ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಏಪ್ರಿಲ್ ೨೬, ೨೦೦೫, ರ ದುರ್ದಿನ, ಮುಂಬೈನಲ್ಲಿ ಮತ್ತೆ ಮರುಕಳಿಸುವುದು ಬೇಡ !

May 26, 2006 - 3:05pm — venkatesh

ಅಮೆರಿಕ, ಹಾಗೂ ವಶ್ವದ ಪ್ರಜೆಗಳ ದಿನಚರಿಯಲ್ಲಿ ೯/೧೧ ಹೇಗೆ ಭಯಾನಿಕ ದಿನವೋ, ಹಾಗೆಯೆ ಮುಂಬೈ ನಿವಾಸಿಗಳಿಗೆ ಏಪ್ರಿ ಲ್ ೨೬ ,೨೦೦೫, ಒಂದು ಅಂತಹ 'ದುರ್ದಿನ 'ವೆಂದರೆ ಕೌತುಕವಾಗದಿರಲಾರದು !

ಮುಂಬೈ ನಗರಕ್ಕೆ ವರುಣನಕೃಪೆಯಿಂದ ಜೂನ್ ತಿಂಗಳ ಮೊದಲೆನೆ ವಾರದಿಂದ ಶುರುವಾಗುವ 'ಮಾನ್ ಸೂನ್' ಸೆಪ್ಟೆಂಬರ್ ಕೊನೆಯವರೆಗೆ, ಹಾಗೂ ಮುಂದೆಯೂ ಕಂತುಗಳಲ್ಲಿ ಮಳೆಬಿದ್ದು, ವರ್ಷದ ಸರಾಸರಿ ೧,೮೦೦ ರಿಂದ ೨,೪೦೦ ಮಿ.ಮಿ.ವರೆಗೆ ಆಗುವುದು. ಆದರೆ ಜುಲೈ ೨೬ ರಂದು ಒಂದೇ ದಿನ, ೯೪೪ ಮಿ.ಮಿ. ಮಳೆ ಹಿಂದಿನ ೯೫ ವರ್ಷಗಳ ದಾಖಲೆಯನ್ನು ಮುರಿದು ನೂರಾರು ಜನರ 'ಜೀವಾಹುತಿ'ಯನ್ನು ತೆಗೆದುಕೊಂಡ 'ಮಹಾವಿಪತ್ತಿನದುರ್ದಿನ' ವೆಂದು ದಾಖಲಿಸಲ್ಪಟ್ಟಿದೆ. (ಜುಲೈ ೧೨,೧೯೧೦, ರಲ್ಲಿ ಮೇಘಾಲಯ ರಾಜ್ಯದ 'ಚಿರ್ರಾಪುಂಜಿ' ಯಲ್ಲಿ ೮೩೮.೨ ಮಿ.ಮೀ.ಮಳೆ ಬಂದಿತ್ತು. ಮತ್ತೆ ಜುಲೈ ೫, ೧೯೭೪ ರಲ್ಲಿ ಮುಂಬೈ ನಲ್ಲಿ ೫೭೫.೬ ಮಿ.ಮಿ ಮಳೆ ಬಿದ್ದಿತ್ತು.) ಸಮುದ್ರಕ್ಕೆ ಹತ್ತಿರವಿರುವ ತಗ್ಗು ಪ್ರದೇಶದ ಜನರ ಪಾಡು ಹೇಳತೀರದು.' ಅಟ್ಟದಿಂದ ಬಿದ್ದವನನ್ನು ಛಡೀ ತೊಗೊಂಡ್ ಹೊಡೆದರು' ಅನ್ನೋತರಹ ಮಳೆಯ ಪ್ರೊಕೋಪ ಒಂದು ಕಡೆ ಆದರೆ ಮಹಾಸರೋವರಗಳಿಂದ ಕೋಡಿ ಹೊಡೆದು ಬಂದ ಹೆಚ್ಚುವರಿ ನೀರು ಅದರ ಹಿಂಭಾಗದ ತಗ್ಗು ಪ್ರದೇಶದ 'ನಾಲ್ಲಾ' ಎಂದೇ ಹೆಸರದ 'ಮೀಥಿ ರಿವರ್'(ಅದು ನದಿಯೆ ?) ನಿಂದ ಹರಿದು ಸಾಕಿನಾಕಾ,ಕುರ್ಲಾ, ಕಲೀನ, ವಕೋಲಾ, ಬಾಂದ್ರ್ -ಕುರ್ಲಾ ಕಾಂಪ್ಲೆಕ್ಸ್, ಧಾರಾವಿ, ಯಲ್ಲಿ ಹರಿದು ಮಹೀಮ್ ಕೊಲ್ಲಿ, ಯಿಂದ ಅರಬ್ಬೀ ಸಮುದ್ರ ಕ್ಕೆ ಹೋಗಿ ಸೇರುತ್ತದೆ. ಮುಂಬೈನ ಕಟ್ಟಡ ನಿರ್ಮಾಣದ ಮಹಾಪೂರದಲ್ಲಿ ನದಿಯ ಅಕ್ಕ ಪಕ್ಕದ ಸಿಕ್ಕ ಸಿಕ್ಕ ಜಾಗವನ್ನು ಕಬಳಿಸಲು ನಿರಂತರ ಮಸಲತ್ತು ಬಹಳ ಹಿಂದಿನಿಂದ ನಡೆದಿದೆ. ನಗರ ದ ಎಲ್ಲಾ ರಸ್ತೆಗಳೂ ಈಗ ಕಾಂಕ್ರೀಟ್ ಆಗಿದ್ದು ನೀರು ಇಂಗಲು ಅವಕಾಶವೇ ಇಲ್ಲವಾಗಿದೆ. ಅರ್ಧಂಬರ್ಧ ಕೊಳೆ, ಕಸ ಕಡ್ಡಿಗಳಿಂದ, ತುಂಬಿರುವ ಒಳ ಚರಂಡಿಗಳು ನೀರನ್ನು ನಗರದಿಂದ ಹೊರಕ್ಕೆ, ಸಮುದ್ರಕ್ಕೆ ಸೇರಿಸುವಲ್ಲಿ ಅಸಮರ್ಥವಾಗಿವೆ. ಏಕೆಂದರೆ ಸಮುದ್ರದಲ್ಲಿ ನೀರಿನ ಹೊರ ಒತ್ತಡ ಹೇಚ್ಚಾಗಿದ್ದು ಚರಂಡಿಯ ನೀರು ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಪರಿಸ್ತಿತಿ ಹದಗೆಟ್ಟಿತ್ತು. ಇವೆಲ್ಲದರ ಪರಿಣಾಮ ನಗರದ ಕೆಲವೇ ಚಿಕ್ಕ ರೋಡುಗಳು ನೀರಿನಿಂದ ತುಂಬಿ ನೀರಿನ ಮಟ್ಟ ಹೆಚ್ಚಾದಂತೆ 'ಡಬ್ಬಲ್ ಡೆ ಕ್ಕರ್ ಬಸ್' ಆದಿಯಾಗಿ ಎಲ್ಲಾ ವಾಹನಗಳೂ ಮಲಿನವಾದ ಎಣ್ಣೆಯ ನೀರು, ಗಟ್ಟರ್ ನೀರಿನಿಂದ ತುಂಬಿ ತೇಲಿ ಹೋದವು. ವಾಹನಗಳಲ್ಲಿ ಕುಳಿತ ಜನರು ಹೊರಗೆ ಬರಲಾರದೆ ಉಸಿರು ಕಟ್ಟಿಕೊಂಡು ಮರಣ ಹೊಂದಿದರು.ತೇಲಿ ಹೋದವರು, ವಿದ್ಯುತ್ ತಗುಲಿ ಸತ್ತವರೂ ಬಹಳ ಮಂದಿ ! ವಾರಂತ್ಯದಲ್ಲಿ ಹೀಗೆ ಸತ್ತವರು ೧,೦೦೦ ಕ್ಕಿಂತ ಜಾಸ್ತಿ ಎಂದು ವರದಿಗಳು ತಿಳಿಸಿದವು.

ಮುಂಬೈ ಜನ ಎಲ್ಲ ಒಟ್ಟಿಗೆ ಸಹಕಾರ ದಿಂದ ತಮ್ಮ ಸಹಾಯ ಹಾಗೂ ಸೇವೆಯಿಂದ ಅನೇಕರ ಜೀವ ಉಳಿಸಿದರು.
ಈಗ 'ಮೀಥಿ ನದಿ'ಯನ್ನು ಶುದ್ಧಿ ಗೊಳಿಸಿ, ಅಗಲಗೊಳಿಸುವ ಕೆಲಸ ಭರದಿಂದ ಸಾಗಿದೆ, ಎಂದು ವರ್ತಮಾನ ಪತ್ರಿಕೆಗಳು ಪ್ರಕಟಿಸುತ್ತಿವೆ. 'ಮಾನ್ ಸೂನ್' ಶುರುವಾಗಲು ಕೇವಲ ಒಂದು ವಾರ ಅಥವ ಎರಡು ವಾರ ಹೆಚ್ಚೆಂದರೆ, ಆಗಬಹುದು! ಏನು ಮಾಡಬಹುದೋ, ಸಾಧ್ಯವೋ, ಯಾರಿಗೂ ನಿಖರವಾಗಿ ತಿಳಿದಿಲ್ಲ !

ಒಟ್ಟಿನಲ್ಲಿ ಹಿಂದಿನ ವರ್ಷದ "ಕಹಿ ನೆನಪುಗಳು" ಮರುಕಳಿಸುವುದು ಬೇಡ !

  • ಅನುಭವ ಕಥನ
~.~
  • Login or register to post comments
  • 825 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 27, 2006 - 6:58am — tvsrinivas41

ಏಪ್ರಿಲ್ ಅಲ್ಲ ಜುಲೈ

tvsrinivas41's picture

ಸಾರ್! ಕಳೆದ ವರ್ಷದ ಮಳೆಯ ಬಗ್ಗೆ ನಾನಾಗಲೇ ಒಂದು ಲೇಖನ ಬರೆದಿದ್ದೆ. ನೀವು ನೋಡಿರಲಿಲ್ವಾ? ಇಲ್ಲೇ ಇದೆ ಒಮ್ಮೆ ನೋಡಿ - ಏಪ್ರಿಲ್ ಅಲ್ಲ ಜುಲೈ

http://sampada.net/blog/tvsrinivas41/28/07/2005/50

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2006 - 8:39am — venkatesh

೨೬ ಜುಲೈ, ಮಂಗಳವಾರ,

venkatesh's picture

ನಮಸ್ಕಾರಗಳು ಶ್ರೀನಿವಾಸರಿಗೆ, ಹೇಗೆ ಟೈಪಿಸುವಾಗ ಈ ಅಚಾತುರ್ಯ ನಡೆಯಿತೊ ತಿಳಿಯಲಿಲ್ಲ. ನನ್ನ ಹೆಂಡತಿ ಆ ಕರಾಳದಿನದಂದೇ 'ಸಿದ್ಧಿವಿನಾಯಕ ದೇವಸ್ಥಾನ ಕ್ಕೆ ಹೋದವಳು (ಅವಳ ಸ್ನೇಹಿತೆಯೂ ಜೊತೆಯಲ್ಲಿದ್ದಳು )ವಾಪಸ್ ಬರುವಾಗ (ಕುರ್ಲಾ ಬಸ್ ಡೆಪೊ ಹತ್ತಿರ)ಬಸ್ಸಿನಲ್ಲಿ ಯೇ ಸಿಕ್ಕಿ ಹಾಕಿಕೊಂಡು ಅಲ್ಲೇ ಹತ್ತಿರವಿದ್ದ ಒಂದು ಮಸೀದಿಯಲ್ಲಿ ರಾತ್ರಿ ಕತ್ತಲಲ್ಲಿ,ಧಾರಾಕಾರದ ಮಳೆಯಿಂದ ಬಟ್ಟೆ ಪೂರ್ತಿ, ಒದ್ದೆಯಾಗಿತ್ತು- ಕಳೆದ ಭಯಾನಕ ಸನ್ನಿವೇಶವನ್ನು ನಾನು ಹಾಗೂ ನನ್ನ ಮಗ ,ಜೀವನ ಪೂರ್ತಿ ಮರೆಯಲಾರೆವು ! ಅವಳು ಮಾರನೆದಿನ ಸುಖವಾಗಿ ಯಾರದೊ ಸಹಾಯದಿಂದ ಮನೆಗೆ ನಡೆದುಕೊಂಡು ಬಂದಳು. ೨.೫ ಕಿ.ಮಿ. ಹತ್ತಿರವೇ ಕುರ್ಲ ಘಾಟ್ಕೋಪರ ಹತ್ತಿರವಿದ್ದ ನಾವು, ಅವಳು ಹಾಗೂ ಅವಳ ಗೆಳತಿಗೆ ಏನೂ ಸಹಾಯಮಾಡಲಾಗಲಿಲ್ಲ ! ನಮ್ಮ ಮನೆಯಲ್ಲೇ ಆದ ಅನುಭವ ಎಂದೆಂದಿಗೂ 'ಮೈ ಜುಂ'ಎನ್ನಿಸುವಂಥಾದ್ದು !

ನಿಮ್ಮ 'ಕರಾಳ ರಾತ್ರಿ' ಈಗ ಓದಿದೆ ! ೨೬ ಜುಲೈ, ಮಂಗಳವಾರ, ನನಗೆ ಗೊತ್ತು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2006 - 8:41am — tvsrinivas41

ವಿನಾಯಕನ ಕರುಣೆ

tvsrinivas41's picture

ಓಹ್! ಅಂದು ನಿಮ್ಮ ಮನೆಯವರೂ ಸಂಕಟವನ್ನು ಅನುಭವಿಸಿದ್ದರೇ? ಅದಕ್ಕೇ ಅಲ್ವೇ ಸಾರ್ ಹೇಳೋದು, ದೇವರು ದೊಡ್ಡವನು, ಅವನ ಕರುಣೆ ಇದ್ದರೆ ಸಾಕು ಎಂದು. ನಿಸರ್ಗವೇ ದೇವರು. ಅಂದು ಮುಂಬಯಿಯಲ್ಲಿ ಪ್ರಾಣಗಳನ್ನು ತೆಗೆದುಕೊಂಡು, ಮರುಜನ್ಮ ನೀಡಿದ ಆ ನಿಸರ್ಗವೇ ದೇವರು. ಆತನ ಕರುಣೆ ಇಲ್ಲದಿದ್ದರೆ ನಾವು ಹೀಗೆ ಇಲ್ಲಿ ವಿಷಯ ಹಂಚಿಕೊಳ್ಳಲು ಇರುತ್ತಿದ್ದೇವೆಯೇ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2006 - 11:41am — venkatesh

ಜುಲೈ ೨೬, ಮಂಗಳವಾರ, ಸಿದ್ಧಿವಿನಾಯಕ ಅವರನ್ನು ರಕ್ಶಿಸಿದ ಅಶ್ಟೆ !!

venkatesh's picture

ಶ್ರೀನಿವಾಸರೆ,
ನಿಜ ಹೇಳ್ತೀನಿ ನೋಡಿ. ನನ್ನ ಹೆಂಡತಿ, ಅವಳ ಗೆಳತಿ, ಬಸ್ಸಿನಲ್ಲೇ ಕೂತಿದ್ರಂತೆ. ಇದು ಸುಮಾರು ೩ ಘಂಟೆ ಮಧ್ಯಾನ್ಹ. ನನಗೆ ಅವಳು ಮೊಬೈಲ್ ನಲ್ಲಿ ಹೇಳಿದ್ಳು, "ನಾವು ಇನೇನ್ ಬರ್ತೀವಿ. ಕುರ್ಲಾದಲ್ಲಿ ಬಸ್ ಟರ್ಮಿನಸ್ ಇನ್ನೇನ್ ಬರ್ತಾ ಇದೆ" ಅಂತ. ಅಲ್ಲಿಂದ್ ಮೇಲೆ, ಅವರ ಪತ್ತೇನೆ ಇಲ್ಲ.ಆದರೆ ಟ್ರಾಫಿಕ್ ಬಹಳ ಜಾಸ್ತಿ ಇತ್ತಂತೆ. ಮಳೆ ಜೋರಾಗಿ ಬರಲು ಶುರುವಾಯಿತಂತೆ. ರಸ್ತೆಯಲ್ಲಿ ನೀರು ಮೇಲೇರಲು ಶುರುವಾಯ್ತು.ಬಸ್ಸು ನೀರಿನಿಂದ ತುಂಬಿತ್ತಂತೆ ! ಮನೆಹತ್ರ ಜೊರಾಗಿ ಮಳೆ, ಗಾಳಿ ಇತ್ತು. ಬಸ್ಸಿನಲ್ಲಿ ಏರಿದ ನೀರಿನಲ್ಲೇ ಹೇಗೋ ಕುಳಿತಿದ್ದರಂತೆ. ಮೊಬೈಲ್ ಛಾರ್ಜ್ ಬೇರೆ ಹೋಯ್ತು. ಕತ್ತಲು ಆವರಿಸತೊಡಗಿತು. ನಮಗೆ ಮನೆಯಿಂದ ಹೊರಗೆ ಬರಲೂ ಕಶ್ಟ. ಎಲ್ಲೆಲ್ಲೂ ನೀರು. ಟಿ.ವಿ ಇಲ್ಲ. ಫೋನ್ ಇಲ್ಲ. ಕರೆಂಟ್ ಇಲ್ಲ. ಮಿಂಚು, ಮರಗಳೆಲ್ಲಾ ತೂರಾಡ್ತಿದ್ದವು. ಎಲ್.ಬಿ.ಎಸ್.ಮಾರ್ಗಕ್ಕೆ ಹೇಗೋ, ನಾನು ನನ್ನ ಮಗ, ಹೋದೆವು. ಆದರೆ ಪೋಲಿಸ್ ನಮ್ಮನ್ನು ವಾಪಸ್ ಕಳಿಸಿದರು. ರಾತ್ರಿ ಯಲ್ಲಾ ದೇವರ ಧ್ಯಾನ ಅಶ್ಟೆ. ಅಕ್ಕ ಪಕ್ಕದವರೂ ಯಾರೂ ಹೆಚ್ಚಿಗೆ ಬರಲಿಲ್ಲ.ಬೆಳಿಗ್ಯೆ ನನ್ನಮಗ ಹೋಗಿ ಎಲ್ಲಾ 'ಟೆಂಟ್ 'ಗಳಲ್ಲೂ ಅವರ ಅಮ್ಮನನ್ನು ಹುಡುಕಿ ಬೇಸತ್ತು ವಾಪಸ್ ಬಂದ. ಅವನ ಮುಖದಲ್ಲಿ ಖಳೆಯೆ ಇಲ್ಲ. ಟ್ಯಾಕ್ಸಿ, ಬಸ್ಸುಗಳ ಮೇಲೆ 'ಹೆಣಗಳ ರಾಶಿ' ನೋಡಿದ್ದು, ಅವನು ನಡುಗುತ್ತಿದ್ದ. ಆ ವೇಳೆಗೆ ಒಂದು ಕಾರ್ ಬಂತು.ರಸ್ತೆಯಲ್ಲಿ ನಡೆದು ಬರುತ್ತಿದ್ದ ಅವರನ್ನು ನಮ್ಮ ಕಾಲೋನಿಯ ಹುಡುಗನೊಬ್ಬ ಗುರುತಿಸಿ, ಅವನ ಕಾರಿನಲ್ಲಿ ಕರೆದುಕೊಂಡು ಬಂದ. ಅದರಿಂದ ನನ್ನ ಹೆಂಡತಿ, ಇನ್ನೊಬ್ಬರು ಇಳಿದರು. ಹೋದ ಜೀವ ಬಂದಂತಾಯಿತು. ಸುಮಾರು ೩೦ ಘಂಟೆ ಆ ಹೊಲಸು ನಾರುವ ನೀರಿನಲ್ಲಿ ಕಳೆದದ್ದು ಜೀವಮಾನದಲ್ಲಿ ಮರೆಯುವಂತಿಲ್ಲ. ಬಸ್ಸಿನಬಳಿದ ಕೆಲವು 'ಮುಸಲ್ ಮಾನ್ ಯುವಕರು'(ದೇವರ ದೂತರು !) ಇವರಿಬ್ಬರನ್ನೂಭುಜದ ಮೇಲೆ ಹೊತ್ತುಕೊಂಡು ಹಗ್ಗಗಳಸಹಾಯದಿಂದ ಅವರ ಮಸೀದಿಗೆ ಕರೆದೊಯ್ದರಂತೆ. ಶಿವ, ಶಿವ ನನಗೆ ಇದನ್ನು ಊಹಿಸಲೂ ಸಾಧ್ಯವಿಲ್ಲ. ಅಲ್ಲಿ ಸಾವಿರಾರು ಜನರು ಕುಳಿತಿದ್ದರಂತೆ (೨ನೇ ಮಹಡಿ), ಮೊಬೈಲ್ ಬೆಳಕಿನಲ್ಲಿ 'ಟಾಯ್ಲೆಟ್' ಗೆ ಹೋಗಿ ಎಂದು ಸಹಾಯ ಮಾಡಿ ಎಲ್ಲರಿಗೂ 'ಖಿಚಡಿ' ಕೊಟ್ಟರಂತೆ. ತಿನ್ನಲು ಸಾಧ್ಯವೇ ? ನಮ್ಮ ಹೆಂಗಸರಿಗೆ ! ಏನೋ ಭಗವಂತನದರ್ಶನವಾಯಿತು ಈ ತರಹ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2006 - 11:55am — tvsrinivas41

ಎಲ್ಲರೂ ಒಂದೇ!

tvsrinivas41's picture

ಮುಸಲ್ಮಾನರಾದರೇನೂ ಹಿಂದುಗಳಾದರೇನೂ ಎಲ್ಲರೂ ಒಂದೇ ಅಲ್ಲವೇ! ಆಗ ರಕ್ಷಿಸಿದವರೇ ದೇವರುಗಳು. ಅವರೇನಾದರೂ ರಕ್ಷಿಸದೇ ಭಕ್ಷಿಸಿದ್ದರೆ ದೆವ್ವಗಳಾಗುತ್ತಿದ್ದರು. ಹುಟ್ಟಿನಿಂದ ಯಾರಿಗೂ ಜಾತಿ ಮತ ಧರ್ಮ ಅಂಟುವುದಿಲ್ಲ ಅಲ್ಲವೇ?
ನಿಜಕ್ಕೂ ನಿಮ್ಮ ಕುಟುಂಬ ಪುನರ್ಜನ್ಮ ಪಡೆದಿದ್ದಾರೆ. ಮಾನವೀಯತೆಯನ್ನು ಅರಿತ ಅವರು ಎಂದಿಗೂ ಅದನ್ನು ಮರೆಯುವುದಿಲ್ಲ, ಬದಲಾಗಿ ಅದನ್ನು ಮೆರೆಸುವರು. ನೀವೇ ಧನ್ಯರು ಸಾರ್!

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 27, 2006 - 7:03pm — venkatesh

ಕರಾಳ ರಾತ್ರಿ !!

venkatesh's picture

ಖಂಡಿತ ಅದೊಂದು ಅವಿಸ್ಮರಣೀಯ ದಿನ, ನಮ್ಮೆಲ್ಲರಿಗೂ !!! ನನ್ನ ಭಾವನೆಗಳಿಗೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು, ಶ್ರೀನಿವಾಸ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಿಥಿ ರಿವರ್ ನ ಕಥೆ, ವ್ಯಥೆ !
  • ಒಹ್, ಜುಲೈ, ಜುಲೈ - ನಿನ್ನ ಪ್ರತಾಪ ಹೀಗೇಕೆ ?!
  • ರೇನ ಸಾಲ್ವೆ, ನಮ್ಮ ಮುಂಬೈ ಹುಡುಗಿ, ಅಪಘಾತದಲ್ಲಿ ಮೃತಳಾದಳು !
  • ರಸ್ತೆ ನೀರಿನಿಂದ ಮಸ್ತ್ ಬೆಳೆ
  • ರಸ್ತೆ ನೀರಿನಿಂದ ಮಸ್ತ್ ಬೆಳೆ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ
  • ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?
  • Splendours of Royal Mysore
  • A Bicycle in Bettalli - ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಿಂದ ಆಯ್ದ ಭಾಗದ ಇಂಗ್ಲಿಶ್ ಅನುವಾದ

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 54 ಅತಿಥಿಗಳು ಆನ್ಲೈನ್ ಇರುವರು.


ಅರಿವನರಿಯದ ಗುರುವು | ಪರಿವನರಿಯದ ಶಿಷ್ಯ |
ಸಂದೆರಡು ವರ್ಗವರಿಯದಿರ್ದುಪದೇಶ |
ಕೊಂದುಕೊಂಡಂತೆ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator