ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು

April 23, 2006 - 11:17am — venkatesh

ಡಾ. ರಾಜ್ ಕುಮಾರ್ ರವರಿಗೆ ನಮ್ಮ ಭಾವಪೂರ್ಣ ಶ್ರಧ್ಧಾಂಜಲಿಗಳು !

ಈ ತಿಂಗಳ ೨೪ ರಂದು ಡಾ. ರ್‍ಆಜ್ ಕುಮಾರ್ ಹುಟ್ಟಿದಹಬ್ಬ. ೭೭ ವರ್ಷಗಳು ತುಂಬಿ ೭೮ ಕ್ಕೆ ಕಾಲಿರಿಸುತ್ತಾರೆ. ಕನ್ನಡದ ಕೋಟಿ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅವರು ನಟ ರಾಜ್ ಆಗಿ ಮೆರೆದ ವರ್ಷಗಳು ಅನನ್ಯ. ಅವರೀಗ ಭೌತಿಕವಾಗಿ
ಕಾಣಿಸದಿದ್ದರೂ ನಮ್ಮೆಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ ! ಆ ಕ್ಷಣಗಳನ್ನು ಸ್ಮರಿಸಲು ಬರೆದ ಭಾವಪೂರ್ಣ 'ಶ್ರಧ್ಧಾಂಜಲಿ' ಇದು.

ಪಾರ್ಕಿನೊಳು ಕುಳಿತೆದ್ದೆ ಥಟ್ಟನು
ಲಿಯಿತು ಮನವು ಭುಗಿಲೆದ್ದು ಮಿಡಿಯಿತು
ಹೃದಯವಲ್ಲಿ ! ಏನು ಬರೆಯಲಿ ನಾನು ಸಂತಸದ 'ಸಂಪದಕೆ '?
ಬರಲೊಲ್ಲುದೇ ಏನೂ, ಕ್ಷಣ ಒಂದು ಸ್ಮರಿಸಿಕೊಂಬೆ

'ಅಣ್ಣಾವ್ರ್‍ಅ' ಸ್ಮೃತಿಯಲ್ಲಿ ಕಳೆದ ೧೨ ದಿನ
ಹೇಗೆ ಕಳೆದೆವೊ ಏನೋ ಪೇಳಿರಲ್ಲಿ,
ಅಂದು ಬುಧವಾರ, ೧೨ ನೇ ತೇದಿ ಅಣ್ಣನಗಲಿದ ದಿನವು
ಮರೆವುದೆಂತು ? ನಾಳೆ ೨೪ ಅವರುದಿಸಿದ ದಿನವು
ರಸಿಕರೆಲ್ಲರು, ಭುವಿಯ ಕಾಯುತಿಹರು

'ಕಣ್ಣಪ್ಪ' ನಿಂದ 'ಶಬ್ಧವೇಧಿಯ' ವರೆಗೆ ಬೆಳೆದು ಹೆಮ್ಮರವಾದೆ
ಅಂದಿನಾ, ಮುತ್ತುರಾಜ ಮುಗಿಲೇರಿ ತ್ರಿವಿಕ್ರಮನಾದೆ, 'ನಟರಾಜ'ನಾದೆ
ಕನ್ನಡದ 'ಸುಧೆ'ಯನ್ನು, 'ಮಧು'ವನ್ನು ಜಗಕೆಲ್ಲಾ ಉಣಿಸಿದಾ ಪರಿಯ
ಮರೆವುದೆಂತು ?

ಸರಳ ಸಜ್ಜನಿಕೆಯ ಧೃವತಾರೆ ಅಸ್ತಂಗತವಾಯಿತೈ
ಸವಿನೆನಪು ಹೃದಯದಲಿ, ಮನವೆಲ್ಲ ತುಂಬಿಹುದು
ನೀನಿಲ್ಲ ವೆಂದು ಪೇಳ್ವರಾರಿಹರಿಲ್ಲಿ ಎತ್ತ ನೋಡಿದರಲ್ಲಿ ನೀನೆ ಇರುವೆ !
ಸವಿ ನುಡಿಯ ಕೇಳುವೆವು ಕಾಣುತಿಹೆವಿಂದಿಗೂ, ಮುಂದೆಯೂ ಕಾಣುವೆವು ಟೀವಿ ಯಲ್ಲಿ !

ಮಣ್ಣಿನಾ ಮಗನೆಂದು ಹಾಡಿ ಹೇಳಿದ ನೀನು ಕನ್ನಡದಾ ಮಣ್ಣಿನಲಿ ಐಕ್ಯವಾದೇ !
ಕನ್ನಡದ ಕಣ್ಮಣಿಯು ನೀನುರುವೆ ಇಲ್ಲೆ. ನಮ್ಮ ಮನದಾಳದಲ್ಲೇ !
ಕನ್ನಡದ ಕುಲ ತಿಲಕ, ಬಂಗಾರದಾ ಮನುಶ, ನಮನ ನಿನಗೆ

ನಮಿಪೆವೆಲ್ಲರು ನಾವು ಸವಿನುಡಿಯ ಅಣ್ಣನಿಗೆ, ನಮನಗಳ ಸ್ವೀಕರಿಸಿ
ಹರೆಸು ಎಮ್ಮಾ, ನಮನಗಳ ಸ್ವೀಕರಿಸಿ ಹರೆಸು ಎಮ್ಮಾ !

(ವೆಂಕಟೇಶ) ಲಕ್ಷ್ಮೀವೆಂಕಟೇಶ.

  • ಪ್ರಚಲಿತ
~.~
  • Login or register to post comments
  • 808 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 24, 2006 - 6:50pm — ಮಹೇಶ ಭೋಗಾದಿ

ಶ್ರದ್ಧಾಂಜಲಿ

ಮಹೇಶ ಭೋಗಾದಿ's picture

ಶ್ರದ್ಧಾಂಜಲಿ!!

ಈ ಶಬ್ದದ ಅರ್ಥದ ಬಗ್ಗೆ ನನಗೆ ಕೆಲವು ಗೊಂದಲವಿದೆ.

ಅಂಜಲಿ ಎಂದರೆ ಕೈಜೋಡಿಸಿ ಮುಗಿಯುವುದು ಎಂದು ಅಲ್ಲವೆ?

ಶ್ರದ್ಧೆ(ಸಡ್ಡೆ?, ಅಶ್ರದ್ಧೆ = ಅಸಡ್ಡೆ) ಯಿಂದ "ಕೈಜೋಡಿಸಿ ಮುಗಿ(ನಮಿಸಿ)" ಎಂದು ತಾನೆ?

 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2006 - 7:10pm — srivathsajoshi

Re: ಶ್ರದ್ಧಾಂಜಲಿ

srivathsajoshi's picture

ಮಹೇಶ ಭೋಗಾದಿ wrote:

ಶ್ರದ್ಧಾಂಜಲಿ!!

 

ಈ ಶಬ್ದದ ಅರ್ಥದ ಬಗ್ಗೆ ನನಗೆ ಕೆಲವು ಗೊಂದಲವಿದೆ.

ಅಂಜಲಿ ಎಂದರೆ ಕೈಜೋಡಿಸಿ ಮುಗಿಯುವುದು ಎಂದು ಅಲ್ಲವೆ?

ಶ್ರದ್ಧೆ(ಸಡ್ಡೆ?, ಅಶ್ರದ್ಧೆ = ಅಸಡ್ಡೆ) ಯಿಂದ "ಕೈಜೋಡಿಸಿ ಮುಗಿ(ನಮಿಸಿ)" ಎಂದು ತಾನೆ?

 

 

ಮಹೇಶ್ (ಮತ್ತು ಈ ವಿಷಯದಲ್ಲಿ ಆಸಕ್ತಿಯಿರುವ ಇತರರ) ಗಮನಕ್ಕೆ:

'ಅಂಜಲಿ', 'ಬೊಗಸೆ', 'ನಮಸ್ಕಾರ' ಇತ್ಯಾದಿಯ ಬಗ್ಗೆ ಈಹಿಂದೆ ದಟ್ಸ್ ಕನ್ನಡದಲ್ಲಿ ಒಂದು ಚರ್ಚೆ ನಡೆದಿತ್ತು. ಅದು ಈ ಪುಟಗಳಲ್ಲಿದೆ:

೧) http://thatskannada.oneindia.in/category/response/160405joshi.html

೨) http://thatskannada.oneindia.in/column/triveni/210405bogase_anjali.html

ಇತಿ

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2006 - 7:45pm — ಮಹೇಶ ಭೋಗಾದಿ

ಇತಿ

ಮಹೇಶ ಭೋಗಾದಿ's picture

ಇತಿ vs ಇಂತಿ...

ಈ ವಾದವು ಕೇಳಿದ್ದೇನೆ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 24, 2006 - 8:19pm — srivathsajoshi

Re: ಇತಿ

srivathsajoshi's picture

ಮಹೇಶ ಭೋಗಾದಿ wrote:

ಇತಿ vs ಇಂತಿ...

ಈ ವಾದವು ಕೇಳಿದ್ದೇನೆ.

 

'ಇತಿ' ಸಂಸ್ಕೃತದಿಂದ ನೇರವಾಗಿ ಎತ್ತಿಕೊಂಡದ್ದು.

'ಇಂತಿ' (ಅಥವಾ 'ಇಂತೀ') ಕನ್ನಡದಲ್ಲಿ 'ಇಂತು' + ಈ.

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2006 - 5:40am — venkatesh

ಶ್ರದ್ದಾಂಜಲಿ:

venkatesh's picture

ಶ್ರದ್ದಾಂಜಲಿ:

ಮಹೇಶ್ ಅವರೆ, ನಮಸ್ಕಾರ. ನೀವೇ ಹೇಳಿದಂತೆ, ಶ್ರಧ್ಧೆಯಿಂದ ಎರಡೂ ಕೈಗಳನ್ನೂ ಮೇಲೆತ್ತಿ ಜೋಡಿಸಿ ವಂದಿಸುವುಡು ಎಂದರ್ಥ.ಮತ್ತೆ ನಮಸ್ಕಾರಗಳು ವೈವಿಧ್ಯರೀತಿಯಲ್ಲಿ ಇವೆ.ದೀರ್ಘದಂಡ ಇತ್ಯಾದಿ...
ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2006 - 5:42am — venkatesh

ಶ್ರದ್ದಾಂಜಲಿ:

venkatesh's picture

ಶ್ರದ್ದಾಂಜಲಿ:

ಮಹೇಶ್ ಅವರೆ, ನಮಸ್ಕಾರ. ನೀವೇ ಹೇಳಿದಂತೆ, ಶ್ರಧ್ಧೆಯಿಂದ ಎರಡೂ ಕೈಗಳನ್ನೂ ಮೇಲೆತ್ತಿ ಜೋಡಿಸಿ ವಂದಿಸುವುಡು ಎಂದರ್ಥ.ಮತ್ತೆ ನಮಸ್ಕಾರಗಳು ವೈವಿಧ್ಯರೀತಿಯಲ್ಲಿ ಇವೆ.ದೀರ್ಘದಂಡ ಇತ್ಯಾದಿ...
ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 25, 2006 - 9:50am — ಮಹೇಶ ಭೋಗಾದಿ

ದ್ಧ

ಮಹೇಶ ಭೋಗಾದಿ's picture

ನಾನು ಕಲಿತ ಒಂದು ಸೂತ್ರ.

ದ್ಧ ರೀತಿ ಬರುವೆಡೆ ಹೆಚ್ಚು ಸಂದರ್ಭಗಳಲ್ಲಿ(ಪದಗಳಲ್ಲಿ, ಸಂಸ್ಕೃತ ಪದಗಳಾದರೆ ಸಮಾನ್ಯ) ಅಲ್ಪಪ್ರಾಣ "ದ" ಅಕ್ಷರಕ್ಕೆ, ಮಹಾಪ್ರಾಣ "ಧ" ಒತ್ತಕ್ಷರವಾಗಿ ಬರುವುದು.

ಉದಾ: ಬುದ್ಧಿ, ಸಿದ್ಧಿ, ಶ್ರದ್ಧೆ,  ಯುದ್ಧ,

ಹಾಗೆ ಒಂದು ವರ್ಗೀಯ ವ್ಯಂಜನವು(ಕ, ಚ, ಟ, ತ, ಪ ವರ್ಗಗಳ ಅಕ್ಷರಗಳು) ಮತ್ತೊಂದು ವರ್ಗೀಯ ವ್ಯಂಜನಕ್ಕೆ ಒತ್ತಕ್ಷರವಾಗಿ  ಬರುವಾಗ, ಸಾಮಾನ್ಯವಾಗಿ  ಅಲ್ಪಪ್ರಾಣಕ್ಕೆ ಮಹಾಪ್ರಾಣವು ಒತ್ತಕ್ಷರವಾಗುವುದು, ಹೊರತು ಮಹಾಪ್ರಾಣಕ್ಕೆ ಅಲ್ಪಪ್ರಾಣವು ಒತ್ತಾಗುವುದು ಕಡಮೆ.

ಉದಾ: ಅಬ್ಧಿ,  ಗಚ್ಛ, ಪೃಚ್ಛ, ಸ್ವಚ್ಛ, ಮುಂ.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಕಣ್ಮಣಿ ಡಾ||ರಾಜ್ ರವರಿಗೆ ಇಂದು ಎಪ್ಪತ್ತೊಂಬತ್ತು ವರ್ಷಗಳು
  • ಡಾ. 'ರಾಜ್' ಅಮರರಾದರು !
  • ರಾಜ್-ತಾಜ್
  • ಹಿರಿಯ ಗೌರವಾನ್ವಿತ ನಟ, ದಿಲೀಪ್ ಕುಮಾರ್ ರವರಿಗೆ ೨೦೦೭ ರ, " ದಾದಾಸಾಹೇಬ್ ಫಾಲ್ಕೆ ರತ್ನ ಪ್ರಶಸ್ತಿ".
  • ಡಾ. ರಾಜಕುಮಾರ್. ಒಳ್ಳೆಯ ನಟ, ಹಾಗೂ ಗಾಯಕರೂ ಕೂಡ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator