ಮನದಾಳದ ಮಾತು

ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ; ಸಾಹಿತಿಗಳು ತಮ್ಮ ಪೂರ್ವಾಗ್ರಹ ಮರೆತು ಚಿಂತಿಸಲಿ, ಸರ್ಕಾರಿ ನೌಕರರು/ಅಧಿಕಾರಿಗಳು ಯಾರಿಗೂ ಅಂಜದೆ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಿ, ನ್ಯಾಯವಾದಿಗಳು/ಪೋಲೀಸರು ತಮ್ಮ ಆತ್ಮಸಾಕ್ಷಿಯನ್ನು ನೆನಪು ಮಾಡಿಕೊಳ್ಳಲಿ..................
ಈಗ ತಾವು ರಾಜಕಾರಣಿ, ಸಾಹಿತಿ,ಇತ್ಯಾದಿ ಎಂಬುದನ್ನು ಮರೆತು ತಮ್ಮ ಕುಟುಂಬದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ....
೧] ತಮ್ಮ ಕುಟುಂಬವು ಪರಿಪೂರ್ಣ ಆರೋಗ್ಯವಾಗಿ ನೆಮ್ಮದಿಯಿಂದ ಇದೆಯೇ?
೨] ಮಕ್ಕಳೊಡನೆ ಸಂತಸವಾಗಿದ್ದೇವೆಯೇ?
೩] ತಮ್ಮ ಮಕ್ಕಳು ನಿಜವಾಗಿಯೂ ಋಜುಮಾರ್ಗದಲ್ಲಿ ಸಾಗುತ್ತಿದ್ದಾರೆಯೇ?
ನಮ್ಮ ಆತ್ಮಸಾಕ್ಷಿ ಏನು ನುಡಿದೀತು? ಎಲ್ಲವೂ ಉತ್ತಮ ವಾಗಿದೆ, ಎಂಬುವುದಾದರೆ ಈ ಬರಹವನ್ನು ಮುಂದೆ ಓದುವ ಅಗತ್ಯವಿಲ್ಲ.
ಇಲ್ಲವೆಂದಾದರೆ........
೧] ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಮ್ಮ ಸ್ಥಿತಿ ಹೀಗೇಕೆ?
೨] ನಮ್ಮ ಮೂಲ ಸಂಸ್ಕೃತಿ-ಪರಂಪರೆಗಳನ್ನು ಮರೆಯುತ್ತಾ ಬಂದ ಪರಿಣಾಮವೇ?
೩]ಆಧುನಿಕ ಶಿಕ್ಷಣದ ಅವಾಂತರವೇ?
೪] ವೈಜ್ಞಾನಿಕ ಅನ್ವೇಷಣೆಗಳ ಅತಿ ಅನುಭೋಗದ ಕಾಣಿಕೆಯೇ?
ಹೌದೆಂದಾದರೆ ಪರಿಹಾರವೇನು?
ಎಲ್ಲರೂ ಚಿಂತನ-ಮಂಥನ ನಡೆಸೋಣ. ಎಲ್ಲರ ಮನದಾಳದ ಮಾತುಗಳಿಗೆ ಅಕ್ಷರವನ್ನು ಕೊಡಿ.ಸ್ನೇಹ ಮಿಲನದಲ್ಲಿ ನಾವುಗಳು ಸೇರಿದಾಗ ಈ ಚಿಂತನೆಗಾಗಿ ಒಂದು ಗಂಟೆ ಅವಧಿಯನ್ನಾದರೂ ಮೀಸಲಿರಿಸಿ, ಬೆಂಗಳೂರಿನ ಯಾರಾದರೂ ಚಿಂತಕರನ್ನು ಕರೆಸಿ ಅವರು ನಮ್ಮೆಲ್ಲರ ಮನದಾಳದ ಮಾತುಗಳನ್ನು ಕ್ರೂಢೀಕರಿಸಿದರೆ ಒಂದು ಸೂತ್ರ ಹೊರಬಂದೀತು.
ನೆನಪಿರಲಿ: ಒಂದರೆಗಳಿಗೆ ನಮ್ಮ ಪೂರ್ವಾಗ್ರಹ ಬದಿಗಿರಲಿ. ನಾವು ಮಕ್ಕಳಾಗೋಣ.ಮೆಚ್ಚುಗೆಗಾಗಿಯೂ ಬರೆಯುವುದು ಬೇಡ, ಚುಚ್ಚುವುದಂತೂ ಬೇಡವೇ ಬೇಡ. ನಮ್ಮ ಮಾತು ಬಿಚ್ಚುಮನಸ್ಸಿನಿಂದ ಮಕ್ಕಳ ತೊದಲು ಮಾತಿನಂತಿದ್ದರೂ ಚೆನ್ನ.
[ಈ ವಿಚಾರದಲ್ಲಿ ಚಿಂತನ- ಮಂಥನ ನಡೆದರೆ ಒಳ್ಳೆಯದು ಎಂಬುದು ನನ್ನ ಅಭಿಮತವಷ್ಟೆ. ಆಗ್ರಹವಲ್ಲ]

ಮನವಿ:- ಈ ಚುಟುಕು ಬರಹ ಚೆನ್ನಾಗಿದೆ,ಇತ್ಯಾದಿ ಮಾತುಗಳ ಬದಲು " ನಮ್ಮ ಸಮಾಜವು ಆರೋಗ್ಯಪೂರ್ಣ ವಾಗಬೇಕೆಂದರೆ ದಾರಿ ಯಾವುದು? ನಿಮ್ಮ ಮಾತಿನಲ್ಲಿ ತಿಳಿಸಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kulkarni.mac's picture

ರೀ..... ಶ್ರೀಧರ್ ಅವರೆ,
ರೀ..... ಶ್ರೀಧರ್ ಅವರೆ,
ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ ಎಂದು ಹೇಳಿದ್ರೆ ಮುಗೀತು ಕಥೆ!
ತಾವು ರಾಜಕಾರಿಣಿಗಳು ಅಂತ ಗೊತ್ತಿದ್ರು ತಮ್ಮ ಕೆಲಸ ಸರಿಯಾಗಿ ಮಾಡದೆ ಇರುವ ಇವರು ತಾವು ರಾಜಕಾರಿಣಿಗಳು ಎಂದು ಅರೆಗಳಿಗೆ ಮರೆತರೂ ತಮ್ಮ ಸ್ವಾರ್ಥಕ್ಕಾಗಿಯೇ ದೆಶವನ್ನು ಅಧೊಗತಿಗೆ ತರುತ್ತಾರೆ ಅದಕ್ಕೆ ಅದರ ಬದಲು ಅವರಿಗೆ "ರಾಜಕಾರಿಣಿಗಳು" ಅಂದರೆ ಹೇಗಿರಬೇಕು ಎನ್ನುವದಕ್ಕೆ ತಿಳಿಹೇಳಬೆಕು ಅಲ್ವ?
:)

ಪ್ರೀತಿಯಿಂದ
ಗಿರಿ

hariharapurasridhar's picture

http://www.hariharap...

ಪ್ರಯತ್ನ ಮಾಡಿನೋಡಿ ಗಿರಿ,

kulkarni.mac's picture

ಹಃ ಹಃ ಹಃ ಹಃ ಹಃ ಹಃ
ಚೆನ್ನಾಗೇಳಿದ್ರಿ?

:D
ಪ್ರೀತಿಯಿಂದ
ಗಿರಿ

prasca's picture

"ತನ್ನಂತೆ ಪರರ ಬಗೆದೊಡೆ" ಈ ಮಾತನ್ನು ನೆನಪಿಟ್ಕೊಂಡ್ರ್ರೆ ಸಾಕು.