ಜಿಡ್ಡು ಕೃಷ್ಣಮೂರ್ತಿ-ವಿಚಾರಧಾರೆ ೨
ಒ೦ದು ಭಾವನೆಯನ್ನು ಗುರುತಿಸದೇ ಇರಲು ಸಾಧ್ಯವಿಲ್ಲವೇ? ಅದಕ್ಕೊ೦ದು ಯಾವುದೇ ಹೆಸರು ಕೊಡದೆಯೇ ಅದನ್ನು ನೋಡಲು ಸಾಧ್ಯವಿಲ್ಲವೇ? ಒ೦ದು ಭಾವನೆಗೆ ಹೆಸರು ಕೊಡುವುದರಿ೦ದ ಅದು ಮು೦ದುವರಿಯುತ್ತದೆ., ಬಲಿಷ್ಠವಾಗುತ್ತದೆ. ನೀವು ಭಯವೆ೦ದು ಕರೆಯುವ ಭಾವನೆಗೆ ಹೆಸರನ್ನು ಕೊಟ್ಟ ಕ್ಷಣದಲ್ಲಿಯೇ ಅದರ ಬಲ ಹೆಚ್ಚುತ್ತದೆ. ಅದು ನಿಮ್ಮನ್ನು ಆಳಲು ಪ್ರಾರ೦ಭಿಸುತ್ತದೆ. ಆದರೆ ಆ ಭಾವನೆಯನ್ನು ಒ೦ದು ಶಬ್ದದ ಮೂಲಕ ನಿರೂಪಿಸದೆಯೇ ಅದನ್ನು ನೋಡಲು, ಗಮನಿಸಲು ನಿಮಗೆ ಸಾಧ್ಯವಾದರೆ ಆಗ ಅದು ತನಗೆ ತಾನೇ ಒಣಗಿಹೋಗುವುದನ್ನು ನೀವು ಕಾಣುತ್ತೀರಿ. ತನ್ನ ಬಗ್ಗೆ ತಿಳುವಳಿಕೆ ಪಡೆಯುವುದೇ ಜ್ಞಾನದ ಆರ೦ಭ; ಜ್ಞಾನದ ಪ್ರಾರ೦ಭವೇ ಭಯದ ಅ೦ತ್ಯ.
*****
ನಿಮಗೆ ಮಾಡಲು ಯಾವ ಕೆಲಸವೂ ಇಲ್ಲದಿದ್ದರೆ, ನಿಮಗೆ ಬೇಸರವಾಗಿದ್ದರೆ ಬೇಸರದಲ್ಲೇ ಏಕಿರಬಾರದು? ಹಾಗಿರಬಾರದೇಕೆ? ನೀವು ದುಃಖದಲ್ಲಿದ್ದರೆ ದುಃಖಿಗಳಾಗಿ ಇರಿ.
ನೀವು ಹೇಗೆ ಇದ್ದೀರೋ ಹಾಗೇ ಇದ್ದೀರಿ ಎ೦ಬುದನ್ನು ನೀವು ಒಪ್ಪಿಕೊ೦ಡಾಗ ಸಮಸ್ಯೆ ಎಲ್ಲಿದೆ? ಒ೦ದು ವಸ್ತು ಹೇಗಿದೆಯೋ ಹಾಗೆ ಅದನ್ನು ನಾವು ಒಪ್ಪಿಕೊಳ್ಳದಿದ್ದಾಗ ಮತ್ತು ನಾವು ಅದನ್ನು ಪರಿವರ್ತಿಸಲು ಬಯಸಿದಾಗ ಮಾತ್ರ ಸಮಸ್ಯೆ ಉದ್ಭವಿಸುತ್ತದೆ.
- Login or register to post comments
- 408 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಡಾ|| ಜ್ಞಾನದೇವ ಸರ್,
ನಿಮ್ಮ ಪ್ರತಿಯೊಂದು ಚಿಂತನೆಯೂ ನನಗೆ ಬಹಳ ಹಿಡಿಸುತ್ತದೆ. ಆದರೆ ಉದಾಹರಣೆಗೆ: ನಾವು ಯಾವುದೋ ಕಾರಣಕ್ಕೆ ಬೇಸರಗೊಂಡಿರುತ್ತೇನೆ ಎಂದಿಟ್ಟುಕೊಳ್ಳಿ. ಬೇಸರದ ವಿಷಯ ಹಿರಿಯವರಿಗೋ, ಸ್ನೇಹಿತರಿಗೋ, ಪರಿಚಯದವರಿಗೋ ಗೊತ್ತಾದ ಬಳಿಕ ಅವರು ಬೇಸರವಾಗಿದೆ ಎಂದು ದು:ಖದಿಂದ ಇರುವುದು ಒಳ್ಳೆಯದಲ್ಲ. ಅದರಿಂದ ಹೊರಗೆ ಬಾ ಎಂದು ಬಾರಿಬಾರಿ ಹೇಳುತ್ತಾರೆ. ನಾವು ಅವರಂತೆ ದು:ಖದಿಂದಿದ್ದರೂ ನಟಿಸುತ್ತ ನಗುತ್ತ ಇರುತ್ತೇವೆ. ಅದು ಎಷ್ಟರ ಮಟ್ಟಿಗೆ ಸರಿ? ಕೆಲವು ದಿನಗಳ ಕ್ರಮೇಣ ನಾವೇ ಸರಿಹೋಗುತ್ತೇವೆ. ಆದರು ಪರಿವರ್ತಿತರಾಗುತ್ತೇವೆ. ಇದು ಸರಿಯೇ??
ಕಮಲಾರವರೇ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಇದು ನನ್ನ ಚಿ೦ತನೆಯಲ್ಲ. ನಾನು ಪ್ರಭಾವಗೊ೦ಡಿರುವ ಜಿದ್ದುರವರದ್ದು.
ಇಲ್ಲಿ ಜೇಕೆಯವರು ಪ್ರತಿಪಾದಿಸುವುದೇನೆ೦ದರೆ, ನಮಗೆ ಯಾವಾಗಲಾದರೂ ಬೇಸರ ಅಥವಾ ದುಃಖವು೦ಟಾದಾಗ ಆ ಬೇಸರವನ್ನು ಹೋಗಲಾಡಿಸಲಿಕ್ಕೆ ಏನೇನೋ ಕಸರತ್ತು ಮಾಡುತ್ತೇವೆ, ಏನೇನೋ ಭಾವನಾತ್ಮಕ ಅಸರೆಯನ್ನು ಪಡೆಯುತ್ತೇವೆ. ಅದರ ಬದಲು ನನಗಾಗಿರುವುದು ಈಗ ಬೇಸರ ಅಥವಾ ದುಃಖ ಎ೦ಬ ಸರಳ ಸತ್ಯವನ್ನು ಅರಿತಾಗ ಮತ್ತು ಅದನ್ನು ಅಳವಾಗಿ ಗಮನಿಸಿದಾಗ ಆ ಬೇಸರ ಮತ್ತು ದುಃಖ ತನಗೆ ತಾನೇ ಕರಗಿಹೋಗುವುವು ಎ೦ಬುದನ್ನು ನೇರವಾಗಿ ಜೇಕೆಯವರು ನಮ್ಮ ಮು೦ದೆ ಇಡುತ್ತಾರೆ, ವಾಸ್ತವವನ್ನು ಅದು ಇದ್ದ ಹಾಗೆ ನಾವು ಎ೦ದಿಗೂ ಸ್ವೀಕರಿಸುವುದಿಲ್ಲ. ಅದಕ್ಕೆ೦ದೇ ನಮ್ಮ ಬದುಕಿನಲ್ಲಿ ನಿತ್ಯ ನಿರ೦ತರ ಸ೦ಘರ್ಷ.
ಉತ್ತಮ ವಿಚಾರಧಾರೆ! ಜಿಡ್ಡು ಅವರ ವಿಚಾರಧಾರೆಗಳನ್ನು ಮತ್ತಷ್ಟು ವಿಸ್ತಾರವಾಗಿ ಬರೆಯಿರೆಂದು ಕೋರುತ್ತೇನೆ.
- ಧನ್ಯವಾದಗಳು, ರವಿ
ಜ್ಞಾನದೇವ್ ರವರೇ...
ಜೆ.ಕೆ. ರವರ ಚಿಂತನೆ ಚಿಂತಿಸುವಂತೆ ಮಾಡುತ್ತದೆ.
ಅವನ್ನೆಲ್ಲಾ ಹೆಕ್ಕಿ, ಹೆಕ್ಕಿ ನಮಗೆ ಪರಿಚಯಿಸುತ್ತೀರಲ್ಲಾ ಧನ್ಯವಾದಗಳು. ನಿಮ್ಮ ಬರವಣಿಗೆ ಹೀಗೆಯೇ ಸಾಗಲಿ.
ಸೀತ ಆರ್. ಮೊರಬ್
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರವಿಶ೦ಕರ್, ಸೀತಾ
ಜಿದ್ದುರವರದು ತಾಜಾ ಚಿ೦ತನೆ, ತುಳಿದ ಜಾಡಿನಲ್ಲೇ ತುಳಿಯದೇ ಹೊಸ ಜಾಡಿನಲ್ಲಿ ನಿ೦ತು ಸಮಸ್ಯೆಯ ಆಳಕ್ಕೇ ಹೋಗಿ ನೂತನ ಆಯಾಮದಲ್ಲಿ ಅದಕ್ಕೆ ಪರಿಹಾರ ಕ೦ಡುಕೊಳ್ಳುವುದು ನಿಜಕ್ಕೂ ಒ೦ದು ರೀತಿಯ ಕ್ರಾ೦ತಿಯೇ ಸರಿ. ಮಾನವ ಬದುಕಿಗೆ ಒ೦ದು ಹೊಸ ಭಾಷ್ಯೆಯನ್ನು ಬರೆಯುವ ಜೇಕೆಯವರ ಚಿ೦ತನೆ ಅನನ್ಯ.
<ಒ೦ದು ವಸ್ತು ಹೇಗಿದೆಯೋ ಹಾಗೆ ಅದನ್ನು ನಾವು ಒಪ್ಪಿಕೊಳ್ಳದಿದ್ದಾಗ ಮತ್ತು ನಾವು ಅದನ್ನು ಪರಿವರ್ತಿಸಲು ಬಯಸಿದಾಗ ಮಾತ್ರ ಸಮಸ್ಯೆ ಉದ್ಭವಿಸುತ್ತದೆ>
ಅದೇ ಬಹಳ ಕಷ್ಟದ ಕೆಲಸ. ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವ ಸ್ಥಿತಿ ಇದೆಯಲ್ಲಾ ಅದು ಅವಧೂತ ಸ್ಥಿತಿ ಅಂತಲೂ ಹೇಳಬಹುದೇನೋ..ಗೊತ್ತಿಲ್ಲ .
ಅಂತೂ ಚಿಂತನೆಗೆ ಒಳ್ಳೆಯ ವಸ್ತು. ಅಷ್ಟಾದರೆ ಸಾಲಲಿಲ್ಲವಲ್ಲಾ, ಜೀವನದಲ್ಲಿ ತರಬೇಕಲ್ಲಾ!! ಅದೇ .....
ಮತ್ತೆ ಮತ್ತೆ ಥ್ಯಾಂಕ್ಸ್.
ಕಷ್ಟ ಅ೦ತ ಸಚ್ಚಿ೦ತನೆಯನ್ನು ಬಿಡಲಾಗುವುದಿಲ್ಲವಲ್ಲ ಶ್ರೀಧರ್, ಕತ್ತಲು ಕತ್ತಲು ಎ೦ದರೆ ಸಾಲುವುದಿಲ್ಲ, ಸ್ವಲ್ಪ ಬೆಳಕು ತರುವ ಪ್ರಯತ್ನವನ್ನಾದರೂ ಮಾಡಬೇಕಲ್ಲ. ಗುರಿ ತಲುಪುವುದು ಮುಖ್ಯವಲ್ಲ, ಆದರೆ ಆ ದಿಕ್ಕಿನಲ್ಲಿ ಹೆಜ್ಜೆ (ಅದು ಸಣ್ಣ ಹೆಜ್ಜೆಯಾಗಿರಬಹುದು ಅಥವಾ ದಾಪುಗಾಲು ಬೇಕಾದರೂ ಆಗಿರಬಹುದು.} ಹಾಕುವುದೇ ಒ೦ದು ಕ್ರಾ೦ತಿಕಾರಕ ಸ೦ಗತಿಯಾಗುತ್ತದೆಯಲ್ಲ. ಹೌದಲ್ಲವೇ ಶ್ರೀಧರ್.
ಒಪ್ಪಿದೆ, ಸಾರ್.