ಶ್ರಿಮಂತ ಬಡವರು..
ಅದೊಂದು ಶ್ರೀಮಂತ ಕುಟುಂಬ.ಗಂಡ ಹೆಂದತಿ ಮತ್ತು ಅವರ ಒಂದು ಮುದ್ದಾದ ಮಗು. ಗಂಡ ಹೆಂಡತಿಗೆ ಮಗನೆಂದರೆ ತುಂಬಾ ಪ್ರೀತಿ. ಅವರಲ್ಲಿದ್ದ ಶ್ರಿಮಂತಿಕೆಯಿಂದ ಮಗನನ್ನು ತುಂಬಾ ಮುದ್ದಿನಿಂದ ಬೆಳೆಸುತ್ತಿದ್ದರು. ಮಗ ಬಯಸಿದ ಪ್ರತಿಯೊಂದು ಬಯಕೆ ಯನ್ನು ಇಡೇರಿಸುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ತಂದೆಗೆ ತನ್ನ ಶ್ರಿಮಂತಿಕೆಯ ಬಗ್ಗೆ ತುಂಬಾ ಅಹಂಕಾರವಿತ್ತು.
ಒಂದು ದಿನ ತಂದೆಯು ಮಗನನ್ನು ಕುರಿತು ಹೀಗೆ ಹೆಳುತ್ತನೆ "ಮಗನೆ ನೋಡು ನಾವು ನಮ್ಮೂರಿನಲ್ಲೆ ದೊಡ್ಡ ಶ್ರಿಮಂತರು ನಮಗೆ ಸರಿಸಮರ್ಯಾರು ಇಲ್ಲ" ಎಂದು ಗರ್ವ ದಿಂದ ಹೇಳಿದಾಗ ಅ ಚಿಕ್ಕ ಮಗು "ಅಪ್ಪಾ ಅದು ಹೇಗೆ ಹೇಳುವೆ?" ಎಂದು ಪ್ರಶ್ನಿಸಿತು.
ತಂದೆಯು ಮಗನಿಗೆ ತಾವೆಷ್ಟು ಶ್ರಿಮಂತರು ಎಂದು ನಿರೂಪಿಸಲು ಮಗನನ್ನು ಕರೆದೊಕೊಂದು ಊರಿನಾಲ್ಲಿರುವ ಬಡವರನ್ನೆಲ್ಲಾ ತೋರಿಸಿಕೊಡು ಬರಲು ಹೊರಟ.
ತಂದೆ ಮಗರಿಬ್ಬರು ಊರೆಲ್ಲಾ ಸುತ್ತಿಕೊಂಡು ಮನೆಗೆ ಬಂದರು. ಮಗನನ್ನು ಕುರಿತು ತಂದೆ ಕೇಳುತ್ತಾನೆ "ಮಗನೆ ನಾವು ಎಲ್ಲಾ ಬಡವರನ್ನು ನೋಡಿದೆವಲ್ಲಾ ಈಗ ಹೇಳು ನಮಗು ಅವರಿಗು ಇರುವ ವ್ಯೆತ್ಯಾಸ ಏನು?
ಆಗ ಮುಗ್ಧತೆಯ ನಗುವನ್ನು ಬೀರಿ ಹೀಗೆ ಹೇಳುತ್ತಾನೆ.
ಅಪ್ಪಾ...
ಅವರಿಗೆ ಸಾಕಷ್ಟು ನಾಯಿಗಳಿವೆ....ನಮ್ಗೆ ಎರಡೇ ನಾಯಿಗಳಿವೆ
ಅವರಿಗೆ ವಿಶಾಲವದ ಮೈದಾನವಿದೆ...ಆದರೆ ನಮಗಿಲ್ಲಾ?
ಅವರಿಗೆ ವಿಶಾಲವಾದ ಕೆರೆ ಇದೆ..ಆದರೆ ನಮ್ಗೆ ಚಿಕ್ಕದಾದ ಸ್ವಿಮಿಂಗ್ ಪೂಲ್ ಇದೆ.
ಅವರು ಇನ್ನೊಬ್ಬರಿಗಾಗಿ ಬೆಳೆ ಬೆಳೆಯುತ್ತಾರೆ... ಆದರೆ ನಾವು.....?
ಅಪ್ಪ ಈಗ ಹೇಳಿ.. ಬಡವರು ಅವರಾ? ಅಥವಾ ನಾವಾ?
ಮಗನ ಮಾತನ್ನು ಕೇಳಿದ ತಂದೆ ಮೂಕವಿಸ್ಮಿತನಾದ.....
- Login or register to post comments
- 407 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಚೆನ್ನಾಗಿದೆ ಶೇಷಗಿರಿ. ಈ ಕತೆ ಹಿಂದೊಮ್ಮೆ ಓದಿದ್ದೆ. ಆದರೂ, ಅದರ ನೀತಿ ಮತ್ತೆ ಮನಸ್ಸು ತಟ್ಟುತ್ತಲೇ ಇದೆ.
ಧನ್ಯವಾದ ಸರ್,
ಅದು ನನಗೆ ಇಂಗ್ಲೀಷ್ ನಲ್ಲಿ ಮಿಂಚಂಚೆ ಬಂದಿದ್ದು. ಅದನ್ನೆ ಕನ್ನಡಿಕರಿಸುವ ಪ್ರಯತ್ನ ಮಾಡಿದೆ..
ಪ್ರೀತಿಯಿಂದ
ಗಿರಿ
ಇದೇ ಭಾವವಿರುವ ಕಥೆಯನ್ನು ನಾನು ಈಗಾಗಲೇ ಇದೇ ತಿ೦ಗಳು ೭ ನೇ ತಾರೀಖು ಸ೦ಪದದಲ್ಲಿ ಪ್ರಕಟಪಡಿಸಿದ್ದೇನೆ. ಒ೦ದೇ ತರಹೆಯ ಲೇಖನಗಳು ಎರಡೆರಡು ಬಾರಿ ಪ್ರಕಟಗೊಳ್ಳದ೦ತೆ ಸ೦ಪದಿಗರು ತುಸು ಎಚ್ಚರವಹಿಸಿದರೆ ಒಳಿತು. ನನ್ನ ಆ ಬರಹಕ್ಕೆ ಈ ಕೆಳಗಿನ ಕೊ೦ಡಿಯನ್ನು ಕ್ಲಿಕ್ಕಿಸಿ ಶೇಷಗಿರಿ.
http://sampada.net/a...
ಕ್ಷಮಿಸಿ ಸಾರ್,
ನಾನು ಅದನ್ನು ಓದಿರಲಿಲ್ಲ. ನಾನು ಸಂಪದಕ್ಕೆ ಬಂದು 1 ತಿಂಗಳಾಯಿತಷ್ಟೆ.
ನನಗೆ ಬಂದ ಮಿನ್ಚಂಚೆಯನ್ನು ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿದೆ ಅಷ್ಟೆ..
ಪ್ರೀತಿಯಿಂದ
ಗಿರಿ
ಇಂತಹ ಹಲವಾರು ಬರಹಗಳು ನನ್ನ ಮಿಂಚಂಚೆಯಲ್ಲೂ ಸಾಕಷ್ಟಿವೆ. Chicken soup for soul ಹೆಸರಿನ ಪುಸ್ತಕಗಳಲ್ಲಿ ಇಂತಹ ಸಾಕಷ್ಟು ಸಂಗತಿಗಳು ಈಗಾಗಲೇ ಇವೆ. ಸಾಕಷ್ಟು ಜನರು ಅವನ್ನು ಅನುವಾದಿಸಿದ್ದೂ ಆಗಿದೆ. ಹೀಗಾಗಿ, ಪುನರಾವರ್ತನೆಯಾದರೆ ಅಚ್ಚರಿಯೇನಲ್ಲ. ನಿಮ್ಮ ಗಮನಕ್ಕೆ ಬಂದವನ್ನು ಬರೆಯಿರಿ. ಅದರಲ್ಲಿ ತಪ್ಪೇನಿಲ್ಲ.