ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಲೆಂಕನೆಂತಾಗುವೆನು ಕನ್ನಡಕೆ ನಾನು

June 7, 2006 - 1:47pm — shreekant.mishrikoti

( ದಾಸನೆಂತಾಗುವೆನು ಧರೆಯೊಳಗೆ ನಾನು ಎಂಬಂತೆ)

ಲೆಂಕನೆಂತಾಗುವೆನು ಕನ್ನಡಕೆ ನಾನು
ಮಂಕುಮತಿ ನಾನು ಲೇಶ ಯೋಗ್ಯತೆ ಕಾಣೆ

ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ
ಕನ್ನಡದ ಕಲ್ಲೆನಗೆ ದೇವ ಸಾಲಿಗ್ರಾಮ
ಕನ್ನಡದ ನೀರೆನಗೆ ಪಾಪನಾಶಿನಿ ಗಂಗೆ
ಕನ್ನಡದ ನುಡಿಯೆನಗೆ ಗಾಯತ್ರಿ ಮಂತ್ರ

ಹಳೆಗನ್ನಡವ ನಾನು ಕುಳಿತು ಓದಿದ್ದಿಲ್ಲ
ಹಳ್ಳಿಗರೊಡನಾಡಿ ಬೆಳೆದದ್ದೂ ಇಲ್ಲ
ಬಲ್ಲೆ ಸ್ವಲ್ಪ ದಾಸರ ನುಡಿಯ
ಪಂಪ ರನ್ನ ಕುಮಾರವ್ಯಾಸರನು ಅರಿಯೆ

ದೇಶವನು ತಿರುಗಿಲ್ಲ ಕೋಶವನು ಓದಿಲ್ಲ
ಗುಂಪು ಸೇರಿಸಲಾರೆ ರಂಪ ಮಾಡಿಸಲಾರೆ
ಒಂದು ಸಾಧನ ಕಾಣೆ ಕಂನುಡಿಯ ಸೇವೆಯಲಿ
ಜನುಮ ಸಾರ್ಥಕ ಎಂತು ನಾನು ಮಾಳ್ಪೆ?

  • ಕಾವ್ಯ ಮತ್ತು ಕವನ
~.~
  • Login or register to post comments
  • 712 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 7, 2006 - 11:13pm — ahoratra

ಲೆಂಕ ಅಂದರೆ ಏನು?

ahoratra's picture

ಪದ್ಯ ತುಂಬಾ ಸಿಹಿಯಾಗಿದೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2006 - 11:41am — shreekant.mishrikoti

ಲೆಂಕ - ಸೇವಕ , ಭೋಗಾದಿ ಎಂದರೆ .....

shreekant.mishrikoti's picture

ಲೆಂಕ ಅಂದರೆ ಸೇವಕ

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರ ಒಂದು ಪುಸ್ತಕವೂ ಇದೆ - ಕನ್ನಡದ ಲೆಂಕ ಹೆಸರಿನಲ್ಲಿ.
'ದಾಸ' ಶಬ್ದವನ್ನೇ ಇಟ್ಟುಕೊಳ್ಳಬಹುದಿತ್ತು . ಈ ಶಬ್ದದ ಅರಿವು ಆಸಕ್ತರಿಗಾಗಲಿ ಎಂದು ಲೆಂಕ ಉಪಯೋಗಿಸಿದ್ದೇನೆ.

ಎಲ್ಲ ಕನ್ನಡಿಗರ ಮನೆಗಳಲ್ಲಿ ಇಂಗ್ಲೀಶ್ ಡಿಕ್ಷನರಿ ತಪ್ಪದೇ ಇರುತ್ತದೆ. ಅದೇ ಕನ್ನಡದ ಶಬ್ದಕೋಶ ?

ಮತ್ತೆ ಭೋಗಾದಿ ಎಂದರೇನು ಎಂದಾರೋ ಇಲ್ಲಿ ಕೇಳಿದ್ದರು . ಮಹೇಶರು ಉತ್ತರ ಕೊಟ್ಟರೋ ಇಲ್ಲವೋ . ಕನ್ನಡ ರತ್ನಕೋಶದಲ್ಲಿ ಸಿಕ್ಕಿತು . ಭೋಗಾದಿ ಎಂದರೆ - ಅಡವು , ಗಿರವಿ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2006 - 7:51pm — ಮಹೇಶ ಭೋಗಾದಿ

ಭೋಗಾದಿ = ಅಡವು :))

ಮಹೇಶ ಭೋಗಾದಿ's picture

ಸವಿಯೊದಗು,

ನನಗೆ ಗೊತ್ತಿರಲಿಲ್ಲ. ಹಾಗದರೆ ನಮ್ಮ ಊರನ್ನು ಯಾರು ಯಾರಿಗೆ ಅಡವಿಟ್ಟಿದ್ದರೋ ತಿಳಿಯಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2006 - 9:26am — Sunil Jayaprakash

ಭೋಗಾದಿ v/s ಬೋಗಾದಿ

Sunil Jayaprakash's picture

ಇತ್ತೀಚೆಗೆ ಸೂರ್ಯವಂಶ ಸಿನಿಮಾ ನೋಡುತ್ತಿದ್ದಾಗೆ, ತಾತ ಸತ್ಯಮೂರ್ತಿ(ಸೂರ್ಯವಂಶದ ಹಿರಿಯ) ತನ್ನ ಮೊಮ್ಮಗನನ್ನು ಆನೆಯ ಮೇಲೆ ಕೂಡಿಸುವಾಗ ಕಂಡದ್ದು.
ಸೂರ್ಯವಂಶದ ಮೊಮ್ಮಗ ಓದುತ್ತಿದ್ದ ಶಾಲೆಯ ಹೆಸರ ಪಕ್ಕ, ಬೋಗಾದಿ ಎಂದಿತ್ತು.

".....ಶಾಲೆ, ಬೋಗಾದಿ"

ಹಾಗಾಗಿ ನನ್ನ ಸಂದೇಹ, ಆ ಊರಿನ ಹೆಸರು ಭೋಗಾದಿಯೋ, ಬೋಗಾದಿಯೋ ತಿಳಿಯುವ ಕುತೂಹಲ ಇನ್ನು ತಣಿದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2006 - 9:39am — ಮಹೇಶ ಭೋಗಾದಿ

ಅದು ಭೋಗಾದಿಯೆ

ಮಹೇಶ ಭೋಗಾದಿ's picture

ಅದು ಭೋಗಾದಿಯೆ ಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2006 - 2:43am — ಮಹೇಶ ಭೋಗಾದಿ

ಜನುಮ ಸಾರ್ಥಕ

ಮಹೇಶ ಭೋಗಾದಿ's picture

ಇದು ಮಿಶ್ರಿಕೋಟಿಗಳಿಗೆ.

ಕೊರಗದಿರಿ ಕೋಟಿಗಳೆ, ಮುರುಗದಿರಿ ಮಿಶ್ರಿಗಳೆ
ನೀವರಿಯರಿ ನಿಮ್ಮ ದೊಡ್ಡಗುಣಗಣಗಳನು
ಹಣ್ಣು-ನೆರಳನು ಕೊಡುವ ಮರಕೇನು,
ಗೊತ್ತೆ ತನ್ನ ನೆರವುವೆನಿತು ಸಾಧುವೆಂದು?

ಗಾದೆಹೂಗಳ ಪೋಣಿಸಿ,
ಕತೆಗಳನೆ ನೈವೇದಿಸಿ,
ಪದ್ಯದಾರತಿ ಬೆಳಗಿ,
ಕನ್ನಡಮ್ಮನ ನಿಮ್ಮ ನಿತ್ಯ ಪೂಜೆ,

ಕನ್ನಡವನಾಡಿ, ಕನ್ನಡವನೇ ಹಾಡಿ
ಕನ್ನಡದನ್ನವ ತಿಂದು, ಕಸ್ತೂರಿಯನುಸಿರಾಡಿ,
ಕನ್ನಡಮ್ಮನ ಹೊಗಳಿ, ನೆನೆನೆನೆದು ಕುಣಿದಾಡಿ
ಬದುಕುವುದಕಿಂತ ಬೇಕೆ ಸಾರ್ಥಕ ಜನುಮ?

ನನಗೆ ಪದ್ಯಬರೆಯಲು ಬರುವಿದಿಷ್ಟೆ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2006 - 10:23am — Sunil Jayaprakash

ಉ : ಜನುಮ ಸಾರ್ಥಕ

Sunil Jayaprakash's picture

ಮಹೇಶರವರೇ,

ನೀವೇನು ಆಶುಕವಿಗಳೇ, ಶ್ರೀಕಾಂತರ ಮೇಲೆ ಪದ್ಯವನ್ನೇ ಕಟ್ಟಿದ್ದೀರಲ್ಲಾ..ಇರಲಿ ವಿಷಯಕ್ಕೆ ಬರೋಣ,
ಇಷ್ಟು ಚೆನ್ನಾಗಿ ಕನ್ನಡ/ಸಂಸ್ಕೃತ ಪದಗಳ ಮೇಲೆ ಹಿಡಿತ ಹಾಗು ಆಸಕ್ತಿಯಿರುವ ನೀವೇಕೆ, ಬಿಡುವಾದಾಗ ಕವನಗಳನ್ನು ರಚಿಸಿ ನಮಗೆ ಏಕೆ ಉಣಬಡಿಸಬಾರದು. ಒಮ್ಮೆ ಪ್ರಯತ್ನಿಸಿ ನೋಡಿ. ನಮಗಂತೂ ಬಹಳ ಸಂತೋಷವಾಗುವುದು.

ನಿಮ್ಮವ,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2006 - 10:31am — ಮಹೇಶ ಭೋಗಾದಿ

ಆಶುಕವಿ

ಮಹೇಶ ಭೋಗಾದಿ's picture

ಬರೆವುದಕಿಂತ ನಲಿವೆನಗೆ
ಅರಿತು ಕಲಿಯುವುದರಲಿ,
ಅಡುಗೆ ಶ್ರಮಕಿಂತ ಹುರಪೆನಗೆ
ಕುಳಿತು ತಿನ್ನುವುದರಲಿ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 8, 2006 - 9:10pm — vnag

ಲೆ೦ಕ...

vnag's picture

ತಮ್ಮ ಕನ್ನಡಾಭಿಮಾನ ಬಹಳ ದೊಡ್ಡದು. ತಮ್ಮ೦ತಹವರ ಸ೦ಖ್ಯೆ ವೃಧ್ಧಿಸಲಿ. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಜ್-ತಾಜ್
  • ಕನ್ನಡದ ನಾರೀಮಣಿಗಳೆಲ್ಲಿ??
  • ಹೊತ್ತಿತೊ ಹೊತ್ತಿತು ಕನ್ನಡದ ದೀಪ
  • ನಾನು ನಾನಾಗಬೇಕು
  • "ನಾನು-ನೀನು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 49 ಅತಿಥಿಗಳು ಆನ್ಲೈನ್ ಇರುವರು.


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator