ಒಂದು ಸಣ್ಣ ಲೆಕ್ಕ
ಒಂದು ಸಣ್ಣ ಲೆಕ್ಕ
ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ!
ಇಂತಹ ಒಂದು ಸಮಸ್ಯೆ ತಲೆಯಲ್ಲಿ ಉಳಿದುಕೊಂಡಿದೆ. ಹೊರಗೆ ಹಾಕಲು ಶ್ರಮಿಸಿದರೂ ಜಗ್ಗದೆ ಕುಳಿತುಕೊಂಡಿದೆ. ಬಲ್ಲವರು ಹೊರಗೆ ಸಾಗಿಸಲು ಸಹಾಯಮಾಡಬೇಕು.
ಸಮಸ್ಯೆ ಇಷ್ಟೇ..
ನೂರಾರು ಅಂದರೆ ಸಾವಿರಾರು ಎನ್ನುವುದಕ್ಕಿಂತ ಎಷ್ಟು ಕಡಿಮೆ? ಅಥವಾ "ಅಲ್ಲಿ ಸಾಹಿತ್ಯದ ಸಭೆಯಲ್ಲಿ ನೂರಾರು ಜನ ಸೇರಿದ್ದರು" ಎಂದು ಒಂದು ಕಡೆ ಬರೆದ ಪತ್ರಿಕೆಯಲ್ಲಿ ಇನ್ನೊಂದೆಡೆ ಗೌಡರ ಆಗಮನಕ್ಕೆ "ಸಾವಿರಾರು ಮಂದಿ ಕಾದು ನಿಂತಿದ್ದರು" ಎಂದು ಬರೆದಿದ್ದರು. ಗೌಡರ ಆಗಮನಕ್ಕೆ ಸಾಧಾರಣ ಎಷ್ಟು ಜನ ಹೆಚ್ಚಿದ್ದರು ಅಂತ ತಿಳಿದುಕೊಳ್ಳಬಹುದು?
ಕೊನೇ ಪ್ರಶ್ನೆ : ಲಕ್ಷಗಟ್ಟಲೆ ಜನರು ಎಂದು ಬರೆಯುವಾಗ ಸಾಧಾರಣ ಎಷ್ಟು ನೂರಾರು ಜನರ ಗುಂಪುಗಳು ಅಥವಾ ಸಾವಿರಾರು ಜನರ ಗುಂಪುಗಳು ಇರಬೇಕು?
ಒಂದೇ ಪ್ರಶ್ನೆ ಇಷ್ಟು ತಲೆತಿನ್ನುವಾಗ "ನೂರಾರು ಪ್ರಶ್ನೆಗಳು ತಲೆ ತಿನ್ನುತ್ತಿವೆ" ಎನ್ನುವವರ ಪಾಡೇನು ಎಂದು ಚಿಂತಿಸಲೂ ಭಯವಾಗುತ್ತಿದೆ!
ಗೋಪೀನಾಥ ರಾವ್

- Login or register to post comments
- 840 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಸಂಖ್ಯೆ
ರಾಯರೇ,
ಅಂಕಿಗಳ ಸಂಗವದು ಶಂಕೆಸಾಗರದಂತೆ
ಸಂಖ್ಯೆ ಜನಗಳದಾಗೆ ಪುಢಾರಿ ಭಾಷಣಕೆ
ಲಂಕೆಗೈತಂದ ವಾನರರ ಮೀರುವುದು ಸರ್ವಜ್ಞ!
ನಿಮ್ಮವ
ಬೆನಕ
ಜಾಣೇಶನ ನುಡಿ
"ನೀವ್ ಏನ್ ಬೇಕಾದ್ರು ಹೇಳಿ, ಆದರೆ ಒಂದು, ಎರಡು, ನೂರು, ನೂರಾರು, ಸಾವಿರ, ಸಾವಿರಾರು, ಲಕ್ಷ ಅಂತ ಲೆಕ್ಕ ಮಾತ್ರ ಹೇಳ್ಬೇಡಿ. ಲೆಕ್ಕದಲ್ ನಾನ್ಸ್ವೊಲ್ಪ ವೀಕು".
ಲೆಕ್ಕ
ನನಗೆ ತಿಳಿದ ಮಟ್ಟಿಗೆ ನಾನು ಬರೆಯುತ್ತಿರುವೆ. ಈ ಪದಗಳನ್ನು ಅರ್ಥೈಸುವುದಕ್ಕೆ ಲೆಕ್ಕ ಬರದಿರುವವರೇ ಸರಿ. ಲೆಕ್ಕ ಬರುವವರಿಗೆ ತಲೆನೋವು ಜಾಸ್ತಿಯಾಗಿ ಔಷಧಾಲಯಕ್ಕೆ ಒಳ್ಳೆಯ ವ್ಯಾಪಾರವಾಗುವುದು.
ನೂರಾರು ಎಂದರೆ ಆರು ನೂರಕ್ಕಿಂತ ಕಡಿಮೆ.
ಸಾವಿರಾರು ಎಂಬ ಪದ ಸವಾರ ಯಾರು, ಸಾವಿರ ಯಾರು (ಆರು), ಅಥವಾ ಸಾವಿರುವವರು ಯಾರು (ಸಾವಿಗಾಗಿ ಕ್ಯೂನಲ್ಲಿ ನಿಂತಿರುವವರು ಯಾರು).
ಲಕ್ಷಗಟ್ಟಲೆ ಎಂಬುದು ಹೆಚ್ಚುಗಟ್ಟಲೆ (ಶ್ರಾದ್ಧ), ಗಂಟೆಗಟ್ಟಲೆ ಇತ್ಯಾದಿ ಪದಗಳ ದಾಯಾದಿ. ಕೆಲವೊಮ್ಮೆ ಲಕ್ಷ ರೂಪಾಯಿಗಳನ್ನು ಕಟ್ಟು ಎನ್ನಲೂ ಲಕ್ಷಕಟ್ಟಲೇ, ಲಕ್ಷಗಟ್ಟಲೆ ಎಂದೂ ಹೇಳುವರು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net