ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಗಾಂಧಿ ಮೀಟರ್ರು‍

June 4, 2006 - 10:53pm — prashanth kota

ನನಗೊಬ್ಬ ಸರ್ದಾರ್ಜಿ ಸ್ನೇಹಿತ ಇದ್ದಾನೆ. ಹರ್ಪ್ರೀತ್ ಅಂತ. ನಾಲ್ಕು ತಿಂಗಳ ಹಿಂದೆ ಅವನ ಮನೆಯವರು ಬನ್ನೇರುಘಟ್ಟದಾಚೆಯ ಗೊಟ್ಟಿಗೇರೆ ಎಂಬಲ್ಲಿ ಹೊಸ ಮನೆಯೊಂದರಲ್ಲಿ ವಾಸಿಸ ತೊಡಗಿದರು. ಅಂದಿನಿಂದ ದಿನ ಬೆಳಗಾದರೆ ಅವನದೊಂದೇ ಗೋಳು. ಆಟೋಗಳು ಅವನ ಮನೆಗೆ ಬರೊದಿಲ್ಲ ಅಂತ. ಹಾಗೂ ಹೀಗು ಕಾಡಿ ಬೇಡಿದ ನಂತರ ಬಂದವರು ಮನ ಬಂದಂತೆ ಬಾಡಿಗೆ ಕೇಳುತ್ತಾರೆ. ಜಯನಗರ ೯ನೆ ಬ್ಲಾಕಿಂದ ಅಲ್ಲಿಗೆ ಇಪ್ಪತ್ತೈದು ರೂಪಾಯಿ ಮೀಟರಿನಲ್ಲಿ ಆದರೂ ನೂರೈವತ್ತರ ಕೆಳಗೆ ಯಾರು ಬರಲ್ಲವಂತೆ. ಈ ಆಟೊ ಚಾಲಕರ ಸುಲಿಗೆಯಿಂದ ಬೇಸತ್ತ ಅವನು ಹೊಸ ಕಾರನ್ನು ಕಾದಿರಿಸಿಯೇ ಬಿಟ್ಟ. ಬಿಡಿ, ಈ ಕಥೆಗೂ ಅವನ ಕಾರಿಗೂ ಸಂಬಂಧವಿಲ್ಲ.

ದಿನಾ ಬೆಳಿಗ್ಗೆ ಅವನ ಹಂದಿನ ದಿನದ ಹರ-ಸಾಹಸ ಕೇಳಿ ಅಭ್ಯಾಸವಾದ ನನಗೆ, ಹೋದ ಗುರುವಾರ ಆಶ್ಚರ್ಯ ಕಾದಿತ್ತು. ಆದದ್ದು ಇಷ್ಡೆ. ಎಂದಿನಂತೆ ಆತ ಜಯನಗರದಲ್ಲಿ ಮೀನಾಕ್ಷಿ ದೇವಸ್ಥಾನಕ್ಕೆಂದು ಆಟೊ ಹತ್ತಿದ. ಈಗಾಗಲೆ ಅವನಿಗೆ ಸಾಕಷ್ಟು ಅನುಭವ ಇತ್ತು - ಗೊಟ್ಟಿಗೇರೆ ಎಂದು ಹೇಳಿದರೆ ಯಾರು ಬರೊಲ್ಲ ಅಂತ. ಹೀಗೆ ಎರಡೆರದು ಆಟೊ ಹಿಡಿಯುವುದು ಅವನ modus operandi ಆಗಿತ್ತು. ಇನ್ನೊಂದು ವಿಷಯ - ಆಟೊ ಹತ್ತಿದ ಕೂಡಲೇ ಅವನು ನೋಡುವುದು ಅದು ಹತ್ತು ರೂಪಾಯಿ ಆಟೊವೇ ಅಥವಾ ಹನ್ನೆರಡು ರೂಪಾಯಿ ಮೀಟರ್ರಿ‍ರುವ ಆಟೊವೇ ಅಂತ. ನಂತರ ಪ್ರತಿ ನಿಮಿಷಕ್ಕೊಮ್ಮೆ ಮೀಟರ್ರಿ‍ನ ಕಡೆಗೆ ಕಣ್ಣು ಹಾಯಿಸುವುದು. ಹಾಗೆ ಮಾಡದಿದ್ದರೆ ಆರಾಮಾಗಿ, ಹತ್ತಿಪ್ಪತ್ತು ರೂಪಾಯಿ ಮೋಸ ಹೋಗುವುದು ಖಂಡಿತ. ಅವತ್ತು ಕೂಡ ಅವನು ಅದನ್ನೇ ಮಾಡತೊಡಗಿದ. ತನ್ನ ಮನಸ್ಸಿನಲ್ಲೆ ಆಟೋ ಚಾಲಕನ್ನು ಮೀಟರು ಮಿತಿಮೀರಿ ಓಡುತ್ತಿದೆ ಅಂತ ಹೇಗೆ ಬಯ್ಯಿಯುವುದು ಅಂತ ಯೋಚಿಸಲು ಶುರುಮಾಡಿದ. ನಾಲ್ಕೈದು ಕಿಲೋಮೀಟರಿನ ನಂತರವೂ ಈ ಆಟೊ ಮೀಟರ್ರು‍ ಚಾಚೂ ತಪ್ಪದೆ ಓಡುತ್ತಿದೆ... ಅವನಿಗೆ ಬಹಳ ಆಶ್ಚರ್ಯ ವಾಯಿತು. ಮೀಟರ್ರನ್ನು ತಿದ್ದದ ಚಾಲಕರಿದ್ದಾರೆ ಎಂದು ನಂಬುವುದೆ ಕಷ್ಟವಾಗಿತ್ತು ಅವನಿಗೆ. ಇಂತವನೊಬ್ಬ ಸಿಕ್ಕನಲ್ಲಾ ಎಂದು ಹರ್ಪ್ರೀತ್ ಹೆಚ್.ಎಸ್.ಬಿ.ಸಿ ಎದುರು ಬಂದೊಡನೆಯೇ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾದ. "ಮೀನಾಕ್ಷಿ ದೇವಸ್ಥಾನದಿಂದ ಮುಂದೆ ಗೊಟ್ಟಿಗೇರೆಗೆ ಬರ್ತೀರಾ?" ಅಂತ ತನಗೆ ಗೊತ್ತಿದಷ್ಟು ಅರೆ ಬರೆ ಕನ್ನಡದಲ್ಲೆ ಕೇಳಿದ. ಚಾಲಕ ಸ್ವಲ್ಪ ಯೋಚಿಸಿ "ಮೀಟರನ್ನು ನೋಡಿ. ಇಲ್ಲಿಂದ ಎಷ್ಟಾಗುತ್ತೊ ಅಷ್ಟಕ್ಕೆ ಒಂದೂವರೆ ಕೊಡಿ" ಅಂತ ಕೇಳಿದನಂತೆ. ಹರ್ಪ್ರೀತನಿಗೆ ತನ್ನ ಕಿವಿಯನ್ನು ತಾನೆ ನಂಬಲಾಗಲಿಲ್ಲ. ಒಂದೂವರೆ ಪಟ್ಟು ಕೊಡುವುದು ಸಮಂಜಸವೇ ಎಂದು ತಿಳಿದು "OK" ಹೇಳಿ ಒಪ್ಪಿಕೊಂಡ. ಇಷ್ಡುಹೊತ್ತಿಗೆ ಅವನಿಗೆ ಆ ಆಟೊ ಮೀಟರ್ರಿ‍ನ ಮೇಲೆ ಸಾಕಷ್ಟು ನಂಬಿಕೆ ಬಂದಿದ್ದರಂದ ಗಳಿಗೆಗೊಮ್ಮೆ ಮೀಟರ್ರನ್ನು ನೋಡುವುದೂ ಬಿಟ್ಟ.

ಇಷ್ಟರಲ್ಲಿ ಒಂದು ಟ್ರಾಫಿಕ್ ಸಿಗ್ನಲಿನಲ್ಲಿ ಪಕ್ಕದ ಆಟೊದ ಚಾಲಕನು ಈ ಚಾಲಕನೊಂದಿಗೆ ಮಾತು ಬೆಳಸಿದನಂತೆ. ಸಿಗ್ನಲ್ಲು ಹಸಿರಾಗುವಮುಂಚೆ ಅವರ ಮಾತಿನಲ್ಲಿ "ಗಾಂಧಿ ಮೀಟರ್ರು‍‍" ಮಾತ್ರ ಇವನಿಗೆ ಅರ್ಥ ಆಗಿದ್ದು. ಸ್ವಲ್ಪ ಮುಂದೆ ಹೋದ ಮೇಲೆ, ಕುತೂಹಲಕ್ಕಾಗಿ ನೀವು ಆ ಚಾಲಕನೊಂದಿಗೆ ಏನು ಮಾತಾಡಿದಿರಿ ಅಂತ ಕೇಳಿದ. ಸರ್ವ ಭಾಷಾ ಪ್ರೇಮಿಯೂ ಪಾರಂಗತನೂ ಆದ ಆ ಚಾಲಕ ಹರ್ಪ್ರೀತ್ ಗೆ ತಿಳಿಯುವಂತೆ ಹಿಂದಿಯಲ್ಲೇ ವಿವರಿಸಿದ.

"ಆ ಆಟೊದವನು ನಿಮ್ಮನ್ನು ಎಲ್ಲಿ ಹತ್ತಿಸಿಕೊಂಡೆ ಅಂತ ಕೇಳಿದ. 'ಜಯನಗರದಿಂದ, ಗೊಟ್ಟಿಗೇರೆಗೆ ಹೋಗ್ತಾ ಇದ್ದೀನಿ' ಅಂತ ಹೇಳಿದೆ. ನನ್ನ ಮೀಟರನ್ನು ನೋಡಿ 'ಏನು ಇಷ್ಟೆ ಆಗಿದೆ, ನನ್ನ ಆಟೊ ದಲ್ಲಿ ಕಳಿಸಿ ಕೊಡು, ಇಲ್ಲಿಂದ ಕೂಡ ಅರವತ್ತು ರೂಪಾಯಿ ಮಾಡ್ತೀನಿ' ಅಂದ. 'ನಂದು ಗಾಂಧಿ ಮೀಟರ್ರು‍, ನಾನು ಹಾಗೆ ಮೋಸ ಮಾಡಲ್ಲ. ಇವರನ್ನು ಬಿಟ್ಟುಕೊಡಲ್ಲ' ಅಂತ ಹೇಳಿದೆ". ಚಾಲಕನ ಈ ವಿವರಣೆ ಕೇಳಿ ಹರ್ಪ್ರೀತ್ ಗೆ ಏನು ಹೇಳಬೇಕೋ ತೋಚಲಿಲ್ಲ. ಆಟೊ ಚಾಲಕರೆಂದರೆ ಕೆಂಡಕಾರುತ್ತಿದ್ದ ಇವನು, ಈ ಚಾಲಕನ್ನು ಕಂಡು ಹೆಮ್ಮೆ ಪಟ್ಟನು.

ಮುಖ್ಯ ರಸ್ತೆಯಿಂದ ತಿರುಗಿದ ನಂತರ ವಾಹನ ದಟ್ಟಣೆಯೂ ಕಡಿಮೆಯಾಯಿತು, ಚಳಿಯೂ ಜಾಸ್ತಿಯಾಯಿತು. ಚಾಲಕನೂ ತನ್ನ ಜೀವನದ ಆದರ್ಶಗಳನ್ನು ಹರ್ಪ್ರೀತ್ ಹತ್ತಿರ ಹೇಳ ತೊಡಗಿದ. "ನಮ್ಮದಲ್ಲದ ದುಡ್ಡು ನಮ್ಮ ಕೈಯಲಿ ನಿಲ್ಲೋಲ್ಲ ಸಾರ್. ಮೀಟರ್ರಿ‍ನಲ್ಲಿ ಕೀಟಲೆ ಮಾಡಿದರೆ ಇವತ್ತಲ್ಲಾ ನಾಳೆ ದೆವರು ಶಿಕ್ಷೆ ಕೊಡುತ್ತಾನೆ. ಒಮ್ಮೆ ಮೀಟರ್ ಪೋಲಿಸಿನ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ, ಐದು ಸಾವಿರದೊರೆಗೂ ದಂಡ ನೀಡಬೇಕಾಗುತ್ತದೆ. ನೋಡಿ, ಗಾಂಧಿ ಮೀಟರ್ರಿ‍ಂದ ಓಡಿಸಿದರೆ, ನಮಗೆ ಭಯ ಇರೊದಿಲ್ಲ". ಹರ್ಪ್ರೀತನಿಗಂತೂ ಈ ಚಾಲಕನ ಮೇಲಿನ ಅಭಿಮಾನ ಹೆಚ್ಚಾಗುತಿತ್ತು. ಚಳಿ ಹೆಚ್ಚಾಗಿದ್ದರಿಂದ, ತಾನೊಂದು ಸಿಗರೇಟು ಎಳೆಯಬಹುದೆ? ಅಂತ ಚಾಲಕ ಕೇಳಿದ. ನೀವೂ ತಗೊಳ್ಳಿ ಅಂತ ಒಂದು ಸಿಗರೇಟು ಇವನಿಗೂ ಕೊಟ್ಟನಂತೆ. ಕಟ್ಟಾ ಸರ್ದಾರಾದ ಇವನು, "ನನು ಸರ್ದಾರಾದ್ದರಿಂದ ಸಿಗರೇಟು ಮುಟ್ಟುವಂತಿಲ್ಲ. ನೀವು ಮುಂದುವರಿಸಿ" ಎಂದು ತನ್ನ ಒಪ್ಪಿಗೆ ಕೊಟ್ಟ. ಇದರಿಂದ ಬೆಜಾರಾದ ಚಾಲಕ ಹತ್ತಿರದ ಕಾಕಾ ಅಂಗಡಿ ಎದಿರು ಗಾಡಿ ನಿಲ್ಲಿಸಿ, ಒಂದು ಬಾಳೆ ಹಣ್ಣು ತಂದು ಹರ್ಪ್ರೀತಿಗೆ ಕೊಟ್ಟನಂತೆ. 'ನಾನೆನಾದರು ಕನಸು ಕಾಣುತ್ತಿದ್ದೇನೆಯೆ?' ಎಂಬುವಷ್ಟು ಆಶ್ಚರ್ಯ ಅವನಿಗೆ. ಇದಕ್ಕೂ ಚಾಲಕನ ಮತ್ತೊಂದು ಆದರ್ಶವೇ ಕಾರಣ. ತಾನು ಏನನ್ನಾದರು ಸೆವಿಸುತ್ತಿರುವಾಗ ಎದಿರು ಇರುವವರಿಗೂ ಕೊಟ್ಟು ತಿನ್ನದಿದ್ದರೆ ಪಾಪ ಬರುತ್ತದೆ ಎಂಬುದು ಅವನ ನಂಬಿಕೆ ಅಂತೆ. [ಮೊದಲು ಕೊಟ್ಟಿದ್ದು ಸಿಗರೇಟು ಎಂಬುದನ್ನು ಸ್ವಲ್ಪ ಕಾಲ ಮರೆಯೋಣ]

ಅಂತೂ ಇಂತು ಕಡೆಗೆ ಹರ್ಪ್ರೀತ್ ನ ಮನೆ ತಲುಪಿದಾಗ, ಮೀಟರ್ರನ್ನು ನೋಡಿ ಮೊದಲೇ ಹೇಳಿದ್ದಷ್ಟೇ (ಎಲ್ಲಾ ಸೇರಿ ೬೫ ರೂಪಾಯಿ) ಕೇಳಿದನಂತೆ ಆ ಚಾಲಕ. ಎಷ್ಟೇ ಸೌಜನ್ಯದಿಂದ ಇದ್ದರೂ ಕಡೆಗೆ ಮನೆ ಹತ್ತಿರ ಬಂದ ಮೇಲೆ ಒಂದು ಹತ್ತು ರೂಪಾಯಿ ಹೆಚ್ಚು ಕೇಳುವುದೋ, ಅಥವಾ ಚಿಲ್ಲರೆ ಇಲ್ಲ ಎಂದು ಮಿಕ್ಕ ಹಣ ಕೊಡದೆ ಇರುವುದೋ, ಅಥವಾ ಮತ್ತಾವುದಾದರು ತಕರಾರು ಎತ್ತುವುದು ಆಟೊಚಾಲಕರ ರೂಢಿಯಂತೆ. ಈ ಚಾಲಕ ಹಾಗೂ ಮಾಡಲಿಲ್ಲ. ಸಂತೋಷಗೊಂಡ ಹರ್ಪ್ರೀತ್ ಪೂರ್ತಿ ನೂರು ರೂಪಾಯಿ ಕೊಟ್ಟು ಬೆಂಗಳೂರಿನಲ್ಲಿ ಇಂಥ ಚಾಲಕರೂ ಇದ್ದಾರೆ ಅಂತ ತೋರಿಸಿದ ಅವನಿಗೆ ಧನ್ಯವಾದ ಹೇಳಿದನಂತೆ.

ಪ್ರಶಾಂತ ಕೋಟ

  • ಅನುಭವ ಕಥನ
~.~
  • Login or register to post comments
  • 672 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2006 - 2:03am — ಮಹೇಶ ಭೋಗಾದಿ

ನಂಬಲು ಸುಲಭವಲ್ಲ.

ಮಹೇಶ ಭೋಗಾದಿ's picture

ಕನ್ನಡ ಗೊತ್ತಿರುವ ನಮಗೆ, ಈ ಬಗೆಯನುಭವಗಳು ಬೆಂಗಳೂರಿನಲ್ಲಿ ಕಡಮೆ. ಇನ್ನು ಹೀಗೆ ನಡೆದಿದೆಯೆಂದರೆ, ದೇವಾಣೆ ನಂಬಲು ತುಸು ಕಷ್ಟವೆ.

ಸದ್ಯಕ್ಕಿಲ್ಲಿಯಾದರೂ, ಗಾಂಧಿಯವರ ಹೆಸರೊಳ್ಳೆಯ ರೀತಿಯಲ್ಲಿ ಬಳಕೆಯಾಯಿತ್ತಲ್ಲ!

-ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2006 - 11:29pm — taleharate

ಈ ಗಾಂಧಿ

taleharate's picture

ಈ ಗಾಂಧಿ ಮೀಟರ್ ಕತೆ ನಂಬಬಹುದು. ಏಕೆಂದರೆ ನಾನೊಮ್ಮೆ ಬೆಂಗಳೂರಿನಲ್ಲಿ ನಮ್ಮ ಇಲಾಖಾ ತರಬೇತಿಗಾಗಿ ಬಂದಿದ್ದಾಗ ಒಂದು ವಾರ ಕೆ ಜಿ ರಸ್ತೆಇಂದ ದೊಮ್ಮಲೂರಿಗೆ ಪ್ರತಿದಿನ ಆಟೊದಲ್ಲಿ ಪ್ರಯಾಣಿಸುತಿದ್ದೆ. ಒಬ್ಬೊಬ್ಬ ಆಟೋದವನು ಒಂದೊಂದು ದರ ವಸೂಲಿ ಮಾಡುತ್ತಿದ್ದನು. ಎಲ್ಲರು ೪೫ ರಿಂದ ೬೦ ರೂಪಾಯಿವರೆಗೆ ಸುಲಿಯುತ್ತಿದ್ದರು. ಒಂದು ಶುಭದಿನ ಸಿಕ್ಕಿದ ಆಟೊ ನೋಡಿ ಆತ ಪ್ರಾಮಣಿಕನಿರಬೇಕು ಎಂದು ಭಾವಿಸಿದೆ. ಏಕೆಂದರೆ ಆ ಆಟೋ ಚಾವಣಿ ಅಲ್ಲಲ್ಲಿ ಹರಿದು ಹೊಗಿತ್ತು!! ದೊಮ್ಮಲೂರಿನಲ್ಲಿಳಿದಾಗ ಅ ಆಟೊ ಮೀಟರ್ ತೋರಿಸುತ್ತಿದ್ದ ದರ ಎಷ್ಟು ಗೊತ್ತೆ? ೩೭.೫೦!!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2006 - 10:22am — keshavamurali

ನಾನು

keshavamurali's picture

ನಾನು ಜಯನಗರದಿಂದ ಎಮ್.ಜಿ.ರಸ್ತೆಗೆ ಬರಲು ಸಾಧಾರಣವಾಗಿ ಮೀಟರ್ಗಳು 43 ರಿಂದ 55 ರೂಪಾಯಿಗಳ ತನಕ ತೋರಿಸುತ್ತವೆ. ನಾನು ಗಮನಿಸಿದಂತೆ 60 ಪ್ರತಿಶತ ಅಟೋಚಾಲಕರ ಮೀಟರುಗಳು ನ್ಯಾಯವಾದ ಬೆಲೆಗಿಂತ ಹೆಚ್ಚು ತೋರಿಸುತ್ತವೆ. 40 ಪ್ರತಿಶತ ಚಾಲಕರು ಪ್ರಾಮಾಣಿಕರಾಗಿರುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಿಗರೇಟು ಮತ್ತು ಆಟೋ ಚಾಲಕ
  • ಮುಂಬಯಿ ಪೋಲೀಸರ ಕಾರ್ಯವೈಖರಿ
  • Accident Zone - ಆಕಸ್ಮಿಕ ವಲಯ
  • " ಶ್ರೀಕೃಷ್ಣ ಬಟಾಟಾವಡ ಅಂಗಡಿ ", ಮುಂಬೈ, ದಾದರ್ ಪಶ್ಚಿಮ !
  • "ಕೀಲಾ ಲೇ ಕೇ ಆವೋ"(ಮೊಳೆ ತೆಗೆದುಕೊಂಡು ಬಾ)
Syndicate content

ಲೇಖಕರು

prashanth kota's picture

ಪರಿಚಯ

ಕಥೆ ಪುಸ್ತಕ ಓದುವುದು, ಚಾರಣ, ಓಡುವುದು, ಲಂಚಕೋರ ಪೋಲೀಸರ ವಿರುದ್ಧ ಕಂಡಕಾರುವುದು... ಹೀಗೆ ಕಾಲಕಳೆವುದು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 15 ಅತಿಥಿಗಳು ಆನ್ಲೈನ್ ಇರುವರು.


ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...

— ಸರ್ ನಾರ್ಮನ್ ವಿಸ್ಡಮ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator