ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

೧೮ ನೇ ವಿಶ್ವ ಫುಟ್ ಬಾಲ್ ಕಪ್- ಜರ್ಮನಿಯಲ್ಲಿ, ಇಂದು ರಾತ್ರಿ ೯-೩೦ ಕ್ಕೆ ! !

June 9, 2006 - 3:32pm — venkatesh

ವಿಶ್ವದ ಮಿಲಿಯಗಟ್ಟಲೆ ಕ್ರೀಡಾಪ್ರೇಮಿಗಳು ಕ್ಷಣಗಣತಿ ಮಾಡಿ ಕಾಯುತ್ತಿರುವ, "೧೮ ನೆ ವಿಶ್ವಫುಟ್ ಬಾಲ್ ಕಪ್ ಸಮರ" ಇಂದು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ೯-೩೦ ಕ್ಕೆ ಸರಿಯಾಗಿ ತೆರೆ ಸರಿದು ಪ್ರದರ್ಶನ ಕಾಣಲಿದೆ ! ಮೊಟ್ಟಮೊದಲನೆಯದಾಗಿ 'ಎ' ಗ್ರೂಪಿನ ತಂಡಗಳು ಸೆಣಸಾಟಕ್ಕೆ ತಯಾರಿ ನಡೆಸಿವೆ.ಅತಿಥೇಯ ಜರ್ಮನಿ ವಿರುದ್ಧ ಕೋಸ್ಟರಿಕ ತಂಡ ಆಡುತ್ತಿದೆ.ಇದು ಮ್ಯುನಿಕ್ ನಲ್ಲಿ ನಡೆಯುತ್ತದೆ.'ಎ" ಗ್ರೂಪಿನ ಇನ್ನೊಂದು ತಂಡ ರಾತ್ರಿ ೧೨-೨೦ ಕ್ಕೆ ಪೋಲೆಂಡ್ ವಿರುದ್ಧ ಇಕ್ವೆಡಾರ್ ದೇಶದ ತಂಡ ಸೆಣೆಸಲಿದೆ.ಈ ಸಂದರ್ಭದಲ್ಲಿ ಜರ್ಮನಿಯ 'ಸಾಂಸ್ಕೃತಲೋಕದ' ದರ್ಶನವನ್ನು ಮಾಡಿಸುವ ವ್ಯವಸ್ಥೆ ಇದೆ. ಈ ವರೆಗೆ ವಿಶ್ವ ಫುಟ್ ಬಾಲ್ ಟೋರ್ನಿಯಲ್ಲಿ ಜಯಗಳಿಸಿದ ವಿವಿಧ ರಾಶ್ಟ್ರಗಳ ೧೭೦ ಮಂದಿ ಕ್ರೀಡಾಳುಗಳು ಉದ್ಘಾಟನಾ ಸಮಾರಂಭ ದಲ್ಲಿ ಜಗತ್ತಿನ ಶ್ರೇಷ್ಟ ಫುಟ್ ಬಾಲ್ ತಾರೆ,'ಪಿಲೆ'ಯವರೊಂದಿಗೆ "ಪಥಸಂಚಲನ" ದಲ್ಲಿ ತಮ್ಮ ಬಾವುಟಗಳನ್ನು ಹಿಡಿದು ಹೆಜ್ಜೆ ಹಾಕುವರು. ಜರ್ಮನಿಯಲ್ಲಿ ಈಗ ತಾನೆ ಚಳಿಗಾಲ ಕಳೆದು ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡಲು ಹಾತೊರೆಯುವ ಜನರಿಗೆ ಮುದನೀಡುವ ಸಮಯ ದಲ್ಲಿ 'ಸಾಕರ್ ಕಪ್' ನಡೆಯುತ್ತಿರುವುದು ಸರಿಯಾಗಿದೆ ! ಸುರಕ್ಷೆಯ ಬಗ್ಯೆ ಎಲ್ಲ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.ಸುಮಾರು ೨,೮೦,೦೦೦ ಪೋಲೀಸರು ಪರಿಸ್ತಿತಿಯನ್ನು ನಿಯಂತ್ರಿಸಲು ನೇಮಿಸಲ್ಪಟ್ಟಿದ್ದಾರೆ.ವಿಶ್ವಕಪ್ಪಿನ ಅನೇಕ ವಿಶೇಷತೆಗಳಲ್ಲಿ ಒಂದು ಎಂದರೆ, 'ಫುಟ್ಬಾಲ್ ನ ವಿನ್ಯಾಸ'! ಪ್ರಖ್ಯಾತ ಆಟದ ಸಾಮಗ್ರಿಗಳ ತಯಾರಕರಾದ, ಮೆ.ಆಡಿಡಾಸ್ ಅವರ ಚಿಂಡಿಗೆ ' ಟೀಮ್ ಗೆಸ್ಟ್' ಎಂದು ಹೆಸರಿಟ್ಟಿದ್ದಾರೆ. ಇದರ ಅರ್ಥ 'ಟೀಮ್ ಸ್ಪಿರಿಟ್' ಎಂದು, ಹಳೆಯ ಬಾಲಿನಂತೆ ಇದರಲ್ಲಿ ೩೨ ಪದರಗಳಿಲ್ಲದೆ ಕೇವಲ ೧೪ ಮಾತ್ರ ಇದೆ.ಚೆಂಡಿನ ಹೊರಮೈ ಪೂರ್ತಿ ಗೋಳಾಕಾರ ವಾಗಿದ್ದು ಸರಿಸಮಾನವಾಗಿರುವುದರಿಂದ ಹೊಡೆತದ ಸಮಯದಲ್ಲೇ ಆಟಗಾರನಿಗೆ ಅದರ ಜಾಡನ್ನು ನಿಖರವಾಗಿ ಹಿಡಿಯಲು ಸಹಾಯ ವಾಗುತ್ತದೆ.ಒದ್ದೆಯಾದ ಬಾಲಿನಲ್ಲು ಆಡಬಹುದು.ಬಾಲಿನ ವೇಗ ಹಿಂದೆ ೮೦ ಮೈಲಿ /ಪ್ರತಿ ಘಂಟೆಗೆ ಇದ್ದು, ಈಗಿನ ವೇಗಿಗಳಾದ 'ಬೆಕ್ ಹ್ಯಾಂ' ನಂಥವರು ಹೊಡೆದ ಬಾಲು ೧೧೫ ಮೈಲಿ/ಘಂಟೆಗೆ ಇದ್ದು ಸುಮಾರು ೧೨ ಅಡಿ ಎತ್ತರಕ್ಕೆ ಹೊಡೆದಾಗಲೂ ಯಾವ ತೊಂದರೆಯೂ ಆಗುವುದಿಲ್ಲ. ಬಾಲಿನ ಒಳ ಭಾಗದಲ್ಲಿ "ಕಂಪ್ಯೂಟರ್ ಚಿಪ್" ಅಳವಡಿಸಲಾಗಿದ್ದು ಬಾಲ್, ಗೋಲ್ ಲೈನಿನಿಂದ ದಾಟಿ ಎಷ್ಟು ಸಮಯ ಹೋಯಿತು, ಬೌಂಡರಿ ಲೈನಿನಿಂದ ಹೊರಗೆ ಹೋದ ವಿವಿರಗಳನ್ನು ಮತ್ತು ಅನೇಕ ಉಪಯುಕ್ತ ಮಾಹಿತಿಗಳನ್ನು 'ರೆಫರಿ' ಗಳಿಗೆ ಒದಗಿಸುತ್ತದೆ.ಇಲ್ಲಿಂದ ಪ್ರಸಾರವಾಗುವ ರೇಡಿಯೋ ತರಂಗಗಳನ್ನು ಲಿನಕ್ಸ್ ಸರ್ವ್ ರ್ ಗಳು ಸೆರೆಹಿಡಿದು, ಆ 'ಡಾಟಾ' ಗಳು, ಗಣಕ ಯಂತ್ರದ ಮುಖಾಂತರ ವಿಶ್ಲೇಷಿಸಲ್ಪಟ್ಟು, ವಿವಿಧ ಮಾಹಿತಿಗಳು ಲಭ್ಯವಾಗುತ್ತವೆ.

ಒಟ್ಟು ೧೯೭ ರಾಶ್ಟ್ರಗಳು ಅರ್ಹತೆ ಪಡೆಯಲು ಸೆಣಸಿದವು. ೬೪ ಮ್ಯಾಚುಗಳನ್ನು ಆಡಲಿದ್ದು ೩೨ ರಾಷ್ಟ್ರಗಳು ಫೈನಲ್ ನಲ್ಲಿ ಭಾಗಿಗಳಾಗುತ್ತವೆ. ೧೨ ಜಾಗಗಳಲ್ಲಿ ಮ್ಯಾಚ್ ಗಳು ನಡೆಯುತ್ತವೆ. ಒಟ್ಟು ೨೩ ರೆಫ್ರಿಗಳು ಎಲ್ಲಾ ಆಟಗಳನ್ನು ೩೦ ದಿನಗಳವರೆಗೆ ನಿಯಂತ್ರಿಸುತ್ತಾರೆ.

ವಿಶ್ವಕಪ್ ಫುಟ್ ಬಾಲಿನ ಈಬಾರಿಯ ಲಾಂಛನ "ಗೋಲಿಯೋ "ಎಂಬ ಮನುಷ್ಯಗಾತ್ರದ ಸಿಂಹ, ಮತ್ತು "ಪಿಲೆ" ಅನ್ನುವ ವಿಚಿತ್ರ ಚೆಂಡು ! ( ಅಂತಿಂಥ ಚೆಂಡು ಇದಲ್ಲ !!)ಇದು ಮಾತಾಡುವುದರ ಜೊತೆಗೆ 'ವಿಶ್ವಕೋಶ' ದಂತೆ ಪಾಂಡಿತ್ಯ ಹೊಂದಿದೆ.ಫುಟ್ ಬಾಲ್ ಆಟದ ಅತಿ ಸೂಕ್ಷ್ಮ ವಿಚಾರಗಳು ಇದಕ್ಕೆ ತಿಳಿದಿದೆ !
"ವಿಶ್ವ ಕಪ್ ಫುಟ್ ಬಾಲ್" ಆಟ ದ ಟಿಕೆಟ್ ಗಳ ದರನೋಡಿ : *ಡಾ.೪೫ (ಯೂ.೩೫) ನಿಂದ *ಡಾ. ೭೭೫(ಯೂ.೬೦೦)
ವಿಶ್ವದಾದ್ಯಂತ ಇಂದು ವೀಕ್ಷಿಸುವ ಫುಟ್ ಬಾಲ್ ರಸಿಕರ ಸಂಖ್ಯೆ ಸುಮಾರು ೧.೫ ಬಿಲಿಯನ್ . ಜರ್ಮನಿಯಲ್ಲೇ ೪.೨ ಮಿ.ಸಾಕರ್ ಪ್ರೇಮಿಗಳಿದ್ದಾರೆ.೩.೨ ಮಿ.ಜನ ಸ್ಟೇಡಿಯಂ ನೊಳಗೆ ಕುಳಿತು ಆನಂದಿಸುತ್ತಾರೆ.ಕಡಿಮೆ ಎಂದರೆ ೧ ಮಿ.ಜನ ಅತಿಥಿಗಳಾಗಿ ಜೊತೆಗೂಡುತ್ತಾರೆ.
ಹಾಗಾದರೆ ಬನ್ನಿ ಇನ್ನು ಕೇವಲ ೬ಘಂಟೆ ೩೦ ನಿಮಿಷ ಗಳಲ್ಲಿ ಮೈನವಿರೇಳಿಸುವ ಭವ್ಯ 'ಸಾಕರ್ ' ನೋಡಲು ಸಿದ್ಧರಾಗೋಣ !!

*ಅಮೆರಿಕನ್ ಡಾಲರ್.

  • ಪ್ರಚಲಿತ
~.~
  • Login or register to post comments
  • 549 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 10, 2006 - 5:32am — ಮಹೇಶ ಭೋಗಾದಿ

ಜರ್ಮನಿಯ ಭರ್ಜರಿ ಗೆಲುವು, ಪೋಲರನ್ನು ದಂಗುಗೊಳಿಸಿದ ಎಕ್ವಡೋರ್‍

ಮಹೇಶ ಭೋಗಾದಿ's picture

ಈ ಸಾಲಿನ ವಿಶ್ವ ಲೋಟ(ಕಪ್) ಕಾಲ್ಚೆಂಡಾಟದ(foot ball) ಮೊದಲನೆಯ ಸೆಣೆಸಾಟವನ್ನು, ಆಟನೆಡೆಸುತ್ತಿರುವ ನಾಡಾದ ಜರ್ಮನಿಯು ೪-೨ ಗುರಿಗಳಿಂದ(goal),ನಡುಅಮೇರಿಕೆಯ ಕೋಸ್ಟರೀಕವನ್ನು ಸಕ್ಕತ್ತಾಗಿ ಸೋಲಿಸಿದೆ.

ಮತ್ತೊಂದು ಪಂದ್ಯದಲ್ಲಿ ತೆಂಕಣ-ಅಮೇರಿಕೆಯ ನಾಡಾದ ಎಕ್ಚಡೋರ್‍[ಈ ನಾಡಿನಲ್ಲಿ ಹೆಚ್ಚು ಡೋರುಗಳಿರಬೇಕು, ಎಕ್ವ=ಹೆಚ್ಚು(ತೆಲುಗು)] ೨-೦ ಗುರಿಗಳಿಂದ ಪೋಲ್ಲಾಂಡನ್ನು ದಂಗುಗೊಳಿಸಿ ಗೆಲುವು-ಗಳಿಸಿದೆ.

ವರದಿ,
ಗೂಗಲ್ ಹುಡುಕಾಟ ಯಂತ್ರ

-ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2006 - 7:15am — venkatesh

ಫೀಫ ವಿಶ್ವಕಪ್ ! ನಯನ ಮನೋಹರ, ಭವ್ಯ, ದಿಗ್ಗಜಗಳ ಸೆಣೆಸಾಟ !

venkatesh's picture

ಇಂತಹ ಚಿತ್ತಾಕರ್ಷಕ ಭವ್ಯ ಕ್ರೀಡಾಂಗಣದಲ್ಲಿ ಸೆಣಸಿದ ಕಾಲ್ಚೆಂಡಾಟಗಾರನ್ನು ರಾತ್ರಿ ನೋಡಿ ಆನಂದಿಸಿದೆವು !
ಜರ್ಮನಿಯ ಮಿರೊಸ್ಲಾವ್ ಕ್ಲೋಸ್, ತನ್ನ ೨೮ನೆ ಹುಟ್ಟು ಹಬ್ಬದ ಉಡುಗೊರೆಯಾಗಿ ೨ ಬಾರಿ ಸಿಡಿದು ತನ್ನ ದೇಶಕ್ಕೆ ಕೋಸ್ಟರಿಕ ವಿರುದ್ಧ ೪-೨ ಗೋಲುಗಳ ಅಂತರದಿಂದ ಜಯವನ್ನು ತಂದು ಕೊಟ್ಟನು !ನನಗೆ ಪೋಲೆಂಡ್ ಮ್ಯಾಚ್ ನೋಡುವಷ್ಟು ತ್ರಾಣ ಉಳಿದಿರಲಿಲ್ಲ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೋಲಿಯೋ VI, ೨೦೦೬, ವಿಶ್ವಕಪ್ಪಿನ ಸಾಕರ್ ಆಟದ, ಎಂದೂ ಕಂಡು ಕೇಳರಿಯದ ಲಾಂಛನ (ಸಿಂಹ ಮಾನವ) !
  • ವಿಶ್ವಕಪ್ ಫುಟ್ ಬಾಲ್ : -೨೦೦೬, ಗ್ರುಪ್ ಗಳು ಮತ್ತು ಅಂಕಗಳು :*
  • ರವಿವಾರ, ಜೂನ್ ೧೧, ೨೦೦೬ ರಂದು ನಡೆಯಲಿರುವ 'ಫಿಫಾ ವಿಶ್ವಕಪ್' ಪಂದ್ಯಗಳು !
  • ಪೋಲೆಂಡ್, ಈಗ ಗೊಲ್ ಹೊಡೆದು ಮುನ್ನಡೆಯಲು ಹಾತೊರೆಯುತ್ತಿದೆ ! ವಿಶ್ವಕಪ್ ನಾಕ್ ಔಟ್ ಪ್ರಕ್ರಿಯೆ ಸಾಗಿದೆ !
  • ಒಲೆ, ಒಲೆ, ಒಲೆ, ಒಲೆ,........ಅಜ್ಜಂತೀನ......ಒಲೆ, ಒಲೆ ! !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 48 ಅತಿಥಿಗಳು ಆನ್ಲೈನ್ ಇರುವರು.


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator