ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ತಾಯಿ ಬೇಕು ಇಲ್ಲವೆ ಬಾಯಿ ಬೇಕು.

April 17, 2006 - 7:49pm — shreekant.mishrikoti

ಕಂಡ ಕಂಡ ದೇವರಿಗೆಲ್ಲ ಕೈ ಮುಗಿದರೂ ಗಂಡನಿಲ್ಲದೆ ಮಕ್ಕಳಾಗವು.
ಏಟು ಬೀಳದ ಹೊರತು ದೆವ್ವ ಬಿಡುವದಿಲ್ಲ ;
ಎಲ್ಲ ಬಲ್ಲಪ್ಪ ಕೇಳಿದರೆ ಕಲ್ಲಪ್ಪ
ಎಲೆ ತುದಿಗೆ ಪಲ್ಯ ಇರಬೇಕು ; ಹಾಸಿಗೆ ತುದಿಗೆ ಹೆಂಡತಿ ಇರಬೇಕು.
ಎಮ್ಮೆಯ ಉಚ್ಚೆ ಇರುವೆಗೆ ಜಲಪ್ರಳಯ
ಎತ್ತು ಮಾರಿದವನಿಗೆ ಹಗ್ಗದ ಆಸೆಯೇ ?
ಎತ್ತಿಗೆ ಭತ್ತದ ಚಿಂತೆ ಯಾತಕ್ಕೆ?
ಎತ್ತನ್ನು ಕದ್ದ ಕಳ್ಳ ಹಗ್ಗ ಮರೆಯುವನೇ?
ಕದ್ದ ರೊಟ್ಟಿ ಬೇರೆ , ದೇವರ ಪ್ರಸಾದ ಬೇರೆ.
ಕಸ ತಿನ್ನುವದಕ್ಕಿಂತ ತುಸ ತಿನ್ನುವದು ಮೇಲು.
ಕಳ್ಳನನ್ನ ಕಾವಲಿಗಿಟ್ಟ ಹಾಗೆ
'ಕುರಿ ಕಾಯ್ತೀಯ, ತೋಳ?' ಅಂದರೆ 'ಸಂಬಳ ಬೇಡ- ಹಾಗೇ ಕಾಯ್ತೀನಿ ಅಂದ ಹಾಗೆ'
ತಾಯಿ ಬೇಕು ಇಲ್ಲವೆ ಬಾಯಿ ಬೇಕು.

  • ಗಾದೆಗಳು
~.~
  • Login or register to post comments
  • 1488 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 18, 2006 - 7:06am — venkatesh

ತಾಯಿಬೇಕು ಇಲ್ಲವೆ ಬಾಯಿ ಬೇಕು.

venkatesh's picture

ತಾಯಿಬೇಕು ಇಲ್ಲವೆ ಬಾಯಿ ಬೇಕು.

ಶ್ರೀಕಾಂತರಿಗೆ,
ನಮಸ್ಕಾರಗಳು.

ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಲ್ಲ.
ಚೇಳಿಗೆ ಪಾರಪತ್ಯ ಕೊಟ್ಟ ಹಾಗೆ. ಇತ್ಯಾದಿ.
ಇವು ಎಸ್ಟು 'ಸಾಂದರ್ಭಿಕ' ವಾಗಿವೆ !

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2006 - 9:00am — Sunil Jayaprakash

ಪ್ರಶ್ನೆ : ತುಸ ಎಂದರೇನು

Sunil Jayaprakash's picture

shreekant.mishrikoti wrote:

ಕಸ ತಿನ್ನುವದಕ್ಕಿಂತ ತುಸ ತಿನ್ನುವದು ಮೇಲು.

ದಯವಿಟ್ಟು ಯಾರಾದರು ತುಸ ಪದದ ಅರ್ಥ - ಭಾವಾರ್ಥ ತಿಳಿಸುವಿರಾ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2006 - 11:05am — shreekant.mishrikoti

ಉ:ತುಸ ಎಂದರೆ ....

shreekant.mishrikoti's picture

ತುಸ, ತುಸಾ ಎಂದರೆ ತುಸು , ಸ್ವಲ್ಪ ಎಂದರ್ಥ ;
ನಾನು ಈ ಗಾದೆಯ ಮಾತನ್ನು ತುಸು ಎಂದು ತಿದ್ದಬಹುದಿತ್ತು ; ಆದರೆ ಉದ್ದೇಶಪೂರ್ವಕವಾಗಿ ಹಾಗೆಯೇ ಉಳಿಸಿಕೊಂಡಿದ್ದೇನೆ.
ಉದ್ದೇಶಗಳೇನೆಂದರೆ :
೧. ತುಸ ಎಂದು ಆಡುಮಾತಿನಲ್ಲಿ ಬಳಕೆ ಇರುವದು.
೨. ತುಸ ಇದು ಕಸ ಶಬ್ದಕ್ಕೆ ಪ್ರ್‍ಆಸವಾಗಿರುವದು .
೩. ಈ ಪ್ರಶ್ನೆಗೆ ಕಾರಣವಾಗಿ ಈ ವಿಷಯವನ್ನು ಆಸಕ್ತರಿಗೆ ತಿಳಿಸುವದು!.

ನೀವು ಗಮನಿಸಿರಬಹುದು . ನಾನು ಇಲ್ಲಿ ಹಾಕುತ್ತಿರುವ ಗಾದೆಮಾತುಗಳನ್ನು ಒಂದಲ್ಲ ಒಂದು ಕಾರಣಕ್ಕೆ ಆರಿಸಿಕೊಂಡಿದ್ದೇನೆ. - ಜನರ ತಿಳುವಳಿಕೆ, ಕಲ್ಪನೆ , ಕವಿತೆಯ ಒಂದು ಮಿಂಚು, ಪ್ರಾಸ ಇತ್ಯಾದಿ ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2006 - 11:27am — karthik

ತುಸ - ಸ್ವಲ್ಪ?

karthik's picture

ತುಸ - ತುಸು?
ತುಸು ಎಂದರೆ ಸ್ವಲ್ಪ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2006 - 1:16pm — tvsrinivas41

ತುಸು = ಸ್ವಲ್ಪ

tvsrinivas41's picture

ತುಂಬಾ ಜಾಣ ತುಸ ಕೋಣ ಎಂಬ ಗಾದೆಯೇ ಇದೆ. ತುಸ - ತುಸು ಎನ್ನುವುದರ ಆಡು ಮಾತಿನ ರೂಪ. ತುಸು ಎಂದರೆ ಸ್ವಲ್ಪ. ಕೆಲವು ಕಡೆಗಳಲ್ಲಿ ಕೊಂಚ ಎನ್ನುವ ಪದದ ಉಪಯೋಗವೂ ಇದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2006 - 3:26pm — aithalsandy

"ಧಾಂಡಿಗ"= ??

aithalsandy's picture

ತಿಳಿದವರು "ಧಾಂಡಿಗ" ಪದದ (etymological) ಅರ್ಥ ತಿಳಿಸಿ...

Sandeep Aithal
(aithalsandy@gmail.com)
91-98443-73894

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2006 - 3:59pm — shreekant.mishrikoti

ಮೊದಲು etymology ಅರ್ಥ ಹೇಳಿ!

shreekant.mishrikoti's picture

ಸ್ವಾಮೀ ,
ಮೊದಲು etymology ಅರ್ಥ ಹೇಳಿ! - ನಮಗೆ ತಿಳಿಯುವಂತೆ ಕನ್ನಡದಲ್ಲಿ !
'ಧಾಂಡಿಗ' ದ ಸಾಮಾನ್ಯ ಬಳಕೆಯ ಅರ್ಥ - ಧಡಿಯ .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 18, 2006 - 6:04pm — aithalsandy

Re: Etymology

aithalsandy's picture

Roughly ಇಗೋ ಕನ್ನಡದಲ್ಲಿ ವೆಂಕಟಸುಬ್ಬಯ್ಯ ಕೊಡ್ತಾರಲ್ಲ ಆ ತರಹದ ವಿವರಣೆ...
(ಈ ಕೊಂಡಿ ನೋಡಿ - http://www.answers.com/topic/etymology?method=22)

Sandeep Aithal
(aithalsandy@gmail.com)
91-98443-73894

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 19, 2006 - 9:52am — ರಘುನಂದನ

ಎಟಿಮೋಲಜಿ ಅಂದ್ರೇನು?

ರಘುನಂದನ's picture

ವೇದಗಳನ್ನು ಅರ್ಥೈಸಲು ಬೇಕಾಗಿರುವ ಆರು ಶಾಸ್ತ್ರಗಳನ್ನು ಷಡಂಗಗಳು ಎನ್ನುತ್ತಾರೆ. ಅವುಗಳು ಈ ಕೆಳಕಂಡಂತಿವೆ
shixA - method of pronunciation
vyAkaraNam - grammar
chha.ndas.h - prosody, verse constructs
niruktam - The root analysis of words
jyotiSha - astronomy
kalpam - ritual

ಇವುಗಳಲ್ಲಿ niruktam ಎನ್ನುವದಿದೆಯಲ್ಲ ಅದನ್ನೇ ಎಟಿಮೋಲಜಿ ಅನ್ನೋದು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 19, 2006 - 12:34pm — ರಘುನಂದನ

Re: ಪ್ರಶ್ನೆ : ತುಸ ಎಂದರೇನು

ರಘುನಂದನ's picture

Sunil Jayaprakash wrote:
shreekant.mishrikoti wrote:

ಕಸ ತಿನ್ನುವದಕ್ಕಿಂತ ತುಸ ತಿನ್ನುವದು ಮೇಲು.

Quote:
ದಯವಿಟ್ಟು ಯಾರಾದರು ತುಸ ಪದದ ಅರ್ಥ - ಭಾವಾರ್ಥ ತಿಳಿಸುವಿರಾ..

ತುಸು: ಸ್ವಲ್ಪು
ತುಸ: ಸ್ವಲ್ಪ ಎನ್ನುವ ಅರ್ಥಗಳನ್ನು ಮಾಡಬಹುದೇ? ತಮಾಶೆ ಮಾಡ್ದೆ Smiling

ವಾಸ್ತವವಾಗಿ ತುಸ ಹಾಗು ತುಸು ಈ ಎರಡು ಶಬ್ದಗಳೂ ಒಂದೇ ಅರ್ಥವನ್ನು ಕೊಡುತ್ತವೆ. ನಮ್ ಕಡೆ (ಹರಿಹರ ದಾವಣಗೆರೆ) ಮಾತಾಡ್ತಾ ಮಾತಾಡ್ತಾ ಕೆಲವು ಶಬ್ದಗಳನ್ನು ಅರ್ಧಕ್ಕೆ ತುಂಡರಿಸುವುದು ರೂಢಿ. ಉದಾಹರಣೆ: ಸ್ವಲ್ಪ್ ಹೇಳಿದ್ ಮಾತ್ ಕೇಳಲೇ! ಇದೇ ವ್ಯವಹರಣೆಯು ಬೇರೆ ಬೇರೆ ಕಡೆ ವಿಭಿನ್ನವಾಗಿ ನಡೆಯುವುದು. ಉದಾ: (ಹುಬ್ಬಳ್ಳಿ ಧಾರವಾಡ) ಸ್ವಲುಪು ಹೇಳಿದ್ದs ಕೇಳs.

ಇದಕ್ಕೆ ಬಹುತೇಕ ಸಮಾನವಾದ ಅರ್ಥವನ್ನೇ ಕೊಡುವ "ಇಷ್ಟು" "ಅಷ್ಟು" ಎನ್ನುವ ಶಬ್ದಗಳಿಗೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ ಪ್ರಯೋಗಗಳನ್ನು ನಾವು ನೋಡಬಹುದು. ಉದಾ: (ನಮ್ ಕಡೆ) ಒಂದೀಟು ಏಳಿದ್ ಕೇಳಲೆ! ಆಟೋತ್ತಿಂದ ಏಳಕತ್ತೀನಿ. (ಒಂದಿಷ್ಟು ಹೇಳಿದ್ದು ಕೇಳೋ! ಅಷ್ಟು ಹೊತ್ತಿಂದ ಹೇಳ್ತಾ ಇದ್ದೀನಿ)

ಇದರಲ್ಲೇ "ಟ" ಕಾರವನ್ನು ತೆಗೆದು ಹಾಕಿ "ಈಸು" "ಆಸು" ಎನ್ನುವವರೂ ನಮ್ಮಲ್ಲಿದ್ದಾರೆ. ಉದಾ : ನಂಗೊಂದೀಸು ಕೊಡಲೆ ನೀನೊಬ್ಬsನೆ ಆಸಕೊಂದು ತಿನ್ನಕತೀಯಲs (ನಂಗೂ ಒಂದಿಷ್ಟು ಕೊಡೊ, ನೀನೊಬ್ನೇ ಅಷ್ಟೂ ತಿಂತಾ ಇದೀಯಲ್ಲ!) ಇನ್ನು ಬಿಜಾಪುರ ಮತ್ತು ಗುಲ್ಬರ್ಗದ ಕಡೆ ಈ ವ್ಯವಹಾರಗಳು ಅರ್ಥವಾಗೋದೇ ಕಷ್ಟ. ಆದ್ರೂ ಒಳ್ಳೇ ಛಾತಿಯುಳ್ಳ ಪದ ಬಳಕೆ ಈ ಪ್ರದೇಶದ್ದು.

ಅಮೇಲೆ; ನಂಗನ್ನಿಸಿದ್ದು ಏನಂದ್ರೆ, ಶಬ್ದಗಳ ಸರಿಯಾದ ಪ್ರಯೋಗದಲ್ಲಿ ಬೆಂಗಳೂರು ಕಡೆಗಿಂತಲೂ ಧಾರವಾಡದ ಕಡೆ ಜನ ನಿಪುಣರು. ಯಾಕಂದರೆ ಬೆಂಗಳೂರಿನ ತರಹ ಆಲು(ಹಾಲು), ಏಳ್ತಾರೆ(ಹೇಳ್ತಾರೆ), ಏಳಿಕೊಡು(ಹೇಳಿಕೊಡು), ಅರಿಯರ (ಹರಿಹರ) ಆವು(ಹಾವು) ಇತ್ಯಾದಿ "ಕಲುಷಿತ" ಪ್ರಯೋಗಗಳು ಈ ಭಾಗದಲ್ಲಿ ಕಮ್ಮಿ. ಹಾಗಂತ ಬೆಂಗಳೂರಿನ ತುಂಬಾ ಈ ರೀತಿಯಾಗಿಯೇ ಮಾತಾಡ್ತಾರಂತ ತಿಳ್ಕೊಳ್ಳೋದೂ ತಪ್ಪು.

ಎನಗಿಂತ ಕಿರಿಯರಿಲ್ಲ
ರಘುನಂದನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 20, 2006 - 8:11pm — nimmava

'ತುಸ'ದ ಬಗ್ಗೆ ಬಹಳಷ್ಟು ಗೊತ್ತಾಯ್ತು!

nimmava's picture

ರಘು,

ಉತ್ತರ ಕರ್ನಾಟಕದ ಆಡುಭಾಷೆಗಳ ವೇರಿಯೇಷನ್ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.

ಧಾರವಾಡ ಜಿಲ್ಲೆಯ ಗಡಿಯಿಂದ ಕೇವಲ ಎಂಟೇ ಕಿಲೋ ಮೀಟರ್ ದೂರದಲ್ಲಿ ಹುಟ್ಟಿ ಬೆಳೆದ ನನಗೆ ದಾವಣಗೆರೆ, ಹುಬ್ಬಳ್ಳಿಯ ಮಾತುಕಥೆ, ಆಚಾರವಿಚಾರಗಳು ನನ್ನ ಒಡನಾಡಿಗಳು - ಇವತ್ತಿಗೂ ಜೋಳದ್ ರೊಟ್ಟಿ-ಕರಿಂಡಿ, ಎಣಗಾಯ್ ಅಂದ್ರೆ ನನಗೆ ಬಾಯಲ್ಲಿ ನೀರೂರತ್ತೆ!

ಇತಿ,
ನಿಮ್ಮವ
antaranga.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 20, 2006 - 3:29pm — venkatesh

ತುಸ ಎಂದರೇನು ?

venkatesh's picture

ತುಸ ಎಂದರೇನು ?

ತುಸ ಎಂದರೆ ಸ್ವಲ್ಪ ಎಂದರ್ಥ. ಬೆಂಗಳೂರಿನ ಜನ ಇದನ್ನು ಉಪಯೋಗಿಸುವುದು ಕಡಿಮೆ.
ನಾವು ದಾವಣಗೆರೆಯವರು. 'ತುಸ ಕೊಣಿ ಇದ್ದಿಕಣವ್ವ'.

ಅಂತ ಹೇಳುತ್ತೇವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 20, 2006 - 4:39pm — ಮಹೇಶ ಭೋಗಾದಿ

ತುಸು/ಒಸಿ/ಕೊಂಚ/ಸ್ವಲ್ಪ

ಮಹೇಶ ಭೋಗಾದಿ's picture

ತುಸು/ಒಸಿ/ಕೊಂಚ/ಸ್ವಲ್ಪ

ಇವೆಲ್ಲ ಸಮಾನಾರ್ಥಕ ಪದಗಳಾದರು, ಅವುಗಳ ಬಳಕೆಯ ಸಂದರ್ಭಗಳಲ್ಲಿ ವ್ಯತ್ಯಾಸವಿರಬಹುದೆ?(ಆಂಗ್ಲದ little, small, ಇತ್ಯಾದಿಯ ಹಾಗೆ)

"ತುಸು ತಿನ್ನಿ" ಎಂದು ಹೇಳುವರೆ? ನಮ್ಮ ಕಡೆ "ತುಸು" ಪದದ ಬಳಕೆ ಕಡಮೆ.

ನಾನು ಮಂಗಳೂರಿನಲ್ಲಿ ಇದ್ದಾಗ ಗಮನಿಸಿದ್ದು, ಅಲ್ಲಿ ಕೆಲವರು "ಸ್ವಲೂಪ" ಎನ್ನುವರು.

ಸರಿ............. 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 21, 2006 - 3:07am — srivathsajoshi

Re: ಪ್ರಶ್ನೆ : ತುಸ ಎಂದರೇನು

srivathsajoshi's picture

Sunil Jayaprakash wrote:
ದಯವಿಟ್ಟು ಯಾರಾದರು ತುಸ ಪದದ ಅರ್ಥ - ಭಾವಾರ್ಥ ತಿಳಿಸುವಿರಾ..

ಕ್ಷಮಿಸಿ, ಈ ಚರ್ಚೆಗೆ ತಡವಾಗಿ ಸೇರಿಕೊಳ್ಳುತ್ತಿದ್ದೇನೆ.

ಯಥಾಪ್ರಕಾರ ನನ್ನ 'ಪನ್'ಇಸಿಕೆಯನ್ನು ತಿಳಿಸುವುದಾದರೆ,

"ಕಸ ತಿನ್ನುವುದಕ್ಕಿಂತ ತುಸ ತಿನ್ನುವುದು ಲೇಸು" ಎನ್ನುವಲ್ಲಿ 'ತುಸ'ವನ್ನು ಒಂದು ಹೃಸ್ವರೂಪ (shortform)ಎಂದುಕೊಳ್ಳೋಣ. ಅದು
೧) ತುಪ್ಪ-ಸಕ್ಕರೆ ಇರಬಹುದು ('ಸಕ್ಕರೆ ತುಪ್ಪ ಕಾಲುವೆ ಹರಿಸಿ... ಶುಕ್ರವಾರದ ಪೂಜೆಯ ವೇಳೆಗೆ... ಹಾಡನ್ನು ಸ್ಮರಿಸಿ).

೨) 'ತು'ಪ್ಪದಲ್ಲಿ ಕರಿದ 'ಸ'ಜ್ಜಪ್ಪ ಇರಬಹುದು!

೩) 'ತು'ಕಾರಾಮನಂಗಡಿಯ 'ಸ'ಮೋಸವೂ ಇರಬಹುದು!

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 21, 2006 - 11:12pm — pratap

pratap's picture

ಜೋಶಿಯವರೆ,
ಬಹಳ ಸೊಗಸಾದ ಉತ್ತರ ನೀಡಿರುವಿರಿ!

ಪ್ರತಾಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ಬೆಣ್ಣೆ ಕದ್ದ ನಮ್ಮ ಕೃಷ್ಣ’ - ಪೂರ್ಣ ಸಾಹಿತ್ಯ ಬೇಕು...
  • ದೊಡ್ಡವರಿಗಾಗಿ ಮಕ್ಕಳ ಹಾಡು "ನಾಯಿಮರಿ, ನಾಯಿಮರಿ, ತಿಂಡಿಬೇಕೆ?"
  • ಕನ್ನಡ ತಿನಿಸುಗಳ ಒಳ್ಳೆ ಹೋಟೆಲೆಲ್ಲಿದೆ ಬೆಂಗಳೂರಲ್ಲಿ?
  • ಹಣ - ಮಾಯ್ಸನ ವಚನ೧
  • ಪಾಪದ ಬೀಪಿ.
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧
  • ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
  • ಶಬಚತನ, ಸೋಮಾರಿತನ, ಕೆಲಸದಲ್ಲಿ ಒಲವಿಲ್ಲದಿರುವಿಕೆ, ಎಲ್ಲದರಲ್ಲೂ ಉಪೇಕ್ಷೆ ; ಇದಕ್ಕೇನು ಮಾಡುವುದು ಹೇಳಿ ?

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:40am
  • srinivasps
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 8:38am
  • pachhu2002
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:33am
  • savithasr
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 8:21am
  • savithasr
    ಉ: ಲ೦ಡನ್ ಪ್ರವಾಸಕಥನ ಭಾಗ ೧೫: ಸೃಜನಶೀಲತೆ ಹುಟ್ಟುವ ಕೇ೦ದ್ರದ ಸುತ್ತ, ಮುತ್ತ!
    September 8, 2008 - 7:58am
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 6:37am
  • Chamaraj
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 6:31am
  • Chamaraj
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 6:25am
  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 3:01am
  • anivaasi
    ಉ: ಬಿಗುಮಾನದ ಚಿತ್ರಗಳು
    September 8, 2008 - 2:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 89 ಅತಿಥಿಗಳು ಆನ್ಲೈನ್ ಇರುವರು.


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator