23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಟೆಕ್ ಸಂಪದ - ಕನ್ನಡದಲ್ಲಿ ತಂತ್ರಜ್ಞಾನದ ಮಜಲು

February 26, 2009 - 1:42pm
omshivaprakash

ನಾವು ಸಂಪಾದಿಸಿದ ಜ್ಞಾನವನ್ನ ಇತರರೊಂದಿಗೆ ಹಂಚಿಕೊಳ್ಳಲಿಕ್ಕೆ ನನ್ನ ಮಾತೃಭಾಷೆಗಿಂತ ಸುಲಭವಾದ ಮಾಧ್ಯಮ ನಮಗೆ ದೊರೆಯಲಿಕ್ಕಿಲ್ಲ. ಅದರಲ್ಲೂ ವಿಜ್ಞಾನ/ತಂತ್ರಜ್ಞಾನದ ವಿಷಯಗಳನ್ನ ಹಂಚಿಕೊಳ್ಳುವಾಗ, ಉದಾಹರಣೆಗಳನ್ನು ನೀಡುವಾಗ ಮಾತೃಭಾಷೆನಮ್ಮ ಕೆಲಸವನ್ನ ಸುಲಭಗೊಳಿಸುತ್ತದೆ. ಪ್ರತಿನಿತ್ಯದ ಬಳಕೆಯಲ್ಲಿರುವ ಭಾಷೆ ಜನರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವುದರಿಂದ ಅವರಿಗೆ ತಮ್ಮ ಭಾಷೆಯಲ್ಲಿ ದೊರೆಯುವ ಸುದ್ದಿ ಹೊಸ ವಿಷಯವನ್ನ ಸುಲಭವಾಗಿ ಅರಗಿಸಿಕೊಳ್ಳಲಿಕ್ಕೆ ಸಹಾಯ ಮಾಡುತ್ತದೆ.

ಕನ್ನಡಿಗರು ತಂತ್ರಜ್ಞಾನದ ಮಟ್ಟಿಗೆ ಜಾಣರಾಗ್ಬೇಕು, ತಮ್ಮ ಸರ್ಕಾರ, ಶಾಲಾ ಕಾಲೇಜುಗಳು, ಕನ್ನಡಿಗರ ಮನೆಯಲ್ಲಿ ಉಪಯೋಗಿಸಲ್ಪಡುವ ತಂತ್ರಾಂಶಗಳು ಕನ್ನಡಲ್ಲಿರಬೇಕು, ಯುನಿಕೋಡ್ ಮುಂತಾದ ಮುಂದುವರೆದ ತಂತ್ರಜ್ಞಾನವನ್ನ ಕಂಪ್ಯೂಟರೀಕರಣದಲ್ಲಿ ಅಳವಡಿಸಿಕೊಂಡು ನಾಗಾಲೋಟದಿಂದ ಜಿಗಿಯುತ್ತಿರುವ ತಂತ್ರಜ್ಞಾನ ಜಗತ್ತಿನೊಂದಿಗೆ ಹೆಜ್ಜೆಯಿಡಬೇಕು ಎಂದು ಅರುಹಿದ, ಇದರ ಬಗ್ಗೆ ಅನೇಕ ಕನಸುಗಳನ್ನು ಕಂಡ, ಜನರ ಭಾಷೆಯಲ್ಲಿ ತಂತ್ರಜ್ಞಾನವನ್ನ ತಮ್ಮ ಪುಸ್ತಕಗಳ ಮೂಲಕ ತಿಳಿಸಿಕೊಟ್ಟ ಡಾ|| ಪೂರ್ಣಚಂದ್ರ ತೇಜಸ್ವಿ,, ತಮ್ಮ ವೈಜ್ಞಾನಿಕ ಲೇಖನಗಳಿಂದ ಚಿಕ್ಕವಯಸ್ಸಿನಿಂದಲೂ ನಮ್ಮೆಲ್ಲರ ಸ್ಪೂರ್ತಿ ಮತ್ತು ಮನೆಮಾತಾಗಿರುವ, ಈಗಲೂ ಅವರ ಲೇಖನಗಳಿಗೆ ಕಾತುರದಿಂದ ಕಾಯುವಂತೆ ಮಾಡುತ್ತಿರುವ ನಾಗೇಶ್ ಹೆಗ್ಡೆಯವರು ಹಾಗು ಕನ್ನಡದ ಇನ್ನು ಅನೇಕ ಲೇಖಕರ "ಕನ್ನಡದಲ್ಲಿ ತಂತ್ರಜ್ಞಾನ" ಎಂಬ ಕನಸನ್ನು ನನಸಾಗಿಸಲು, ಅವರ ಕನಸಿನ ಬೀಜವನ್ನು ಮುಂದಿನ ಜನಾಂಗಕ್ಕೂ ಬಿತ್ತಲು ಮಾಡಲು ಸಂಪದದ ತಂತ್ರಜ್ಞರ ತಂಡ "ಟೆಕ್ ಸಂಪದ" ವನ್ನ ಸಂಪದಿಗರ ಮುಂದಿಟ್ಟಿದೆ. ಜನಸಾಮಾನ್ಯನಿಗೆ ತಂತ್ರಜ್ಞಾನವನ್ನು ತಲುಪಿಸುವ ಮಜಲು "ಟೆಕ್ ಸಂಪದ". ಇದನ್ನು ಸಂಪದಿಗರ ಮುಂದಿಡಲೇಬೇಕು ಅಂತ ಪಟ್ಟುಹಿಡಿದು ಕುಂತದ್ದು ನಮ್ಮ ಮುರಳಿ. ಅದಕ್ಕೆ ಜೀವ ತುಂಬಿದ್ದು ನಮ್ಮೆಲರ ಹೆಚ್.ಪಿ.ಎನ್. 

ಟೆಕ್ ಸಂಪದ

http://tech.sampada.net

 

ಟೆಕ್ ಸಂಪದದಲ್ಲಿ ನಿಮಗೆ ಕಾಣಬರುವ ವಿಭಾಗಳು ಇಂತಿವೆ. (ಲಾಗಿನ್ ಆಗಲು ಸಂಪದದ ಐಡಿ ಬಳಸಬಹುದು)

ಅಂಕಣ
'ಟೆಕ್ ಸಂಪದ' ಅಂಕಣ.
ಚಿತ್ರಪುಟ
ಚಿತ್ರಪುಟಗಳನ್ನು ಸೇರಿಸಲು ಈ ಆಯ್ಕೆ ಬಳಸಿ.
ಟೆಕ್ opening
      ಸಂಪದಿಗರಿಗೆ ಉದ್ಯೋಗ ಮಾಹಿತಿ ನೀಡಿ. 

ಟೆಕ್ Poll
'ಟೆಕ್ Poll' - ಜನಮತ ಸೇರಿಸಲು ಈ ಆಯ್ಕೆ ಕ್ಲಿಕ್ ಮಾಡಿ.
ಮಾಹಿತಿಪುಟ
ಮಾಹಿತಿ ಪುಟಗಳನ್ನು ಸೇರಿಸಲು ಈ ಆಯ್ಕೆ ಬಳಸಿ.
'ಟೆಕ್' ಕಾರ್ಯಕ್ರಮ
ತಂತ್ರಜ್ಞಾನ ಕುರಿತ ಕಾರ್ಯಕ್ರಮವೊಂದರ ವಿವರ ಸೇರಿಸಲು ಈ ಆಯ್ಕೆ ಬಳಸಿ.
'ಟೆಕ್' ಚರ್ಚೆ ವಿಷಯ
ತಂತ್ರಜ್ಞಾನ ಕುರಿತ ಚರ್ಚೆ ಪುಟವೊಂದನ್ನು ಸೇರಿಸಲು ಈ ಆಯ್ಕೆ ಬಳಸಿ.
'ಟೆಕ್' ಪುಸ್ತಕ ಪುಟ
'ಟೆಕ್ ಸಂಪದ' ಪುಸ್ತಕ ಪುಟ. (ಹೊಸ ಪುಟಗಳಿಗೆ ಮಾತ್ರ ಈ ಆಯ್ಕೆ ಬಳಸಿ. ಈಗಾಗಲೇ ಇರುವ ಪುಟವನ್ನು ಲಗತ್ತಿಸಲು ಅಯಾ ಪುಟದಲ್ಲಿ ಎಡಿಟ್ ಬಟನ್ ಕ್ಲಿಕ್ ಮಾಡಿ.)
'ಟೆಕ್' ಪ್ರಶ್ನೆ
ತಂತ್ರಜ್ಞಾನ ಕುರಿತ ನಿಮ್ಮ ಪ್ರಶ್ನೆ ಸೇರಿಸಿ.
'ಟೆಕ್' ಸುದ್ದಿ
ತಂತ್ರಜ್ಞಾನ ಕುರಿತ ಸುದ್ದಿ ಸೇರಿಸಲು ಈ ಆಯ್ಕೆ ಬಳಸಿ.

ಪ್ರಪಂಚದಾದ್ಯಂತ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಕೆಲಸಮಾಡುತ್ತಿರುವ ಕನ್ನಡಿಗರೆಲ್ಲರಿಗೆ ಕನ್ನಡದಲ್ಲಿ ತಮ್ಮ ಜ್ಞಾನವನ್ನ ಹಂಚಿಕೊಳ್ಳಲಿಕ್ಕೆ "ಟೆಕ್ ಸಂಪದ" ಒಂದು ವೇದಿಕೆಯಾಗಲಿ ಎಂದು ಹಾರೈಸುತ್ತ. 

ನಿಮ್ಮ,
ಓಂಶಿವಪ್ರಕಾಶ್
ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by smurthygr on
ಮೇಲಿನ ಕೊಂಡಿಗಳನ್ನು ( ಟೆಕ್ ಸುದ್ದಿ, ಅಂಕಣ ಇತ್ಯಾದಿ) ಕುಕ್ಕಿದಾಗ access denied ಅಂತ ಬರ್ತಾ ಇದೆ. ಕನ್ನಡದಲ್ಲಿರುವ "ಟೆಕ್ ಸಂಪದ" ಕೊಂಡಿ ಕುಕ್ಕಿದಾಗ ಬಂತು.

Submitted by savithru on
ಹೆಚ್ಚಿನವಕ್ಕೆ ( ಉದಾ: ಅಂಕಣ ) ನೇರವಾಗಿ ಬರೆಯುವ ಅವಕಾಶವಿಲ್ಲ. ಅಂಕಣಗಳು ಇಲ್ಲಿ "Moderated" ಯೇ?. ನೋಡುವ... ಈ ವೀಕೆಂಡ್ ನಲ್ಲಿ ಒಂದು ಒಳ್ಳೆಯ vlsi ಸಂಬಂದಿತ್ ಬರಹವನ್ನು ಹಾಕುತ್ತೇನೆ.

Submitted by savithru on
hpn ಮತ್ತು shivaprakash, Add new page ಅನ್ನು ಒತ್ತಿದಾಗ ಈ ಕೆಳಗಿನ ವಿಷಯಗಳಲ್ಲಿ ಮಾತ್ರ ಹೊಸ ವಿಷಯ ಸೇರಿಸಿಬಹುದು. ಚಿತ್ರಪುಟ ಟೆಕ್ opening 'ಟೆಕ್' ಚರ್ಚೆ ವಿಷಯ ಹೊಸದಾಗಿ ಬರಹಗಳನ್ನು (ಅಂಕಣ?!), ಮಾಹಿತಿಗಳನ್ನು..etc ಸೇರಿಸಲು ಅಲ್ಲಿ ಅವಕಾಶವಿಲ್ಲ. ಒಮ್ಮೆ ಇತ್ತ ಗಮನ ಹರಿಸಿ.

Submitted by hamsanandi on
ಒಂದು ಪ್ರಶ್ನೆ - ಯಾವ ರೀತಿಯ ವೈಜ್ಞಾನಿಕ ಬರಹಗಳನ್ನು ಕೂಡಾ ಹಾಕಬಹುದೇ? ಉದಾಹರಣೆಗೆ ನಕ್ಷತ್ರಗಳ ವೀಕ್ಷಣೆಯೇ ಆಗಲಿ, ಅವುಗಳ ವಿಂಗಡಣೆ ಆಗಲಿ, ಅಂತಹ ವಿಷಯಗಳ ಬಗ್ಗೆ ಬರೆಯಲು ಟೆಕ್ ಸಂಪದ ಸರಿಯಾದ ಜಾಗವೇ? -ಹಂಸಾನಂದಿ

Submitted by omshivaprakash on
ಹೌದು, ವಿಜ್ಞಾನದ ತಂತ್ರಜ್ಞಾನಕ್ಕೆ ಸಂಬಂದ ಪಟ್ಟ ಎಲ್ಲ ವಿಷಯಗಳ ಬಗ್ಗೆ ಟೆಕ್ ಸಂಪದದಲ್ಲಿ ಬರೆಯಬಹುದು. ನಿಮ್ಮ ಲೇಖನಗಳಿಗೆ ಹೊಂದುವಂತೆ, ಅಂಕಣದ ಹೆಸರನ್ನು ಕೊಟ್ಟರೆ ಅದನ್ನು ಹುಡುಕುವವರಿಗೆ ಸುಲಭವಾಗುತ್ತದೆ :)

Submitted by muralihr on
ಮೂಲತ:ನಾವು ಬಯಸುತ್ತಿರುವ ಲೇಖನ ನಮ್ಮ ದೇಶದ ಒ೦ದು ದೊಡ್ಡ ಸಮಸ್ಯೆಗೆ ಬೆಳಕು ಚೆಲ್ಲುವ೦ತ ಜ್ಞಾನದ ಬರಹಗಳಾದರೆ ಒಳ್ಳೆಯದು. ನಾನು ಬೆಂಗಳೂರಿನಲ್ಲಿ ಸೈಕಲ್ ಗಳಿಗಾಗಿ ಒ೦ದು ಸಣ್ಣ ಲೇನ್ ಮಾಡಿಸುವ ಬಗ್ಗೆ ಓಡಾಡ್ತಾಯಿದ್ದೇನೆ. ನಮ್ಮ ಸರ್ಕಾರದಲ್ಲಿ ಯಾರಿಗೂ ಇದು ಹ್ಯಂಗ್ ಮಾಡೋದು ಗೊತ್ತಿಲ್ಲಾ.ಅದೇ ಯುರೋಪ್ ನಲ್ಲಿ ಆಗಲೇ ಅ೦ತವಿಕ್ಕೆ ಡಿಸೈನ್ ಮ್ಯಾನ್ಯುಯಲ್ ಸಿದ್ಧ ಪಡಿಸಿ ನಿರ್ದಿಷ್ಟವಾದ ಮಾಹಿತಿ ಸಿಗುತ್ತೆ. ಸದ್ಯಕ್ಕೆ ನಾವು ಪೋಕಸ್ ಮಾಡಬೇಕಾಗಿರೋದು - ಪವರ್ ಸೆಕ್ಟ್ ರ್ +ಸಾರಿಗೆ +ಡಿಸೈನ್ . ನಂತರ ಈ ಲೈನಕ್ಸ್ ಇತ್ಯಾದಿ ತಂತ್ರಜ್ಞಾನ ನಮ್ಮ ಹಳ್ಳಿ / ಸರ್ಕಾರದ ಜನರಿಗೆ ತಲುಪಿಸುವ ಪರಿ ಹೆಂಗೆ ? ಪರಿಸರದ ಹಾನಿಯನ್ನು ತಡೆಗಟ್ಟುವ ತಂತ್ರಜ್ಞಾನದ ಬಗ್ಗೆ ? ಕ್ವಾಲಿಟಿ ಬಗ್ಗೆ ಲೇಖನಗಳು ಬಂದರೆ ಒಳ್ಳೆಯದು. ಮುರಳಿ,

Submitted by omshivaprakash on
ಅರವಿಂದ ಶುಭ ಹಾರೈಕೆಯ ಜೊತೆಗೆ ತಂಡದ ಮುಖ್ಯ ಸದಸ್ಯನಾಗಿರುವ ನಿನ್ನಿಂದ ಗಿಂಪ್ ಇತ್ಯಾದಿ ಕಲಿಯೋ ಆಸೆ. ಅದು ಟೆಕ್ ಸಂಪದದ ಲೇಖನಗಳಿಂದ ನಮಗೆ ಸಿಗುತ್ತೆ ಅಂತ ಅಂದುಕೊಳ್ತೀನಿ :)

Submitted by hariharapurasridhar on
ಹರಿಪ್ರಸಾದ್, ನಿಜಹೇಳುವೆ, ನನಗಂತೂ ಇವೆಲ್ಲಾ ಏನೂ ಅರ್ಥವಾಗಿಲ್ಲ. ಸಂಪದದಲ್ಲಿ ಟೈಪ್ ಮಾಡುವುದುಬಿಟ್ಟರೆ ಇನ್ನೇನು ಗೊತ್ತಿಲ್ಲ. ನನ್ನಂತವರಿಗೆ ಅರ್ಥಪಡಿಸಲು ಅಂದ್ರೆ ಕೆಲವು ಟೂಲ್ ಗಳನ್ನು ಬಳಸಿ ಸಂಪದದಲ್ಲಿ ಚೆನ್ನಾಗಿ ಬರೆಯಲು, ಹಲವು ಚಿತ್ರ ಹಾಕಲು, ಬೇರೆ ಬೇರೆ ತಂತ್ರ ಉಪಯೋಗಿಸಲು ಒಂದು ವರ್ಕಶಾಪ್ ಮಾಡಬಹುದೇ? ಅದರ ಖರ್ಚುವೆಚ್ಚ ಪಾಲ್ಗೊಂಡ ನಾವು ಭರಿಸುವೆವು.ಸಂಪದಿಗರ ಸ್ನೇಹ ಮಿಲನಕ್ಕಿಂತಲೂ ಇದು ಅವಷ್ಯಕ ವೆನಿಸುತ್ತೆ.ಬೆಂಗಳೂರಿನಲ್ಲಿರುವವರಂತಯೇ ಎಲ್ಲರಿಗೂ ಅಂತರ್ಜಾಲದ ಜ್ಞಾನ ಇದೆ ಎಂದು ಭಾವಿಸಬೇಡಿ.ನನ್ನ ಸ್ನೇಹಿತರನೇಕರಿಗೆ ನಾನುಅಂತರ್ಜಾಲದ ಅ-ಆ-ಇ-ಈ ಹೇಳಿಕೊಡುವ ಪರಿಸ್ಥಿತಿ ಇಲ್ಲಿದೆ. ನನ್ನ ಸ್ಥಿತಿ ಏನಾಗಬೇಕು? ಅಂದಹಾಗೆ ಸಂಪದಿಗರ ಸಂಖ್ಯೆಯೂ ಹೆಚ್ಚಾಯ್ತು. ಸಂಪದದಮೇಲೆ ಹೊರೆ ಜಾಸ್ತಿಯಾಯ್ತಲ್ಲವೇ? ಅದರ ಸಾಮರ್ಥ್ಯ ಹೆಚ್ಚಿಸಲು ಏನಾದರೂ ಯೋಜನೆ ರೂಪಿಸಿದಿರಾ? ಅದರ ವೆಚ್ಚ ಭರಿಸಲು ನಮ್ಮನ್ನೂ ಜೋಡಿಸಿಕೊಳ್ಳಿ.ವೈಯಕ್ತಿಕವಾಗಿ ಬೇಕಾದರೂ ಮೇಲ್ ಮಾಡಿ ಅಥವಾ ಸಂಪದದಲ್ಲಿಯೇ ಬೇಕಾದರೂ ಪ್ರಕಟಿಸಿ. ಉತ್ತರ ನಿರೀಕ್ಷಿಸಲೇ?

Submitted by omshivaprakash on
ಟೆಕ್ ಸಂಪದದಲ್ಲಿ, ಇನ್ಮುಂದೆ ಟೆಕ್ ಸಂಪದ ತಂಡ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳು ಇತ್ಯಾದಿ, ಹಾಗು ನಮ್ಮೊಡನೆ ಕೈಜೋಡಿಲಿಚ್ಚಿಸುವ ಎಲ್ಲರಿಗೆ ಸರಿಯಾದ ವೇದಿಕೆಯನ್ನ ನಿರ್ಮಿಸಿಕೊಡಲು ಅನೇಕ ಯೋಜನೆಗಳು ನಮ್ಮ ಮುಂದಿವೆ. ಮುಂಬರುವ ದಿನಗಳಲ್ಲಿ ಇವುಗಳು ನಿಮ್ಮೆಲ್ಲರಿಗೆ ಅರ್ಪಿಸಲಾಗುತ್ತದೆ. ನಿಮ್ಮೆಲ್ಲರ ಸಹಾಯ ಸಹಕಾರವಿಲ್ಲದೆ ನಮ್ಮ ಈ ಎಲ್ಲ ಕೆಲಸಗಳು, ಕನಸುಗಳು ಸಾಕಾರವಾಗುವಂತಿಲ್ಲ. ಟೆಕ್ ಸಂಪದದಲ್ಲಿ ಇನ್ನೇನು ಮಾಡ ಬಹುದು, ನೀವೇಗೆ ಸಹಕರಿಸ ಬಲ್ಲಿರಿ ಅನ್ನೋದನ್ನ tech-volunteers @ sampada.net ಇಲ್ಲಿಗೆ ಒಂದು ಈ-ಮೈಲ್ ಬರೆದು ತಿಳಿಸಿ. ಇಲ್ಲ ಇದೇ ಲೇಖನದಲ್ಲಿ ಒಂದು ಕಾಮೆಂಟ್ ಹಾಕಿದರೆ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.

Submitted by roopablrao on
Om shivu ಟೆಕ್ ಸಂಪದ ನೋಡಿದೆ ತುಂಬಾ ಚೆನ್ನಾಗಿದೆ . ಒಳ್ಳೆಯ ಪ್ರಯತ್ನ ಮುರಳಿ, ಹರಿ ಹಾಗು ನಿಮಗು ವಂದನೆಗಳು ಅದರಲ್ಲಿ HTML,JAVASCRIPTm VBSCRIPT ಬಗ್ಗೆ ಲೇಖನ ಬರೆಯಬಹುದೆ ಮೇಲಿನ ಶ್ರೀಧರ್ ಸಾರ್ ಹೇಳಿದಂತೆ ಇಂಟರ್ ನೆಟ್ ಬಗ್ಗೆ ಒಂದು ಲೇಖನ ಮುನ್ನುಡಿಯಾಗಿ ಬರೆದು ಟೆಕ್ ಸಂಪದದಲ್ಲೇ ಆನ್‍ಲೈನ್‌ನಲ್ಲಿ ವರ್ಕ್ ಶಾಪ್ ಮಾಡೋಣ ಎನ್ನುವ ಯೋಚನೆಯೂ ಇದೆ. ಶಿವು ನಿಮ್ಮ ಪ್ಲೇಟೋನಿಕ್ನಲ್ಲಿ ಬರೆದ್ ಸ್ಟಾಟಿಕ್ ಐಪಿ ಅಡ್ರೆಸ್ ಬಗ್ಗೆ ಯೂ ಕನ್ನಡದಲ್ಲಿ ಬರೆಯಿರಿ ಇನ್ನೂ ಚೆನ್ನಾಗಿ ಅರ್ಥವಾಗುತ್ತೆ.

Submitted by hariharapurasridhar on
"ಪ್ಲೇಟೋನಿಕ್ನಲ್ಲಿ "ಹಾಗೆಂದರೇನು? ಅನೇಕ ವೇಳೆ ಅನ್ನಿಸುತ್ತೆ, ಈ ಸಾಫ್ಟ್ವೇರ್ ಇಂಜಿನಿಯರುಗಳಮಧ್ಯೆ ನನ್ನಂತ ಹಳ್ಳಿ ಗಮಾರರು! ಪ್ರವೇಶ ಪಡೆದಾಗಿದೆ ಇನ್ನು ಪಾಠ ನೀವು ಮಾಡಬೇಕು, ನನ್ನಂತವರಿಗೆ ಅರ್ಥಪಡಿಸಬೇಕು.ಕಷ್ಟವಾಗುತ್ತೆ ನಮಗಾಗಿ ಸಹಿಸಿಕೊಳ್ಳಿ.ನಗಬೇಡಿ. ರೂಪ, ನಾನು ಸ್ಟುಡೆಂಟ್ ನಂಬರ್-೧

Submitted by roopablrao on
ನನ್ನ ಪ್ರತಿಕ್ರಿಯೆ ನಕ್ಕಂತೆ ಕೇಳಿಸಿತೇ ಸಾರ್. ಹಾಗಿದ್ದರೆ ಕ್ಶಮಿಸಿ ಇಲ್ಲಿ ಎಲ್ಲರೂ ಗುರುಗಳು ಎಲ್ಲರೂ ಶಿಷ್ಯರು. ಜೀವನಾಮೃತದ ಪಾಠಗಳನ್ನು ನೀವು ಹಾಗು ಜ್ನಾನದೇವ್ ಸಾರ್, ವೈದ್ಯಕೀಯ ರಂಗದ ಬಗ್ಗೆ ಮೀನರವರು, ಸಂಗೀತದ ಬಗ್ಗೆ ಹಂಸಾನಂದಿಗಳು, ಟೆಕ್ ಪಾಠಗಳ ಬಗ್ಗೆ ಶಿವು ಅಯ್ಯೋ ಪಟ್ಟಿ ಮುಂದುವರಿಯುತ್ತಲೇ ಇವೆ ನಾನು ಯಾರನ್ನೂ ಬಿಟ್ಟಿಲ್ಲ ಮನದಲ್ಲಿ ಎಲ್ಲರ ಪಟ್ಟಿ ಇದೆ. ಆದರೆ ತಿಂಡಿಗೆ ಹೋಗಬೇಕು ಹಾಗಾಗಿ ಹಾಕುತ್ತಿಲ್ಲ ನಾನು ನನ್ನ ಒಂದೆರೆಡು ಟೆಕ್ ವಿಷಯಗಳನ್ನು ಹಾಗಿ ಸ್ವಲ್ಪ ಧನ್ಯಳಾಗೋಣಾ ಎಂದು ಬರೆದದ್ದು ದಯವಿಟ್ಟು ನೀವು ಹಳ್ಲಿ ಗಮಾರ ಎಂದು ಬೈದುಕೊಳ್ಳಬೇಡಿ. ಹಳ್ಳಿವರೆಂದು(ಆಗಿದ್ದರೆ) ಹೆಮ್ಮೆಯಿಂದ ಹೇಳಿಕೊಳ್ಳಿ, ಏಕೆಂದರೆ ನೆನ್ನಿನ ಕೃಷಿ ವಾರ್ತೆಯಲ್ಲಿ ಶಿವಮೂಗ್ಗದ ಬೊಮ್ಮನಹಳ್ಳಿಯ ರೈತನೊಬ್ಬ(ಆತ ಮೂಲತ್: ಎಂಜಿನಿಯರ್) ನ ಮಾತು ಕೇಳುತ್ತಿದ್ದಂತೆ ನನಗೆ ಮನಸಿನಲ್ಲಿ ಯಾವುದಾದರೊಂದು ಹಳ್ಲಿಯಲ್ಲಿ ಒಂದೆರೆಡೆಕರೆ ಭೂಮಿ ಖರೀಧಿಸಿ ಉಳುಮೆ ಮಾಡಿಸುವ ಆಸಕ್ತಿ ಹುಟ್ಟಿದೆ. ಸರಿಯಾಗಿ ಉಳುಮೆ ಮಾಡಿ ಇಲ್ಲಿ ಪಡುವ ಕಷ್ಟ ಪಟ್ಟರೆ ಈ ಸಂಪಾದನೆಗಿಂತ ಹೆಚ್ಚು ಸಂಪಾದಿಸುವುದಲ್ಲದೆ ಮನಶ್ಯಾಂತಿ ದೊರೆಯುತ್ತದೆ. ಬೆಂಗಳೂರು, ಈ ಹೋರಾಟ, ಹಾರಾಟ, ಪರಿಸರ ಮಾಲಿನ್ಯ ಶಬ್ದ , ಎಲ್ಲಾ ತಲೆ ಚಿಟ್ಟು ಹಿಡಿದು ಹೋಗಿದೆ ನಮ್ಮ ಮುಸ್ಸಂಜೆಯ ಬದುಕನ್ನು ಯಾವುದಾದರೂ ಹಳ್ಳಿಯಲ್ಲಿ ಕಳೆಯೋಣ ಎಂದು ನಿರ್ಧರಿಸಿದ್ದೇವೆ

Submitted by omshivaprakash on
>>"ಪ್ಲೇಟೋನಿಕ್ನಲ್ಲಿ "ಹಾಗೆಂದರೇನು? ಇದು ನನ್ನ ಇಂಗ್ಲೀಷ್ ಬ್ಲಾಗ್ ನ ಹೆಸರು. ಪ್ಲೇಟೋನ ತತ್ವಗಳನ್ನ, ಅವನ ನಂಬಿಕೆಗಳನ್ನ ನಾನೂ ಇಟ್ಟುಕೊಂಡಿದ್ದೇನೆಂದ ನನ್ನ ಗುರುಗಳು ಸೂಚಿಸಿದ ಇಂಗ್ಲೀಷ್ ಪದ ಪ್ಲೆಟೋನಿಕ್" ಇಲ್ಲಿದೆ ನೋಡಿ :)

Submitted by omshivaprakash on
>>ಅದರಲ್ಲಿ HTML,JAVASCRIPTm VBSCRIPT ಬಗ್ಗೆ ಲೇಖನ ಬರೆಯಬಹುದೆ ಖಂಡಿತ >>ಶ್ರೀಧರ್ ಸಾರ್ ಹೇಳಿದಂತೆ ಇಂಟರ್ ನೆಟ್ ಬಗ್ಗೆ ಒಂದು ಲೇಖನ ಮುನ್ನುಡಿಯಾಗಿ ಬರೆದು ಟೆಕ್ ಸಂಪದದಲ್ಲೇ ಆನ್‍ಲೈನ್‌ನಲ್ಲಿ ವರ್ಕ್ ಶಾಪ್ ಮಾಡೋಣ ಎನ್ನುವ ಯೋಚನೆಯೂ ಇದೆ. ತುಂಬಾ ಒಳ್ಳೆಯ ಯೋಚನೆ, ನಾವು ತುಂಬಾ ದೊಡ್ಡ ವಿಷಯಗಳ ಬಗ್ಗೆ ಮಾತನಾಡುವ ಬದಲು, ತಂತ್ರಜ್ಞಾನವೆಂಬ ಜ್ಞಾನದ ಬೀಜವ ಬಿತ್ತಿ, ಅದು ಮೊಳಕೆಯೊಡೆದು ಎಲ್ಲರೊಂದಿಗೆ ಆರೋಗ್ಯವಂತ ಸಸಿಯಾಗಿ ಬೆಳೆಯುವಂತೆ ನೋಡಿಕೊಳ್ಳಲು ಪ್ರಾಥಮಿಕ ಶಿಕ್ಷಣದ ಅವಶ್ಯಕತೆಯಿದೆ. ನಾನೂ ನನ್ನ ಕೈಲಾದಷ್ಟು ಇದರಲ್ಲಿ ಸಹಾಯ ಮಾಡುತ್ತೇನೆ >> ಶಿವು ನಿಮ್ಮ ಪ್ಲೇಟೋನಿಕ್ನಲ್ಲಿ ಬರೆದ್ ಸ್ಟಾಟಿಕ್ ಐಪಿ ಅಡ್ರೆಸ್ ಬಗ್ಗೆ ಯೂ ಕನ್ನಡದಲ್ಲಿ ಬರೆಯಿರಿ ಇನ್ನೂ ಚೆನ್ನಾಗಿ ಅರ್ಥವಾಗುತ್ತೆ. ಲಿನಕ್ಸಾಯಣದ ಮುಂದಿನ ಭಾಗಗಳಲ್ಲಿ ಖಂಡಿತ ನೀವಿದನ್ನ ಕಾಣಬಹುದು.

Submitted by smurthygr on
ಟೆಕ್‌ಸಂಪದದಲ್ಲಿ ಹಾಕಿದ ಪ್ರತಿಕ್ರಿಯೆಗಳು ಏನಾಗುತ್ತವೆ? ನಾನೂ ಸುಮಾರು ಪ್ರತಿಕ್ರಿಯೆ ಬರೆದೆ, ಒಂದೂ ಮತ್ತೆ ಸಿಕ್ತಾ ಇಲ್ಲ - ಮಾಡರೇಟ್ ಆಗಿ ಹೋಗ್ತಾ ಇದ್ದಾವಾ? :) ಏನೇನು ಬರೆದೆ ಅಂತ ಗಡಿಬಿಡಿಯಲ್ಲಿ ಮರೆತು ಹೋಗುತ್ತೆ - ಕೆಲವು ಉಪಯುಕ್ತ (?) ಸಲಹೆಗಳನ್ನು ಕೊಟ್ಟಿದ್ದೆ! (ಅಂತ ಅಂದುಕೊಂಡಿದ್ದೆ!)

Submitted by omshivaprakash on
ಲಾಗಿನ್ ಆಗದೆ ಹಾಕಿದ ಕಾಮೆಂಟುಗಳು ಮಾಡರೇಶನ್ ಗೆ ಹೋಗ್ತಿದ್ವು. ಈಗ ಅದನ್ನ ಸರಿಪಡಿಸಲಾಗಿದೆ. anonymous ಕಾಮೆಂಟ್ ಅಲ್ಲಿ ಇನ್ಮುಂದೆ ಹಾಕುವಂತಿಲ್ಲ. ಸಂಪದದ ರೀತಿ ಲಾಗಿನ್ ಆಗಿ ಕಾಮೆಂಟ್ ಹಾಕಬಹುದು.

Submitted by smurthygr on

ಟೆಕ್ ಸಂಪದ ಈಗ ಚಾಲ್ತಿಯಲ್ಲಿ ಇಲ್ಲದಿರುವುದು ಬಹಳ ಬೇಸರದ ಸಂಗತಿ. ಬಹುಶಃ ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ತುಂಬಾ ಬಿಸಿ ಇರಬಹುದು. ಆದರೂ ಕನ್ನಡದಲ್ಲಿ ತಂತ್ತಜ್ಞಾನದ ಬಗ್ಗೆ ಇಂತಹ ಒಂದು ಪ್ರಯತ್ನದ ಅವಶ್ಯಕತೆ ಬಹಳ ಇದೆ.