ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !
ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ ! ಮುಂಬೈ,12, ಏಪ್ರಿಲ್, ೨೦೦೬
ಅವರ ಹಲವಾರು ಚಿತ್ರಗಳನ್ನು ನಾನು ನೊಡಿದ್ದೇನೆ. 'ಗಂಧದ ಗುಡಿ' ನನ್ನ ಪ್ರಿಯವಾದ ಚಿತ್ರಗಳಲ್ಲೊಂದು ! ಅವರು ಹೇಳಿದ 'ಯಾರೇ ಕೂಗಾಡಲೀ' ಹಾಡೂ, ಬಹಳ ಇಷ್ಟ. ಅವರ ಹಲವಾರು ಗೀತೆಗಳ 'ಕ್ಯಾಸೆಟ್ ಸುರಳಿಗಳು' ನನ್ನಬಳಿ ಇವೆ.
ಅವರು ಬಹಳ ಹಿಂದೆ, ಮುಂಬೈಗೆ ಬಂದಿದ್ದಾಗ, 'ಕರ್ನಾಟಕ ಸಂಘ,' ಮಾಹೀಮ್, ಅವರು 'ರಾಜ್,'ಅವರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಸ್ಟೇಜಿನಮೇಲೆ ಭಾವ ಪರವಶರಾಗಿ ರಾಜ್ ಕುಮಾರ್ ಅವರು ನೃತ್ಯಮಾಡುತ್ತಾ ಹಾಡಿದ ನಮ್ಮ, ಅವರ ಮೆಚ್ಚಿನಗೀತೆ, "ಹುಟ್ಟಿದರೇ ಕನ್ನಡ್ನಾಡ್ನಲ್ ಹುಟ್ಟಬೇಕು, ಮೆಟ್ಟಿದರೇ......ಮೆಟ್ಟಾಬೇಕು.....ಬಂಡಿ." ಇಂದಿಗೂ ನನ್ನ ಕಿವಿಯಲ್ಲಿ ಅಲೆ ಅಲೆ ಯಾಗಿ ಚಿಮ್ಮಿ ಬರುತ್ತಿದೆ !
ಕನ್ನಡ ನಾಡಿನ ಸುಪುತ್ರ, 'ರಾಜ್'ಗೆ ನಮ್ಮ 'ಹೃದಯ ತುಂಬಿದ' ನಮನಗಳು.
ಅವರ ಆತ್ಮಕ್ಕೆ ಶಾಂತಿ ಸಿಗಲಿ.
ವೆಂಕಟೇಶ್ ಮತ್ತು ಪರಿವಾರ.

- Login or register to post comments
- 790 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಬಂಗಾರದ ಮನುಷ್ಯ
ಎನೋ ಅಮೂಲ್ಯವಾದುದನ್ನು ಕಳಕೊಂಡ ಅನುಭವ.ಒಳ್ಳೆಯ ನಟ ಹಾಗೂ ಗಾಯಕ, ಅಷ್ಟೇ ಒಳ್ಳೆಯ ಮನುಷ್ಯ...
Re: ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !
ಪ್ರೀತಿಯ ಕನ್ನಡಾಭಿಮಾನಿಗಳೇ,
ರಾಜಣ್ಣ ಬರೀ ನಟರಲ್ಲದೇ, ಉತ್ತಮ ಗಾಯಕರೂ ಮತ್ತು ಸೌಮ್ಯಸ್ವಭಾವದ ವ್ಯಕ್ತಿಯೂ ಹೌದು. ಅದರಲ್ಲಿ ಎರಡು ಮಾತಿಲ್ಲ ಬಿಡಿ. ಅದಕ್ಕಾಗಿಯೇ ಅವರಿಗೆ ರಾಜ್ಯಮಟ್ಟದಲ್ಲಿಯೂ, ರಾಷ್ಟ್ರಮಟ್ಟದಲ್ಲಿಯೂ ಮತ್ತು ಅಂತರರಾಷ್ಟೀಯ ಮಟ್ಟದಲ್ಲಿ ಜನಮನ್ನಣೆ ಸಿಕ್ಕಿತಲ್ಲದೇ ಎಲ್ಲಾ ಮಟ್ಟದಲ್ಲೂ ಪ್ರಶಸ್ತಿ, ಪುರಸ್ಕಾರಗಳು ಸಾಕಷ್ಟು ರೀತಿಯಲ್ಲಿ ಲಭಿಸಿದ್ದವು. ಅವರಂತಹ ಮಹಾನುಭಾವರ ಬಗ್ಗೆ ಬರೆಯಲು ಬಹಳ ಹರ್ಷವಾಗುತ್ತಿದೆ. ಇಂತಹ ಮೇರುನಟರು ಕನ್ನಡ ನಾಡಿನಲ್ಲಿ ಮತ್ತೆ ಹುಟ್ಟಿ ಬರಲಿ ಎಂದು ಆಶಿಸೋಣ, ಪ್ರಾರ್ಥಿಸೋಣ.
ಜೈ ಕನ್ನಡಾಂಬೆ!!!
ನಿಮ್ಮ ಪ್ರೀತಿಯ,
ಶಿವಣ್ಣ