ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಇಂದ್ರೀಯಗಳಿಗೆ ಮನವಿ

June 18, 2006 - 3:28pm — ahoratra

ಇಂದ್ರೀಯಗಳಿಗೆ ಮನವಿ

ಕೇಳಿ ಓ ಇಂದ್ರೀಯಗಳೆ ನಮ್ಮ ಬಿನ್ನಹ,
ಆನಂದದಿ ಧರೆಯಲಿಂದು ಜೀವಿಸಲೊಸುಗ.
ಪಂಚಾಕ್ಷರಿ ಪರಮಶಿವನ ನೋಡುವ ತನಕ,
ಅಷ್ಟಾಕ್ಷರಿ ಶ್ರೀನಿವಾಸನೊಲಿಸುವ ತನಕ.//ಪ//.

ಸಕಲ ಜೀವಕೋಟಿಗಳ ಉಸಿರನೀಗೊ ನಾಸಿಕಾ,
ಆಸ್ತಿ ಮೇಲೆ ಮೋಹ ತೊರೆದು ಆಗು ನೀನು ಆಸ್ತಿಕ.
ಗಮಗಮಿಸುವ ವೈಕುಂಟದ ಗಮ್ಯ ನೋಡು ನಾಸಿಕಾ,
ಹರಿಯ ಪಾದ ತಾಕಲೆಂದು ಆಗು ಸೌಗಂಧಿಕಾ.//೧//.

ರುಚಿಯ ಹೇಳೊ ಮಾತನಾಡೊ ಎರಡು ಗುಣದ ನಾಲಿಗೆ,
ದೇಹವನ್ನು ಆಳುತಿರುವ ಎರಡಿಂಚಿನ ನಾಲಿಗೆ,
ಅರಸನಲ್ಲ ಆಳು ನೀನು ನಿಜದಿ ಬದುಕೊ ನಾಲಿಗೆ,
ಅಡುಗೆಮನೆಯ ತೊರೆದು ಹರಿಯ ಅಡಿಗೆ ಬೀಳೊ ನಾಲಿಗೆ.//೨//.

ಖಗನ ಕಣ್ಣ ಕಿರಣದಿಂದ ಜನುಮಪಡೆದ ಕಣ್ಣು ನೀ,
ಕಾಮ ತೊರೆದು ಕಾಣಬೇಕು ಜಗದಿ ಭಗದ ರೂಪ ನೀ,
ಸಾಕ್ಷಿಭಾವ ಧಕ್ಷತನದಿ ವಿಶ್ವವೀಕ್ಷಿಸಕ್ಷಿ ನೀ,
ಕಮಲನಯನ ನಾರಾಯಣನ ನೋಡಬಯಸು ನಯನ ನೀ.//೩//.

ದಿವಿಯ ವಾಯು ಧರೆಯ ಜೀವರನ್ನು ಬೆರೆಸೊ ಚರ್ಮವೇ,
ಶೀತ ಉಷ್ಣ ಧುಃಖ ಸುಖವ ಸಮದಿ ಸ್ವೀಕರಿಸುವಾ,
ಸ್ಪರ್ಷದಾಸೆಯಿಂದ ಯಾರ ದಾಸನಾಗ ಬೇಡವೇ,
ಮಾಧವನಾ ಪಾದಪೂಜೆಗಾಗಿ ತಪಿಸೊ ಪವನವೇ.//೪//.

ಆಕಾಶದಿ ಹುಟ್ಟಿಬಂದ ಶಬ್ದಕೇಂದ್ರ ಕರ್ಣಗಳೇ,
ಶುಭಾಶುಭದ ಸುದ್ದಿಗಳನು ಸಮತೋಲನದಾಲಿಸಿರಿ,
ಸುಪ್ತಮನಕೆ ಸಪ್ತಸ್ವರದ ಸಾಮವೇದ ಶ್ರಾವಿಸಿರಿ,
ಸಪ್ತಗಿರಿಯ ಒಡೆಯ ನುಡಿವ ವಾಣಿಗಾಗಿ ಶ್ರಮಿಸಿರಿ.//೫//.

-:ಅಹೋರಾತ್ರ.

  • ಕಾವ್ಯ ಮತ್ತು ಕವನ
~.~
  • Login or register to post comments
  • 637 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 23, 2006 - 9:57am — benaka

ಮೂಗೇ ಎಲ್ಲರ ಕೊಲೆಗಾರ !

benaka's picture

ಅಹೋರಾತ್ರರೆ,

ಕವನದ ವಸ್ತು ಚೆನ್ನಾಗಿದೆ. ಪಂಚಭೂತಾತ್ಮಕವಾದ ಪಂಚೇಂದ್ರಿಯಗಳನ್ನು ಪ್ರಾರ್ಥಿಸುವ ಬಗೆ ಚೆನ್ನಾಗಿದೆ.

ಬಹುಶಃ ಬೆರಳಚ್ಚಿನ ತೊಂದರೆಯೋ ಎನೋ ಕೆಲವು ಪದಗಳು ತಪ್ಪಾಗಿವೆ: 'ವೈಕುಂಟ', 'ಧುಃಖ', 'ಸ್ಪರ್ಷ' ಇತ್ಯಾದಿ.
ಆದರೆ 'ಇಂದ್ರೀಯ' ಎಂಬುದಕ್ಕೆ ನೀವೇನಾದರೂ ಬೇರೆ ಅರ್ಥ ಕಲ್ಪಿಸಿದ್ದೀರೋ, ಅಥವಾ 'ಇಂದ್ರಿಯ' ದ ತಪ್ಪಚ್ಚೋ ತಿಳಿಯಲಿಲ್ಲ.
ಇಂದ್ರೀಯ = ಇಂದ್ರನಿ(ಳಿ)ಗೆ ಸಂಬಂಧಿಸಿದ(?) ಎಂಬರ್ಥ ನನಗೇನೂ ತೋರಲಿಲ್ಲ ಇಲ್ಲಿ.

ಸಕಲ ಜೀವಕೋಟಿಗಳ ಉಸಿರನೀಗೊ ನಾಸಿಕಾ ಎಂಬಲ್ಲಿ ಮೂಗೇ ಎಲ್ಲರ ಕೊಲೆಗಾರ ಎಂಬಂತೆ ಅರ್ಥವಾಗುತ್ತದೆ. ನೀವು ಹೇಳಬಯಸಿದ್ದು ಸಕಲ ಜೀವಕೋಟಿಗಳ ಉಸಿರನಾಡೋ ನಾಸಿಕಾ ಎಂದೇ?
ಸುಮ್ಮನೆ ಕುತರ್ಕಕ್ಕೆ ಹೇಳುತ್ತೇನೆ, ತಪ್ಪು ತಿಳಿಯಬೇಡಿ: ಸಕಲ ಜೀವಕೋಟಿಗಳಿಗೂ 'ನಾಸಿಕ' ಇರುವುದಿಲ್ಲ!

ನಿಮ್ಮ

 

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 23, 2006 - 8:27pm — ahoratra

ಧನ್ಯವಾದ ಬೆನಕರೆ.

ahoratra's picture

ಬೆರಳಚ್ಚಿನ ದೋಷವಲ್ಲ ಅದು ನನ್ನ ವ್ಯಾಕರಣದ ದೋಷ.

ನಿಮ್ಮೆಲ್ಲರಿಂದ ಸ್ವಲ್ಪ ಸುದಾರಿಸಿದ್ದೇನೆ.

ಧನ್ಯವಾದ ಬೆನಕರೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಾಚಿಕೊಂಡಿರುವ ನಾಲಿಗೆ ಆಚಾರವಿಲ್ಲದ್ದು ಎಂದೇನಿಲ್ಲ!
  • ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ
  • ಒಂದು ಮೊರೆ
  • ದನಿಯಱಿವು
  • ಹರಿಯ ಪಡೆದ ಬೆಳಕು.
Syndicate content

ಲೇಖಕರು

ahoratra's picture

ಪರಿಚಯ

ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator