ಅಪರೂಪದ ಗಾದೆಮತುಗಳು
ಈಜು ಮರೀಬೇಡ, ಜೂಜು ಕಲೀಬೇಡ .
ಇಬ್ಬರಲ್ಲಿ ಗುಟ್ಟು , ಮೂವರಲ್ಲಿ ರಟ್ಟು,
ಇರುವೆಗೆ ರೆಕ್ಕೆ ಬರುವದು , ದೀಪದಲ್ಲಿ ಬಿದ್ದು ಸಾಯಲಿಕ್ಕೇ .
ಇರೋದು ಕಳೆಯೋದು ಸುಲಭ , ಇಲ್ಲದ್ದು ಕೂಡಿಸೋದು ಕಷ್ಟ .
ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ?
ಬಿಸಿ ಹಾಲಿಗೆ ಬಾಯ್ಸುಟ್ಟುಕೊಂಡು ಮಜ್ಜಿಗೆಯನ್ನು ಊದಿ ಊದಿ ಕುಡಿದರಂತೆ.
ಬೀಜ ಸಣ್ಣದಾದರೆ ಮರ ಸಣ್ಣದೋ?
ಬೀದಿಯ ಕೂಸು ಬೆಳೆಯಿತು ; ಕೋಣೆಯ ಕೂಸು ಕೊಳೆಯಿತು.
ಬೆಕ್ಕಿಗೆ ಬೆಣ್ಣೆ ಕಂಡಿತು ; ಬಡಿಗೆ ಕಾಣಲಿಲ್ಲ.
ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಮುಗಿದರು.
ಹೆತ್ತವಳಿಗೆ ಗೊತ್ತು ಹೆರಿಗೆ ಬೇನೆ.
ಮಜ್ಜಿಗೆಗೆ ತಕ್ಕ ರಾಮಾಯಣ.

- Login or register to post comments
- 763 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಶ್ರೀಕಾಂತರ ಕನ್ನಡ ಪ್ರೇಮ,
ಶ್ರೀಕಾಂತರೇ,
ನಿಮ್ಮ ವಿಶೇಷವೇ, ನಿಮ್ಮ ಕೆಲಸ ತೋರುವ ಕನ್ನಡ ಪ್ರೇಮ, ಮಾತಿಗಿಂತ ಕಾಯಕ ಹೆಚ್ಚಿರುವ ನಿಮ್ಮ ದಾರಿ ನಮಗೆ ದೀಪವಾಗಲಿ.
ಅಹೋರಾತ್ರ
ಭಾಷಾಶಾಸ್ತ್ರವನು ಬಲ್ಲ ಪಂಡಿತನು ನಾನಲ್ಲ! ಓದನ್ನುಳಿದು ನನಗೇನು ತಿಳದಿಲ್ಲ!
ಅಹೋರಾತ್ರರೆ
ನಿಮ್ಮ ಅಭಿಮಾನದ ಮಾತಿಗೆ ಬಹಳಷ್ಟು ವಂದನೆಗಳು .
ಆದರೆ 'ದಾರಿ , ದೀಪ' ಮಾತು ಬಹಳ ದೊಡ್ಡದಾಯಿತು
ನಾನು ವ್ಯಾಕರಣ ಬಲ್ಲವನಲ್ಲ ;
ಹಳೆಗನ್ನಡ ಶಾಲೆಯಲ್ಲಿ (೯-೧೦ ನೇ ವರ್ಗದಲ್ಲಿ) ಕಲಿಯಲಿಲ್ಲ ; ಅರಿತಿಲ್ಲ ;
ಓದಿ , ಬಳಕೆಯಿಂದ ಬಲ್ಲೆನಷ್ಟೆ .
ವಂದನೆಗಳು.
ಶ್ರೀಕಾಂತ ಮಿಶ್ರಿಕೋಟಿ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"