ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||
ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.
ಸಂಪದದಲ್ಲಿ...
ಕೇವಲ ಕನ್ನಡಿಗರಿಗೆ ಮತ ನೀಡಿ
ಸದ್ಯದಲ್ಲೇ ಚುನಾವಣೆಗೆ ಮತದಾರ ಸಜ್ಜಾಗಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಮತದಾರ ಜಾಗೃತನಾಗಬೇಕಿದೆ. ಈ ಬಾರಿ ಕನ್ನಡಿಗ ತನ್ನ ಒಂದು ಮತದ ಬೆಲೆ ಏನು ಎನ್ನುವುದನ್ನು ಎಲ್ಲಾ ರಾಜಕೀಯ ಪಕ್ಷಗಳಿಗೆ ತೋರಿಸಬೇಕಾಗಿದೆ.
ಅಂದರೆ ಪ್ರತೀ ಕನ್ನಡಿಗ ತನ್ನ ಮತ ಕ್ಷೇತ್ರದ ಪ್ರತಿ ಅಭ್ಯರ್ಥಿಯ ಹಿನ್ನೆಲೆ ವಿಚಾರಿಸಿ ಮತ ನೀಡಬೇಕಾಗಿದೆ. ಅಂದರೆ ಅಭ್ಯರ್ಥಿ ಕರ್ನಾಟಕದ ಪರವಾಗಿದ್ದಾನೆಯೋ? ಅಥವಾ ಇತರ ಭಾಷಾಪರವಾಗಿದ್ದನೆಯೋ ಎಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮತ ನೀಡಬೇಕಾದ ಪರಿಸ್ಥಿತಿ ಬಂದಿದೆ.
ದಯವಿಟ್ಟು ಈ ಕೆಳಗಿನ ಅಂಶಗಳನ್ನು ಗಮನಿಸಿ ನೀವು ಮತದಾನ ಮಾಡಿ :
೧. ಅಭ್ಯರ್ಥಿಯು ಕನ್ನಡಿಗನಾಗಿರಬೇಕು.
೨. ಕರ್ನಾಟಕ ಹಾಗೂ ಕನ್ನಡಕ್ಕೆ ಗೌರವ ಕೊಡುವವನಾಗಿರಬೇಕು.
೩. ಕನ್ನಡ ಓದಲು ಬರೆಯಲು ಬರುವವನಾಗಿರಬೇಕು.
೪. ಕನಿಷ್ಠ ಪದವಿ ಓದಿರಬೇಕು.
೫. ಮತದಾರರನ್ನು ಓಲೈಸಲು ಅವರ ಕಾಲು ಬೇಕಾದರೂ ನೆಕ್ಕಲೂ ತಯಾರಿರುವ ಅಭ್ಯರ್ಥಿಗಳನ್ನು ಸೋಲಿಸಿ, ಅವರಿಗೆ ಮತ ನೀಡಬೇಡಿ.
೬. ಅರವತ್ತಕ್ಕಿಂತ ಹೆಚ್ಚಿನ ವಯಸ್ಸಿನ ಅಭ್ಯರ್ಥಿಗಳಿಗೆ ದಯವಿಟ್ಟು ಮತ ನೀಡಬೇಡಿ.
೭. ಹಣ, ಹೆಂಡ ಹಂಚುವ ಅಭ್ಯರ್ಥಿಗಳನ್ನು ಸೋಲಿಸಿ. (ಹಣ, ಹೆಂಡ ಬೇಕಾದರೆ ತೆಗೆದುಕೊಳ್ಳಿ, ಆದರೆ ಮತ ಮಾತ್ರ ನೀಡಲೇ ಬೇಡಿ.)
೮. ಅಭ್ಯರ್ಥಿಯ ಹಿನ್ನೆಲೆ ವಿಚಾರಿಸಿ (ಅಂದರೆ ಅವನ ವ್ಯಾಪಾರ ವಹಿವಾಟು, ಕ್ರಿಮಿನಲ್ ಹಿನ್ನೆಲೆ) ಮತ ನೀಡಿ.
೯. ಬೆಳಗಾವಿಯ ಸುರೇಶ್ ಅಂಗಡಿ, ಸಂಜಯ್ ಪಾಟೀಲ್ ಹಾಗೂ ರಮೇಶ ಕತ್ತಿ ಯಂತಹ ಕನ್ನಡ ದ್ರೋಹಿಗಳಿಗೆ ದಯವಿಟ್ಟು ಮತ ನೀಡಬೇಡಿ. (ಏಕೆಂದರೆ ಇವರು ಮತಕ್ಕಾಗಿ ಮರಾಠಿಗರ ಕಾಲು ನೆಕ್ಕಲೂ ಹಿಂಜರಿಯದವರು).
೧೦. ಕರ್ನಾಟಕದ ಗಣಿ ಲೂಟಿ ಮಾಡಿ ಮೆರೆಯುತ್ತಿರುವ ಬಳ್ಳಾರಿಯ ಖದೀಮರಿಗೆ (ಅವರು ಯಾವ ಪಕ್ಷವಾದರೂ ಸರಿ) ಮತ ನೀಡಬೇಡಿ.
೧೧. ಕುಟುಂಬ ರಾಜಕಾರಣ ಮಾಡುತ್ತಿರುವ ಅಭ್ಯರ್ಥಿಗಳಿಗೆ ಮತ ನೀಡಬೇಡಿ.
೧೨. ಕಳೆದ ಬಾರಿ ಸಂಸತ್ತಿಗೆ ಆಯ್ಕೆಯಾದ ನಾಲಾಯಕ್ ಸಂಸದರಿಗೆ ದಯವಿಟ್ಟು ಮತ ನೀಡಬೇಡಿ...ಏಕೆಂದರೆ ಅವರೆಲ್ಲಾ ಕನ್ನಡ ವಿರೋಧಿಗಳೇ ಸರಿ. ಅವರು ಯಾವತ್ತೂ ಕರ್ನಾಟಕದ ಪರ, ಕನ್ನಡದ ಪರ ದನಿ ಎತ್ತಲೇ ಇಲ್ಲ.
ಇನ್ನೂ ಏನಾದರೂ ಬಿಟ್ಟು ಹೋಗಿದ್ದರೆ ದಯವಿಟ್ಟು ತಿಳಿಸಿ.
ಕರ್ನಾಟಕ ಕೇವಲ ಕನ್ನಡಿಗರಿಗೆ. ಹೊರಗಿನಿಂದ ಬಂದು ಇಲ್ಲಿನ ಸಂಸ್ಕೃತಿ, ನೆಲವನ್ನು ಹಾಳುಗೆಡವುವ ಖದೀಮರನ್ನು ರಾಜ್ಯ ಬಿಟ್ಟು ಓಡಿಸಿ. ಕರ್ನಾಟಕ ಕೇವಲ ಕನ್ನಡಿಗರಿಗೆ.
- Login or register to post comments
- 244 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS: