ಬುಧವಾರದ ಫಿಫಾವಿಶ್ವಕಪ್ಪಿನಲ್ಲಿ, ಅರ್ಜೇಂಟೈನದ ಆಟ, ಕಲಾತ್ಮಕ ಹಾಗೂ ರಕ್ಷಾತ್ಮಕ ವಾಗಿತ್ತು !
ಫಿಫಾ ವಿಶ್ವಕಪ್: ಇಂದು, ಗುರುವಾರ, ೨೨, ಜೂನ್, ೨೦೦೬ ರಂದು ನಡೆಯಲಿರುವ ಆಟಗಳು:
ಸಾ.೭-೩೦ ಚೆಕ್ ರಿಪಬ್ಲಿಕ್ ವಿರುಧ್ದ ಇಟಲಿ 'ಇ' ಗ್ರುಪ್
ಸಾ.೭-೩೦ ಘಾನ ವಿರುಧ್ದ ಯು.ಎಸ್.ಎ 'ಇ'ಗ್ರುಪ್
ಮ.ರಾ.೧೨-೩೦ ಜಪಾನ್ ವಿರುಧ್ದ ಬ್ರೆಸಿಲ್ 'ಎಫ್'ಗ್ರುಪ್
ಮ.ರಾ.೧೨-೩೦ ಆಷ್ಟ್ರೇಲಿಯ ವಿರುಧ್ದ ಕ್ರೊವೇಷಿಯ 'ಎಫ್'ಗ್ರುಪ್
ಬುಧವಾರ, ೨೧, ಜೂನ್, ೨೦೦೬ ರಂದು ವಿಶ್ವ ಕಪ್ ಸಾಕರ್ ನಲ್ಲಿ ಆಡಿದ ಆಟಗಳ ವಿವರ:
೧. ಡಿ' ಗ್ರುಪ್: ವೆಲ್ಟಿನ್ಸ್ ಅರೆನ, ಗೆಲ್ ಸೆನ್ ಕಿರ್ಚಿನ್ ನಲ್ಲಿ. ಪೋರ್ಚುಗಲ್ ವಿರುಧ್ದ ಮೆಕ್ಸಿಕೊ ಆಟದಲ್ಲಿ ಪೋರ್ಚುಗಲ್ (೨-೧)ಗೋಲಿನಿಂದ ಗೆದ್ದು 'ಡಿ' ಟೀಮಿನಲ್ಲಿ ಮೊದಲ ಸ್ಥಾನದಲ್ಲಿದೆ. ಅವರ ಆಟಗಾರ ಮನಿಚ್ ೫ ನೆ ನಿಮಿಷದಲ್ಲಿ ಗೋಲ್ ಬಾರಿಸಿದರು.೨೪ ನೆ ನಿಮಿಷದಲ್ಲಿ ಸಿಮಾವೊ ಪೆನಾಲ್ಟಿ ಕಿಕ್ ಹೊಡೆದು ಪೋರ್ಚುಗಲ್ಲಿನ ಸ್ಥಿತಿಯನ್ನು ಉತ್ತಮ ಪಡಿಸಿದರು.ಮೆಕ್ಸಿಕೊ ಕಡೆ ೨೯ ನೆ ನಿಮಿಶದಲ್ಲಿ ಫ್ರಾನ್ಸಿಸ್ಕೊ ಫೊನ್ ಸೆಕ್ ಗೊಲ್ ಹೊಡೆದರು.ಪೋರ್ಚುಗಲ್ ಈಗ ೨ ನೆ ರಂಡ್ ಪ್ರವೇಷಿಸಿದ್ದು ನೆದರ್ ಲ್ಯಾಂಡ್ಸ್ ಅಥವ ಅರ್ಜೆಂಟೈನ್ ಜೊತೆಗೆ ಭಾನುವಾರದಂದು ಕಾದಲಿದೆ.ಶನಿವಾರದ ಆಟದಲ್ಲಿ ಮೆಕ್ಸಿಕೊ ಗ್ರುಪ್ 'ಸಿ 'ನಲ್ಲಿ ೨ನೆ ಸ್ಥಾನ ಪಡೆದ ತಂಡದೊಡನೆ ಸೆಣೆಸಲಿದೆ.
೨. ಡಿ' ಗ್ರುಪ್: ಝೆಂಟ್ರಾಲ್ ಸ್ಟೇಡಿಯಾನ್ ಲಿಪ್ ಝಿಗ್. ಇರಾನ್ ವಿರುದ್ಧ ಆಂಗೋಲದ 'ಡ್ರಾ' ಆಗಿ ಕೊನೆಗೊಂಡ ಆಟ ದಲ್ಲಿ, ಇರಾನ್ ಪರವಾಗಿ ೭೫ ನೇ ನಿಮಿಷದಲ್ಲಿ ಸೊಹ್ರಾಬ್ ಬಕ್ತಿಯಾರ್ ಇಝಾದೇಹ್ ,ಗೊಲ್ ಹೊಡೆದರು. ೬೦ ನೆ ನಿಷದಲ್ಲಿ ಆಂಗೊಲದ ಆಟಗಾರ ಫ್ಲೇವಿಯೊ, ಗೊಲ್ ಬಾರಿಸಿದರು.
೩. ಸಿ' ಗ್ರುಪ್: ಅಲಿಯನ್ಸ್ ಅರೇನಾ , ಮ್ಯುನಿಕ್. ಐವರಿ ಕೊಸ್ಟ್ ವಿರುಧ್ದ ಸರ್ಬಿಯ ಮಾಂಟೆನೆಗ್ರೊ ಗಳ ಸೆಣೆಸಾಟದಲ್ಲಿ, ೩-೨ ಗೊಲ್ ನಿಂದ ಐವರಿಕೊಸ್ಟ ಮುಂದಿದೆ. ಐವರಿಕೊಸ್ಟನ ಅರುನ ದಿಂಡನೆ, ಪೆನಾಲ್ಟಿ ಗೊಲ್ ಹೊಡೆದು ೩೬ ನೆ ನಿಮಿಷದಲ್ಲಿ ಒಂದು ಗೊಲ್ ಮಾಡಿದರು. ಅವರು ಇನ್ನೊಂದು ಗೊಲ್, ೬೬ ನೆ ನಿಮಿಷದಲ್ಲು ಮಾಡಿದರು.೮೫ ನೇ ನಿಮಿಷದಲ್ಲಿ ಮತ್ತೊಂದು ಗೊಲ್ ಬಾರಿಸಿದವರು ಬೊನ್ ಸೆಂಚ್ಯುರೆ ಕಲಾವು. ಸರ್ಬಿಯ ಕಡೆ ೧೦ ನೆ ನಿಮಿಷದಲ್ಲಿ ನಿಕೊಲ್ ಝಿಜಿಚ್ ೨೦ ನೇ ನಿಮಿಷದಲ್ಲಿ, ಸಸ ಇಲಿಚ್, ತಲಾ ಒಂದು ಗೊಲ್ ಮಾಡಿದರು.
೪. 'ಸಿ' ಗ್ರುಪ್: ವಾಲ್ಡ್ ಸ್ಥೇಡಿಯನ್, ಫ್ರಾಂಕ್ ಫರ್ಟ್. ನೆದರ್ ಲ್ಯಾಂಡ್ಸ್ ವಿರುದ್ಧ ಆಡಿದ ,ಅರ್ಜೆಂಟೈನ ದ ಪಂದ್ಯ 'ಡ್ರಾ 'ನಿಂದ ಕೊನೆಗೊಂಡಿತು. ಅರ್ಜೆಂಟೈನಾ ಕಲಾತ್ಮಕವಾಗಿಯೂ ಮತ್ತು ರಕ್ಷಾತ್ಮಕವಾಗಿಯೂ ಆಡಿ, ತಮ್ಮ ತಂಡದ ಪ್ರಥಮಸ್ಥಾನದಲ್ಲಿದ್ದಾರೆ.
ಈಗಾಗಲೆ ಎ, ಬಿ, ಸಿ, ಡಿ ತಂಡಗಳು ತಮ್ಮ ಸೆಣಸಾಟ ಮುಗಿಸಿದ್ದು, ಅಂಕಗಳು ಹೀಗಿವೆ :
ಎ' ತಂಡ:
ಜರ್ಮನಿ-೯
ಇಕ್ವೆಡಾರ್ -೬
ಪೊಲೆಂಡ್- ೩
ಕೊಸ್ಟರಿಕ-೦
ಬಿ' ತಂಡ:
ಇಂಗ್ಲೆಂಡ್ -೭
ಸ್ವೀಡನ್ -೫
ಪರಗ್ವೆ -೩
ಟೀ ಮತ್ತು ಟಿ- ೧
ಸಿ' ತಂಡ:
ಅರ್ಜೆಂಟೈನ - ೭
ನೆದರ್ ಲ್ಯಾಂಡ್ಸ್-೭
ಐವರಿ ಕೊಸ್ಟ್ -೩
ಸರ್ಬಿಯ -೦
ಡಿ' ತಂಡ:
ಪೊರ್ಚುಗಲ್ -೯
ಮೆಕ್ಸಿಕೊ -೪
ಆಂಗೋಲಾ -೨
ಇರಾನ್- ೧

- Login or register to post comments
- 538 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಪೋಲೆಂಡ್, ಈಗ ಗೊಲ್ ಹೊಡೆದು ಮುನ್ನಡೆಯಲು ಹಾತೊರೆಯುತ್ತಿದೆ ! ವಿಶ್ವಕಪ್ ನಾಕ್ ಔಟ್ ಪ್ರಕ್ರಿಯೆ ಸಾಗಿದೆ !
- ನೆನ್ನೆ ನಡೆದ ಬ್ರೆಸಿಲ್ ವಿರುಧ್ದ ಜಪಾನ್ ಮ್ಯಾಚಿನಲ್ಲಿ, (೪-೧) ಭರ್ಜರಿ ಜಯ : ರೋನೋಲ್ಡೋ ಪುನಃ ಅಗ್ರಸ್ಥಾನದಲ್ಲಿ !
- ಕೆರೆಬಿಯನ್ ನ ಅತಿಚಿಕ್ಕದೇಶಗಳಾದ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಇಂಗ್ಲೆಂಡ್ ನ ತಲೆ ತಿಂದವು !
- ೨೦೦೬ ರ, ವಿಶ್ವಕಪ್ಪಿನ ಟೀಮ್ ನಲ್ಲಿ ಯಾರು ಹೊರಗೆ, ಯಾರು ಒಳಗೆ, ಒಂದು ನೋಟ !
- ವಿಶ್ವಕಪ್ ಫುಟ್ ಬಾಲ್ : -೨೦೦೬, ಗ್ರುಪ್ ಗಳು ಮತ್ತು ಅಂಕಗಳು :*


RSS:
ಪ್ರತಿಕ್ರಿಯೆಗಳು
ವೆಂಕಣ್ಣರಿಗೆ.
ವೆಂಕಣ್ಣ,
ನನಗೆ ಈ ಆಟದ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ, ನಿಮ್ಮ ಲೇಖನಗಳು ಓದಿಓದಿ ಮೊನ್ನೆ ನಡೆದ ಆಸ್ತ್ರೇಲಿಯ ಮತ್ತು ಬ್ರೆಸಿಲ್ ನ ಪಂದ್ಯ ನೋಡೇಬಿಟ್ಟೆ,
ಅಧ್ಬುತ..! ಅಮೋಘ...! ೮೦ ನಿಮಿಷದಲ್ಲಿ ೭೦ ನಿಮಿಷ ಬ್ರೆಸಿಲ್ ನ ಕಾಲಲ್ಲೇ ಚೆಂಡಿತ್ತಲ್ರಿ.
ಅಹೋರಾತ್ರ
ಅಹೊರಾತ್ರ ರವರಿಗೆ,
ಬ್ರೆಸಿಲ್ ತಂಡದಲ್ಲಿ, ಈಗ ರೊನಾಲ್ಡೋ ಮತ್ತೆ ಫಾರಂಗೆ ಬಂದಿದಾನೆ. ರೋನಾಲ್ಡಿನೋ ಪ್ರತಾಪ ಇನ್ನೂ ನಾವು ನೀವು ನೋಡಿಲ್ಲ. ಅದು ಬಾಕಿ ಇದೆ.ಇನ್ನು ಕಾಫು, ಕಾಕ -ಒಬ್ಬರೆ ಇಬ್ಬರೇ ? ಒಬ್ಬೊಬ್ಬರೂ ಒಬ್ಬ ಘಟಾನು ಘಟಿಗಳು ! ನೋಡಿ ಆನಂದಿಸಿ !