ಈಗಿನಂತೆ 3 ಸದಸ್ಯರು ಮತ್ತು 81 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಚಿಂತನ ಇಲ್ಲದ ನನ್ನ ’ಚಿಂತನ’!
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
02
Jun
2010
ಪುಟ

  ಎಂದಿನಂತೆ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ನನಗೊಂದು ಅಂಚೆ ಲಕೋಟೆ ಬಂತು. ಎಂದಿನಂತೆ ಅದು ’ಚಿಂತನ’ ಕಾರ್ಯಕ್ರಮದ ಧ್ವನಿಗ್ರಹಣಕ್ಕೆ ಆಹ್ವಾನ ಎಂಬುದನ್ನರಿತ ನಾನು...

ಪ್ರತಿಕ್ರಿಯೆಗಳು: 14
ಹಿಟ್ಸ್ : 993
ತಾವರೆಯ ಗಿಡ ಹುಟ್ಟಿ......
shreeshum's picture
ಆರ್.ಶರ್ಮಾ.ತಲವಾಟ
06
Aug
2010
ಬ್ಲಾಗ್ ಬರಹ
...
ಪ್ರತಿಕ್ರಿಯೆಗಳು: 9
ಹಿಟ್ಸ್ : 797
ಮೆಡಿಕಲ್ ಕಾಲೇಜುಗಳಲ್ಲಿ ಇವನ್ನು ಕಲಿಯಲಿಕ್ಕಾಗದು!
addoor's picture
ಅಡ್ಡೂರು ಕೃಷ್ಣ ರಾವ್
14
Nov
2011
ಲೇಖನ

"ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ್ದು ೯ ಲಕ್ಷ ವರುಷಗಳ ಮುಂಚೆ. ಅಂದಿನಿಂದ ಇಂದಿನ ವರೆಗೆ ಸುಮಾರು ೫೦,೦೦೦ ತಲೆಮಾರುಗಳು ಆಗಿ ಹೋಗಿವೆ. ಇಷ್ಟು ಶತಮಾನಗಳಲ್ಲಿ ಮನುಷ್ಯನನ್ನು...

ಪ್ರತಿಕ್ರಿಯೆಗಳು: 9
ಹಿಟ್ಸ್ : 410
ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...
Chamaraj's picture
ಚಾಮರಾಜ ಸವಡಿ
30
Dec
2009
ಪುಟ

...

ಪ್ರತಿಕ್ರಿಯೆಗಳು: 21
ಹಿಟ್ಸ್ : 2,451
"ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ
guruve's picture
Guruprasad D N
19
Jun
2011
ಲೇಖನ

 ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಲೋಕಾರ್ಪಣೆ ಮತ್ತು ಪೆನ್ ಸರ್ಕಲ್ ಗೌರವಾರ್ಪಣೆ

...

ಪ್ರತಿಕ್ರಿಯೆಗಳು: 1
ಹಿಟ್ಸ್ : 356
(ವರ್ಷದ) ಕೊನೆಯ ಕೊಸರು
hamsanandi's picture
ಹಂಸಾನಂದಿ
31
Dec
2007
ಬ್ಲಾಗ್ ಬರಹ

ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,445
ಗಣಪತಿ ವಿಸರ್ಜನೆ ನಾಳೆ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
05
Sep
2006
ಪುಟ
"ಗಣಪತಿ ಬಂದ, ಕಾಯ್ಕಡುಬು ತಿಂದ", ಎಂದು ಸಡಗರಿಸುವ ಹೊತ್ತಿಗೆ, ಆಗಲೇ ವಿಘ್ನೇಶ್ವರನಿಗೆ ವಿದಾಯ ಸಲ್ಲಿಸುವ ಸಮಯ ಹತ್ತಿರವಾಗುತ್ತಿದೆ ! ನಾವು ಈಗ ಹೇಳಬೇಕಾದದ್ದು ಮುಂದಿನ ವರ್ಷ ಬೇಗ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,356
ಹೆಣ್ಣಿಲ್ಲದ ಪರಮಾತ್ಮನ ಪಾಡು ಯಾವನಿಗೊತ್ತು?
uniquesupri's picture
ಸುಪ್ರೀತ್.ಕೆ.ಎಸ್
16
Nov
2011
ಲೇಖನ

ಪರಮಾತ್ಮ ನೋಡಿದ ತರುವಾಯ ಸಿನೆಮಾ ಹೇಗಿತ್ತು ಎಂದರೆ ಸಿನೆಮಾದ ಪ್ರಭಾವದಲ್ಲಿಯೇ "ಯಾವನಿಗೊತ್ತು..." ಎಂದು ಉಡಾಫೆಯಲ್ಲಿ ಹೇಳಿಬಿಡಬಹುದಿತ್ತು. ಇಲ್ಲವೇ ಭಟ್ಟರು ತಮ್ಮ ಸಿನೆಮಾದ...

ಪ್ರತಿಕ್ರಿಯೆಗಳು: 9
ಹಿಟ್ಸ್ : 591
'ಬೇಸಿಗೆ ತ್ರಿಕೋನ’
hamsanandi's picture
ಹಂಸಾನಂದಿ
14
Aug
2010
ಪುಟ

ಚಿಕ್ಕವನಾಗಿದ್ದಾಗ ಈ ’ಬೇಸಿಗೆ ತ್ರಿಕೋನ’ (Summer Triangle) ಅನ್ನೋ ಹೆಸರು ನೋಡಿದಾಗ, ಅದರ ಬಗ್ಗೆ ಓದುತ್ತಿದ್ದಾಗ ಯಾವಾಗಲೂ ಒಂದು ವಿಚಿತ್ರ ಅನ್ನಿಸ್ತಿತ್ತು. ಮೂರು...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,079
ಉಪವಾಸ
ಗಣೇಶ's picture
ಗಣೇಶ
22
Feb
2010
ಬ್ಲಾಗ್ ಬರಹ

ದೇವರ ಧ್ಯಾನದಲ್ಲೇ ಮುಳುಗಿದವನಿಗೆ ಹಸಿವಿನ ಯೋಚನೆಯೇ ಇರುವುದಿಲ್ಲ. ಈ ಉಪವಾಸ ನನ್ನಿಂದ ಸಾಧ್ಯವೇ ಇಲ್ಲ.

ಯಾವಾಗಲೂ "ಅಮ್ಮಾ..ಅಮ್ಮಾ..." ಎಂದು ರಚ್ಚೆ ಮಾಡುವ ಮಕ್ಕಳಿಗೆ...

ಪ್ರತಿಕ್ರಿಯೆಗಳು: 9
ಹಿಟ್ಸ್ : 1,269

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸಂಪದ *ಏನಲ್ಲ* - What Sampada is *not*

ಸಂಪದ *ಏನಲ್ಲ* - What Sampada is *not*

ಶೇಖರ್ ಪೂರ್ಣರವರು ತಮ್ಮ ಸಂಪಾದಕೀಯದಲ್ಲಿ ಸಂಪದವನ್ನು blogspotಗೆ ಹೋಲಿಸಿ 'ಸಂಪದದ ದೌರ್ಬಲ್ಯಗಳ' ಬಗ್ಗೆ ಬರೆದಿರುವುದು ನನಗೆ ಅಚ್ಚರಿ ತಂದಿತು. ಕೆಲವು ವಿಚಾರಗಳು: ೧) ಸಂಪದವನ್ನು blogspotಗೆ ಹೋಲಿಸುವುದು ತೀರ ತಮಾಷೆಯ ಸಂಗತಿ, ಅಜ-ಗಜ ಹೋಲಿಕೆಯಂತೆ! ನೂರಾರು Data centerಗಳನ್ನಿಟ್ಟುಕೊಂಡು ನಡೆಸಲಾಗುವ blogspot ಎಲ್ಲಿ, ಇನ್ನೂ shared hostingನ ಕೆಲವೇ ಕೆಲವು MB ಜಾಗದಲ್ಲಿ ಕೊಳೆಯುತ್ತಿರುವ ಸಂಪದ ಎಲ್ಲಿ! ೨) ಸಂಪದದಲ್ಲಿ Individualistic ಬ್ಲಾಗುಗಳಿಗೆ ಹೆಚ್ಚು ಒತ್ತು ನೀಡದೇ ಇರುವುದಕ್ಕೆ, ಭಿನ್ನವಾದ ಟೆಂಪ್ಲೇಟುಗಳನ್ನು ಹಾಕುವ ಸೌಲಭ್ಯ ಇಲ್ಲದೇ ಇರುವುದಕ್ಕೆ ಕಾರಣಗಳಿವೆ - ನಮಗೆ ಸದ್ಯದ ಪರಿಸ್ಥಿತಿಯಲ್ಲಿ blogspotನಷ್ಟು ಬ್ಲಾಗುಗಳನ್ನು ನೀಡುವುದು ಸಾಧ್ಯವೇ ಇಲ್ಲ. ಅದನ್ನು ಸಾಧ್ಯವಾಗಿಸಬೇಕೆಂದಲ್ಲಿ ನಮ್ಮದೇ ಆದ ಒಂದಷ್ಟು infrastructure ಆದರೂ ಇರಬೇಕು! ಕನಿಷ್ಠ ಪಕ್ಷ ಒಬ್ಬರು ಇಬ್ಬರಾದರೂ 'full-time' ಇದರ ಮೇಲೆ ಕೆಲಸ ನಿರ್ವಹಿಸುವಂತವರು ಇರಬೇಕು. ೩) ಕನ್ನಡದಲ್ಲಿ blogspotನಂತಹ ಒಂದು ಪ್ರಯತ್ನ 'ಸಾಧ್ಯವಾಗದು' ಎಂಬುದಿಲ್ಲ. ಆದರೆ ಸಂಪದ ಖಂಡಿತವಾಗಿ ಅಂತಹ ಒಂದು ಪ್ರಯತ್ನವಲ್ಲ! ಸಂಪದ ಪ್ರಾರಂಭಿಸಿದ್ದಾಗ ಹೆಚ್ಚು ಕನ್ನಡ ಕಂಟೆಂಟ್ ಅಂತರ್ಜಾಲದಲ್ಲಿರಲಿಲ್ಲ. ಕನ್ನಡ ವಿಕಿಪೀಡಿಯ ಬಿಟ್ಟರೆ ಈಗಲೂ ಯೂನಿಕೋಡ್ ನಲ್ಲಿ ಹೆಚ್ಚು ಕಂಟೆಂಟ್ ಇರುವುದು ಸಂಪದದಲ್ಲೇ. ಸಂಪದ ಪ್ರಾರಂಭವಾದ ನಂತರ ಕನ್ನಡದಲ್ಲಿ ಯೂನಿಕೋಡ್ ಬಳಸಿ ಮಾಹಿತಿ ಪೇರಿಸುವ ಹಲವು ಬ್ಲಾಗುಗಳು ಪ್ರಾರಂಭವಾದವು. ಈ ರೀತಿಯ ಬಳಕೆ ಹೆಚ್ಚಬೇಕೆಂದೇ ಪ್ರಾರಂಭವಾದದ್ದು ಸಂಪದ. ಸಂಪದ ಪ್ರಾರಂಭವಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಇದು ಬಡಿದೆಬ್ಬಿಸಿದ ಚಟುವಟಿಕೆ ಸಂಪದದ ಸದಸ್ಯರೆಲ್ಲರಿಗೂ ಹೆಮ್ಮೆ ಮೂಡಿಸುವಂತ ವಿಷಯವೇ. ತಾಂತ್ರಿಕತೆಯ ಬಗ್ಗೆ ನಾವು ನೋಡಿಕೊಳ್ಳುವೆವು... ಸಂಪದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ನೀಡಿ... ನಿಮ್ಮ ಸಹಾಯ, ಪ್ರೋತ್ಸಾಹದಿಂದ ಖಂಡಿತವಾಗಿ ಸಂಪದವನ್ನು ಇನ್ನಷ್ಟು ಚೆಂದಗೊಳಿಸಬಹುದು, ಬೃಹತ್ ಸಮುದಾಯವನ್ನಾಗಿ ಮಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಡೆಡಿಕೇಟೆಡ್ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸುವವರೆಗೂ ಸಂಪದದಲ್ಲಿ ಏನೊಂದೂ ಹೊಸ ಫೀಚರ್ ಸೇರಿಸುವುದು ಸಾಧ್ಯವಿಲ್ಲ - ತಾನಿರುವ shared serverನಲ್ಲಿ ಈಗಾಗಲೇ ಸಾಕಷ್ಟು ಸಂಪನ್ಮೂಲಗಳನ್ನು ಸಂಪದವೇ ಬಳಸಿಕೊಂಡು ಅದರೊಂದಿಗುರುವ ಇತರ ತಾಣಗಳಿಗೂ ತೊಂದರೆಯಾಗುತ್ತಿದೆ. ವಿ. ಸೂ: ಈ‌ ಬಾರಿ ಡೆಡಿಕೇಟೆಡ್ ಸರ್ವರ್ ಕೊಳ್ಳಲು ನಿಮ್ಮೆಲ್ಲರ ಸಹಾಯ ಬೇಕೇಬೇಕಾಗಿದೆ. ಎಲ್ಲರೂ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಕೋರುತ್ತೇನೆ. ಗಮನಿಸಿ: ೧) ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ಸಂಪದದಲ್ಲಿ ಒಂದೊಂದು e-mail id ನೀಡಲಾಗುವುದು. ಉದಾ: yourname@sampada.net. ೨) $20 ಕ್ಕೂ ಹೆಚ್ಚು ದೇಣಿಗೆ ನೀಡುವ ಸದಸ್ಯರಿಗೆ ತಮ್ಮದೇ ಆದ ಹೊಸ ಬ್ಲಾಗು (ಅನಂತಮೂರ್ತಿಯವರ ಹಾಗೂ ಇಸ್ಮಾಯಿಲ್ ರವರ ಬ್ಲಾಗಿರುವಂತೆ) ನೀಡಲಾಾಗುವುದು* - ತಮಗೆ ಬೇಕಾದ ಥೀಮ್ ಬಳಸುವಂತಹ, ಸಂಪದದ ಎಲ್ಲ ಓದುಗರು ಸಂಪದದ ಐಡಿ ಬಳಸಿಯೇ ಪ್ರತಿಕ್ರಿಯೆ ಸೇರಿಸಲು ಸಾಧ್ಯವಾಗುವಂತಹ ಸವಲತ್ತು ಆ ಬ್ಲಾಗಿನಲ್ಲಿ ನಿಮಗೆ ಲಭ್ಯವಾಗುವುದು. * - ಪ್ರತ್ಯೇಕ ಬ್ಲಾಗು ಬೇಕೆಂದು ದೇಣಿಗೆ ಕಳುಹಿಸುವ ಸಮಯದಲ್ಲಿ ತಿಳಿಸಿದವರಿಗೆ ಮಾತ್ರ. ಮತ್ತೊಂದು ವಿಷಯ: ೪) ಸಂಪದದಲ್ಲಿ ಮಾಡಬೇಕಿರುವ ಸಾಕಷ್ಟು ಬದಲಾವಣೆಗಳು ಇನ್ನೂ ಪೂರ್ಣಗೊಳಿಸಲಾಗಿಲ್ಲ - ನಾನೊಬ್ಬನೇ ಇದರ ತಾಂತ್ರಿಕ ಕೆಲಸಗಳನ್ನು ನನ್ನ *ಬಿಡುವಿನ ಸಮಯದಲ್ಲಿ* ನಿರ್ವಹಿಸುತ್ತಿರುವುದರಿಂದ ಹೀಗೆ. ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡು ನಿರ್ವಹಿಸಲು ಆಸಕ್ತಿಯಿದ್ದವರು ಮುಂದೆ ಬಂದರೆ "ಏನು ಮಾಡಬೇಕಿರುವುದು" ಎಂಬುದರ ಜೊತೆ "ಹೇಗೆ ಮಾಡಬಹುದು" ಎಂಬುದನ್ನೂ ತಿಳಿಸಬಲ್ಲೆ. - ಹೆಚ್ ಪಿ
No votes yet
2261 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
tvsrinivas41's picture
07
Jun
2006
3:31
ಒಳ್ಳೆಯ ಕೆಲಸ ಮಾಡುತ್ತಿರುವಿರಿ. ಆಶ್ರಯ ಸಂಪದದ ಭಾಗವಾಗಲಿ. ತಾಂತ್ರಿಕವಾಗಿ ನಿಮಗೆ ಬಹಳ ಕೆಲಸವಿದೆಯೆಂದು ಗೊತ್ತಾಯಿತು. ನನಗೆ ತಾಂತ್ರಿಕವಾಗಿ ಏನೇನೂ ತಿಳಿಯದು. ನನ್ನ ಕೈಲಾದದ್ದನ್ನು ಮಾಡಿಸಿಕೊಳ್ಳಬಹುದು. ಅದಕ್ಕೆ ನಾನು ನಿಮಗೆ ಪೂರ್ಣ ಹಸ್ತವನ್ನು ಕೊಡಲು ತಯಾರಿರುವೆ. ಇಲ್ಲಿಯವರೆವಿಗೆ ಸಂಪದ ಕನ್ನಡದ ಮೊದಲ ಅಂತರ್ಜಾಲ ತಾಣವೆಂಬುದನ್ನು ನಿರೂಪಿಸಿದ್ದಾಯಿತು. ಇನ್ನು ಮುಂದೆ ಕನ್ನಡದ ಬ್ಲಾಗುಗಳ ತಾಣವೂ ಎಂಬುದನ್ನೂ ನಿರೂಪಿಸೋಣ. ನೀವು ಹಿಡಿದ ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ಆಶಿಸುವೆ. ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
pavanaja's picture
07
Jun
2006
8:46
> ಇಲ್ಲಿಯವರೆವಿಗೆ ಸಂಪದ ಕನ್ನಡದ ಮೊದಲ ಅಂತರ್ಜಾಲ ತಾಣವೆಂಬುದನ್ನು ನಿರೂಪಿಸಿದ್ದಾಯಿತು ತ ವಿ ಶ್ರೀನಿವಾಸರೇ, ನೀವು ಅವಸರದಲ್ಲಿ ಸ್ವಲ್ಪ ಎಡವಿದ್ದೀರಾ. ಕನ್ನಡದ ಮೊದಲ ಅಂತರಜಾಲ ತಾಣ "ವಿಶ್ವ ಕನ್ನಡ". ಅದನ್ನು 1996 ಡಿಸೆಂಬರ್‌ನಲ್ಲಿ ಪ್ರಾರಂಭಿಸಿದೆ. ಈ ಬಗ್ಗೆ ಒಂದು ಲೇಖನ ಇಲ್ಲಿದೆ. ವಿಶ್ವ ಕನ್ನಡಕ್ಕೆ ಆಗ ತನ್ನದೇ ಸ್ವಂತ ಡೊಮೈನ್ ಇರಲಿಲ್ಲ. 1999ರಲ್ಲಿ ಸ್ವಂತ ಡೊಮೈನ್ ಕೊಂಡುಕೊಂಡೆ. -ಪವನಜ ----------- Vishva Kannada Think globally, Act locally
ವಕ್ರ's picture
07
Jun
2006
10:59
ಸ್ವಾಮಿ ಪವನಜರೇ, ತ ವಿ ಶ್ರೀನಿವಾಸರು ಹೇಳಿದ್ದು "ಸಂಪದ ಕನ್ನಡದ ಮೊದಲ ಅಂತರ್ಜಾಲ ತಾಣವೆಂಬುದನ್ನು ನಿರೂಪಿಸಿದ್ದಾಯಿತು" ಹೀಗೆ ಅರ್ಥೈಸಿ : ಬರೇ ಒಂದು ವರ್ಷದ ಹಿಂದೆ ಹುಟ್ಟು ಹಾಕಿದ ಸಂಪದವು ಈಗ ಅಂತರಜಾಲದಲ್ಲಿ ಕನ್ನಡದಲ್ಲಿರುವ ತಾಣಗಳಲ್ಲಿ ಮೊದಲನೆಯದಾಗಿ ಮಾರ್ಪಟ್ಟಿದೆ. ವಿಶ್ವಕನ್ನಡವು ಕನ್ನಡದಲ್ಲಿನ ಮೊದಲ ತಾಣವಿರಬಹುದು. ಆದರೆ ಅದು ಅಷ್ಟೆ. ಯಾರಾದ್ರು ಅಂತಜಾಲದಲ್ಲಿ ಕನ್ನಡದಲ್ಲಿ ವ್ಯವಹರಿಸುವುವರನ್ನು ಕೇಳಿ. ಅವರಿಗೆ ವಿಶ್ವ ಕನ್ನಡಕ್ಕಿಂತ ಸಂಪದ ಬಗ್ಗೆ ಗೊತ್ತಿರುವ ಸಾಧ್ಯತೆಗಳು ಹೆಚ್ಚು.
pavanaja's picture
08
Jun
2006
8:46
ರೀ ವಕ್ರರೇ, ನಾನು ವಿಶ್ವಕನ್ನಡ ಶ್ರೇಷ್ಠ ಎಂದು ಪ್ರತಿಪಾದಿಸಲು ಹೊರಟಿಲ್ಲ. ತ ವಿ ಶ್ರೀನಿವಾಸರು ನೀಡಿದ ಮಾಹಿತಿ ತಪ್ಪು ಎಂಬುದನ್ನು ತೋರಿಸಿದೆ, ಅಷ್ಟೇ. ಈಗ ಕನ್ನಡದಲ್ಲಿ ಮೊದಲನೆಯ ಸ್ಥಾನದಲ್ಲಿರುವ ತಾಣ ಯಾವುದು ಎಂಬುದರ ಬಗ್ಗೆಯೂ ನಾನು ಚರ್ಚಿಸುತ್ತಿಲ್ಲ. ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ. ವಿಶ್ವಕನ್ನಡವೇ ಅಂತರಜಾಲದಲ್ಲಿ, ಜನಪ್ರಿಯತೆಯಲ್ಲಿ, ಪ್ರಥಮ ಸ್ಥಾನದಲ್ಲಿರುವ ತಾಣವಾಗಬೇಕು ಎಂದು ನಾನೇನೂ ಸ್ಪರ್ಧೆಗೆ ನಿಂತಿಲ್ಲ. ಜನಪ್ರಿಯವಾದುದೆಲ್ಲ ಶ್ರೇಷ್ಠವಾಗಬೇಕಾಗಿಯೂ ಇಲ್ಲ. ಕನ್ನದಲ್ಲಿ ಹೆಚ್ಚು ಹೆಚ್ಚು ಜಾಲತಾಣಗಳು ನಿರ್ಮಾಣವಾದರೆ ನನಗೆ ಸಂತಸವೇ. ಇನ್ನೊಂದು ಕನ್ನದ ತಾಣವನ್ನು ನಾನೆಂದೂ ನನಗೆ ಸ್ಪರ್ಧಿ ಎಂದು ಭಾವಿಸಿಯೇ ಇಲ್ಲ. ಇದಕ್ಕೆ ಉದಾಹರಣೆಗಳು:- ನನ್ನ ತಾಣದಲ್ಲಿ ಇತರೆ ಕನ್ನಡ ತಾಣಗಳಿಗೆ ನಾನು ಸಂಪರ್ಕ ನೀಡಿದ್ದೇನೆ. ಸಂಪದದ ಬಗೆಗೆ ಸುಧಾ ಪತ್ರಿಕೆಗೆ ಲೇಖನ ಬರೆದು ಪ್ರಚಾರ ಮಾಡಿದ್ದೇನೆ. ಈಗಲೂ ನನ್ನ ಬ್ಲಾಗ್‌ನಲ್ಲಿ ಸಂಪದ ಬಗ್ಗೆ ಕೊಂಡಿ ನೀಡಿದ್ದೇನೆ. ಸಂಪದದಲ್ಲೇ ನನ್ನ ಹಲವು ಲೇಖನ, ಬ್ಲಾಗ್‌, ಟಿಪ್ಪಣಿ -ಇತ್ಯಾದಿಗಳಿವೆ. ನನ್ನದೇ ಸ್ವಂತ ತಾಣವಿದ್ದುಕೊಂಡು ಇನ್ನೊಂದು ತಾಣದಲ್ಲಿ ನಾನು ಯಾಕೆ ಬರೆಯಬೇಕು? ಅದಕ್ಕೆ ನಾನು ಯಾಕೆ ಪ್ರಚಾರ ಕೊಡಬೇಕು? ಇವುಗಳು ಏನನ್ನು ತೋರಿಸುತ್ತವೆ? ನನ್ನ ಬುದ್ಧಿ ನೇರವಾಗಿಯೇ ಇದೆ, ವಕ್ರವಾಗಿಲ್ಲ ಎಂದು ತಾನೆ? ಸಿಗೋಣ, ಪವನಜ ----------- Vishva Kannada Think globally, Act locally
tvsrinivas41's picture
08
Jun
2006
9:15
ನಮಸ್ಕಾರ ಸಾರ್ ವಿಶ್ವಕನ್ನಡದ ಕಡೆ ನನ್ನ ಮನಸ್ಸು ಹೊರಳಿರಲೇ ಇಲ್ಲ. ಇದು ನನ್ನಿಂದಾದ ತಪ್ಪು. ಇದಕ್ಕಾಗಿ ಕ್ಷಮೆ ಕೋರುವೆ. ಕನ್ನಡದ ಬಗ್ಗೆ ನೀವು ಕೆಲಸದ ಬಗ್ಗೆ ಯಾರೂ ಚಕಾರವೆತ್ತುವಂತಿಲ್ಲ. ಸಂಪದದ ಮೊದಲಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಪ್ರಚಾರ ಕೊಟ್ಟವರೇ ನೀವಲ್ಲವೇ? ನನಗೆ ಚೆನ್ನಾಗಿ ಗೊತ್ತಿದೆ, ನೀವೆಂದೂ ಹೆಸರಿಗಾಗಿ ಕೆಲಸ ಮಾಡುವುದಿಲ್ಲವೆಂದು. ವಂದನೆಗಳೊಂದಿಗೆ --- ತವಿಶ್ರೀನಿವಾಸ http://asraya.net
venkatesh's picture
08
Jun
2006
10:41
ಪವನಜರವರಿಗೆ, ನಮಸ್ಕಾರ. ನಾನು ಒಮ್ಮೆ 'ವಿದೇಶದ ಕನ್ನಡ ಸೈಟ್ ಗಳ ಪುಟಗಳನ್ನು 'ತಿರುಗಿಸಿ ನೋಡಿದಾಗ ' ಇದು ಶ್ರೀ ಪವನಜ ಅವರ ಬೆವರಿನ ಫಲ' ಎಂದು ಬರೆದ ಶಿರೋನಾಮ ನೋಡಿದ್ದೆ ! ಕನ್ನಡ ಹೇಳಿಕೊಡುವ ಸಂದರ್ಭದಲ್ಲಿ ಎಂದು ನೆನಪು !! ಮತ್ತೊಮ್ಮೆ ನಿಮಗೆ ಧನ್ಯವಾದ.
ರವಿ's picture
08
Jun
2006
9:45
ನಿಮ್ಮದು ಮೊದಲನೆ ಅಂತರ್ಜಾಲ ತಾಣ... ಒಪ್ಪುತ್ತೇವೆ. ಸಂಪದ.ನೆಟ್ ಕನ್ನಡದ ಮೊದಲನೆ ಪೋರ್ಟಲ್, ನೀವು “indiainfo”ವಿನ ‘Thatskannada’ ಅತ್ತ ಕೈ ತೋರಿಸಬಹುದು, ಆದರೆ ಅಂತರ್ಜಾಲದಲ್ಲಿ ಮೊದಲ ಸಂಪೂರ್ಣ ಕನ್ನಡ ಪೋರ್ಟಲ್ ಸಂಪದವೇ!
ravee...'s picture
08
Jun
2006
7:55


 ಸಂಪದದ ಪ್ರೀತಿಯ ಗೆಳೆಯರೆ,

     ಶೇಖರಪೂರ್ಣರಂತಹ ಇಂಟರ್ನೆಟ್ ಲೋಕದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಷ್ಟ ಅರಿವಿರುವ ವ್ಯಕ್ತಿ...ಕನ್ನಡದ ಹುಡುಗರ ಪ್ರಯತ್ನಗಳನ್ನು ಬ್ಲಾಗ್‍ಸ್ಪಾಟ್ ಜೊತೆ ಹೋಲಿಸಿ ಬರೆಯುತ್ತಾರೆಂದರೆ, ಅದು ನಿಮ್ಮನ್ನು ಅಷ್ಟು ಎತ್ತರಕ್ಕೇರಿಸಿದಂತೆ ಎಂಬುದನ್ನು ಮರೆಯದಿರಿ...ಇಷ್ಟಕ್ಕೂ ಅವರು ತಮ್ಮ ಸಂಪಾದಕೀಯದಲ್ಲಿ ಸಂಪದ ಹುಡುಗರನ್ನು ಹೊಗಳಿದ್ದಾರೆಯೇ ವಿನಾ ತೆಗಳಿರುವುದಾಗಲಿ, ಅಥವಾ ಸಂಪದದ ದೌರ್ಬಲ್ಯಗಳನ್ನು ಪಟ್ಟಿ ಮಾಡುವುದಾಗಲಿ ಮಾಡಿಲ್ಲ..ಮಾಡಲಾರರು.  ಏಕೆಂದರೆ ಅವರೂ ಸಾಕಷ್ಟು ಸಂಕಷ್ಟಗಳ ನಡುವೆಯೇ ಕನ್ನಡಸಾಹಿತ್ಯ.ಕಾಮ್ ನ ನಿರ್ವಹಣೆ ಮಾಡುತ್ತಿದ್ದಾರೆ    . ಕನ್ನಡದಲ್ಲಿ ವೆಬ್ ಸೈಟ್ ನೆಡೆಸುವ ಕಷ್ಟ ಅವರಿಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತು.. ಸಂಪದದಲ್ಲೂ ದೌರ್ಬಲ್ಯಗಳಿವೆ ಎಂಬುದನ್ನು ನೀವು ಅಷ್ಟೊಂದು ಹೈಲೈಟ್ ಮಾಡಿ ಬರೆಯಬೇಕಾಗಿರಲಿಲ್ಲವೇನಿಸುತ್ತದೆ....
  ನಮ್ಮ ಇಚ್ಚೆ ಬಂದಂತೆ ಮಾಡುತ್ತೇವೆ, ಅದನ್ನು ಕೇಳುವ ಅಗತ್ಯವಿಲ್ಲವೆಂದರೆ ...ಉಳಿದದ್ದು ನಿಮಗೆ ಬಿಟ್ಟದ್ದು.....
ಅವರ ಸಂಪಾದಕೀಯ ನನಗೆ ಅರ್ಥವಾದಂತೆ  ಕನ್ನಡದ ಬ್ಲಾಗಿಗಳಿಗೆ ಕನ್ನಡದ ಹುಡುಗರ ಪ್ರಯತ್ನ ಒಪ್ಪಿಕೊಳ್ಳಿ ಎಂದು ಹೇಳುವಂತಿದೆ. ಬೇಕಿದ್ದರೆ ಅವರ ಸಂಪಾದಕೀಯವನ್ನು ಮತ್ತೊಮ್ಮೆ ಓದಿ... ಬ್ಲಾಗ್ ಸ್ಪಾಟ್ ನ ಜೊತೆ ಹೋಲಿಸಿಕೊಳ್ಳುವುದು  ಸಂಪದದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಒಳ್ಳೆಯದೆಂದೇ ನನ್ನ ಭಾವನೆ.....

    (ನಿಮ್ಮ ಅವಗಾಹನೆಗಾಗಿ ಶೇಖರಪೂರ್ಣರವರ ಸಾಲುಗಳನ್ನು ಮತ್ತೊಮ್ಮೆ ಓದಿಕೊಳ್ಳಿ. ಅವರ ಸಾಲುಗಳಲ್ಲಿ ಟೀಕೆ ಎಲ್ಲೂ ಇಲ್ಲ ಎಂದೇ ನನ್ನ ಭಾವನೆ, ಇರುವುದು ಪರಾಮರ್ಶೆ ಮಾತ್ರ..ನಿಮಗೇನನಿಸುತ್ತೋ  ಹೇಳಿ.
)

ಮಹೇಶ ಭೋಗಾದಿ's picture
08
Jun
2006
8:28
ಗೆಳೆಯರರೆ, ದಯವಿಟ್ಟು ಈ ಮಾತುಕತೆಯನ್ನು ಇಲ್ಲಿಗೆ ನಿಲ್ಲಿಸಿ. ಇದು ಚೆನ್ನಾಗಿ ಕಾಣುತ್ತಿಲ್ಲ. -ಮಹೇಶ
tksbhat's picture
08
Jun
2006
10:01
ಮಹೇಶರ ಅಭಿಪ್ರಾಯಕ್ಕೆ ನನ್ನ ಸಹಮತವೂ ಇದೆ. ಎಚ್ ಪಿ ನಾಡಿಗರು ತಮ್ಮ ಮಿತಿಗಳನ್ನು ಹೇಳಿದ್ದಾರೆ. ಸಂಪದದ ಪ್ರವರ್ತಕರೆಂಬ ನೆಲೆಯಲ್ಲಿ ನಾಡಿಗರು ಹೀಗೆ ಪ್ರತಿಕ್ರಿಯಿಸಿರುವುದನ್ನು ಸಹಿಸಿಕೊಳ್ಳಬಹುದು. ಆದರೆ ಇದೊಂದು ಕನ್ನಡ ಸಾಹಿತ್ಯ ಡಾಟ್ ಕಾಂ ವರ್ಸಸ್ ಸಂಪದ ಜಗಳವನ್ನಾಗಿ ಪರಿವರ್ತಿಸುವುದು ಸರಿಯಲ್ಲ. ಆದ್ದರಿಂದ ನಾವೀ ಮಾತುಕತೆಯನ್ನು ಇಲ್ಲಿಗೆ ನಿಲ್ಲಿಸಿ ಬಿಡುವುದು ಉತ್ತಮ.
ರವಿ's picture
12
Jun
2006
8:58
ನನಗೊಂದು ಸಹಾಯ ಮಾಡಿ, ಈ ಇಂಗ್ಲಿಷ್ ಪದ ಹಾಗು ಭಾಷಾಪ್ರಯೋಗಗಳ ಅರ್ಥ ಗ್ರಹಿಸಿರಿ: ೧. Portal ೨. Weblog Hosting Service ಆಮೇಲೆ ವಾದಿಸಲು ಬನ್ನಿ.