ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬಾರೆ ಬಾರೆ ಪುಟ್ಟಮ್ಮ

May 14, 2006 - 10:59am — tvsrinivas41

ಬಾರೆ ಬಾರೆ ನನ್ನ ಪುಟ್ಟಮ್ಮ
ನಾಲ್ಕು ಹಲ್ಲು ತೋರು ನೀ ನನ್ನಮ್ಮ
ಮುದ್ದಿನ ರಾಣಿ ಗಿಡ್ಡು ಪುಟಾಣಿ
ಕೊಡುವೆನು ಬಾರೆ ಗುಂಡು ಬಟಾಣಿ

ಅಗಲದ ಹಣೆಗೆ ದುಂಡನೆ ಕುಂಕುಮ
ಗುಂಗುರು ಕೂದಲ ತೀಡುವೆ ಬಾರಮ್ಮ
ಕಿವಿಯಲಿ ಝುಮಕಿ ಹಾಕುವೆನು
ಕಣ್ಣಿಗೆ ಕಾಡಿಗೆ ಹಚ್ಚುವೆನು

ಪುಟಾಣಿ ಕಾಲ್ಗಳಲಿ ಘಲಘಲ ಗೆಜ್ಜೆ
ಮನೆಯೊಳಗೆಲ್ಲ ನಿನ್ನದೆ ಹೆಜ್ಜೆ
ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ
ತೊಡಿಸುವೆ ಬಣ್ಣದ ಉದ್ದನೆ ಲಂಗ

ಉಣಿಸುವೆ ಉಪ್ಪು ತುಪ್ಪದ ಅನ್ನ
ಎಂದಿಗೂ ನೀ ತಣಿಸು ನನ್ನ ಮನವನ್ನ
ನಿನ್ನೊಡನೆ ಆಡಲು ಕರೆಯುವೆ ಚಂದಮಾಮ
ತಟ್ಟಿ ಮಲಗಿಸಲಿಹಳು ನಿನ್ನಮ್ಮ

ಸಿಹಿ ಹಾಲನ್ನೀವೆ ಬಟ್ಟಲಿನಲಿ
ನಾನೂ ಸೇರುವೆ ನಿನ್ನಳಿನಲಿ
ಆಲಂಗಿಸು ನಿನ್ನ ಪುಟ್ಟ ಕೈಗಳಲಿ
ಆಡಿ ಪಾಡಿ ಸೋತು ಮಲಗು ನೀ ಬಳಲಿ

  • ಕಾವ್ಯ ಮತ್ತು ಕವನ
~.~
  • Login or register to post comments
  • 853 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 16, 2006 - 1:36pm — benaka

ಬಹಳ ಚೆನ್ನಾಗಿದೆ

benaka's picture

ಶ್ರೀನಿವಾಸರೇ,

ನಿಮ್ಮ ಶಿಶುಗೀತೆ ಬಹಳ ಚೆನ್ನಾಗಿದೆ; ಹೊಯ್ಸಳರ 'ಬಂದ ಬಂದ ಸಂತಮ್ಮಣ್ಣ...' ನೆನಪಾಯಿತು!
ಶಿಶುಸಾಹಿತ್ಯದ ಬಗ್ಗೆ ಜಿ.ಪಿ.ರಾಜರತ್ನಂ ಹೇಳಿದ ಮಾತು "ಸಾಲದು ಸ್ವಾಮೀ ಏನೇನೂ ಸಾಲದು..."
ಇಂದಿಗೂ ಸತ್ಯ. ಆದ್ದರಿಂದ ದಯವಿಟ್ಟು ಮುಂದುವರೆಸಿ.
ನಿಮ್ಮವ

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2006 - 2:10pm — ಮಹೇಶ ಭೋಗಾದಿ

ಪುಟ್ಟಮ್ಮನ ಹಾಡು

ಮಹೇಶ ಭೋಗಾದಿ's picture

ಚೆನ್ನಾಗಿದೆ..........

ಕನ್ನಡದಲ್ಲಿ ಮಕ್ಕಳಹಾಡುಗಳು ಕಡಮೆಯಾಗುತ್ತಿರುವಾಗ, ಇಂತಹ ಪದ್ಯಗಳು ಅಪರೂಪ.
ಮಕ್ಕಳಿಗೆ ಬರೀ ಇಂಗ್ಲೀಷಿನಲ್ಲೆ ರೈಮ್ಗಳು ಇರುವಂತೆ, ಮಾಡಿಬಿಟ್ಟಿದ್ದಾರೆ...

ಮೆಚ್ಚುಗೆಯೊಂದಿಗೆ
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2006 - 2:20pm — Sunil Jayaprakash

ಪುಟ್ಟಮ್ಮ ಬರುತಿಹಳು

Sunil Jayaprakash's picture

ತವಿಶ್ರೀ ಅವರಿಗೆ ಧನ್ಯವಾದಗಳು. ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿತ್ತು.

tvsrinivas41 wrote:

ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ
ತೊಡಿಸುವೆ ಬಣ್ಣದ ಉದ್ದನೆ ಲಂಗ

ಹುಡುಗರಿಯರು, ಕಡಗ ಧರಿಸುತ್ತಾರೆಯೇ. ಕಡಗ ಏನಿದ್ದರೂ ಹುಡುಗರಿಗೆ. ಅದೂ ನಮ್ಮಂತಹ( Smiling )ಧೈರ್ಯಶಾಲಿಗಳಿಗೆ.

tvsrinivas41 wrote:

ಉಣಿಸುವೆ ಉಪ್ಪು ತುಪ್ಪದ ಅನ್ನ
ಎಂದಿಗೂ ನೀ ತಣಿಸು ನನ್ನ ಮನವನ್ನ
ನಿನ್ನೊಡನೆ ಆಡಲು ಕರೆಯುವೆ ಚಂದಮಾಮ
ತಟ್ಟಿ ಮಲಗಿಸಲಿಹಳು ನಿನ್ನಮ್ಮ

ಈ ಉಪ್ಪು ತುಪ್ಪಾನ್ನದ ಸಾಲಂತೂ ನಿಜಕ್ಕೂ ಸತ್ಯ. ನಾ ಕಂಡಂತೆ ಉಪ್ಪು ತುಪ್ಪಾನ್ನ ಬಹಳಷ್ಟು ಜನರಿಗೆ(ವಿಶೇಷವಾಗಿ ಮಕ್ಕಳಿಗೆ) ಇಷ್ಟವಾಗುವುದು. ಈ ಸಾಲು ನಿಮ್ಮ ಅನುಭವವನ್ನು ಸಾರುತ್ತಿದೆ. ಅದು ಹೇಗೆ ಸಾಧ್ಯವಾಯಿತು ಈ ಸಾಲು ಬರೆಯಲು.

ಮತ್ತೊಂದು ಮಾತೇನೆಂದರೆ, ಈ ಉಪ್ಪು ತುಪ್ಪದ ಸಾಲನ್ನು ಹೀಗೆ ಬರೆದರೆ ಇನ್ನೂ ಪ್ರಾಸಬದ್ಧವಾಗಿರುತ್ತದೆ ಎಂದನಿಸುತ್ತದೆ. ನಿಮ್ಮನಿಸಿಕೆ ಏನು.

ಉಣಿಸುವೆ ನಿನಗೆ ಉಪ್ಪು ತುಪ್ಪದಾ ಅನ್ನ
ಎಂದಿಗೂ ನೀ ತಣಿಸು ನನ್ನ ಮನವನ್ನ
ನಿನ್ನೊಡನೆ ಆಡಲು ಕರೆವೆನು ನಾ ಚಂದಮಾಮನ
ತಟ್ಟಿ ಮಲಗಿಸಲಿಹಳು ನಿನ್ನಮ್ಮ

ಏಕೆಂದರೆ, ಪ್ರತಿ ಸಾಲಿನ ಮಧ್ಯದ ಪದ(ಗಮನಿಸಿ, ಅದು ನಾಮಪದದ ಹಿಂದಿನ ಪದವಾಗಿರುತ್ತದೆ) ಉಕಾರದಿಂದ ಕೊನೆಗೊಳ್ಳುತ್ತದೆ. ಉಪ್ಪು, ತಣಿಸು, ಕರೆವೆನು, ಮಲಗಿಸಲಿಹಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2006 - 8:08pm — tvsrinivas41

ಹುಡುಗ - ಕಡಗ

tvsrinivas41's picture

ಸುನೀಲರೇ ನೀವು ತಿಳಿಸಿರುವುದು ಸರಿ. ಕಡಗ ಹುಡುಗರ ಕೈಯನೇರುವುದು. ಈ ಕವನವನ್ನು ಬರೆಯುವಾಗ ನನ್ನ ಕಣ್ಣ ಮುಂದಿದ್ದದ್ದು - ೪೪ ವರ್ಷಗಳ ಹಿಂದೆ ತೆಗೆಸಿದ್ದ ನನ್ನದೇ ಫೋಟೋ. ಇಲ್ಲಿ ಪುಟ್ಟಪ್ಪ ಪುಟ್ಟಮ್ಮನಂತೆ ಕಾಣುತಿಹನು.

ಬೆನಕ ಮತ್ತು ಮಹೇಶರಿಗೆ ಧನ್ಯವಾದಗಳು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲಿರುವೆ ನೀ ಗೆಳೆತಿ..!!
  • ಮು೦ಗಾರು ಮಳೆ -- ಒ೦ದೆ ಒ೦ದು ಸಾರಿ...
  • ಮು೦ಗಾರು ಮಳೆ -- ಕುಣಿದು ಕುಣಿದು ಬಾರೆ...
  • ಮಳೆ
  • ಬಾರೆ ನನ್ನ ಶಾರದೆ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: kannada kanda
    July 5, 2008 - 9:38am
  • hamsanandi
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 5, 2008 - 9:29am
  • Narayana
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:29am
  • omshivaprakash
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20am
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 7:09am
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 5:52am
  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator