ನಿರಾಕಾರ
ನಿರಾಕಾರ.
ನಿರಾಕಾರನು ಸಾಕಾರನಾದದ್ದು
ಚಮತ್ಕಾರ,
ಸಾಕಾರನಿಗೆ ಕಂಡ ನಿರಾಕಾರವೇ
ಸಾಕ್ಷಾತ್ಕಾರ,
ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇ
ಪರೋಪಕಾರ,
ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇ
ಸಂಸ್ಕಾರ.
ನಿರಾಕಾರನ
ಅಸಮಾನತೆಯೇ 'ಅ' ಕಾರ,
ಉತ್ತುಂಗವೇ 'ಉ' ಕಾರ,
ಮಮಕಾರವೇ 'ಮ' ಕಾರ.
ಈ ಮೂರರ
ಗುಣಾಕಾರವೇ
'ಓಂ'
ಕಾರ.
ಪ್ರಣವನಾದ
ಓಂಕಾರದ
ಭಾಗಾಕಾರವೇ
ಚತುರ್ವೇದದ ಜಗದಾಕಾರ.
{ಅಹೋರಾತ್ರ}

- Login or register to post comments
- 722 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ನಿರಾಕಾರ
"ಚತುರ್ವೇದಗಳ ಜಗದಾಕಾರ" ಅಂದರೇನು?
<ಅಸಮಾನತೆಯೇ 'ಅ' ಕಾರ,
ಉತ್ತುಂಗವೇ 'ಉ' ಕಾರ,
ಮಮಕಾರವೇ 'ಮ' ಕಾರ.
ಈ ಮೂರರ
ಗುಣಾಕಾರವೇ
'ಓಂ'ಕಾರ.> ಇದನ್ನು ಕೊಂಚ ವಿವರಿಸಿ.
ಇಂತಿ,
ಮಹೇಶ
ಮೆಚ್ಚುಗೆ : ನಿರಾಕಾರ
ಚಮತ್ಕಾರ, ಸಾಕ್ಷಾತ್ಕಾರ, ಪರೋಪಕಾರ, ಸಂಸ್ಕಾರ.
ಆಹಾ. ನಿರಾಕಾರ ಭಾವದಿಂದ ಇಷ್ಟೆಲ್ಲವನ್ನೂ ಸಾಧಿಸಬಹುದೇ. 'ರ'ಕಾರ ದಿಂದ ಕೊನೆಗೊಳ್ಳುವ ಪದಗಳ ಜೋಡಣೆ ನಿಜಕ್ಕೂ ಸಿಹಿಯನ್ನು ಸವಿಯುವಂತಾಗಿದೆ.
ಸವಿಯೊದಗು ನಿಮಗೆ.
ಆದರೆ ಈ 'ಓಂ' ಕಾರದ ಮರ್ಮ ಏತಕೋ ಅರ್ಥ ಮಾಡಿಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ.
ಅಸಮಾನತೆಯೇ 'ಅ' ಕಾರ,
ಉತ್ತುಂಗವೇ 'ಉ' ಕಾರ,
ಮಮಕಾರವೇ 'ಮ' ಕಾರ.
ಇಲ್ಲಿ ಕವಿಗಳ ಪ್ರಕಾರ ಅಸಮಾನತೆಯ ಭಾವ ಯಾವುದು. ಅಸಮಾನತೆಗೂ ಅಕಾರ ಕ್ಕೂ ಕೊಂಡಿ ಬೆಸೆಯುವಾಗ ಅವರ ಮನದಲ್ಲಿ ಯಾವ ಭಾವನೆಗಳಿದ್ದವು.
ನಾನು ಈ ರೀತಿ ಅರ್ಥಮಾಡಿಕೊಂಡ ಕಾರಣ ಸ್ಪಷ್ಟತೆ ಸಿಗುತ್ತಿಲ್ಲ.
ಈ ಪದ್ಯದಲ್ಲಿರುವ "ಸಮಾನತೆ" ಪದ , ನಾವು ದಿನನಿತ್ಯ ಬಳಸುವ ಸಮಾನತೆ, ಅಸಮಾನತೆ, ಮಹಳಾ ಸಮಾನತೆ, ಆರ್ಥಿಕ ಸಮಾನತೆ, ಇತ್ಯಾದಿ ಅರ್ಥದಲ್ಲಿ ಉಪಯೋಗಿಸಲ್ಪಟ್ಟಿದೆಯೇ. ನನ್ನ ಪ್ರಕಾರ ಸಮಾನತೆಯನ್ನು ಸಾಧಿಸಬೇಕು ಮತ್ತು ಅಸಮಾನತೆಯನ್ನು ಹೋಗಲಾಡಿಸಬೇಕು.
ಹಾಗಾಗಿ, ಇಲ್ಲಿ ಕವಿಗಳು ಯಾವ ಭಾವದಲ್ಲಿ ಅಸಮಾನತೆಯಲ್ಲಿ ಓಂಕಾರದ ಅ ಕಾರವನ್ನು ಕಂಡಿದ್ದಾರೆ ಎಂದು ತಿಳಿದುಕೊಳ್ಳುವ ತೀವ್ರ ಕುತೂಹಲದಲ್ಲಿದ್ದೇನೆ.
ಅಸಮಾನತೆ
ಪ್ರಿಯ ಸುನಿಲಮಹೇಶರೆ,
ವೇದ ಹೀಗೆ ಹೇಳುತ್ತದೆ, ಓಂಕಾರವಾಗಿರುವುದು 'ಅ', 'ಉ' ಮತ್ತು 'ಮ',ಕಾರಗಳಿಂದ.
ಮೊದಲು 'ಅ' ಕಾರ: ಋಗ್ವೇದ ಆರಂಭ ವಾಗುವುದು 'ಅ' ಕಾರದಿಂದ ಅಂತ್ಯ ವಾಗುವುದು 'ಇ' ಕಾರದಿಂದ,
ಯಜುರ್ವೇದದ ಆರಂಭ 'ಇ' ಕಾರದಿಂದ, ಅಂತ್ಯ 'ಉ' ಕಾರದಿಂದ.
ಮತ್ತು ಸಾಮ ವೇದ ಸಂಗೀತಮಯವಾದುದರಿಂದ 'ಮ' ಕಾರ ಪ್ರತಿನಿಧಿಸುತ್ತದೆ.
ದೇವರು ಎಲ್ಲವನ್ನು ಮೀರಿರುವ ಭಾವಕ್ಕೆ 'ಅಸಮಾನತೆ'ಯನ್ನು ಬಳಸಲಾಗಿದೆ [ ಸಮಾನವಲ್ಲದ್ದು ಅಸಮಾನ]
ದೇವರು ಎಲ್ಲಕ್ಕಿಂತ ಎತ್ತರದಲ್ಲಿರುವ ಭಾವಕ್ಕೆ ಉತ್ತುಂಗವನ್ನು ಬಳಸಿದೆ,
ದೇವರ ವಿಕಾರವಿಲ್ಲದ ಪ್ರೀತಿಗೆ ಮಮಕಾರವೆಂದೆ.
ಆದರೂ ನಿಮ್ಮಗಳ ಹಾಗೆ ವಿವರಿಸಲಾರದ ಈ ಅಜ್ಞಾನಿಯನ್ನು ಮನ್ನಿಸಿ.
ಓಂಕಾರದ ಬಗ್ಗೆ ನಿಮಗಾಗಿ ಈಗ ಒಂದು ಕವನ ಬರೆದೆ, ಅದರಲ್ಲೂ ಸ್ವಲ್ಪ ವಿವರಿಸಿದ್ದೇನೆ.
ಅಹೋರಾತ್ರ
ಓಂಕಾರ ಮತ್ತು ಅಸಮಾನದ ಗೊಂದಲ
ಓಂಕಾರದ
ಭಾಗಾಕಾರವೇ
ಚತುರ್ವೇದದ ಜಗದಾಕಾರ.
ವೇದ ಹೀಗೆ ಹೇಳುತ್ತದೆ, ಓಂಕಾರವಾಗಿರುವುದು 'ಅ', 'ಉ' ಮತ್ತು 'ಮ',ಕಾರಗಳಿಂದ.
ಪ್ರಿಯ ಅಹೋರಾತ್ರರೆ,
ಓಂ ಕಾರಕ್ಕೂ, ವೇದಗಳಿಗೂ ಇರವ ಸಂಬಂಧವನ್ನು ತಿಳಿಸಿ ಮಹದುಪಕಾರವನ್ನು ಮಾಡಿರುವಿರಿ. ಜೇನು ಸವಿದಷ್ಟೆೇ ಸಂತಸವಾಗಿದೆ ನನಗೆ. ಹೀಗೆಯೇ ಅನೇಕ ವಿಷಯಗಳನ್ನು ಕವನಗಳ ಮೂಲಕ ತಿಳಿಸಿ ಕೊಡುತ್ತಿರಿ ಎಂದು ಕೇಳುವೆೆನು.
ದೇವರು ಎಲ್ಲವನ್ನು ಮೀರಿರುವ ಭಾವಕ್ಕೆ 'ಅಸಮಾನತೆ'ಯನ್ನು ಬಳಸಲಾಗಿದೆ
ಬೆಳಗ್ಗೆಯಿಂದ ಈ ಅಸಮಾನದ ಗೊಂದಲದಿಂದ ಹೊರಬರಲಾಗಿರಲಿಲ್ಲ. ನೀವು ಅಸಮಾನ ಭಾವದ ವಿವರಣೆಯನ್ನು ನೀಡಿ ನನ್ನಲ್ಲಿದ್ದ ಗೊಂದಲವನ್ನು ಹೋಗಲಾಡಿಸಿದ್ದೀರಿ.
ಬಹುಶಃ ಇದು ದ್ವೈತ ಸಿದ್ಧಾಂತದ ಪ್ರಭಾವವಿರಬಹುದು. ಆತ್ಮ ಮತ್ತು ಪರಮಾತ್ಮ(ಪರಮ ಆತ್ಮ), ಆ ಪರಮ ಆತ್ಮನಲ್ಲಿ ನೀವು ಅಸಮಾನ ಶಕ್ತಿಯನ್ನು ಕಂಡಿರಲಿಕ್ಕೆ ಸಾಕು.
ಈ ಕಾರಣದಿಂದಾಗಿಯೇ ನನಗೆ ಕವನ, ಕಾವ್ಯಗಳೆಂದರೆ ಇಷ್ಟ. ಅವು ನಮ್ಮನ್ನು ಚಿಂತನೆಗೀಡುಮಾಡುತ್ತದೆ(ಚಿಂತೆಗಲ್ಲ ಮತ್ತೆ). ನೋಡಿ ನಿಮ್ಮ ನಿರಾಕಾರ ಕವನ ನಮ್ಮಲ್ಲಿ ಗೊಂದಲವನ್ನೆಬ್ಬಿಸಿತು, ಆ ಗೊಂದಲಗಳನ್ನು ನಿವಾರಿಸಲು ನೀವು ಇನ್ನೊಂದು ಕವನ (ಓಂಕಾರ) ರಚಿಸಬೇಕಾಯಿತು.
ಈ ಇಡೀ ಕವಿವರ್ಗಕ್ಕೆ ಎಷ್ಷು ಸವಿಯೊದಗೆಗಳನ್ನು ಅರ್ಪಿಸಿದರೂ ಸಾಲದು. ಇಗೋ ನನ್ನ ನಮನಗಳು ಕವಿಗಳಿಗೆ
ಓಂಕಾರ ಮತ್ತು ವೇದ
ಇಲ್ಲೊಂದು ಗೊಂದಲ.
ನಾಲ್ಕುವೇದಗಳ ರಚನೆಯಾದಾಗ ಅವಕ್ಕೆ ಯಾವ ಹೆಸರನ್ನು ನೀಡಲಾಗಿರಲಿಲ್ಲ. ನಂತರ ಬಂದ ವೇದವ್ಯಾಸರು ಅವನ್ನು ಕ್ರಮಬದ್ಧವಾಗಿ ಜೋಡಿಸಿದರು. ಹೀಗೆಂದು ನನ್ನರಿವು.
ಇಲ್ಲಿ ಯಾವ ವೇದದಲ್ಲಿ ಈ ರೀತಿಯಾಗಿ ಓಂಕಾರದ ಬಗ್ಗೆ ಹೇಳಲಾಗಿದೆಯೆಂದು ಉಲ್ಲೇಖಿಸಿದರೆ ಬಹಳ ಉಪಕಾರವಾಗುವುದು.
ಅಸಮಾನ್ಯ = ಸಮಾನ್ಯವಲ್ಲದವನು
ಅಸಮಾನ = ಸಮಾನರಿಲ್ಲದವನು
ಅಸಮಾನತೆ = ಸಮವಾಗಿಲ್ಲದಿರುವಿಕೆ
"ಗಣೇಶರ್ಥವಶೀರ್ಷ" (ಬೇರೆ ಉಪನಿಷತ್ತಿನಲ್ಲೂ), ಈ ವಾಕ್ಯವಿದೆ "ಸರ್ವಂ ಖಲ್ವಿದಂ ಬ್ರಹ್ಮ", ಅಂದರೆ ಎಲ್ಲವೂ ನಿಶ್ಷಯವಾಗಿ ಬ್ರಹ್ಮವೆ.
ಪುರುಷಸೂಕ್ತದಲ್ಲಿ "ಸ ಭೂಮಿಂ ವಿಶ್ವತೋ ವೃತ್ವಾsತ್ಯತಿಷ್ಠದ್ದಶಾಂಗುಲಂ". ಅವನು ಈ ಬುವಿಯನ್ನು ಎಲ್ಲದಿಕ್ಕುಗಳಿಂದಾವರಿಸಿ ಹತ್ತು ಬೆರಳುಗಳಷ್ಟರಿಂದ ಹೆಚ್ಚಾಗಿದ್ದಾನೆ. ಇಡೀ ವಿಶ್ವವನ್ನೆ ಅವನು ಆವರಿಸಿರುವಾಗ, ಅವನನ್ನು ಯಾರ ಜೊತೆ ಹೋಲಿಸಿ "ಅಸಮಾನತೆಯನ್ನು" ಹೇಳಿಲಾಗಿದೆ?
ಮುಳಿಯಬೇಡಿ. ನನಗೆ ನಿಜವಾಗಲು ನೀವು ಬರೆದಿವುದರಲ್ಲಿ, ಬಹಳ ಗೊಂದಲವಿದೆ.
ನೊಂದರೆ ಮನ್ನಿಸಿ,
ಮಹೇಶ
ಗೊಂದಲ.
ಗೊಂದಲವಿಲ್ಲದವ ಗೋವಿಂದ ಮಾತ್ರ,
ಗೊಂದಲ ಬಿಡಿಸುವ ಜ್ಞಾನಿ ಗುರುವಾಗುತ್ತಾನೆ.
ನಿಮ್ಮನ್ನು ಗೊಂದಲದಲ್ಲಿ ತಳ್ಳಿ ಕುಳಿತಿರುವ ಅಜ್ಞಾನಿ ನಾನು.
ನಿಮ್ಮ ಗೊಂದಲ ನನಗೆ ಬಿಡಿಸಲಸಾದ್ಯ.
ಮನ್ನಿಸಿ.
ಅಹೋರಾತ್ರ