ನನ್ನ ಕನ್ನಡ ಭಾಷಾ ಪರಾಕ್ರಮ.

೧.ಧಾರವಾಡ ಕನ್ನಡ, ಸಂಕೇತಿ ಕನ್ನಡ , ಹವ್ಯಕ ಕನ್ನಡ ,
ಅರೆ ಭಾಷೆ, ಮೈಸೂರು ಕನ್ನಡ, ಮಂಗಳೂರು ಕನ್ನಡ, ಕುಂದಗನ್ನಡ...ವೈವಿದ್ಯಮಯ ಶೈಲಿಯ ನಮ್ಮ ಕನ್ನಡ.

೨.ವೈಜ್ಞ್ಯಾನಿಕವಾಗಿ ಬಳಸುಬಹುದಾದ ಕನ್ನಡ.

೩.ಬರೆದಂತೆ ನುಡಿಯುಬಹುದಾದ ಕನ್ನಡ, ನುಡಿದಂತೆ ಬರೆಯಬಹುದಾದ ಕನ್ನಡ.

೫.ಕನ್ನಡ ಚೆಲುವಿನ ಚೆನ್ನುಡಿ.

೬.ಸರಸ್ವತಿ ವೀಣೆಯಲ್ಲಿ ಉಲಿದ ಕನ್ನಡ.

೭ ನುಡಿ ಕನ್ನಡ, ಬರೆ ಕನ್ನಡ, ನಡೆ ಕನ್ನಡ, ಜೇನು ಕನ್ನಡ, ಸವಿ ಕನ್ನಡ, ನಾಡ ಕನ್ನಡ, ಕುಲ ಕನ್ನಡ, ಭಕ್ತಿ ಕನ್ನಡ, ಮನ ಕನ್ನಡ, ಜನ ಕನ್ನಡ, ಗುಣ ಕನ್ನಡ, ಹಾಡು ಕನ್ನಡ, ಕಸ್ತೂರಿ ಕನ್ನಡ, ಜನಪದ ಕನ್ನಡ
ತನು ಕನ್ನಡ, ಪದ ಕನ್ನಡ, ಸಾಹಿತ್ಯ ಕನ್ನಡ, ಅಂತರಂಗ ಕನ್ನಡ, ಸಂಸ್ಕೃತಿಯ ಬೀಡು ಕನ್ನಡ
ಪಂಪ ಕನ್ನಡ, ರನ್ನ ಕನ್ನಡ, ಜೀವ ಕನ್ನಡ, ಗಮಕ ಕನ್ನಡ.......ಅಂತರ್ಜಾಲ ಕನ್ನಡ.....

ಯಾರ ನಿಲುವಿಗೆ ನಿಲುಕದ ನನ್ನ ಮಾತೃ ಭಾಷೆ ಜನ್ಮಕನ್ನಡ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
mahesha's picture

>>>೩.ಬರೆದಂತೆ ನುಡಿಯುಬಹುದಾದ ಕನ್ನಡ, ನುಡಿದಂತೆ ಬರೆಯಬಹುದಾದ ಕನ್ನಡ

ಇದನ್ನು ನಾನು ಚಾಲೆಂಜ್ ಮಾಡುವೆನು. ಹಂಸ, ಕಂಸ, ಮುಂತಾದ ಹೊರನುಡಿ ಪದಗಳನ್ನು ಬರೆದಂತೆ ಉಲಿಯಲ್ಲ. ಬರಹಗನ್ನಡಕ್ಕೂ ಆಡುಗನ್ನಡಕ್ಕೂ ನುಡಿಗನ್ನಡಕ್ಕೂ ವ್ಯಾಕರಣದಲ್ಲೇ ಸಾಕಷ್ಟು ವ್ಯತ್ಯಾಸಗಳಿವೆ. ಕನ್ನಡವು diglossic.

http://en.wikipedia....

ಅಲ್ಲೊಂದು ಸಾಲಿದೆ.
In Pakistan there is a diglossia between the extremely Persianised Urdu (used by the literary elite such as poets, writers, and Government officials), and an Urdu that is very similar to Hindi (spoken by common people, and known as Hindustani among linguists).

ಅದರಂತೆ
In Karnataka there is a diglossia between the extremely Sanskritized Kannada (used by the literary elite such as poets, writers, and Government officials), and an Kannada spoken by common people.

ವಿಜ್ನಾನ ಎಂಬುದು ಒಂದು ವಿಷಯ, ವಿಷಯವನ್ನು ಯಾವ ಭಾಷೆಯಲ್ಲಿ ಬೇಕಾದರೂ ಹೇಳಬಹುದು. ಅದರಲ್ಲಿ ಯಾವ ಹಿರಿಮೆ ನನಗೆ ಕಂಡಿಲ್ಲ.

Chamaraj's picture

ಇವನ್ನೂ ಸೇರಿಸಿ:
’ನಡು’ಗನ್ನಡ, ಎಫ್‌ಎಂ ಕನ್ನಡ, ಟಿವಿ ಕನ್ನಡ, ಸಿನಿಮಾ ಕನ್ನಡ, ನಾಟಕ ಕನ್ನಡ, ಜಾಹೀರಾತು ಕನ್ನಡ, ಎಂಜಿ ರಸ್ತೆ ಲಲನೆಯ ಕನ್ನಡ, ಹಾಸ್ಯೋತ್ಸವ ಕನ್ನಡ, ಯು೨ ಟಿವಿ ಕನ್ನಡ, ಶಿವಾಜಿನಗರ ಕನ್ನಡ, ಕ್ಯಾಂಪಸ್‌ ಕನ್ನಡ,...

- ಚಾಮರಾಜ ಸವಡಿ
http://chamarajsavad...

uniquesupri's picture

ಸಕತ್ :)
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...

mavipra's picture

’ಹರ್ಷ’ಕುಮಾರ
ನಮಸ್ಕಾರ.
ಕನ್ನಡ ಭಾಷೆಯು ಅತಿಸುಂದರ ವನಿತೆಯಂತೆ
ಆ ಮನೋಹರಿಯ ಪ್ರೀತಿ ಮೋಹದಿಂದ ವರ್ಣಿಸುವಂತೆ
ಆಕೆಯ ಸೌಂದರ್ಯ ಪ್ರಭಾವ ಎಣಿಸುವುದೆ ಚೇತನ?
ಅದಕೆ ಬೇಕು ಕವಿಯ ಭಾವವೈಕರಿಯ ಸುಲೋಚನ!.
ಆ ಕವಿಯಂತೆ ನಿಮ್ಮ ಕನ್ನಡ ಪ್ರೇಮ ಸಾಮಾನ್ಯನು ನೋಡ.
ವರ್ಣಿಪ ಆ ಸರಾವಳಿಗೆ ಕೂಡಿಸಿ - ’ಹರ್ಷಕನ್ನಡ’!
ವಿ.ಶೀ.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ