ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ
ಸಂಪದದಲ್ಲಿ ಲೇಖನಗಳನ್ನು ಸೇರಿಸಲು MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ:
- MS ವರ್ಡ್ ನಿಂದ ನೇರ ಕನ್ನಡ ಬರಹವನ್ನ cut and paste ಮಾಡಬೇಡಿ.
- ಸಾಧ್ಯವಾದಷ್ಟೂ MS ವರ್ಡ್ ಬದಲು ಸಂಪದದಲ್ಲಿ ಲಭ್ಯವಿರುವ "rich text editor" ಬಳಸಿ.
ಸಂಪದದಲ್ಲಿ ಹೀಗೆ ನೇರ MS wordನಿಂದ ಪೇಸ್ಟ್ ಮಾಡಿದರೆ ಬೇಡದ XML/XHTML schema ಎಲ್ಲ ಡೇಟಬೇಸಿಗೆ ಸೇರಿ ಹೋಗತ್ತೆ; ಪುಟದ ಫಾರ್ಮ್ಯಾಟ್ಟಿಂಗ್ ಕೂಡ ಕೆಡುತ್ತದಾದ್ದರಿಂದ ಸದಸ್ಯರು ಮೇಲಿನ ಸೂಚನೆ ಪಾಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಗಮನಿಸಿ: ನೇರ MS ವರ್ಡ್ ನಿಂದ ಪೇಸ್ಟ್ ಮಾಡಿರುವ ಪುಟಗಳನ್ನು ಯಾವುದೇ ಸೂಚನೆಯಿಲ್ಲದೆ ಅಳಿಸಿಹಾಕಲಾಗುವುದು.

- Login or register to post comments
- 1703 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ : MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ
MS ವರ್ಡ್ ಉಪಯೋಗಿಸುವವರು, ಈ ಕೆಳಗಿನ ವಿಧಾನಗಳನ್ನು ಪ್ರಯೋಗಿಸಿ ನೋಡಬಹುದು.
೧. MS ವರ್ಡ್ ನಲ್ಲಿ ಟೈಪಿದ ನಂತರ, ಎಲ್ಲವನ್ನೂ copy ಮಾಡಿ, notepad ನಲ್ಲಿ paste ಮಾಡಿ. ಈಗ ಮತ್ತೆ ಹೊಸದಾಗಿ, notepad ನಿಂದ copy ಮಾಡಿ ಮತ್ತು ಸಂಪದದಲ್ಲಿ paste ಮಾಡಿರಿ. ಇಲ್ಲವೇ ಸೀದಾ notepad ನಲ್ಲಿಯೇ ಟೈಪಬಹುದು.
೨. MS 2003 ನಲ್ಲಿ Save As (filtered HTML) ಎಂಬ ಒಂದು option(ಕನ್ನಡದಲ್ಲಿ ಏನು) ಇದೆ. ಅದನ್ನು ಪ್ರಯೋಗಿಸಿ ನೋಡಿ. MS XP ನಲ್ಲಿ ಇದೆಯೋ ಇಲ್ಲವೋ ತಿಳಿಯದು.
೩. ಹರಿಪ್ರಸಾದರು ಹೇಳಿದ ಹಾಗೆ, ಸಂಪದದಲ್ಲೇ ಇರುವ Rich Text Editor ಸಾಧ್ಯವಾದಷ್ಟು ಉಪಯೋಗಿಸಬಹುದು.
೪. Converter ಕೂಡ ಉಪಯೋಗಿಸಬಹುದು. ಇದು ಹೊಸದಾಗಿ ಟೈಪುತ್ತಿರುವವರಿಗೆ ಸಹಾಯಕ.
ಸವಿಯೊದಗು.
option = ಆಯ್ಕೆ
ಸವಿಯೊದಗೆಗಳು,
ಮಹೇಶ
ಸಿಹಿಯೊದಗು
ಸಿಹಿಯೊದಗು/ಗೆ ಅಥವ ಸವಿಯೊದಗೆ/ಗು ಸಮಂಜಸವಾಗಿದೆ. ಆದರೆ ಸವಿಯೊದಗೆಗಳು ಅಷ್ತು ಇಂಪು ಇಲ್ಲ ಮತ್ತು ಏನೋ ಕೊರತೆ ಕಾಣುತ್ತದೆ. ನೋವಿದ್ದರೆ ಕ್ಷಮಿಸಿ.
ಮಧುವೊದಗೆ.
ಅಹೋರಾತ್ರ
ಸವಿಯೊದಗು
ದಯವಿಟ್ಟು ಈ ಪದದ ಹುಟ್ಟಿನ ಬಗ್ಗೆ ಸುನಿಲರ ಬರಹವನ್ನು ಓದಿ.
ನಾವು ಸಂಸ್ಕೃತಪದರಹಿತ ಕನ್ನಡದ, ಅಚ್ಚಕನ್ನಡದ, ಧನ್ಯವಾದಕ್ಕೆ ಸರಿಸಮದರ್ಥ-ಕೊಡುವ ಸದ್ದಿಗಾಗಿ ಮಾಡಿದ ಜತುನ.
ಮಧು ಇದು ಸಂಸ್ಕೃತದ ಪದ. "ಜೇನೊದಗು" ಎನ್ನಿ. ನಮಗೆ ಸಂತಸವಾಗುವುದು. :)
ಇನ್ನು ಸವಿಯೊದಗು/ಗೆ ನಿಮಗೆ ಯಾವುದಿಷ್ಟವೋ ಅದನ್ನೇ ಬಳಸಿಕೊಳ್ಳಿ. ಯಾವ ಒತ್ತಾಯವಿಲ್ಲ.
ಚೆಲುವಗಲು,
ಮಹೇಶ