ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಗೂಗಲ್ ಲೆಕ್ಕದ ಹಾಳೆ - Google Spreadsheets

June 12, 2006 - 3:14pm — Sunil Jayaprakash

ಗೂಗಲ್ ಲೆಕ್ಕದ ಹಾಳೆ - Google Spreadsheets

ಗೆಳಯರೇ,
ಸ್ವಲ್ಪ ಯೋಚಿಸಿ ನೋಡೋಣ, ನಾವೊಂದು ಸಣ್ಣ spreadsheet document ತಯಾರು ಮಾಡಬೇಕಿದೆ. ನಾವು Microsoft Excel, ಅಥವಾ, openoffice ಬಳಸಬೇಕು. ಆದರೆ Microsoft Excel ಉಪಯೋಗಿಸಲು ಬಹಳವೇ ಸೊಗಸಾಗಿದ್ದರೂ ಉಚಿತವಾಗಿ ಬರುವುದಿಲ್ಲ. ಉಚಿತವಾಗಿ ದೊರೆಯುವ openoffice ಬಳಸೋಣವೆಂದರೆ, ತಂತ್ರಾಂಶವನ್ನು download ಮಾಡಿ (ಸುಮಾರು ೧೪೦MB) ಆನಂತರ ನಮ್ಮ ಗಣಕದಲ್ಲಿ ಅನುಸ್ಥಾಪಿಸಬೇಕು.

ಅಷ್ಟೇ ಅಲ್ಲ, ಈ ತಂತ್ರಾಂಶಗಳು ನಮ್ಮ ಗಣಕದ RAMಅನ್ನು ಬಹಳಷ್ಟು ಉಪಯೋಗಿಸುತ್ತದೆ. ಈ ತಂತ್ರಾಂಶವನ್ನು ಉಪಯೋಗಿಸುತ್ತಾ ಹಾಡು ಕೇಳೋಣ ಎಂದರೆ ಕೆಲವೊಮ್ಮೆ ನಮ್ಮಲ್ಲಿ RAM ಕಡಿಮೆಯಿದ್ದರೆ ಎರಡನ್ನೂ ಒಟ್ಟಿಗೇ ಉಪಯೋಗಿಸಲು ಬರುವುದಿಲ್ಲ. ನಮ್ಮ ಮನೆಯಲ್ಲಿರುವುದು ಕೇವಲ dial-up connection. ಹಾಗೆಯೇ, ನಮ್ಮ ಯಾವ ಗೆಳೆಯರ ಬಳಿಯಾಗಲೀ openoffice CD ಇಲ್ಲ ಎಂದಿಟ್ಟುಕೊಳ್ಳೋಣ. ಆಗ ಏನು ಮಾಡುವುದು.

ಆಗ ನಮ್ಮ ಸಹಾಯಕ್ಕೆ ಬರುವುದೇ ಗೂಗಲ್ ಲೆಕ್ಕದ ಹಾಳೆ(Google SpreadSheets). google spreadsheet ಬಳಸಲು ನಮ್ಮ ಬಳಿ ಯಾವುದೇ ತಂತ್ರಾಂಶವಿರಬೇಕಿಲ್ಲ. ಕೇವಲ ಅಂತರ್ಜಾಲ ನೋಡಲಿಕ್ಕೆ ಒಂದು ಬ್ರೌಸರ್ ಇದ್ದರೆ ಸಾಕು. Internet explorer, Firefox, Mozilla ಹೀಗೆ ಯಾವುದಾದರು ನಡೆಯುತ್ತದೆ.

ಸದ್ಯಕ್ಕೆ cut, copy, paste, Undo, Redo ಗಳನ್ನು ಗೂಗಲ್ ಲೆಕ್ಕದಹಾಳೆ ಒದಗಿಸುತ್ತದೆ. ಮುಂದೆ graph ಇವುಗಳನ್ನೂ ಸಹ ನೀಡಬಹುದು.

ಗೂಗಲ್ ಲೆಕ್ಕದ ಹಾಳೆಯನ್ನು ಉಪಯೋಗಿಸಲು ಮೊದಲು ನೀವು ಕೋರಿಕೆ ಕಳುಹಿಸಬೇಕು.
೧. http://spreadsheets.google.com ಎಂದು ಟೈಪಿ.
೨. ನಿಮ್ಮ ವಿ-ಅಂಚೆಯನ್ನು ಲಗತ್ತಿಸಿ Sign up ಎಂದು ಕ್ಲಿಕ್ಕಿ.
೩. ಕೆಲವು ಘಂಟೆಗಳ ನಂತರ ಗೂಗಲ್ನಿಂದ ನಿಮಗೊಂದು ಮೈಲ್ ಬರುತ್ತದೆ.
೪. ಈ ಮೇಲಿನಲ್ಲಿ, ನೀವು ಹೇಗೆ Google spreadsheets ಉಪಯೋಗಿಸಬೇಕು ಎಂಬ ನಿಯಮಗಳು ನಮೂದಾಗಿರುತ್ತವೆ.


ಗೂಗಲ್ ಬಗ್ ಗಳು - Missing Features in Google Spread Sheets.


ಗೂಗಲ್ ಲೆಕ್ಕದ ಹಾಳೆ ಇನ್ನೂ ಅಪಕ್ವ ಸ್ಥಿತಯಲ್ಲಿದೆ. ಸದ್ಯಕ್ಕೆ ಗೂಗಲ್ ಇನ್ನೂ ಅವಕಾಶ ಕಲ್ಪಿಸದ ಪಟ್ಟಿಯಿಂತಿದೆ. ಮುಂದೆ ಒಂದು ದಿನ ಖಂಡಿತ ಇವು ಸಾಕಾರಗೊಳ್ಳಬಹುದು.

೧. ಕನ್ನಡ ಅಂಕಿಗಳ ಮೇಲೆ formula ಗಳನ್ನು ಬಳಸಲು ಬರುವುದಿಲ್ಲ.(The formulas supported by spreadsheets cannot be used upon numerals written in Indic scripts such as kannada/hindi/gujarati etc).
೨. ಕಡತದಲ್ಲಿನ individual ಲೆಕ್ಕ ಪತ್ರಗಳನ್ನು(sheet) ಕನ್ನಡದಲ್ಲಿ ಹೆಸರಿಸಲಾಗುವುದಿಲ್ಲ. ( Sad ). Cannot rename individual spreadsheet to contain Kannada characters. Spread sheet names cannot have unicode characters.
೩. ಯಾವುದಾದರು cell ನಲ್ಲಿ ಕನ್ನಡ ಟೈಪಬೇಕಾದರೆ ಮೊದಲು "ಸ್ಪೇಸ್" ಒತ್ತಬೇಕು, ಆಗ cell ತೆರೆದುಕೊಳ್ಳುತ್ತದೆ. ನಂತರ ನಮ್ಮ ಬೆರಳಚ್ಚು ಮುಂದುವರಿಸಬೇಕು. ಇಂಗ್ಲೀಷಿನಲ್ಲಿ ಹೀಗಲ್ಲ, direct ಆಗಿ English ಟೈಪಬಹುದು. We cannot directly key in Kannada( or for that matter any other Indic script). To key in kannada characters we have first Press "space" and then continue editing.
೪. ನಾವು ಆರಿಸಿದ ಸೆಲ್ ಗಳ ಮೇಲೆ sort ಮಾಡಲು ಬರುವುದಿಲ್ಲ. sort ಪೂರ್ತಿ columnಗೆ ಅನ್ವಯವಾಗುವುದು. Sort applies to whole columns in contrast with individual selected columns..- Range sort

ಒಂದು ಉಚಿತ ಲೆಕ್ಕದ ಹಾಳೆಯ ತಂತ್ರಾಂಶ ನೀಡಿದ್ದಕ್ಕಾಗಿ ಗೂಗಲ್ಗೆ ಸವಿಯೊದಗು - Thanks to Google.
ವಿ.ಸೂ :- ಕೆಲವೊಂದು ಖಾಸಗಿ ಮಾಹಿತಯನ್ನು ಸೇರಿಸುವಾಗ ಎಚ್ಚರವಿರಲಿ. ಯಾರಿಗೆ ಗೊತ್ತು ಏನು ಕಾದಿದೆಯೋ.

ಗೂಗಲ್ ಲೆಕ್ಕದ ಹಾಳೆಯ ವಿಶೇಷತೆ - ಸಹಯೋಗ - collaboration


ಉದಾ: ನಾವೊಂದಷ್ಟು ಜನ ಗೆಳೆಯರು ಒಟ್ಟಿಗೆ ಒಂದು ರೂಮು ಮಾಡಿಕೊಂಡು ಇದ್ದೇವೆ ಎಂದಿಟ್ಟುಕೊಳ್ಳೋಣ. ಮನೆ ಬಾಡಿಗೆ, ನೀರಿನ ಬಿಲ್, ವಿದ್ಯುತ್ ಬಿಲ್ ಇತ್ಯಾದಿಗಳ ವಿವರ ತಿಳಿದುಕೊಳ್ಳಬೇಕು. ನಾವೆಲ್ಲರೂ ಬೇರೆ ಬೇರೆ ಸಂಸ್ಥೆಗಳಲ್ಲಿ ದುಡಿಯುತ್ತಿದ್ದೇವೆ. ಇಂಥಹ ಸನ್ನವೇಶಗಳಲ್ಲಿ ಗೂಗಲ್ ಹಾಳೆ ಸಹಾಯಕ್ಕೆ ಬರುತ್ತದೆ.
೧. ಗೆಳೆಯರ ಜೊತೆ ಹಾಳೆಯಲ್ಲಿಯೇ ಛಾಟ್ ಕೂಡ ಮಾಡಬಹುದು
೨. ಎಲ್ಲರೂ ಒಟ್ಟಿಗೇ edit ಮಾಡಬಹುದು.

ನೀವು ಕೂಡ ಸಾದ್ಯವಾದರೆ ಒಮ್ಮೆ ಉಪಯೋಗಿಸಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

  • ಜ್ಞಾನವಾಹಿನಿ
~.~
  • Login or register to post comments
  • 826 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 13, 2006 - 6:00pm — pavanaja

ಗೂಗ್ಲ್ ಸ್ಪ್ರೆಡ್‌ಶೀಟ್ - ಮತ್ತಷ್ಟು

pavanaja's picture

ಗೂಗ್ಲ್‌ ಸ್ಪ್ರೆಡ್‌ಶೀಟ್ ಬಗ್ಗೆ ನಾನು ಈಗಾಗಲೇ ಬ್ಲಾಗಿಸಿದ್ದೇನೆ. ನೀವು ಯಾರೂ ಗಮನಿಸಿದಂತಿಲ್ಲ. ಗೂಗ್ಲ್ ಸ್ಪ್ರೆಡ್‌ಶೀಟ್‌ಗಾಗಿಯೇ ಒಂದು ಚರ್ಚಾವೇದಿಕೆಯಿದೆ. ಕನ್ನಡದ ಅಕಾರಾದಿ ವಿಂಗಡಣೆಯಲ್ಲಿರುವ ನ್ಯೂನತೆಯನ್ನು ನಾನು ಅಲ್ಲೂ ದಾಖಲಿಸಿದ್ದೇನೆ. ಗಮನಿಸಿದ್ದೀರಾ?

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2006 - 6:26pm — Sunil Jayaprakash

ಗೂಗಲ್ ಸ್ಪ್ರೆಡ್ ಶೀಟ್ಸ್ - ಸವಿಯೊದಗು ಪವನಜರಿಗೆ

Sunil Jayaprakash's picture

ಅರೆ ಹೌದು, ಗಮನಿಸಿರಲಿಲ್ಲ. ನಿಮ್ಮ ಬಗ್ ಪಟ್ಟಿಗೆ ಸವಿಯೊದಗು. ನಾನು ಕೂಡ ಕೆಲವು ಬಗ್ ರಿಪೋರ್ಟ್ ನೆನ್ನೆ ಸೇರಿಸಿದೆ.
ಗೆಳೆಯರೆ, spread sheets ನ ಚರ್ಚಾ ವೇದಿಕೆ ಇಲ್ಲಿದೆ. ಯಾರು ಬೇಕಾದರೂ ತಮ್ಮ ಅಭಿಪ್ರಾಯ ತಿಳಿಸಬಹುದು.
ಹಾಗೆಯೇ, ನಮ್ಮ ಬಯಕೆ ಪಟ್ಟಿಯನ್ನು ದಾಖಲಿಸಬಹುದು ಅಲ್ಲಿ. ನಾನು ಕೂಡ ಹುಮ್ಮಸ್ಸಿನಲ್ಲಿ ಕೆಲವು missing featureಗಳ ಪಟ್ಟಿಯನ್ನು ದಾಖಲಿಸಿರುವೆ.

ಮತ್ತೊಂದು ವಿಷಯ ವಿಂಡೋಸ್ನಲ್ಲಿಯೂ ಸಹ ನಾನು ದಾಖಲಿಸಿದ point ೩ ಅನ್ವಯವಾಗುವುದೇ. ದಯವಿಟ್ಟು ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 14, 2006 - 1:55am — mana

ಫಾರ್ಮುಲ ಒಳಗೆ ಕನ್ನಡ ಟೆಕ್ಸ್ಟ್ ಕಾಣಿಸದಿರುವ ಬಗ್ಗೆ

mana's picture

ಗೂಗಲ್ ಸ್ಪ್ರೆಡ್‍ಶೀಟ್ ನಲ್ಲಿನ ಫಾರ್ಮುಲಾಗಳಲ್ಲಿ ಯೂನಿಕೋಡ್ ಕನ್ನಡದ ಟೆಕ್ಸ್ಟ್ ಕಾಣುವುದಿಲ್ಲ. ಫಾರ್ಮುಲಾಗಳಲ್ಲಿ ಕನ್ನಡ ಬರಲೇಬೇಕೆಂದಿದ್ದರೆ, ಆ ಟೆಕ್ಸ್ಟ್ ಅನ್ನು ಪ್ರತ್ಯೇಕ ಸೆಲ್ ನಲ್ಲಿ ಹಾಕಿ ಆ ಸೆಲ್ ಹೆಸರನ್ನು ಫಾರ್ಮುಲಾದಲ್ಲಿ ಉಪಯೋಗಿಸಿದರೆ ಸರಿಯಾಗಿ ಬರುತ್ತದೆ. ಚಿತ್ರಗಳೊಂದಿಗಿನ ವಿವರಣೆ ಈ ಬ್ಲಾಗ್ ಪುಟದಲ್ಲಿದೆ.

ಗೂಗಲ್ ಪ್ರಯೋಗಾಲಯದವರಿಗೆ ಬಗ್ ರಿಪೋರ್ಟ್ ಸಲ್ಲಿಸಿದ್ದೇನೆ.

ಗೂಗಲ್ ಸ್ಪ್ರೆಡ್‍ಶೀಟಿನ ಚರ್ಚಾಬಳಗದಲ್ಲಿ, ಈ ಸಮಸ್ಯೆಗೆ ಸಂಬಂಧಪಟ್ಟ ಸೂತ್ರ ಇಲ್ಲಿದೆ .


- ಮನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ
  • ಗೂಗಲ್ ಸರ್ಚ್ ಈಗ ಸಂಪೂರ್ಣ ಕನ್ನಡದಲ್ಲಿ ಲಭ್ಯ
  • ಗೂಗಲ್ ಲೆಕ್ಕದ ಪತ್ರದಲ್ಲಿನ ಸಹಯೋಗ - Google Spreadsheet collaboration
  • ಗೂಗಲ್ ಲೆಕ್ಕದ ಪತ್ರ - Google Spreadsheet
  • Google Spreadsheet - Screenshot
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬದುಕಿಗೆ ಗೌರವದ ಭಾಷ್ಯೆ ಬರೆದ ಅದಮ್ಯ ಆತ್ಮಬಲದ ಶಿಕ್ಷಕರಿವರು..
  • ’ಕೊಲಂಬಿಯ ಪೋಸ್ಟ್ ಆಫೀಸ್’
  • ಗಣಪನ ಗಂಡಾಂತರಗಳು ಅನೇಕ
  • Google Chrome ಮತ್ತು Java Applet
  • ಗೂಗಲ್ ಕ್ರೋಮ್ ಕ್ರಾಶ್ ಆಯ್ತಂತೆ
  • ಗೂಗಲ್ ಕ್ರೋಮ್ ಎಷ್ಟು ಸುರಕ್ಷಿತ?
  • Splendours of Royal Mysore

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: IT - ಸಿಂಪ್ಟಮ್ಸ
    September 5, 2008 - 4:36pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 4:16pm
  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator