ನಿಮಗ್ಯಾವ ಚಿಂತೆ
ನಿಮಗ್ಯಾವ ಚಿಂತೆ
ಜೀವನದುದ್ದಕ್ಕೂ ಹತ್ತು ಹಲವಾರು ಚಿಂತೆ
ಈ ಸಂತೆಯಲಿ ನಿಮ್ಮ ಸರಕ್ಯಾವದೆಂದು ಹೇಳುವಿರಂತೆ
ಕೂಸಿಗೆ ಅಮ್ಮ, ಹಾಲಿನದೇ ಚಿಂತೆ
ಅದರಮ್ಮನಿಗೆ ಮಗುವಿನಳುವುದೇ ಚಿಂತೆ
ಮಗುವಿಗೆ ಮಿಠಾಯಿ ಆಟಿಕೆಗಳದೇ ಚಿಂತೆ
ಪೋಷಕರಿಗೆ ಅದನು ಶಾಲೆಗೆ ಸೇರಿಸುವುದೇ ಚಿಂತೆ
ಶಾಲೆಯಲಿ ಮಕ್ಕಳಿಗೆ ಮಾಸ್ತರರ ಕಣ್ತಪ್ಪಿಸುವುದೇ ಚಿಂತೆ
ಮನೆಗೆ ಬಂದೊಡನೆ ಆಟಕೆ ಓಡುವುದೇ ಚಿಂತೆ
ಅಪ್ಪ ಅಮ್ಮನಿಗೆ ಮಕ್ಕಳ ಹೋಮ್ವರ್ಕ್ ಗ್ರೇಡಿನದೇ ಚಿಂತೆ
ಮಕ್ಕಳ ವಿಷಯವಾಗಿ ಅವರಿಬ್ಬರೂ ಗುದ್ದಾಡುವುದೂ ಉಂಟಂತೆ
ಕಾಲೇಜು ಮೆಟ್ಟಿಲ ತುಳಿದರೆ ಅವನಿಗೆ ಅವಳದೇ ಚಿಂತೆ
ಅವಳಿಗೆ ಇನ್ಯಾರದೋ, ಆದರೆ ಅಮ್ಮನಿಗೆ ತಮ್ಮನ ಚಿಂತೆ
ಅಪ್ಪನಿಗೆ ತನ್ನ ಜೇಬಿನದೇ ಚಿಂತೆ
ಅಕ್ಕ ಪಕ್ಕದವರಿಗೇ ಇವರುಗಳದೇ ಚಿಂತೆ
ಕೆಲಸ ಸಿಕ್ಕೊಡನೆ ಖರ್ಚು ಮಾಡುವುದೇ ಚಿಂತೆ
ಫೋರಂನಲಿ ಪೋಸ್ಟಿಸುವುದು, ರೆಪ್ಪಿನದೇ ಚಿಂತೆ
ಮದುವೆಯಾದೊಡನೆ ಬೇರೆಯವರದೇ ಚಿಂತೆ
ಮಕ್ಕಳಾದೊಡೆ ಮನೆಗೆ ಬರುವುದೇ ಚಿಂತೆ
ನಿವೃತ್ತನಾದೊಡೆ ಕಾಸು ಹೊಂಚುವುದೇ ಚಿಂತೆ
ಮಕ್ಕಳ ಮದುವೆ, ಮೊಮ್ಮಕ್ಕಳದೇ ಚಿಂತೆ
ಶ್ರೀ ಹರಿಯ ನೆನೆಯಲು ಎಂದಿಗೂ ಇಲ್ಲ ಚಿಂತೆ
ನೀವೆಲ್ಲಿದ್ದೀರಿ ಎಂದು ಯೋಚಿಸುವುದೇ ನನ್ನ ಚಿಂತೆ

- Login or register to post comments
- 912 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಚಿಂತೆಗಳ ಓಲೆ!
ಹಹ, ಸೊಗಸಾಗಿದೆ... ಚಿಂತೆಗಳ ಓಲೆ!