ಬದುಕು ನನಗೇನು ಕಲಿಸಿದೆ ?
ಬದುಕು ನನಗೇನು ಕಲಿಸಿದೆ ?
ಡಾ. ಎಚ್.ಎನ್. ಹೀಗೆ ಹೇಳುತ್ತಾರೆ.
ಬುದ್ಧ, ಸ್ವಾಮೀವಿವೇಕಾನಂದ, ಗಾಂಧೀಜಿ, ಜವಹರ್ ಲಾಲ್ ನೆಹ್ರೂ ಮತ್ತು ಐನ್ ಸ್ಟೈನ್ ರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಶ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ, ಬದುಕಿಗೊಂದು ಉದ್ದೇಶ್ಯ ವಿದೆಯೇ, ಸಾವು ಬದುಕಿನ ಕೊನೆಯೇ ? ಮರಣಾ ನಂತರ ವ್ಯಕ್ತಿತ್ವ ಉಳಿಯಬಲ್ಲುದೇ ? ಎನ್ನುವ ತತ್ವ ಶಾಸ್ತ್ರದ ಸಮಸ್ಯೆಗಳು ಕೇವಲ ನನ್ನ ಇಳಿಗಾಲದ ಯೋಚನೆಗಳಲ್ಲ.
"ನಾನು ನಾಸ್ತಿಕನಾದರೂ ಅಂಧ ಮೂರ್ತಿಬಂಜಕನಲ್ಲ. ಮಾನವ ಕೆಂದ್ರಿತ ಧರ್ಮಗಳಲ್ಲಿ ನನಗೆ ನಂಬಿಕೆ. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರುವ ಸ್ವಾರ್ಥರಹಿತ ಪ್ರಾಮಾಣಿಕನಾದ ಆಸ್ತಿಕನನ್ನು-ಅಮಾನವೀಯ , ಅಪ್ರಮಾಣಿಕ ಆತ್ಮ ಕೆಂದ್ರಿತ ವಿಚಾರವಾದಿ ಅಥವಾ ನಾಸ್ತಿಕನಿಗಿಂತ ಉತ್ತಮನೆಂದು ಪರಿಗಣಿಸುತ್ತೇನೆ. ವಿಜ್ಞಾನದಲ್ಲಿ ನನಗೆ ಸಧೃಢವಾದ ನಂಬಿಕೆಯಿದೆ.
ಏಕಕೋಷಜೀವ ಅಮೀಬದಿಂದ ಮೊದಲ್ಗೊಂಡು ಮಾನವನ ವಿಕಾಸ ದಿಜ್ಞ್ಮೂಢ ಗೊಳಿಸುವಂತಹದ್ದು. ಮತ್ತು ವಿಸ್ಮಯಕಾರಿ. ಹಿಮ್ಮರಳಿ ನೋಡಿದಾಗ ನನ್ನ ಜೀವನ ನನ್ನನ್ನೇ ದಿಗ್ಭ್ರಮೆ ಗೊಳಿಸುತ್ತಾದರೂ ಈ ಎಲ್ಲಾ ವಿವಾದಗಳ, ನಿಗೂಢಗಳ, ಒಗಟುಗಳ ನಡುವೆಯೂ ಸಮಸ್ಯೆಯನ್ನು ವೈಚಾರಿಕ ದೃಶ್ಟಿ ಕೋನದಿಂದ ಗಮನಿಸುವುದರಲ್ಲಿ ನನ್ನ ಕಾಲುಗಳು ದೃಢವಾಗಿ ಬೇರೂರಿವೆ. ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆ ಯನ್ನು ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡುವುದೇ ಕಾಲಾನು ಕಾಲದಿಂದ ನಮ್ಮ ಸಮಾಜವನ್ನು ಕಾಡುತ್ತಿರುವ ಅನೇಕ ಕೆಡಕುಗಳಿಗೆ ಪರಿಹಾರ ಎಂಬುವುದು ನನ್ನ ಬಲವಾದ ಅಭಿಪ್ರಾಯ."
ಡಾ. ಎಚ್. ನರಸಿಂಹಯ್ಯನವರು ನಮಗೆಲ್ಲಾ 'ಎಚ್.ಎನ್' ಎಂದೇ ಚಿರಪರಿಚಿತರು ! ಅವರ ಬದುಕೇ ಒಂದು ಪವಾಡ ! ಪ್ರತಿಭೆ, ಪರಿಶ್ರಮ, ಶ್ರದ್ಧೆಗಳ ತಳಹದಿಯ ಮೇಲೆ ಮೂಡಿರುವ ಸಾರ್ಥಕ ಶಿಲ್ಪ ! ಈಗ ಒಂದು ವರ್ಷದ ಹಿಂದೆ ಅವರು ನಮ್ಮನ್ನು ಅಗಲಿದರು !
ನುಡಿದಂತೆ ನಡೆದ ಅನೇಕ ಶ್ರೇಶ್ಟ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ನಿಸ್ವಾರ್ಥ ದುಡಿಮೆಯಿಂದ ನಾಡಿಗೇ ಮಾದರಿಯಾಗಿರುವ ಶಿಕ್ಶಣ ಸಂಸ್ಥೆಗಳನ್ನು ಕಟ್ಟಿ ಬೆಳಸಿದ್ದಾರೆ. ಅಂತಹ ಪುರುಷೋತ್ತಮರಿಗೇ ನಮ್ಮ ನಮನಗಳು !

- Login or register to post comments
- 708 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಆಗಲೇ ಒಂದು ವರ್ಷವಾಗಿ ಹೋಯಿತೇ?
ಪ್ರಿಯ ವೆಂಕಟೇಶ್,
ನಾನು ನರಸಿಂಹಯ್ಯನವರ ಜೀವನ ಚರಿತ್ರೆಯನ್ನು ಓದಿದ್ದೇನೆ, ಅಂತಹ ಸರಳ ಸಜ್ಜನರು ಇಂದು ಬಹಳ ವಿರಳ. ನುಡಿದಂತೆ ನಡೆವ ಉದಾರಶೀಲರಾಗಿ (philanthropist) ಅವರೆಂದೂ ಅಮರ.
ಇತಿ,
ನಿಮ್ಮವ
antaranga.blogspot.com
ಡಾ. ಎಚ್. ಎನ್. ಬಗ್ಗೆ, ಒಂದುವರ್ಷ ವಾಗಿ ಹೋಯಿತೆ ?
ಡಾ. ಎಚ್. ಎನ್. ಬಗ್ಗೆ, ಒಂದುವರ್ಷ ವಾಗಿ ಹೋಯಿತೆ ?
ನಮಸ್ಕಾರ. ಇನ್ನೂ ಇಲ್ಲ. ನಾನು ಇತ್ತೀಚೆಗೆ ಅವರ 'ತೆರೆದ ಮನ' ಎಂಬ ಪುಸ್ತಕವನ್ನು ಓದುತ್ತಿದ್ದೆ. ಅದನ್ನು ನೋಡಿದಾಗ ನೆನಪುಗಳು ಕಾಡಿ ಅವರ ಕೆಲವು ವಾಕ್ಯಗಳನ್ನು ಉಧ್ಧರಿಸಿದ್ದೇನೆ. ಅವರು ನಮ್ಮ ಅಣ್ಣ ಹಾಗೂ ತಮ್ಮ ಚಂದ್ರಶೇಖರನಿಗೆ ಮೇಸ್ಟ್ರು. ಅದೆಸ್ಟು ಜನರಿಗೆ ಮೇಸ್ಟ್ರೊ ಅವರು ! ಚಂದ್ರಶೇಖರ್ ನೆನಪಿದೆಯ ಸಾರ್ ? ಎಂದು ಪ್ರಶ್ನಿಸಿದಾಗ, ಕ್ರಿಕೆಟ್ ಚಂದ್ರಶೇಖರನೋ ಅಥವ ಎಚ್.ಆರ್ ಚಂದ್ರಶೇಖರನೊ ? ಎಂದು ಕೇಳಿದ್ದರು. ನೀವು ಅವರ ಅಣ್ಣನೋ, 'ಬಾಪ್ಪ ಕೂತ್ಗೊ' ಎಂದು ಈಗ ಹೇಳಿದಂತಿದೆ !
ವೆಂ.