ನನ್ನ ತಮ್ಮ.
ನನ್ನ ತಮ್ಮ.
ಹುಡುಕಿ ಹುಡುಕಿ ಸಾಕಾಗಿದೆ
ಹುಡುಗಿ ನಮಗೆ ಬೇಕಾಗಿದೆ
ನನ್ನ ತಮ್ಮ ವೆಂಕಟ
ಇವನಿಗಿಲ್ಲ ಸಂಕಟ
ಇವನ ಮಾತು ಪಟಪಟ
ನಮ್ಮ ಮನೆಯ ಗೊಮ್ಮಟ
ಆಗಾಗ ಕುಡಿಯುವನು
ಹೊಟ್ಟೆ ತುಂಬ ಜ್ಯೂಸನು
ಬೇಕಾದರೆ ಸೇದುವನು
ಬಾವಿಯಿಂದ ನೀರನು
ನಮ್ಮ ಹುಡುಗ ಸುಂದರ
ಇವನ ಮನಸು ಮಂಧಿರ
ಮೈಯ್ಯ ಬಣ್ಣ ಬಂಗಾರ
ನಡತೆಯಲ್ಲಿ ಗಂಭೀರ.
ಜೇನಿನಂತ ಹುಡುಗನು
ಕೆದಕಿದರೆ ಕುಟುಕುವನು
ಕೆಲಸದಲ್ಲಿ ಜಾಣನು
ನಿದ್ದೆಯಲ್ಲಿ ಕೋಣನು
ಬೇಕಾಗಿದೆ ವರದಕ್ಷಿಣೆ
ಹುಡುಗಿ ಮುಖದ ಲಕ್ಷಣ
ಅವಳು ಪಡೆದ ಶಿಕ್ಷಣ
ಗುರು ಹಿರಿಯರ ರಕ್ಷಣ
ಅಹೋರಾತ್ರ.

- Login or register to post comments
- 627 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: