18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲ ಪ್ರೇಮಿಗಳಿಗೆ -

February 13, 2009 - 8:55am
subin
ಬಿಕ್ಕಿ ಬಿಕ್ಕಿ ಅಳುವುದರಿಂದ, ಉಕ್ಕಿಬರುವುದೋ ಗೆಳೆಯ ಪ್ರೀತಿ? ಪ್ರೀತಿಯೊಂದು ಪುಟ್ಟ ರಾಕ್ಷಸಿ, ಕಣ್ಮಿಟುಕಿಸಿ ಮರೆಯಾಗುವ ಪ್ರೇಯಸಿ, ಬೇಡವೆಂದರೂ ನಿನ್ನ ತುಂಟ ಕಂಗಳ ಬಿಟ್ಟುಹೋಗಲಾರದು ದೂರಿಸಿ, ಇಳಿಸಿಬಿಡು ನಿನ್ನ ಮನದ ಹಂಬಲವನ್ನು, ಏನಿಯೋಂದ ನಾ ಹಿಡಿಯುವೆ, ತೆರೆದುಬಿಡಲು ಅವಳ ಮನದ ಬಾಗಿಲನ್ನು, ಜಡಿಮಳೆಯಲ್ಲಿ, ನಿನ್ನ ಕಣ್ಣೆದುರು ಸಿಗಲು.. ನಿನ್ನ ಮಲಗುವ ಕೋಣೆಗೆ ಕಳುಹಿಸಿಕೊಡಲು. ಅವಳು ಸಾವಿರ ಕನುಸುಗಳು, ನಿದ್ದೆಗೆ ಜಾರದೆ, ಮೋಡಗಳ ಚಪ್ಪರದಲ್ಲಿ, ಕದ್ದುನೋಡು, ಅವಳ ನೆನಪ.. ಗಟ್ಟಿಯಾಗಿ ಅಪ್ಪಿಕೊಳ್ಳು, ಒಮ್ಮೆ ಜೋರಾಗಿ ಕೇಳಿಬರುತ್ತಿರುವ, ನಿನ್ನ ಎದೆ ಮಿಡಿತವನ್ನ, ಪ್ರೀತಿಯ ಉಬ್ಬರವಿಳಿತದ ಹೊಡೆತಕ್ಕೆ, ಸಿಕ್ಕಿಬೀಳದೆ, ಮೊದಲನೆ ನೋಟದಲ್ಲೇ ಹೇಳಿಬಿಡು.... I Love you ಎಂದು.... ಸುಬ್ಬಿ :-)
ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by umeshkumar on
ಸುಬ್ಬಿ...! ಕವನ ಸುಪರ್ಬ್‌.... ಹನಿ ಹನಿ ಪ್ರೇಮ್ ಕಹಾನಿಯಂತೆ ನಿಮ್ಮ ಮನಮೆಚ್ಚಿದ ಹುಡುಗಿಗೆ ಇದೇ ರೀತಿ ಕವನ ಬರೆದಷ್ಟೇ ಸುಲಭವಾಗಿ ಐ ಲವ್‌ ಯೂ ಹೇಳಿ ಬಿಟ್ರಾ...! ಎನಿ ವೇ ಹ್ಯಾಪಿ ವಾಲೆಂಟೈನ್ಸ್‌ ಡೇ... : )

Submitted by venkatb83 on
ಗಟ್ಟಿಯಾಗಿ ಅಪ್ಪಿಕೊಲ್ಲು, ಒಮ್ಮೆ ಜೋರಾಗಿ ಕೇಳಿಬರುತ್ತಿರುವ, ನಿನ್ನ ಎದೆ ಮಿಡಿತವನ್ನ, ಪ್ರೀತಿಯ ಉಬ್ಬರವಿಳಿತದ ಹೊಡೆತಕ್ಕೆ, ಸಿಕ್ಕಿಬೀಳದೆ, ಮೊದಲನೆ ನೋಟದಲ್ಲೇ ಹೇಳಿಬಿಡು.... I Love you ಎಂದು.... ಸುಬ್ಬಣ್ಣ ಮೇಲಿನ ಕವನದ ಮೊದಲನೇ ಸಾಲು 'ಬಹುಶ:' ಅಪ್ಪಿಕೊಳ್ಳು ಅಂತ ಇರಬಹುದೇನೋ ಅನ್ನಿಸುತ್ತಿದೆ, ಇಲ್ಲದಿದ್ದರೆ, ಅದರ ಅರ್ಥ ಅಪ್ಪಿ ಕೊಲ್ಲು (ಸಾಯಿಸು) ಎಂದಾಗುತ್ತದಲ್ಲ!.... ಒಟ್ಟಿನಲ್ಲಿ ನಿಮ್ಮ ಎಲ್ಲ ಕವನಗಳಲ್ಲಿ, ಇದು ನನಗೇ ತುಂಬಾ ಇಸ್ಟವಾಯ್ತು. ನಿಮ್ಮ ಕವನ ಕೃಷಿ ಹೀಗೆ ಸಾಗಲಿ.. ಗೆಳೆಯ..