ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಡಾ. ಎ. ಎನ್. ಮೂರ್ತಿರಾಯರು- ದೇವರ ಬಗ್ಗೆ:

April 12, 2006 - 6:29am — venkatesh

ಚಿಂತನೆ:

ಡಾ. ಎ. ಎನ್. ಮೂರ್ತಿರಾಯರು- ದೇವರ ಬಗ್ಗೆ:

103 ವರ್ಷಗಳ ಸಂಮ್ರುಧ್ಧ ಜೀವನದಲ್ಲಿ ಅವರ ನಿಲವುಗಳು ಅತಿ ಸ್ಪಸ್ಟವಾದವುಗಳು. ಅವರ ಸಮವಯಸ್ಕರಿಗೆ ಇವು ಪ್ರಶ್ನೆಗಳಲ್ಲದೆ ಮತ್ತೇನು ? ಮೂರ್ತಿರಾಯರು ನಂಬಿದ್ದು 'ಮಾನವೀಯತೆಯನ್ನು. ಅವರು ಕೊಟ್ಟ ಸಾಹಿತ್ಯ ಹಾಗೂ ಚಿಂತನೆಗಳು ಅನನ್ಯ ! 'ಶತಮಾನದ ಅಸಾಧಾರಣ ವ್ಯಕ್ತಿಗಳ' ಪಂಕ್ತಿಗೆ ಅವರು ಸೇರುತ್ತಾರೆ !

'ದೇವರನ್ನು ನಂಬುವುದಿಲ್ಲ' ಎಂದು ನಾನೇನೂ ಪಣ ತೊಟ್ಟಿಲ್ಲ. ನನ್ನ ಅಪನಂಬಿಕೆ ಪ್ರಯತ್ನ ಪೂರ್ವಕವಾಗಿ ಬರಮಾಡಿಕೊಂಡದ್ದಲ್ಲ. ನಂಬಿಕೆ ಬರಲೊಲ್ಲದು -ಅಷ್ಟೆ.!' 'ಇತರರಿಗೆ ದೈವಭಕ್ತಿಯಿಂದ ಶಾಂತಿ ಬರುವುದಾದರೆ ಬರಲಿ; ಅದರಿಂದ ಸಜ್ಜನಿಕೆಗೆ ಉತ್ತೇಜನ ದೊರಕುವುದಾದರೆ ಅವರ ದೈವ ಭಕ್ತಿ ಸಂತತವಾಗಿ ಇರಲಿ' ಎಂದು ಹಾರೈಸಲೂ ನಾನೂ ಸಿಧ್ಧ. ನನಗೆ ನಂಬಿಕೆ ಬರಲೊಲ್ಲದು- ಅದು ನನ್ನ ತಪ್ಪಲ್ಲ.!

'ನನಗೆ ಇದರಲ್ಲಿ ನಂಬಿಕೆ ಇಲ್ಲ, ಅದರಲ್ಲಿ ನಂಬಿಕೆ ಇಲ್ಲ, ಮತ್ತೊಂದರಲ್ಲಿ ನಂಬಿಕೆ ಇಲ್ಲ'- 'ಇಲ್ಲ'ಗಳ ಪಟ್ಟಿ ದೊಡ್ಡದಾಯಿತು. ನನ್ನ ಬದುಕು 'ನ' ಕಾರದ
(ಇಲ್ಲಗಳ) ಭಜನೆಯೋ ಅಥವಾ ನನ್ನ ನಂಬಿಕೆಗೆ ಪಾತ್ರವಾಗಿರುವುದೂ ಏನಾದರೂ ಉಂಟೋ ? ಉಂಟು. ಇಹಜೀವನದಲ್ಲಿ ನಂಬಿಕೆಯುಂಟು; ಇಲ್ಲಿ ಸಲ್ಲುವವರು ಅಲ್ಲೂ ಸಲ್ಲುತ್ತಾರೆ ಎಂಬ ಮಾತಿನಲ್ಲಿ ನಂಬಿಕೆಯುಂಟು. ಲೋಕದಲ್ಲಿ ಸಂಕಟ ಕಡಿಮೆಯಾಗುವಂತೆ , ಸಹಮಾನವರ ಬದುಕು ಸುಖಸಂಮ್ರುಧ್ಧವಾಗುವಂತೆ ಕೈಲಾದ್ದನ್ನು ಮಾಡುವುದು ಕರ್ತವ್ಯ ಎಂಬ ನಂಬಿಕೆ ಯುಂಟು.

ವೆಂ.

  • ಚಿಂತನೆ
~.~
  • Login or register to post comments
  • 835 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 12, 2006 - 12:39pm — chandrakanthkg

ದೇವರು: ಉತ್ತಮ ಪುಸ್ತಕ

chandrakanthkg's picture

ಎ. ಎನ್. ಮೂರ್ತಿರಾಯರು ತಮ್ಮ "ದೇವರು" ಪುಸ್ತಕದಲ್ಲಿ ದೇವರ ಕುರಿತು ತಮ್ಮ ಅನಿಸಿಕೆಗಳನ್ನು ಬರೆದಿರುವರು. ನಾನು ಓದಿರುವ ಒಳ್ಳೆಯ ಪುಸ್ತಕಗಳ ಪಟ್ಟಿಯಲ್ಲಿ ಈ ಪುಸ್ತಕ ಸೇರುತ್ತದೆ. ಈ ಪ್ರಬುದ್ದ ಪುಸ್ತಕದಲ್ಲಿ ತಮ್ಮ ಅನುಭವ, ಪಾಂಡಿತ್ಯ, ವೈಚಾರಿಕತೆ ಮತ್ತು ಚಿಂತನೆಗಳ ಜರಡಿಯಲ್ಲಿ ದೇವರನ್ನೆ ಸಾಣಿಸಿ ನಮ್ಮ ಮುಂದೆ ಇಡುತ್ತಾರೆ ಸನ್ಮಾನ್ಯ ಮೂರ್ತಿರಾಯರು. ನನ್ನ ಪರಿಚಯದವರೊಬ್ಬರು ಇದನ್ನು ನಾಸ್ತಿಕರ ಬೈಬಲ್ ಎಂದು ಲೇವಡಿ ಮಾಡಿರುವರು ಆದರೆ ನಾನು ಈ ಪುಸ್ತಕದ ಬಗ್ಗೆ ಹೆಚ್ಚಿಗೆ ಹೇಳದೆ ಇದನ್ನು ಖಂಡಿತವಾಗಿ ಕೊಂಡು ಓದಿ ಎಂದು ಮಾತ್ರ ಒತ್ತಿ ಹೇಳುತ್ತೇನೆ.

ವಂದನೆಗಳು

ಚಂದ್ರಕಾಂತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 15, 2006 - 10:36am — ಶಿವ

'ದೇವರು"

ಶಿವ's picture

'ದೇವರು" ಓದಿಲ್ಲ. ಆದರೆ ಮೂರ್ತಿರಾಯರ 'ಚಿತ್ರಗಳು-ಪತ್ರಗಳು' ಓದಿದ್ದೇನೆ.ಅವರಿಗೆ ದೇವರ ಬಗ್ಗೆ ಇದ್ದ ಅನಿಸಿಕೆ ಇಲ್ಲೂ ವ್ಯಕ್ತವಾಗುತ್ತದೆ.'ಚಿತ್ರಗಳು-ಪತ್ರಗಳು' ಕೂಡ ಒಂದು ಒಳ್ಳೆಯ ಪುಸ್ತಕ.
'ಚಿತ್ರಗಳು-ಪತ್ರಗಳು'-ಪ್ರಕಟನೆಯ ಉದ್ದೇಶವಿಲ್ಲದೆ, ಸಂದರ್ಭಾನುಸಾರವಾಗಿ ಬರೆದ ಪತ್ರಗಳು ಹಾಗೂ ಆ ಪತ್ರಗಳನ್ನು ೧ ದಶಕದ ನಂತರ ಓದಿದಾಗ ಮೂಡಿ ಬಂದ ಚಿತ್ರಗಳನ್ನು ಇಲ್ಲಿ ಪ್ರಕಟಿಸಿದ್ದಾರೆ.ಇಲ್ಲಿ ಸುಮಾರು ೭೫ ಪತ್ರಗಳಿವೆ.ಇವುಗಳಲ್ಲಿ ಹೆಚ್ಚಿನವು ತಮ್ಮ ಆತ್ಮೀಯ ಸ್ನೇಹಿತ ತೀನಂಶ್ರಿಗೆ ಬರೆದದ್ದು.ಕೆಲವು ತಮ್ಮ ಮಗನಿಗೆ ಬರೆದದ್ದು.ಇವು ಹಿಂದು ಧರ್ಮದ ಕುರಿತು ಪಾಶ್ಚಾತ್ಯ ಸ್ನೇಹಿತರು ಕೇಳಿದ ಪ್ರಶ್ನೆಗಳಿಗೆ ಉತ್ತರ.

ತೀನಂಶ್ರೀ ಮತ್ತು ಮೂರ್ತಿರಾಯರಿಗಿದ್ದ ಗಾಢವಾದ ಸ್ನೇಹ,ಅವರ ಮಿತ್ರ ಬಳಗದಲ್ಲಿದ್ದ ಉತ್ತಮ ಹಾಸ್ಯದ ಅಭಿರುಚಿ(sense oh humour),ಆ ಕಾಲದಲ್ಲಿ ಕನ್ನಡ ಬೆಳೆಯುತಿದ್ದ ರೀತಿ - ಇವೆಲ್ಲವೂ ಈ ಪುಸ್ತಕದ ಓದುವಾಗ ನಮ್ಮಲ್ಲಿ ಮೂಡುವ ಭಾವನೆಗಳು.
ಮೂರ್ತಿರಾಯರು ಹೇಳಿದ್ದು,"..ನಾನು ಈ ಪತ್ರಗಳ ಕನ್ನಡಿಯಲ್ಲಿ ನನ್ನ ಪ್ರತಿಬಿಂಬವನ್ನು ಕಂಡು (ವಾಗ್ಗೇಯಕಾರ ವಾಸುದೇವಾಚಾರ್ಯರು ಚಿತ್ರಿಸಿರುವ ಟೈಗರ್ ವರದಾಚಾರ್ಯರ ಮಾತನು ಅನುಕರಿಸಿ) 'ಅಂಜನೇಯ ಸ್ವಾಮಿನೇ ನಮಃ' ಎಂದುಕೊಂಡು ನಕ್ಕಿದ್ದೇನೆ.ಇತರರು ನಗಲು ಈ ಪತ್ರಗಳು ಅವಕಾಶವನ್ನು ದೊರಕಿಸಿಕೊಟ್ಟಾವು- ಇದು ನನ್ನ ಅನಿಸಿಕೆ".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬಾಳಿಗೊಂದು ನಂಬಿಕೆ
  • ಬದುಕು ಇನ್ಸಿಡೆಂಟು!
  • ಅಮರನಾಥದ ಕಪಟ-ಲಿಂಗ
  • ನಂಬಿಕೆ
  • ರಾಮಾಗ್ನಿಯಲ್ಲಿ ಎರಡು ಜೀವಾಗ್ನಿ ನಂದಿಸಿ, ರಾಮನ ಹೆಸರ ಮೆರೆಸಿದವ್ರು
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator