ನೀರಿನ ಬಳಕೆಯಲ್ಲಿ ಸಣ್ಣ ಕೈಗಾರಿಕೆಗಳ ಪಾಲು
(ನೀರು-೩: ಒಂದು ಅನಿವಾರ್ಯತೆಯ ಮುಂದುವರಿದ ಭಾಗ)
ಡಾ. ಎಸ್. ಕೆ. ನಟರಾಜ್, ಕಡಾಕೊಳ್ಳ
ಸ್ವ-ಉದ್ಯೋಗ, ಗುಡಿಕೈಗಾರಿಕೆ, ಅತಿಸಣ್ಣ ಹಾಗು ಸಣ್ಣ ಉದ್ಯಮಗಳು ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿವೆ. ಒಂದು ಅಂದಾಜಿನ ಪ್ರಕಾರ ಒಟ್ಟು ಉತ್ಪನ್ನದ ೪೫% ಭಾಗ, ಒಟ್ಟು ರಫ್ತಿನ ೩೬% ರಷ್ಟು ಅಪಾರ ಪ್ರಮಾಣದ ಪಾಲು ಹೊಂದಿರುವ ಈ ಸಣ್ಣ ಕೈಗಾರಿಕಾ ವಲಯ ದೇಶದಲ್ಲಿ ಸುಮಾರು ೩೨ ಲಕ್ಷ ಸ್ವತಂತ್ರ ವಿವಿಧ ಉದ್ಯಮಗಳಲ್ಲಿ ೧.೯ ರಿಂದ ೨ ಕೋಟಿ ಜನರಿಗೆ ಉದ್ಯೋಗ ನೀಡಿವೆ. ಹೀಗೆ ಅಪಾರ ಪ್ರಮಾಣದಲ್ಲಿ ತೊಡಗಿಸಿಕೊಂಡಿರುವ ಸಣ್ಣ ಉದ್ಯಮ ವಲಯ ಸರಿಸುಮಾರು ೧೦೦೦೦ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿವೆ. ಈ ಉತ್ಪನ್ನಗಳು ಅತಿಸಾಧಾರಣ ಬೇಡಿಕೆಯ ಉಪಯೋಗದಿಂದ ಹಿಡಿದು ತಾಂತ್ರಿಕ, ಹಾಗು ಈ ಅಧುನಿಕ ಜೀವನಶೈಲಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸುತ್ತಿವೆ. ಈ ವಲಯ ಅನಿಯಂತ್ರಿತವಾಗಿ, ಅಷ್ಟೇ ವೇಗದಲ್ಲಿ ಬೆಳೆಯುತ್ತಿವುದು ಜನಸಾಮಾನ್ಯನ ಆರ್ಥಿಕ ಸ್ಥಿತಿಗತಿಗಳ ಕೋನದಿಂದ ಅವಶ್ಯಕ ಎನಿಸಿದರೂ, ಪರಿಸರ ಮಾಲಿನ್ಯದ ದೃಷ್ಟಿಯಿಂದ, ಮುಖ್ಯವಾಗಿ ನೀರಿನ ಮೂಲಗಳಿಗೆ ಒದಗುತ್ತಿರುವ ಮಾಲಿನ್ಯ ಭೀತಿಯಿಂದ ವ್ಯಥೆ ಪಡುವಂತಾಗಿದೆ.
ಸಣ್ಣ ಉದ್ಯಮಗಳ ವಲಯ ಅಧಿಕೃತವಾಗಿ ತಮ್ಮ ಅಸ್ತಿತ್ವವನ್ನು ಕೈಗಾರಿಕಾ ವಲಯಗಳ ಜೊತೆಗೆ ಅನಧಿಕೃತವಾಗಿ ಶಹರ, ನಗರ ಪ್ರದೇಶಗಳಲ್ಲಿ ವಿಭಿನ್ನ ಪ್ರಮಾಣಗಳಲ್ಲಿ ಹರಡಿಕೊಂಡಿವೆ. ಇತ್ತೀಚಿಗೆ ಬಿಡುಗಡೆಗೊಂಡಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (Central Pollution Control Board) ವಾರ್ತಾ ಪತ್ರದ ಪ್ರಕಾರ ದೇಶದಲ್ಲಿ ಅಧಿಕೃತವಾಗಿ ೮೬೭ ಕೈಗಾರಿಕಾ ವಲಯಗಳಿವೆ. ಇದರಲ್ಲಿ ಒಟ್ಟು ಅಸ್ತಿತ್ವದಲ್ಲಿರುವ ಉದ್ಯಮಗಳ ೧೦% ಉದ್ಯಮಗಳು ಅತಿ ಮಾಲಿನ್ಯಕಾರಕ ಗಳೆಂದು ಘೋಷಿಸಬಹುದಾಗಿದೆ. ಅಂದರೆ ಸುಮಾರು ೩.೨ ಲಕ್ಷದಷ್ಟು ಸಣ್ಣ ಉದ್ಯಮಗಳು ವಿವಿಧ ರೀತಿಯಲ್ಲಿ ಪರಿಸರಕ್ಕೆ ತೀವ್ರತರವಾದ ಹಾನಿಯನ್ನುಂಟು ಮಾಡುತ್ತಿವೆ. ಈ ಸಂಖ್ಯೆಯ ಮತ್ತೊಂದು ಉಹಿಸಬಹುದಾದ ಕಳವಳಕಾರಿ ಅಂಶವೆಂದರೆ, ಹೆಚ್ಚಾಗಿ ಈ ಮಾಲಿನ್ಯಕಾರಕ ಉದ್ಯಮಗಳು ನಗರ, ಶಹರಗಳ ಜನವಸತಿ ಹಾಗು ನೀರಿನ ಮೂಲಗಳ ಅಕ್ಕಪಕ್ಕದಲ್ಲಿ ತಮ್ಮ ನೆಲೆಯನ್ನು ಹೊಂದಿರುವುದು.
ಮತ್ತೊಂದು ಗಂಭೀರ ಹಾಗು ಅಷ್ಟೇ ಯೋಚಿಸಬೇಕಾದ ಸಂಗತಿಯೆಂದರೆ, ಈ ಯಾವ ಉದ್ಯಮಗಳು ಒಂದು ವ್ಯವಸ್ತಿತವಾದ ಘನ ಹಾಗು ದ್ರವ ತ್ಯಾಜ್ಯ ವಿಲೇವಾರಿ-ಸಂಸ್ಕರಣೆ-ಪರಿಷ್ಕರಣೆ-ಮುಖ್ಯವಾಗಿ ಮರುಬಳಸಬಹುದಾದ ವಸ್ತುಗಳ ಮರುಬಳಕೆಯ ತಾಂತ್ರಿಕವಾದ ಮಾರ್ಗಗಳನ್ನು ಸಮಯದ ಬೇಡಿಕೆಯಂತೆ ಹೊಂದಿರದಿರುವುದು.
ಇಂತಹ ಪರಿಸ್ಥಿತಿಯಲ್ಲಿ ನೀರಿನೊಂದಿಗೆ ಘಟಿಸುವ ಚಟುವಟಿಕೆಗಳು ಮತ್ತು ಅವು ನಮ್ಮ ಜೀವನ ಚಕ್ರದಲ್ಲಿ ಒಂದಿಲ್ಲೊಂದು ರೂಪದಲ್ಲಿ ಮಿಳಿತವಾಗಿರುವುದನ್ನು ನೆನೆಸಿಕೊಂಡರೆ ಹೆದರಿಕೆಯಾಗುವದಿಲ್ಲವೇ..????!!!
ಎಲ್ಲ ವಲಯಗಳಿಂದ ಬರುವ ಒಟ್ಟು ಜಲಮಾಲಿನ್ಯದಲ್ಲಿ, ಸಣ್ಣ ಕೈಗಾರಿಕೆಗಳ ಅಡಿಯಲ್ಲಿ ಬರುವ ಚಟುವಟಿಕೆಗಳಿಂದ ೪೦% ಕೊಡುಗೆಯನ್ನು ಜಲಮಾಲಿನ್ಯ ತನ್ನದಾಗಿಸಿಕೊಳ್ಳುತ್ತಿದೆ. ನಮ್ಮ ಸುತ್ತ ಮುತ್ತಲಿನ ಜಲಮಾಲಿನ್ಯದಲ್ಲಿ ಕಲುಷಿತಗೊಂಡಿರುವ ನೀರಿನ ೪೦% ರಷ್ಟು ಭಾಗ ಈ ಸಣ್ಣ ಉದ್ಯಮವಲಯದಿಂದ. ಇದನ್ನು ನಾವು, ನಮ್ಮ ಸುತ್ತ-ಮುತ್ತ, ನಮ್ಮ ಮನೆಗಳ ಅಕ್ಕ-ಪಕ್ಕ, ಕೆಲಸದ ಜಾಡಿನಲ್ಲಿ, ಹಾದು ಹೋಗುವ ಪ್ರದೇಶಗಳಲ್ಲಿ ಎಲ್ಲಿಯಾದರೂ ಈ ಮಲಿನ ನೀರನ್ನು ನಾವು ಗಮನಿಸಬಹುದು.
ಇನ್ನು ಲೀಟರುಗಳ ಲೆಕ್ಕದಲ್ಲಿ ಹೇಳುವದಾದರೆ, ಸಣ್ಣ ಉದ್ಯಮಗಳಿಂದ ನಮ್ಮ ದೇಶದಲ್ಲಿ ದಿನವೊಂದಕ್ಕೆ ಬಿಡುಗಡೆ ಯಾಗುವ ನೀರಿನ ಪ್ರಮಾಣ ೪೦೦ ಕೋಟಿ ಲೀಟರುಗಳಷ್ಟು. ಸರಕಾರಿಲೆಕ್ಕದಲ್ಲಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಇದರ ಪ್ರಮಾಣ ೩೮೮೧ ಮಿಲಿಯನ್ ಲೀಟರುಗಳಷ್ಟು. ಒಂದು ಸಣ್ಣ ಸಮುದ್ರವೇ ಕಪ್ಪು ಬಣ್ಣ ತೊಟ್ಟು ಕಣ್ಣ ಮುಂದೆ ಬಂದಂತಾಯಿತಲ್ಲವೇ...???!!
ಇಷ್ಟೊಂದು ಪ್ರಮಾಣದಲ್ಲಿ ನೀರು ಬಳಕೆಯ ನಂತರ ಹೊರ ಬಂದಾಗ ತನ್ನಲ್ಲಿ ಆಮ್ಲೀಯ, ಪ್ರತ್ಯಾಮ್ಲೀಯ, ಸಾವಯವ, ನೆರವಯವ, ಹಾನಿಕಾರಕ, ವಿಷಕಾರಕ ರಾಸಾಯನಿಕಗಳನ್ನು ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಉಳಿದ ವಸ್ತುಗಳನ್ನು ನೀರು ತನ್ನಲ್ಲಿ, ಕರಗಿಸಿ, ತನ್ನಲ್ಲಿ ಮಿಲಿತಗೊಳಿಸಿಕೊಂಡು ಶುಬ್ರತೆಯ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಮೊದಲೇ ಹೇಳಿದಂತೆ ಇದರಲ್ಲಿ ೯೦% ಭಾಗ ಮಲಿನ ನೀರನ್ನು ಅತಿಸಾಮಾನ್ಯ ಸಂಸ್ಕರಣೆ ಗೂ ಒಳಪಡದೆ ನೇರವಾಗಿ ಪರಿಸರಕ್ಕೆ ಬಿಡಲಾಗುತ್ತದೆ. ಇದು ನೇರವಾಗಿ ನದಿ, ಹಳ್ಳ, ಕೆರೆಗಳಲ್ಲಿ ಹರಿಯುತ್ತಿರುವುದು ನಮ್ಮೆಲ್ಲರ ಕಣ್ಣಗೆ ಬೀಳುವ ರಹಸ್ಯ ಸತ್ಯ.
ಹೀಗೆ ಹಲವು ಶುಧ್ಧ ಜಲಮೂಲಗಳನ್ನು ಸೇರುವ ಈ ಅಗಾಧ ಪ್ರಮಾಣದ ನೀರು ಅಂತರ್ಜಲದಲ್ಲಿ, ಇತರ ನೇರವಾಗಿ ಉಪಯೋಗಿಸುವ ಮೂಲಗಳಲ್ಲಿ ವಿಷಕಾರಿ ವಸ್ತುಗಳ ಪ್ರಮಾಣವನ್ನು ಅಪಾಯಕಾರಿ ಮಟ್ಟ ಮೀರಿ ಇತರ ಜೀವ-ನೈಸರ್ಗಿಕ ಜೀವನ ಚಕ್ರದಲ್ಲಿ ಒಂದಾಗಿ ಒಂದಿಲ್ಲೊಂದು ರೂಪದಲ್ಲಿ ಅಸಮತೋಲನಕ್ಕೆ ಎಡೆ ಮಾಡುತ್ತಿವೆ. ಇದು ನಮ್ಮ ಆರೋಗ್ಯ ಇರಬಹುದು, ನಮ್ಮ ಬೆಳೆಗಳ ಬೆಳವಣಿಗೆ ಇರಬಹುದು, ಪಕ್ಷಿ ಸಂಕುಲದ ಶತಮಾನಗಳಷ್ಟು ಹಳೆಯದಾದ ವಲಸೆಯಲ್ಲಿ ಏರುಪೇರು ಇರಬಹುದು, ಸಸ್ಯ ಸಂಕುಲದಲ್ಲಿ ಕಂಡು ಬರುವ ಅಕಾಲಿಕ ಬದಲಾವಣೆ ಗಳಿರಬಹುದು...ಹೀಗೆ ಒಂದುಲ್ಲೊಂದು ಅಸಮತೊಳನದಲ್ಲಿ ನಾವು ನೀರಿನ ಮಾಲಿನ್ಯದ ಪರಿಣಾಮವನ್ನು ನೋಡಬಹುದು.
ಮತ್ತೆ ಸಿಗೋಣ....ನಿಮ್ಮ ಡಾ.ಎಸ್.ಕೆ.ನಟರಾಜ್, ಕಡಾಕೊಳ್ಳ
- Login or register to post comments
- 274 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ
- ನೀರು-೨: “ಒಂದು ಅನಿವಾರ್ಯತೆ” ಯ ಮುಂದುವರಿದ ಭಾಗ : ನೀರಿನ ಲಭ್ಯತೆ ಮತ್ತು ಬಳಕೆ
- ಸಮುದ್ರದ ನೀರನ್ನು ಕುಡಿಯುವ/ಸಿಹಿ ನೀರಾಗಿ ಪರಿವರ್ತಿಸಿರುವ ಸಾಧ್ಯತೆಗಳು ಮತ್ತು ಸಂಶೋಧನೆಗಳು
- ನೀರು: ಜೀವಜಲ, ಜೀವನಾಧಾರ, ಅದಕ್ಕಿಂತ ಮಿಗಿಲಾಗಿ ಒಂದು ಅನಿವಾರ್ಯತೆ
- ನೀರು: ಜೀವಜಲ, ಜೀವನಾಧಾರ, ಅದಕ್ಕಿಂತ ಮಿಗಿಲಾಗಿ ಒಂದು ಅನಿವಾರ್ಯತೆ
- ಸಸ್ಯಗಳು ಹೇಗೆ ಬೆಳೆಯುತ್ತವೆ ಗೊತ್ತೇ? (ರೈತರೇ ಬದುಕಲು ಕಲಿಯಿರಿ-೭)



RSS:
ಪ್ರತಿಕ್ರಿಯೆಗಳು
ಕಾನೂನು ರೀತ್ಯ ಪರಿಸರ ಮಾಲಿನ್ಯ ತಡೆಯುವುದೂ ಕೈಗಾರಿಕೆಗಳ ಹೊಣೆ. ಹಲವಾರು ಬಾರಿ, ಹೆಚ್ಚಿನ ಜನಜಾಗೄತಿ ಮತ್ತು ಸ್ಥಳೀಯರ ಸಹಭಾಗತ್ವದಿಂದ ಈ ರೀತಿಯ ಅನಾಹುತಗಳ ಮೂಲವನ್ನು ನಾಶಪಡಿಸಬಹುದು. ಹಲವಾರು ಸ್ವಯಂಸೇವಾ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಹಕರಿಸುತ್ತವೆ. ನಮ್ಮ ಗಮನಕ್ಕೆ ಬಂದ ಯಾವುದೇ ಕೈಗಾರಿಕಾ ಸಂಸ್ಥೆಗಳ ಬೇಜವಾಬ್ದಾರಿ ಕಾರ್ಯವನ್ನು ಸ್ಪಷ್ಟವಾಗಿ Pollution Control Board ಅಥವಾ NGOಗಳ ಗಮನಕ್ಕೆ ತಂದರೆ, ಸಮತೋಲನ ನಿರ್ಮಿಸುವ ಹಾದಿಯಲ್ಲಿ ಹೆಜ್ಜೆಯಿಟ್ಟಂತೆ.