ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಆಸೆಯ ದೋಸೆ

ಆಸೆಯ ದೋಸೆ.

ಮಂಗಳೂರ ನೀರು ದೋಸೆ
ಬೆಂಗಳೂರ ಖಾಲಿ ದೋಸೆ
ಮೈಸೂರ್ ಮಸಾಲೆ ದೋಸೆ

ಸೂರ್ಯನಂತೆ ಬಣ್ಣ ದೋಸೆ
ಚಂದ್ರನ ಪ್ರತಿಬಿಂಬ ದೋಸೆ
ಅಗ್ನಿಯಿಲ್ಲದಿಲ್ಲ ದೋಸೆ

ತಾಯ ನೆನಪು ತರಿಸೊ ದೋಸೆ
ಚಿಕ್ಕಮ್ಮನ ಅವರೆ ದೋಸೆ
ನನ್ನಾಕೆಯ ಬೆಣ್ಣೆ ದೋಸೆ

ಕಾಸಿನಂತೆ ಇರುವ ದೋಸೆ
ಕಾಸು ಕೊಟ್ರೆ ಸಿಗುವ ದೋಸೆ
ಕಾಸು ಮಾಡೊ ಕಸುಬು ದೋಸೆ

ನಾಲಿಗೆಯ ಕುಣಿಸೊ ದೋಸೆ
ಹೊಟ್ಟೆಯನ್ನು ತಣಿಸೊ ದೋಸೆ
ಮಕ್ಕಳ ಪ್ರಿಯ ತಿನಿಸು ದೋಸೆ

ಭಾಷೆಭಾಷೆಗೊಂದು ದೋಸೆ
ದೇಶವಿದೇಶದಲಿ ದೋಸೆ
ಎಂದೂ ಮಾಸದಂತ ದೋಸೆ

ಹಸಿವು ನೀಗೊ ಹೆಸರು ದೋಸೆ
ಮನ ತಣಿಸುವ ಮೊಸರು ದೋಸೆ
ನಮ್ಮೆಲ್ಲರ ಉಸಿರು ದೋಸೆ

ಮನೆಮನೆಯ ತೂತು ದೋಸೆ
ಅರಿವು ಕೊಟ್ಟ ಗುರುವು ದೋಸೆ
ಹರಿಯ ಕೈಯ ಚಕ್ರ ದೋಸೆ.

ಅಹೋರಾತ್ರ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Sunil Jayaprakash's picture

ಯಪ್ಪಾ. ಕರ್ನಾಟಕದಲ್ಲಿ ಸಿಗಬಹುದಾದ ಬಹಳಷ್ಟು ರೀತಿಯ ದೋಸೆಗಳನ್ನು ಪಟ್ಟಿಮಾಡಿದ್ದಾರೆ ನಮ್ಮ ಕವಿಗಳು.
ದೋಸೆ ತಿನ್ನುವುದಕ್ಕೆ ಅಷ್ಟೇ ಅಲ್ಲ. ಅದರಲ್ಲಿ ದೈವತ್ವವನ್ನೂ ಸಹ ತುಂಬಿದ್ದಾರೆ ನಮ್ಮ ಕವಿಗಳು. ಕವಿಗಳು ದೋಸೆಯಲ್ಲಿಯೇ ಹರಿಯ ಚಕ್ರವನ್ನೂ, ಸೂರ್ಯಚಂದ್ರರನ್ನೂ ಕಂಡಿದ್ದಾರೆ.

ಇದೇ ನೋಡಿ, ಕವಿಕಲ್ಪನೆ. ಕವಿಗಳು ಗಂಭೀರ ವಸ್ತುಗಳನ್ನೂ ಸಹ ಮಾತನಾಡಿಸಿಬಿಡುತ್ತಾರೆ. ಇಲ್ಲಿ ಚಕ್ರವನ್ನು ದೋಸೆಗೆ ಹೋಲಿಸುವಾಗ, ಚಕ್ರದ ಗೌರವ ಕಡಿಮೆಯಾಯಿತೇ ಎಂದು ಕೇಳಿದರೆ, ಈ ಪದ್ಯದಲ್ಲಿಯೇ(ಕವಿಗಳ ಮಾತಲ್ಲೇ) ಉತ್ತರವಿದೆ ನೋಡಿ.

ahoratra wrote:

ತಾಯ ನೆನಪು ತರಿಸೊ ದೋಸೆ

ದೋಸೆ ತಾಯಿಯ ನೆನಪು ತರುತ್ತಿದೆ. ತಾಯಿಯೇ ದೇವರು ಎನ್ನುವವರು ನಾವು. ಹಾಗಾಗಿ ದೋಸೆಗೂ ದೈವತ್ವವನ್ನು ತುಂಬುತ್ತಿದೆ ಈ ಪದ್ಯ. ದೋಸೆ ತಾಯಿಯ ನೆನಪನ್ನು ತಂದರೆ ತಾಯಿಯ ಗೌರವ ಕಡಿಮೆಯಾಯಿತೇ?. ಹಾಗೆಯೇ ದೋಸೆ ಹರಿಯ ಚಕ್ರವನ್ನು ನೆನಪಿಸಿದರೂ, ಅಲ್ಲಿ ಚಕ್ರದ ಗೌರವ ಕಡಿಮೆಯಾಗುವುದಿಲ್ಲ. ಬದಲಾಗಿ ನಾವು ದೇವರಿಗೆ ಇನ್ನೂ ಹತ್ತಿರವಾಗುತ್ತೇವೆ.

ಹಾಗೆಯೇ ದೋಸೆ ಹೇಗೆ, ಮಡದಿ ಮಕ್ಕಳು ನೆಂಟರನ್ನು ಜ್ಞಾಪಿಸುವುದು ಎಂಬುದನ್ನು ಹೇಳುತ್ತದೆ. ತಮಾಷೆಯ ವಿಷಯವೆಂದರೆ, ಮೇಲಿನ ಪದ್ಯದಲ್ಲಿ ಕರ್ನಾಟಕದ ಹೆ(ಎ)ಮ್ಮೆಯ ದೋಸೆ, ಬಡವರ ಬಂಧು, ರಾಗಿ ದೋಸೆಯೇ ಇಲ್ಲ. (ಗಪ್ ಚುಪ್)

ಸವಿಯೊದಗೆ,

ಮಹೇಶ ಭೋಗಾದಿ's picture

ರಾಗಿ ದೋಸೆ, ತೆಂಕಣ ಕರ್ನಾಟದಲ್ಲಷ್ಟೆ ಹೆಸರುವಾಸಿ ಅನ್ನಿಸುತ್ತದೆ. ಇರಲಿ ಬಿಡಿ.

ಸವಿಯೊದಗೆ,
ಮಹೇಶ