ಪಿಸುಮಾತು
ಹಿಡಿವೆ ನಿನ್ನ ನಾ ನಿದಿರೆಯಲಿ
ಮರೆಯಲಾರೆ ನನ್ನನ್ನೀಗ
ಬೇಡುವೆ ನೀನು ಭಯದಲಿ
ಕಪಿಮುಷ್ಟಿಯಿದು ಸರಳವಲ್ಲ
ಎಲುಬುಗಳು ನಿನ್ನವು ಚೂರಾಗುವುದು
ಎನಗೆ ಚಿಂತೆಯಿಲ್ಲ
ಉರಿಯುವುದೀಗ ನಿನ್ನಾತ್ಮ
ನನ್ನ ರೋಷದ ಬೆಂಕಿಯಲಿ
ಮೋಕ್ಷ ದೊರಕಬಹುದು ನಿನಗೂ
ಪಿಸುಗುಟ್ಟಿದಾಗ ನಾ ನಿನ್ನ ಕಿವಿಯಲಿ
ಇದ್ದಾಗ ಕೇಳಲಿಲ್ಲ...
ಈಗ ಆಲಿಸು ನೀ ಹುಲುಮಾನವ

- Login or register to post comments
- 529 hits
- Email this page





RSS: