19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರಶ್ನೆಗಳಿಗೆ ಪರಿಣಿತರ ಉತ್ತರ, ಪ್ರಶ್ನೆ ಕೇಳದವರಿಗೆ ಬಹುಮಾನವಿಲ್ಲ!

March 31, 2009 - 12:40pm
omshivaprakash

ಭಾನುವಾರ ವಿಜ್ಞಾನ, ತಂತ್ರಜ್ಞಾನ, ಕೃಷಿಯ ಬಗ್ಗೆ ಕನ್ನಡದಲ್ಲಿ ಹೇಗೆ ಬರೆಯೋದು ತಿಳೀಲಿಕ್ಕೆ ಕರೆದ ಚರ್ಚೆ ಕಾರ್ಯಕ್ರಮ - ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನ ಹೆಚ್ಚಿಸಲಿಕ್ಕೆ ಒಂದು ಮುನ್ನುಡಿಯಷ್ಟೇ. ಅದು ಮುಂದುವರಿಯ ಬೇಕು ಅಂದ್ರೆ ಅದರ ಬಗ್ಗೆ ಅರಿವನ್ನ ಮೂಡಿಸುವ ಕೆಲಸ, ನಮ್ಮ ಮನಸ್ಸಿನಲ್ಲಿ, ಮನೆಯ ಸುತ್ತಮುತ್ತ ಮತ್ತು ಮನೆಯ ಒಳಗೆ ಸುಳಿದಾಡುವ ಅನೇಕ ಪ್ರಶ್ನೆಗಳನ್ನು ಒಂದೆಡೆ ಸೇರಿಸಿ, ಅದಕ್ಕೆ ಸಂಭಂದಿಸಿದ ಲೇಖನಗಳನ್ನು ಬರೆಯುವುದರಲ್ಲಿ ನಾವು ಮುಂದಾಗ ಬೇಕು.

ಕಂಪ್ಯೂಟರ್ ಅಂದ್ರೆ ಬ್ಲಾಗ್ ಮಾಡೋ ನಮಗೆಲ್ಲ ಅಲ್ಪ-ಸ್ವಲ್ಪ ಗೊತ್ತಿದೆ ಅಲ್ವಾ? ಆದ್ರೆ ಇದರ ಬಗ್ಗೆ ಗೊತ್ತಿಲ್ಲದ ಅನೇಕರು ನಮ್ಮೆಲ್ಲರ ಸುತ್ತಮುತ್ತ ಇದ್ದಾರೆ ಮತ್ತು ಅನೇಕ ಪ್ರಶ್ನೆಗಳನ್ನು ಕೇಳ್ತಿರುತ್ತಾರೆ. ಆ ಪ್ರಶ್ನೆಗಳನ್ನು ಈ ಲೇಖನದ ಕಾಮೆಂಟುಗಳ ಮೂಲಕ ಕಲೆ ಹಾಕಿ ಕನ್ನಡದಲ್ಲಿ ಕಂಪ್ಯೂಟರ್ ಕಲಿಯುವುದಕ್ಕೆ ಬೇಕಾದ ಲೇಖನಗಳನ್ನು ಬರೆಯಲು ಎಲ್ಲರನ್ನು ಹುರಿದುಂಬಿಸೋಣ.

ಅತಿ ಹೆಚ್ಚು ಪ್ರಶ್ನೆಗಳನ್ನು ಇಲ್ಲಿ ಸೇರಿಸುವವರಿಗೆ ಸಂಪದ ಟೆಕ್ ತಂಡ ಸಿದ್ದ ಪಡಿಸಿರುವ "ಚಿಗುರು ಗ್ನು/ಲಿನಕ್ಸ್" ಸಿ.ಡಿ ಸಿಗುತ್ತದೆ. 

ಮುಂದಿನ ಹಂತದಲ್ಲಿ ಲೇಖನಗಳನ್ನು ಬರೆಯಲಿಕ್ಕೆ ಬೇಕಿರುವ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲು, ಚರ್ಚಾಕೂಟಗಳನ್ನು ಏರ್ಪಡಿಸಲು "ಟೆಕ್ ಸಂಪದ" ತಂಡ ನಿಮಗೆ ಸಹಾಯ ಮಾಡಲಿದೆ. 

ಅದೆಲ್ಲದರ ಜೊತೆಗೆ ಹರಿ ಇಂತಹ ಸ್ವರ್ಧೆಗಳಲ್ಲಿ ಭಾಗವಹಿಸಿ, ವಿಜ್ಞಾನ, ತಂತ್ರಜ್ಞಾನ ಕುರಿತ ವಿಷಯಗಳನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ನೆರವಾಗುವವರಿಗೆ ಉಡುಗೊರೆ ಕೂಡ ಕೊಡಬಹುದು ಅಂತ ಹೇಳಿದ್ದಾರೆ.

ಮುಂದಿನ ೭ ದಿನ ನಾವು ಈ ಲೇಖನಕ್ಕೆ ಬರುವ "ಕಂಪ್ಯೂಟರ್" ಬಗೆಗಿನ ಸಾಮಾನ್ಯ ಪ್ರಶ್ನೆಗಳನ್ನು ನಿಮ್ಮೆಲ್ಲರ ಮೂಲಕ ಕಲೆ ಹಾಕ್ತೀವಿ.  ಕಾಮೆಂಟ್ ಹಾಕೋದನ್ನ ಮರೆಯಬೇಡಿ. ಕಾಮೆಂಟುಗಳಲ್ಲಿ ಚರ್ಚಿಸಲ್ಪಡುವ ವಿಷಯದ ಬಗ್ಗೆ ನೀವೇ ಒಂದು ಸಣ್ಣ ಲೇಖನ ಬರೀತೀನಿ ಅಂತಿದ್ದು, ಯಾರ ಸಹಾಯವಾದರೂ ಬೇಕಿದ್ದರೆ ತಪ್ಪದೆ tech-volunteers @ sampada.net ಗೆ ಒಂದು ಮೈಲಾಯಿಸಿ. ಟ್ವಿಟರ್ ನಲ್ಲಿ ಕೂಡ ಟೆಕ್ ಸಂಪದವನ್ನು ನೀವು ಸಂಪರ್ಕಿಸಬಹುದು.

ಟ್ವಿಟರ್ - http://twitter.com/t...

(ಸಂಪದದ ಈ ಒಂದು ಹೊಸ ಕಾರ್ಯಕ್ರಮಕ್ಕೆ ಹೊಸ ಹೆಸರಿಡುತ್ತೀರಾ? - ಹೆಸರುಗಳನ್ನು ಮೇಲೆ ನೀಡಿರುವವ್ ಈ-ಮೈಲ್ ವಿಳಾಸಕ್ಕೆ ಕಳುಹಿಸಿ)

ಲೇಖನ ವರ್ಗ (Category): 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by summer_glau on
ಕಂಪ್ಯೂಟರ್ ಲೋಕಕ್ಕೆ ಹೊಸತಾಗಿ ಬಂದವರಿಗೆ ಮತ್ತು ಬರುವ ಆಲೋಚನೆಯಲ್ಲಿ ಇರುವವರಿಗೆ ಇರುವ ಕೆಲವು ಪ್ರಶ್ನೆಗಳು * ಕಂಪ್ಯೂಟರ್ ನಲ್ಲಿ ಏನೇನು ಕೆಲಸ ಮಾಡಬಹುದು? * ಹತ್ತಾರು ಸಾವಿರ ದುಡ್ಡು ಕರ್ಚು ಮಾಡಿ ತೆಗೆದುಕೊಳ್ಳುವ ಅವಶ್ಯಕತೆ ಏನಿದೆ? * ಇಂಟರ್ನೆಟ್ ಸಂಪರ್ಕ ಅವಶ್ಯಕವೇ? * ವೈರಸ್ ಎಂದರೆ ಏನು? ಅದರಿಂದ ನಮಗೆ ಅಪಾಯವಿದೆಯೇ? * ನನಗೆ ಇಂಗ್ಲಿಷ್ ಚೆನ್ನಾಗಿ ಬರುವುದಿಲ್ಲ, ಕನ್ನಡದಲ್ಲೇ ಕಂಪ್ಯೂಟರ್ ಬಳಸಬಹುದೇ? ಕಂಪ್ಯೂಟರ್ ಅನ್ನು ಸ್ವಲ್ಪ ಬಳಸಿ ಅದರ ಪರಿಚಯ ಮಾಡಿಕೊಂಡವರಿಗೆ ಬರುವ ಪ್ರಶ್ನೆಗಳು * ಇಂಟರ್ನೆಟ್ ಸಂಪರ್ಕ ದಲ್ಲಿ kbps/mbps ಅಂದರೆ ಏನು? ಎಷ್ಟು kbps ಸಂಪರ್ಕ ತೆಗೆದುಕೊಳ್ಳಬೇಕು? * ADSL/Cable/GPRS/3G/CDMA/Wimax ಇವೆಲ್ಲ ಏನು? ಯಾವ ಸಂಪರ್ಕ ಉತ್ತಮ? * ನನ್ನ ಕಂಪ್ಯೂಟರ್ ಬಹಳ ನಿಧಾನ. ಏನು ಮಾಡಬೇಕು? * ಪೈರೆಟೆಡ್ ಸಾಫ್ಟ್ವೇರ್ ಅಂದರೆ ಏನು? ಅದರಿಂದ ಏನು ಅಪಾಯ? * anti virus ಕೊಂಡು ಕೊಳ್ಳಬೇಕೆ ? * ನನಗೆ ಕಂಪ್ಯೂಟರ್ ಬಳಸಿ xyz ಕೆಲಸ ಮಾಡಬೇಕು ಎಂದು ಇದೆ. ಅದಕ್ಕೆ ಸೂಕ್ತವಾದ ಸಾಫ್ಟ್ವೇರ್ ಯಾವುದು? ಕಂಪ್ಯೂಟರ್ ನಲ್ಲಿ ಪಳಗಿದ ಬಳಕೆದಾರರಿಗೆ * Open source ಎಂದರೆ ಏನು? * ಓಪನ್ ಸೋರ್ಸ್ ಬಳಸಿ xyz ಫೈಲ್ ಗಳನ್ನೂ open ಮಾಡಲು ಸಾಧ್ಯವೇ? * ನನ್ನ ವೆಬ್ ಸೈಟ್ ಮಾಡುವುದು ಹೇಗೆ? * ಇಂಟರ್ನೆಟ್ ಹೇಗೆ ಕೆಲಸ ಮಾಡುತ್ತದೆ? * ಈ ಮೇಲ್ ಹೇಗೆ ಕೆಲಸ ಮಾಡುತ್ತದೆ? * ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕಂಪ್ಯೂಟರ್ ಇದ್ದಾರೆ ಅವನ್ನು ನೆಟ್ವರ್ಕ್ ಮಾಡುವುದು ಹೇಗೆ? ಈ ಪ್ರಶ್ನೆಗಳಿಗೆ ನೀವು ಉತ್ತರಿಸುವಾಗ ಆದಷ್ಟು ಓಪನ್ ಸೋರ್ಸ್ ಸಾಫ್ಟ್ ವೇರ್ ಗಳ ಪರಿಚಯ ಮಾಡಿಕೊಡುವುದು ಒಳ್ಳೆಯದು. ಪ್ರಶ್ನೆಗಳನ್ನು ಒಟ್ಟು ಗೂಡಿಸಿದ ಮೇಲೆ ಯಾವುದಾದರೂ ವಿಕಿಯಲ್ಲಿ ಹಾಕಿದರೆ ಎಲ್ಲರು ಆ ಪ್ರಶೆಗಳನ್ನು ಉತ್ತರಿಸಲು ಅನುಕೂಲವಾಗುತ್ತದೆ. ಒಂದು ಹಂತಕ್ಕೆ ಬಂದಮೇಲೆ ಪ್ರಶ್ನೆ-ಉತ್ತರಗಳನ್ನು PDF ಆಗೋ, ಬ್ಲಾಗ್ ಆಗೋ ಹಾಕಿದರೆ ಅವನ್ನು ಹರಡಲುಸುಲಭ!

Submitted by ಶ್ರೀನಿಧಿ on
MB - Mega Byte (http://en.wikipedia....) GB - Giga Byte (http://en.wikipedia....) ಮೆಮೋರಿ ಅನ್ನೋದು ನೀವು ಏನನ್ನು ಉಪಯೋಗಿಸುತ್ತಿದ್ದೀರ ಅನ್ನೋದರ ಮೇಲೆ ನಿರ್ಧಾರ ಮಾಡಬೇಕು. ನೀವು ಕೇಳುತ್ತಿರುವುದು ಯಾವ ಮೆಮೋರಿ? RAM ಅಥವಾ Hard Disk ?

Submitted by omshivaprakash on
ಪ್ರತಿಕ್ರಿಯೆಗಳನ್ನು ಹಾಕಿದವರಿಗೆಲ್ಲ ಧನ್ಯವಾದಗಳು.. ಇದರ ಕೆಲಸವನ್ನು ಮುಂದುವರೆಸುವುದರ ಬಗ್ಗೆ ಮತ್ತೆ ಕಾಮೆಂಟ್ ಹಾಕ್ತೇನೆ. ಕಂಪ್ಯೂಟರ್ನ ಬಗ್ಗೆ ಸಂಪದಿಗರಿಗೆ ಇನ್ಯಾವುದೇ ಪ್ರಶ್ನೆಗಳು ಇಲ್ಲವೇ? ;) ಹಾಗಿದ್ದಲ್ಲಿ, ಮೇಲೆ ಕಂಡುಬಂದಿರುವ ಪ್ರಶ್ನೆಗಳಿಗೆ ಕಾಮೆಂಟುಗಳ ರೂಪದಲ್ಲೇ ಉತ್ತರ ಹಾಕ್ಲಿಕ್ಕೆ ಶುರು ಮಾಡ್ಬಹುದಲ್ವಾ?

Submitted by omshivaprakash on
ಈ ವಾರದ ಸಬ್ಜೆಕ್ಟ್ ಗೆ ಮುಂದಿನ ಲೇಖನ ನೋಡಿ. ಮೇಲೆ ಬಂದಿರುವ ಪ್ರಶ್ನಗಳಿಗೆ ಉತ್ತರಿಸಲು ಇಚ್ಚೆ ಇರುವವರು, ಸಂಪದದಲ್ಲಿ ಲೇಖನಗಳನ್ನು ಹಾಕಲು ಪ್ರಾರಂಭಿಸಬಹುದು. ಪ್ರಶ್ನೆಗಳನ್ನು ಹಾಕಿದ ಎಲ್ಲರಿಗೂ ಧನ್ಯವಾದಗಳು.

Submitted by shaamala on
ಹೊಸದಾಗಿ ಬಂದಿರೋ ನೆಟ್ಬುಕ್ನಲ್ಲಿ ಗ್ನು-ಲಿನಕ್ಸ್ ಹಾಕ್ಬೋದ? ೮೦ GB ವರೆಗೂ ಹಾರ್ಡ್ ಡ್ರೈವ್ಗಳಿದಾವೆ, ಜೊತೆಗೆ ೧ GB ಮೆಮೊರಿ. ಗ್ನು-ಲಿನಕ್ಸ ಕಲಿಯೋಣ -ನಿಮ್ಮನ್ನ ದ್ರೋಣಾಚಾರ್ಯ ಮಾಡ್ಕೊಂಡು (ನಿಮ್ಮ ಆನ್ಲೈನ್ ನೋಟ್ಸ್ ಓದಿ) ಅಂತ!

Submitted by omshivaprakash on
>> ಹೊಸದಾಗಿ ಬಂದಿರೋ ನೆಟ್ಬುಕ್ನಲ್ಲಿ ಗ್ನು-ಲಿನಕ್ಸ್ ಹಾಕ್ಬೋದ? ಖಂಡಿತ ಹಾಕ್ಬಹುದು. >> ೮೦ GB ವರೆಗೂ ಹಾರ್ಡ್ ಡ್ರೈವ್ಗಳಿದಾವೆ, ಜೊತೆಗೆ ೧ GB ಮೆಮೊರಿ. ನಿಮ್ಮವಿಂಡೋಸ್ ಇತ್ಯಾದಿ ಬಿಟ್ಟು, ಒಂದು ೧೦ - ೧೫ GB ಹಾರ್ಡಿಸ್ಕ್ ಸ್ಪೇಸ್ ಇದ್ರೆ ಬಹಳ ಆಯ್ತು :) >> ಗ್ನು-ಲಿನಕ್ಸ ಕಲಿಯೋಣ -ನಿಮ್ಮನ್ನ ದ್ರೋಣಾಚಾರ್ಯ ಮಾಡ್ಕೊಂಡು (ನಿಮ್ಮ ಆನ್ಲೈನ್ ನೋಟ್ಸ್ ಓದಿ) ಅಂತ "ಅಬ್ಬಾ" ದೊಡ್ಡ ಮಾತು... :) ಖಂಡಿತ ಕಲಿಯಿರಿ. ಎಲ್ಲರಿಗೆ ಗ್ನು/ಲಿನಕ್ಸ್ ಕಲಿಸಲಿಕ್ಕೇ ಲಿನಕ್ಸಾಯಣ ಬರೀತಿರೋದು.... ಹಾಗೇ, ಇದುವರೆಗೆ ಕಂಪ್ಯೂಟರ್ ಬಗ್ಗೆ ನಿಮ್ಮ ಲಹರಿಯಲ್ಲಿ ಹರಿಯುತ್ತಿರುವ ಪ್ರಶ್ನೆಗಳ ಪಟ್ಟಿಯನ್ನು ಈ ಲೇಖನದಲ್ಲಿ ಸೇರಿಸಲು ಪ್ರಯತ್ನಿಸ್ತಿದ್ವಿ. ನಿಮಗೆ ಯಾವ್ದಾದ್ರೂ ಪ್ರಶ್ನೆ ಬಿಟ್ಟು ಹೋಗಿದೆ ಅಂದ್ರೆ ಅದನ್ನ ಸೇರಿಸಿ.