋಹ ಹಾಗು ಲೋಹಗಳನ್ನು ಬೆಸೆಯಲು. ಪೆಟ್ರೋಲ್ ನಿರೋಧದ ಲೇಪಕ ವಸ್ತುಗಲಲ್ಲಿ ಇಂದಿಗೂ ಅರಗು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಷೆಲ್ ಲ್ಯಾಕ್ ಹಾಗು ರೆಡ್ ಲ್ಯಾಕ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಅರಗಿನ ಉಪಉತ್ಪನ್ನಗಳು. ಮಧ್ಯಪ್ರದೇಶದ ಕೆಲವು ಬುಡಕಟ್ಟು ಜನಾಂಗಗಳಲ್ಲಿನ ವೈದ್ಯಕೀಯ ಪದ್ಧತಿಗಳಲ್ಲಿ ಅರಗಿನ ಕೀಟಗಳನ್ನು ಉದರ ಹಾಗೂ ಶ್ವಾಸಕೋಶದ ತೊಂದರೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಚಾಲ್ಸಿಡ್ ಜಾತಿಯ ಕೀಟಗಳು ಹಾಗು ಬೆಂಕಿ, ಅರಗಿನ ವಿಧ್ವಂಸಕಾರಿ ಶತೃಗಳು.

- ಟಿ ಎಸ್ ಗುರುರಾಜ.

  • ಜ್ಞಾನವಾಹಿನಿ
Ornamental seperator
  • Login or register to post comments
  • 991 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 10, 2005 - 4:12pm — pavanaja

ಅರಗು -ಉತ್ತಮ ಲೇಖನ

pavanaja's picture

ಗುರುರಾಜರಿಗೆ ನಮಸ್ಕಾರ,

ನಿಮ್ಮ ಲೇಖನ ಚೆನ್ನಾಗಿದೆ.ಮಾಹಿತಿ ಪೂರ್ಣವಾಗಿದೆ. ಇದನ್ನು ಕನ್ನಡ ವಿಶ್ವಕೋಶ (ವಿಕಿಪೀಡಿಯಾ)ಕ್ಕೆ ಸೇರಿಸಬಹುದು. ನಾಡಿಗ್ ಅವರೆ, ಓದುತ್ತಿದ್ದೀರಾ?

ಸಿಗೋಣ,
ಪವನಜ

  • Login or register to post comments
  • link
  • Email this ಪ್ರತಿಕ್ರಿಯೆ
August 10, 2005 - 4:47pm — hpn

ವಿಕಿಪೀಡಿಯಕ್ಕೆ

hpn's picture

ಇವರಾಗಲೇ ವಿಕಿಪೀಡಿಯಕ್ಕೂ ಹಾಕಿದ್ದರು. ಅಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸರಿಯಾದ ವರ್ಗಕ್ಕೆ ಸೇರಿಸಿರವೆ.

ನೋಡಿ: ಅರಗು

  • Login or register to post comments
  • link
  • Email this ಪ್ರತಿಕ್ರಿಯೆ
August 11, 2005 - 5:34am — tvsrinivas41

ಮಾಹಿತಿಭರಿತ

tvsrinivas41's picture

ಲೇಖನ ಮಾಹಿತಿಭರಿತವಾಗಿ ಚೆನ್ನಾಗಿ ಮೂಡಿ ಬಂದಿದೆ. ತಿಳಿಯದ ಎಷ್ಟೋ ವಿಷಯಗಳನ್ನು ತಿಳಿಸಿದ್ದೀರಿ. ಇನ್ನೂ ಹೆಚ್ಚು ಹೆಚ್ಚು ಬರಲಿ ಎಂದು ಆಶಿಸುವೆ.

-------
ತವಿಶ್ರೀನಿವಾಸ

  • Login or register to post comments
  • link
  • Email this ಪ್ರತಿಕ್ರಿಯೆ
May 19, 2006 - 5:54pm — ಮಹೇಶ ಭೋಗಾದಿ

ಕನ್ನಡದಲ್ಲಿ ವೈಜ್ಞಾನಿಕ ಬರಹ

ಮಹೇಶ ಭೋಗಾದಿ's picture

ಕನ್ನಡದಲ್ಲಿ ವೈಜ್ಞಾನಿಕ ಬರಹವನ್ನು ಬರೆದು, ನಮಗೆ ಅರಗಿನ ಕುರಿತು ತಿಳಿಸಿದ್ದಕ್ಕೆ ಧನ್ಯವಾದ...

ಈ "ಅರಗು" ಮತ್ತು ಅರಗು(ಜೀರ್ಣ) ಎರಡು ಒಂದೇ ರೀತಿ ಬರೆಯದರೂ ಬೇರೆ ಬೇರೆ ಅರ್ಥವನ್ನು ಕೊಡುವ ಪದಗಳೆ?

ಸವಿಯೊದಗೆ,
ಮಹೇಶ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಲ್ಲಮಪ್ರಭು
  • ಹೆಣ್ಣು
  • ಅನನ್ಯ ಅಲ್ಲಮ (೫)
  • ಇಂದಿನ ನಮ್ಮ ತವಕ ತಲ್ಲಣಗಳು
  • 'ನಾಟ್ಯ ಮಯೂರಿ'
Syndicate content

ಲೇಖಕರು

T S GuruRaja's picture

ಪರಿಚಯ

Agriculturist, interested in Biological Sciences.

Born and brought up in Hiruyur, I don't frequent on internet. My other interests include writing in Kannada, reading Kannada books.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು ।
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator