ಸ್ಪರ್ಧೆ: ಗ್ನು/ಲಿನಕ್ಸ್ ಹಬ್ಬದ ಆಪರೇಟಿಂಗ್ ಸಿಸ್ಟಂ ಸಿ.ಡಿ ಗೆ ಹೆಸರಿಡಿ
ಗ್ನು/ಲಿನಕ್ಸ್ ಹಬ್ಬ ತಂಡ ಪ್ರತಿ ಹಬ್ಬದಲ್ಲೂ, ಬಳಕೆದಾರನಿಗೆ ಕನ್ನಡ ಓದಲು, ಬರೆಯಲು ಮತ್ತು ಪ್ರತಿನಿತ್ಯದ ಕೆಲಸಗಳನ್ನ ಇನ್ಯಾವುದೇ ಪ್ರೊಪ್ರೈಟರಿ ಆಪರೇಟಿಂಗ್ ಸಿಸ್ಟಂಗಳಂತೆ ಮಾಡಲಿಕ್ಕೆ ಸಾಧ್ಯವಾಗುವಂತಹ ತಂತ್ರಾಂಶಗಳನ್ನ ಒಳಗೊಂಡ ಗ್ನು/ಲಿನಕ್ಸ್ ಸಿ.ಡಿ ಯೊಂದನ್ನ ಭಾಗವಹಿಸುವ ಎಲ್ಲರಿಗೆ ನೀಡುತ್ತಾ ಬಂದಿದೆ.
ಈ ಬಾರಿ ನಿಟ್ಟೆಯಲ್ಲಿ ನೆಡೆಯುವ ಗ್ನು/ಲಿನಕ್ಸ್ ಹಬ್ಬ -೩ ಕ್ಕೆ ಡೆಬಿಯನ್ ಲೆನಿ (Debian Lenny) ಆಧಾರಿತ ಲೈವ್ ಸಿ.ಡಿ ಯನ್ನು ಕನ್ನಡ ತಂತ್ರಾಂಶ ಇತ್ಯಾದಿಯೊಂದಿಗೆ ಕೊಡುವ ಯೋಜನೆಯಿದೆ. ಈ ಸಿ.ಡಿ ಯೊಂದಿಗೆ ಬಳಕೆದಾರನನ್ನು ಸ್ವತಂತ್ರ ಹಾಗು ಮುಕ್ತ ತಂತ್ರಾಂಶ (FOSS) ಅಭಿವೃದ್ದಿಯಲ್ಲಿ ಭಾಗವಹಿಸಲಿಕ್ಕೆ ಅಣಿಗೊಳಿಸುವ ತಂತ್ರಾಂಶಗಳನ್ನು ಒಳಗೊಂಡ Add-on ಸಿ.ಡಿ ಕೂಡ ಇರುತ್ತದೆ. ನಾವು ಈ ಸಿ.ಡಿಗಳನ್ನು ಸಿದ್ದಪಡಿಸಿ,
ಪರೀಕ್ಷಿಸುವಾಗ ನೀವು ಇದಕ್ಕೊಂದು ಹೆಸರಿಡುವ ಸ್ಪರ್ಧೆಯಲ್ಲಿ ಭಾಗವಹಿಸ್ತೀರಾ?
ಗ್ನು/ಲಿನಕ್ಸ್ ಹಬ್ಬದ ಭಾಗಿಗಳೊಂದಿಗೆ ಹಂಚಿಕೊಳ್ಳುವ ತಂತ್ರಾಂಶವನ್ನ ಏನಂತ ಕರೆಯೋಣ?
ಈ ಆವೃತ್ತಿಯನ್ನ ನೀವು ೩ ಕನ್ನಡ ಪದಗಳನ್ನ ಉಪಯೋಗಿಸಿ ಆರು ದಿನಗಳ ಒಳಗೆ ಹೆಸರಿಸಿ, ಹಬ್ಬದ ಆಚರಣೆಯಲ್ಲಿ ನಮ್ಮೊಂದಿಗೆ ಭಾಗಿಗಳಾಗಿ.
ಸ್ಪರ್ಧೆಯ ನಿಯಮಗಳು ಇಂತಿವೆ:
* ಮೂರು ಕನ್ನಡ ಅಕ್ಷರಗಳಿರಬೇಕು (ಉದಾ: ಸಂಪಿಗೆ)
* ಗ್ನು/ಲಿನಕ್ಸ್ ಹಬ್ಬದ ಮೂಲ ಉದ್ದೇಶವನ್ನ ಬಿಂಬಿಸುವಂತಿರಬೇಕು
* ಬೇರೆಯವರು ಈ ಹೆಸರನ್ನ ಮೊದಲು ಉಪಯೋಗಿಸಿರಬಾರದು, ಕನ್ನಡದಲ್ಲಿ ಪದಗಳಿಗೆ ಕೊರತೆಯಿಲ್ಲ ಅಲ್ಲವೇ?
* ಯಾವುದೇ ಜಾತಿ/ಮತ ಗಳನ್ನ ಹೆಸರು ಒಳಗೊಂಡಿರಬಾರದು (ಉದಾ: ಉಬುಂಟು ಕ್ರಿಸ್ಚಿಯನ್ ಎಡಿಷನ್)
* ಅಸಭ್ಯ ಭಾಷೆ ಉಪಯೋಗಿಸಬಾರದು.
ಸಲಹೆ: ಪ್ರಾಥಮಿಕ ಶಾಲೆಯ ಪುಸ್ತಕಗಳನ್ನು ನೋಡಿ. ಮಕ್ಕಳ ಪುಸ್ತಕಗಳು "ಕನ್ನಡ ಭಾರತಿ" ಯಂತಹ ಸುಂದರ ಪದಗಳನ್ನ ನಿಮ್ಮ ಮುಂದಿಡುತ್ತವೆ.
- Login or register to post comments
- 655 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಶಿವಪ್ರಕಾಶ್, ನನ್ನ ಆಯ್ಕೆ ಹೀಗಿವೆ:
೧. ಮುಕ್ತಾಂಶ (ಮುಕ್ತ ತಂತ್ರಾಂಶದ ಸಂಕ್ಷಿಪ್ತ ರೂಪ)
೨. ಬಾನಾಡಿ (ಇದು ಕೂಡ ಮುಕ್ತ ಮನಸ್ಥಿತಿಯನ್ನು ಸೂಚಿಸುತ್ತದೆ. ಒತ್ತಕ್ಷರಗಳಿಲ್ಲದ ಶಬ್ದ ಇದು. ವೈಯಕ್ತಿಕವಾಗಿ ನನಗಿಷ್ಟವಾದ ಶಬ್ದ)
೩. ಸಂಕೇತ
ಇಷ್ಟು ಸಾಕಾ? :)
ಸರಳ :
ಮುಕುಟ:
ಭುಗಿಲ್
ಗ್ನುವನ್ನು ಸದಾ ನೆನಪಿಸುವಂತಹ ಹೆಸರು - "ಗುನುಗು"
ಕಲ್ಪನಾ,
'ಗುನುಗು' ಪದ ಚೆನ್ನಾಗಿದೆ. ನಮ್ಮ ಮನೆಯ ಆಡುಭಾಷೆಯಲ್ಲಿ -(ಇದು ತೆಲುಗು ಪದವೋ ಕನ್ನಡ ಪದವೋ ನನಗೆ ಇನ್ನೂ ಗೊತ್ತಾಗಿಲ್ಲ!)- ಗುನುಗು ಅನ್ನೋ ಪದವನ್ನು 'ಧಾಡಿ' ಎನ್ನುವ ಅರ್ಥದಲ್ಲಿ ಬಳಸ್ತೀವಿ :)
ಅಂದರೆ, ಅವನಿಗೇನು ಧಾಡಿ (ಗುನುಗು) ತಾನೇ ಆ ಕೆಲಸ ಮಾಡೋದಕ್ಕೆ, ಬೇರೆಯವರಿಗೆ ಯಾಕೆ ಹೇಳ್ತಿದಾನೆ ಅನ್ನೋ ಅರ್ಥ ಬರುವಂತೆ!
ನೀವು ಹೇಳಿದ ಗುನುಗು ಹಾಡಿಗೆ ಸಂಬಂಧಪಟ್ಟಿದ್ದು ತಾನೆ? :)
ಶಾಮಲ
ನನ್ನ ಸಲಹೆ: ಗುಣಾಂಶ -ಚಾಮರಾಜರ 'ಮುಕ್ತಾಂಶ' ಪದದಿಂದ ಸ್ಫೂರ್ತಿಗೊಂಡು.
ಗುನುಗು , ಗುನುಗುನಿಸುವುದು ಅಂದರೆ ಇಂಗ್ಲೀಷಿನ humming
ಗ್ನು ಪದ ಕಿವಿಯಲ್ಲಿ ಗುನುಗುವುದು ಅನ್ನುವ ಅರ್ಥದಲ್ಲಿ ಹೇಳಿದ್ದು. ಶಾಮಲ, ನೀವು ಹೇಳಿದ ಅರ್ಥದಲ್ಲಿ ಗುನುಗು ಇರುವುದೇನೋ ಗೊತ್ತಿಲ್ಲ. :-)
ಇನ್ನೊಂದೆರಡು ಹೆಸರುಗಳು:
ದೀಪಿಕ - ಲಿನಕ್ಸ್ ಬಳಸಲು ದಾರಿದೀಪವಾಗುವ ಸಿ.ಡಿ ಎನ್ನುವ ಅರ್ಥದಲ್ಲಿ, ಮತ್ತು ಪಡ್ಡೆಗಳಿಗೆ ನೆನಪಿಟ್ಟುಕೊಳ್ಳುವುದು ಸುಲಭ! ;-)
ಗ್ನು-ಜ್ಞಾನಿ
ಲಿ-ಜ್ಞಾನಿ
ನಿರಾಳ
ನಿಸರ್ಗ
ನಿಟ್ಟೆ ಸಂಪೂರ್ಣ ನಿಸರ್ಗದಿಂದ ಆವರಿಸಿದೆ. ಹಾಗೆಯೇ ನಿಸರ್ಗದಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿದೆ.
ತೋರಣ (addon CD ಗಳ ಮೂಲಕ ತಂತ್ರಾಂಶಗಳನ್ನು ತೊರಿಸುವುದು).
ಅಮ್ರುತ.
ಸಿಂಚನ.
ಆದಿತ್ಯ
ಆದಿ
/* ಮೊದ್ಲ್ನೇ ವರ್ಶನ್ನಲ್ವಾ .. ಅದ್ಕೆ :) */
ಇಲ್ಲಾಂದ್ರೆ ಬರೀ 'ನಮ್ಮ ಲಿನಕ್ಸ್!'
'ಒಬ್ಬಟ್ಟು'
- ಕನ್ನಡ ನಾಡಿನ ಹಬ್ಬದ ಮುಖ್ಯ ತಿಂಡಿ, ಇದು ಗ್ನು/ಲಿನಕ್ಸ್ ಹಬ್ಬ ಅಲ್ವಾ? :)
- ಸಿ.ಡಿ. ಕೂಡ ಒಬ್ಬಟ್ಟು ತರಾನೇ ಇರತ್ತೆ :)
- ಉಬುಂಟು ತರಹವೇ ಕೇಳತ್ತೆ!!!
--ಶ್ರೀ
ಶ್ರೀ,
ಒಬ್ಬಟ್ಟು- ತೆಂಗಿನ(ಗ್ನು) ಕಾಯಿ/ಕಡ್ಲೆ(ಲಿನಕ್ಸ್)ಬೇಳೆ. :)
ಚೆನ್ನಾಗಿದೆ.
ಒತ್ತಕ್ಷರ ತೆಗೆದು 'ಒಬಟು' ಮಾಡಿದರೆ ಹೇಗೆ?
-ಗಣೇಶ.
ಸುರಭಿ , ಕದಂಬ, ನೈದಿಲೆ , ಸ್ಪೂರ್ತಿ, ಪ್ರೇರಣ, ಚಿಗುರು, ಲಿಂತ್ರಾಂಶ ,
surabhi suits well
surabhi linux , GNU/Linux Surabhi ,
ದಿಗಂತ
ಬೆಳಕು ;)
ಬೆಳಕು ಇನ್ನೂ ಟೆಸ್ಟಿಂಗ್ನಲ್ಲಿದ್ದು ಟನ್ಗಟ್ಲೆ ಬಗ್ಗಳಿದ್ರೆ stable ಆಗೋವರ್ಗೂ 'ಕೊಳಕು' ಅಂತ codename ಮಾಡೋದು. ;)
ಹಂಗಲ್ಲಪಾ...... ಬೆಳಕು ಆಮೇಲೆ ಹೊಸಬೆಳಕು :)
ಅರವಿಂದ, ರಾಘವನಿಗೆ ಕಂಡೀಷನ್ ಹಾಕ್ಲಿಕ್ಕೆ ಹೊಸ ಪದ ಹೆಕ್ಕಿ ಕೊಡ್ತಿದ್ದೀಯಾ? ;)
ರಾಘವ, ಮೇಲೆ ಹೇಳಿರೋ ಎಲ್ಲ ಹೆಸರುಗಳ ಪಟ್ಟಿ ಮಾಡಿ ಅದರ ಮೇಲೆ ಯಾವ್ದಾದ್ರೂ ಪ್ರೊಗ್ರಾಮ್ ಬರೆಯೋ ವಿಚಾರ ಇದ್ಯಾ ಅಂತ ನನ್ನ ಯೋಚನೆ....
ಪ್ರೋಗ್ರಾಮೋ... ಕವನನೋ...?
ಅಂದಹಾಗೆ ಈ ಸ್ಪರ್ಧೆಲಿ ಗೆದ್ದೋರಿಗೆ ಪ್ರೈಜ್ ಏನು ;)
ಅದರ ಬಗ್ಗೆ ಹೇಳಲೇ ಇಲ್ಲ ಅಲ್ವಾ? ;) ಸ್ವಲ್ಪ ಸಸ್ಪೆನ್ಸ್ ಇರಲಿ, ಮುಂದೆ ಹೇಳ್ತೀನಿ.
ಹೊಸಬೆಳಕೂ [ಊಊಊಊ] ಮೂಡುತಿದೇ [ಏಏಏ] /* bg: ಟುಂಟುಂಟುಡುಂ ಟುಂಟುಂಟುಡುಂ */
ಈ ಟೈಪಾ? :P
ಈ ಸ್ವರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.
ತಂಡ ಈ ಲೇಖನದಲ್ಲಿ, ಹಬ್ಬ.ಇನ್, ಹಾಗು ಈ ಮೈಲ್ ಮೂಲಕ ಬಂದ ಉತ್ತರಗಳಲ್ಲಿ ಐದು ಹೆಸರುಗಳನ್ನ ಆಯ್ದು ಕೊಂಡಿದ್ದು. ಅದಕ್ಕೆ ಜನಮತವನ್ನ ಇಂದು ಮತ್ತು ನಾಳೆ ಕೋರುತ್ತಿದ್ದೇವೆ. ಅದರ ಕೊಂಡಿಯನ್ನು ಮತ್ತು ಇತರೆ ವಿವರಗಳನ್ನು ನನ್ನ ಮುಂದಿನ ಕಾಮೆಂಟ್ ನಲ್ಲಿ ತಿಳಿಸ್ತೇನೆ.
ನಿಮ್ಮ ಹೆಸರು ಇದರಲ್ಲಿ ಸೇರಿಲ್ಲವೆಂದು ಬೇಸರ ಪಡಬೇಡಿ. ನಿಮ್ಮ ಉತ್ತರಗಳು ನಮಗೆ ಹೊಸ ಚಿಂತನೆಯನ್ನ, ಹೊಸ ಪ್ರಯೋಗಗಳನ್ನ ಮಾಡಲೂ ಯಾವಾಗಲೂ ಹುರಿದುಂಬಿಸುತ್ತಿರುತ್ತವೆ. ಈ ಲೇಖನದಲ್ಲಿ ನೀವು ಸೂಚಿಸಿರುವ ಹೆಸರುಗಳನ್ನ ಸಂಪದದ ಮುಂದಿನ ಕಾರ್ಯಕ್ರಮಗಳಿಗೆ ಕೂಡ ಉಪಯೋಗಿಸಿಕೊಳ್ಳಬಹುದು.
ನಿಮ್ಮ
ಶಿವು
ಜನಮತವನ್ನ ನೀವಿಲ್ಲಿ ಹಾಕಬಹುದು : - http://sampada.net/p...
ಸಂಪದ ತಂಡ ನಾಗರಾಜ್ ರವರು ನೀಡಿದ "ಚಿಗುರು" ಹೆಸರನ್ನ ಗ್ನು/ಲಿನಕ್ಸ್ ಆವೃತ್ತಿಗೆ ಬಳಸಿಕೊಂಡಿದೆ. :)
ನಾಗರಾಜ್ ರವರೆ, ನಿಮಗೆ ತಂಡದ ಪರವಾಗಿ ಅಭಿನಂದನೆಗಳು. ಗ್ನು/ಆವೃತ್ತಿಯ ಒಂದು ಪ್ರತಿಯನ್ನ ನಿಮಗೆ ತಲುಪಿಸುತ್ತೇವೆ.
ಈ ಸ್ವರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಮತ್ತೊಮ್ಮೆ ನನ್ನ ಧನ್ಯವಾದಗಳು. ನಿಮಗೂ ಈ ಒಂದು ಗ್ನು/ಲಿನಕ್ಸ್ ಆವೃತ್ತಿಯ ಪ್ರತಿ ಬೇಕಿದ್ದರೆ, ಸಂಪದದಲ್ಲಿ ಮುಂಬರುವ ಗ್ನು/ಲಿನಕ್ಸ್ ಸ್ವರ್ಧೆಗಳಲ್ಲಿ ಭಾಗವಹಿಸಿ. ಡೌನ್ಲೋಡ್ ಮಾಡಿಕೊಳ್ಳಲಿಕ್ಕೆ ಬೇಕಿರುವ ವಿವರಗಳನ್ನ ಒಂದೆರಡು ದಿನಗಳಲ್ಲಿ ನಿಮಗೆ ತಿಳಿಸುತ್ತೇವೆ.
"ಚಿಗುರು" ಅನ್ನುವ ಹೆಸರು ತುಂಬಾ ಚೆನ್ನಾಗಿದೆ. Debian - ಚಿಗುರು ಅಂತ ಹೇಳುವಾಗ Debian ಕನ್ನಡಕ್ಕೋಸ್ಕರ ಚಿಗುರೊಡೆಯಿತೇನೋ ಅಂತ ಅನ್ನಿಸಿತು. ಧನ್ಯವಾದಗಳು ನಾಗರಾಜ್ ರವರಿಗೆ :)