ಬ್ರಹ್ಮ ಕಮಲ.
ಬ್ರಹ್ಮ ಕಮಲ.
ಬ್ರಹ್ಮ ಕಮಲ ಪುಷ್ಪದಂತೆ ಅರಳಿ ಬಂದ ಮಗುವಿದು
ನಮ್ಮ ಮನೆಯ ಬೆಳಗಲೆಂದು ದೇವ ಕೊಟ್ಟ ವರವಿದು
`ಅ' ಕಾರದಿಂದ ರಾಗ ಹಾಡಿ ನಮ್ಮ ಹರಸಿ ಜನಿಸುತು
`ಉ' ಕಾರದಿಂದ ಹಾಲ ಕೇಳಿ ತಾಯ ತಂಪು ಗೊಳಿಸಿತು
`ಮ' ಕಾರದಿಂದ ಮನೆಯಲ್ಲಿ ಮಮತೆಯನ್ನು ಹರಡಿತು
ಪ್ರಣವನಾದ `ಓಂ' ಕಾರಕೆ ನಮಿಸಿ ಬಂದ ಮಗುವಿದು
ಬ್ರಹ್ಮ ತನ್ನ ಕೈಗಳಿಂದ ತಾನೆ ಮಾಡಿ ಕಳುಹಿದ
ವಿಷ್ಣು ಇವಳ ಬೆಳೆಯಲೊಸುಗ ಪ್ರಥಮ ಉಸಿರ ನೀಡಿದ
ಮಹೇಶ್ವರನ ಮಹಿಮೆಯಿಂದ ಮಗುವು ಬೆಳೆಯುತಿರುವುದು
ತ್ರಿಮೂರ್ತಿಯರ ಒಲವು ಗಳಿಸಿ ಧರೆಗೆ ಬಂದ ಮಗುವಿದು
ದೇವರಿಂದ ಅಭಯ ತಂದು ನಮ್ಮ ಭಯವ ಅಳಿಸಿತು
ಹೊಳಪು ತಂದ ಮಗುವು ನಮ್ಮ ಇರುಳ ಕಳೆಯ ತೊಳೆಯಿತು
ನಗುವ ಮೊಗದ ಮಗುವು ನಮ್ಮ ಮನವ ಸೊಗಸು ಗೊಳಿಸಿತು
ದುಃಖ ದೂರಗೊಳಿಸಲೆಂದು ಇಳೆಗೆ ಬಂದ ಮಗುವಿದು.
ಅಹೋರಾತ್ರ.
- Login or register to post comments
- 838 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: