ಮಡಿಕೇರಿಯಲ್ಲಿ ಮೆರೆದಾಟ.

ಮಡಿಕೇರಿಯಲ್ಲಿ ಮೆರೆದಾಟ.

ಈ ಪ್ರವಾಸ ನಾವು ಕೈಗೊಂಡಿದ್ದು ಜನವರೀ ೨೪ ೨೦೦೯ರ ಶನಿವಾರದಂದು. ಈ ಪ್ರಯಾಣಕ್ಕೆ ಜೊತೆಯಾದವರು ನನ್ನ ಸಂಬಂಧಿ ರಾಘು, ಆತನ ಸೋದರಿಯರು (ಅವನ Cousins ಸೇರಿ) ಮತ್ತು ಗೆಳೆಯ ರಾಮ.

ಈ ಪ್ರವಾಸಕ್ಕೆ ಹೋಗುವುದೆಂದು ಖಾತ್ರಿಯಾದದ್ದು ಶುಕ್ರವಾರ, ಅಂದರೆ ಜನವರೀ ೨೩ ೨೦೦೯. ಸಂಜೆ ೬ಕ್ಕೆ ರಾಘು, ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಮಡಿಕೇರಿಗೆ ಹೋಗೋಣವೆಂದು, ನಮ್ಮ ಜೊತೆಗೆ ಆತನ ಸೋದರಿಯರು ಬರುತ್ತಾರೆಂದು ಹೇಳಿದ. ಒಟ್ಟು ೭ ಮಂದಿ. ಎರಡು ಕಾರುಗಳಲ್ಲಿ ಹೋಗುವುದಾಗಿ ಹೇಳಿದ. ನನ್ನ ಮತ್ತು ರಾಘು ಕಾರಿನಲ್ಲಿ ಹೋಗುವುದಾಗಿ ನಿರ್ಧರಿಸಿದೆವು.
ಕೊನೆ ಘಳಿಗೆಯಲ್ಲಿ ಎಲ್ಲರೂ ಒಟ್ಟಿಗೆ ಒಂದೇ ವಾಹನದಲ್ಲಿ ಹೋಗುವ ನಿರ್ಧಾರವಾಯಿತು.

ಈಗ ನಮ್ಮಲ್ಲಿದ್ದ ಗೊಂದಲ ವಾಹನದ arrangement. ನಾಳೆ ಬೆಳಿಗ್ಗೆ ಹೋಗುವ ಪ್ರಯಾಣಕ್ಕೆ ಇಂದು ರಾತ್ರಿ ವಾಹನ ಬುಕ್ ಮಾಡಿದರೆ ಸಿಗುವುದೇ ಎಂಬ ಯೋಚನೆ ಇತ್ತು. ಗೊತ್ತಿದ್ದ ಎಲ್ಲಾ ಟ್ರ್ಯಾವೆಲ್ ಏಜೆಂಟರಿಗೆ ಫೋನ್ ಮಾಡಿದೆವು. ಯಾವ ವಾಹನವೂ ಸಿಗಲಿಲ್ಲ. ಯಾವುದೇ ವಾಹನ ಸಿಗದಿದ್ದಲ್ಲಿ ನಮ್ಮದೇ ಕಾರುಗಳಲ್ಲಿ ಹೋಗುವ ನಿರ್ಧಾರ ಮಾಡಿ, ಕೊನೆಯ ಪ್ರಯತ್ನ ಅಂತ ಇನ್ನೊಬ್ಬ ಟ್ರ್ಯಾವೆಲ್ ಏಜೆಂಟ್ಗೆ ಫೋನ್ ಮಾಡಿದ ರಾಘು. ಟಾಟಾ ಸುಮೋ ಇದೆ ಅಂತ ಹೇಳಿದ ಏಜೆಂಟ್. ಅಬ್ಬಾ ಸದ್ಯ ವಾಹನ ಸಿಕ್ತಲ್ಲಾ ಅಂತ ಟಾಟಾ ಸುಮೋವನ್ನು ಬುಕ್ ಮಾಡಿದ ರಾಘು. ಆಗ ಸಮಯ ರಾತ್ರಿ ೧೨ಘಂಟೆ.

ರಾಘು ನನಗೆ ಮತ್ತು ರಾಮನಿಗೆ ಫೋನ್ ಮಾಡಿ ಟಾಟಾ ಸುಮೋ ಬುಕ್ ಮಾಡಿದ್ದೇನೆ. ಬೆಳಿಗ್ಗೆ ಆರಕ್ಕೆ ನಮ್ಮ ಮನೆಗೆ ಬರುತ್ತದೆ ಅಂತ ಹೇಳಿ ಫೋನ್ ಡಿಸ್ಕನೆಕ್ಟ್ ಮಾಡಿದ.

ಬೆಳಿಗ್ಗೆ ಆರಕ್ಕೆ ರಾಘು ಮನೆಗೆ ಟಾಟಾ ಸುಮೋ ಓಡಿಸಿಕೊಂಡು ಡ್ರೈವರ್ ಮಂಜುನಾಥ್ ಬಂದನು. ಅಲ್ಲಿಂದ ರಾಘು ಮತ್ತು ಅವನ ಸೋದರಿಯರು ನಮ್ಮ ಮನೆಗೆ ಬಂದರು. ಅಲ್ಲಿಂದ ರಾಮನನ್ನು ಕರೆದುಕೊಂಡು ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು. ಮಧ್ಯಾಹ್ನ ದುಬಾರೆ ಆನೆ ಶಿಬಿರಕ್ಕೆ ತಲುಪಿದೆವು.

 

 

 

 

 

 

 

 

 

 

ಅಲ್ಲಿ ಊಟವನ್ನು ಮುಗಿಸಿ ಆನೆ ಶಿಬಿರಕ್ಕೆ ಮೋಟಾರ‍್ ದೋಣಿಯಲ್ಲಿ ಹೋದೆವು.

 

 

 

ಅಲ್ಲಿ ಕಂಡ ಕೆಲವು ದೃಶ್ಯಗಳನ್ನು ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದೆನು.

ನಂತರ ಮಡಿಕೇರಿಯನ್ನು ತಲುಪುವ ಹೊತ್ತಿಗೆ ಸಂಜೆಯಾಗಿತ್ತು.

 

 

 

 

 

 

 

 

ಅಲ್ಲೇ ಸೂರ್ಯಾಸ್ತದವರೆಗೂ ಕಾದು ಸೂರ್ಯಾಸ್ತದ ಕೆಲವು ಚಿತ್ರಗಳನ್ನು ಸೆರೆಹಿಡಿದೆನು. 

ನಂತರ ಮಡಿಕೇರಿಯಿಂದ ತಲಕಾವೇರಿಯ ಮಾರ್ಗದಲ್ಲಿರುವ "ರತಿ ಹೋಂ ಸ್ಟೇ"ಯಲ್ಲಿ ತಂಗಿದ್ದೆವು.

 

 

ಈ ಹೋಂ ಸ್ಟೇಯನ್ನು ಇನ್ನೊಬ್ಬ ಸ್ನೇಹಿತನ ಮೂಲಕ ಮುಂಗಡವಾಗಿ ಕಾದಿರಿಸಿದೆವು. ಬುಕಿಂಗ್ ಮಾಡಿಸಿದಾಗ ರಾತ್ರಿ ಹನ್ನೊಂದು ಘಂಟೆ (ಜನವರೀ ೨೩ ೨೦೦೯). ರಾತ್ರಿ ಹೋಂ ಸ್ಟೇಯಲ್ಲೇ ಭರ್ಜರಿ ಭೋಜನ. ಒಳ್ಳೇ ನಿದ್ದೆ.

ಮಾರನೇ ದಿನ ಬೆಳಿಗ್ಗೆ ಎದ್ದು ತಲಕಾವೇರಿಯ ಕಡೆಗೆ ಹೊರಟೆವು.

ವಾಹನದಲ್ಲಿ ಅಂತ್ಯಾಕ್ಷರಿ ಆಟ. ಎಲ್ಲರೂ ಭಾಗವಹಿಸಿದೆವು. ತಲಕಾವೇರಿಯಲ್ಲಿ ಕಾವೇರಿಯ ಉಗಮ ಸ್ಥಾನವನ್ನು ನೋಡಿ ಅಲ್ಲಿನ view pointಗೆ ಹೋದೆವು.   

ಅಲ್ಲಿ ಕಂಡ ಕೆಲವು ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಮಡಿಕೇರಿಯ ಕಡೆಗೆ ಪ್ರಯಾಣ ಬೆಳೆಸಿದೆವು.

ಮಡಿಕೇರಿಯಲ್ಲಿ ಓಂಕಾರೇಶ್ವರ ದೇವಸ್ಥಾನಕ್ಕೆ ಹೋದಾಗ ಸಮಯ ೧೨ ಆಗಿತ್ತು. 

  

ಓಂಕಾರೇಶ್ವರನಿಗೆ ಮಾಡುತ್ತಿದ್ದ ಮಹಾಮಂಗಳಾರತಿಯನ್ನು ವೀಕ್ಷಿಸಿ ಅಲ್ಲಿಂದ ಅಬ್ಬಿ ಜಲಪಾತದ ಕಡೆಗೆ ಹೊರಟೆವು.

ಭಾನುವಾರವಾದ್ದರಿಂದ ಸಿಕ್ಕಾಪಟ್ಟೆ ಜನ. ಅಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದು ಬೆಂಗಳೂರಿನ ಕಡೆಗೆ ಹೊರಟೆವು.

ಮಾರ್ಗ ಮಧ್ಯದಲ್ಲಿ ಊಟ ಮಾಡಿ ಮೈಸೂರು ತಲುಪುವ ಹೊತ್ತಿಗೆ ಸಂಜೆ ೬ ಆಗಿತ್ತು. ಮೈಸೂರಿನಲ್ಲಿ ತಿಂಡಿ ತಿಂದು ಬೆಂಗಳೂರಿನ ಕಡೆಗೆ ಹೊರಟೆವು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ಮಾಯ್ಸ೨'s picture

ಚೆಲಿವಾದ ಪಾಪೆಗಳು. ಚನ್ನಾಗಿದೆ ಹಿಡಿಸಿದ್ದೀರಿ.

anil.ramesh's picture

ಮಹೇಶ,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ. :)

-ಅನಿಲ್.

gururaj.bv's picture

ಚಿತ್ರಗಳೆಲ್ಲಾ ಚೆನ್ನಾಗಿದೆ.. good compsition, depth, angle of view, point of intrest, all are fine. . . . . . . .

anil.ramesh's picture

ಗುರುರಾಜ್,
ಮೆಚ್ಚುಗೆಗೆ ತುಂಬಾ ಧನ್ಯವಾದಗಳು.

-ಅನಿಲ್.

nkumar's picture

ಅಬ್ಬಬ್ಬಾ ಏನು ಚಿತ್ರಗಳು ಅನಿಲರೆ. ಬಹಳ ಚೆನ್ನಾಗಿದೆ. viewpoint ಚಿತ್ರವನ್ನು ಬೇಕಾದರೆ ಪ್ರಿಂಟ್ ತೆಗೆದು ಫ್ರೇಮ್ ಹಾಕಿಸಿ :).

viewpoint ಚಿತ್ರವನ್ನು ಹೇಗೆ ತೆಗೆದಿರಿ? (ಅರ್ಥಾತ್ ಕಾಮೆರಾ ಕಾಂನ್ಫಿಗರೇಶನ್)

ಹೋಮ್-ಸ್ಟೇ ಬಗ್ಗೆ ಮತ್ತಷ್ಟು ಮಾಹಿತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು (ಶುಲ್ಕ, ಊಟ, ಬುಕಿಂಗ್ ಇತ್ಯಾದಿ)

anil.ramesh's picture

ನಂದ,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್. :)

>>viewpoint ಚಿತ್ರವನ್ನು ಹೇಗೆ ತೆಗೆದಿರಿ? (ಅರ್ಥಾತ್ ಕಾಮೆರಾ ಕಾಂನ್ಫಿಗರೇಶನ್)
ಕ್ಯಾಮೆರಾ ಕಾಂನ್ಫಿಗರೇಶನ್ ಇಲ್ಲಿದೆ.
ISO: 80
Exposure: 1/1600 sec
Aperture: 4.5
Focal Length: 7.4mm
ಸೆರೆಹಿಡಿದದ್ದು ಈ ಕಾಂನ್ಫಿಗರೇಶನ್ ಅಲ್ಲಿ. ಆದರೆ ಸ್ವಲ್ಪ ಎಡಿಟ್ ಮಾಡಿದ್ದೀನಿ.

>>ಹೋಮ್-ಸ್ಟೇ ಬಗ್ಗೆ ಮತ್ತಷ್ಟು ಮಾಹಿತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು (ಶುಲ್ಕ, ಊಟ, ಬುಕಿಂಗ್ ಇತ್ಯಾದಿ)
ಮರೆತ್ಹೋಗಿದೆ. ನನ್ Cousinನ ಕೇಳಿ ಹೇಳ್ತೀನಿ.

-ಅನಿಲ್.

asuhegde's picture

ಅನಿಲ್,
ಚಿತ್ರಗಳು ಒಂದರಿಂದ ಒಂದು ಸಖತ್ ಆಗಿವೆ...
ಧನ್ಯವಾದಗಳು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ...

anil.ramesh's picture

ಸುರೇಶ್,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್. :)

-ಅನಿಲ್.

palachandra's picture

ಸಕ್ಕತ್ ಚಿತ್ರ,, ವಿವ್ ಪಾಯಿಂಟ್ ಚಿತ್ರಗಳ ಕಲರ್ ಮಾತ್ರ ಫೇಕ್ ಅನ್ನಿಸ್ತು

anil.ramesh's picture

ಪಾಲ,
ನಿಮ್ಮಿಂದ ಕಮೆಂಟ್ ನಿರೀಕ್ಷಿಸ್ತಿದ್ದೆ.

>>ವಿವ್ ಪಾಯಿಂಟ್ ಚಿತ್ರಗಳ ಕಲರ್ ಮಾತ್ರ ಫೇಕ್ ಅನ್ನಿಸ್ತು
ಕ್ಯಾಮೆರಾ ಕಾಂನ್ಫಿಗರೇಶನ್ ಇಲ್ಲಿದೆ.
ISO: 80
Exposure: 1/1600 sec
Aperture: 4.5
Focal Length: 7.4mm
ಸೆರೆಹಿಡಿದದ್ದು ಈ ಕಾಂನ್ಫಿಗರೇಶನ್ ಅಲ್ಲಿ. ಆದರೆ ಸ್ವಲ್ಪ ಎಡಿಟ್ ಮಾಡಿದ್ದೀನಿ.

ಆದರೆ ನಿಮಗೆ ವ್ಯೂ ಪಾಯಿಂಟ್ ಚಿತ್ರ ಫೇಕ್ ಅಂತ ಏಕೆ ಅನ್ನಿಸ್ತೋ ಗೊತ್ತಾಗ್ಲಿಲ್ಲ.

-ಅನಿಲ್.

palachandra's picture

white balance setting ಏನಿತ್ತು?

flouracent/incandacent ಇದ್ರೆ ಈ ಕಲರ್ ಬರತ್ತೆ

ಕಲರ್ ಟೆಂಪರೇಚರ್ ಕಡಿಮೆ ಮಾಡಿದ್ರೆ ಈ ರೀತಿ ನೀಲಿ ಬರತ್ತೆ, ಫೇಕ್ ಕಲರ್ ಅದು

anil.ramesh's picture

>>white balance setting ಏನಿತ್ತು?
ನಾರ್ಮಲ್ ಸೆಟ್ಟಿಂಗ್. ಏನೂ ಬದಲಾಯಿಸಿಲ್ಲ.
ಸೆರೆಹಿಡಿದಾಗ ನಾರ್ಮಲ್ ಫೋಟೊ.

ಪಿಕಾಸದಲ್ಲಿ ಎಡಿಟ್ ಮಾಡಿದ್ದು.
ಎಡಿಟ್ ಮಾಡ್ದಾಗ ಟ್ಯೂನಿಂಗ್ ಕ್ಯಾಪ್ಷನ್ ಅಡಿಯಲ್ಲು ಬರುವ Shadow ಎಫೆಕ್ಟ್ ಫುಲ್ ಮಾಡ್ದೆ.

ಅದಕ್ಕೇ ಈ ರೀತಿ ಕಾಣಿಸ್ತಿದೆ.

-ಅನಿಲ್.

anil.ramesh's picture

>>ಎಡಿಟ್ ಮಾಡ್ದಾಗ ಟ್ಯೂನಿಂಗ್ ಕ್ಯಾಪ್ಷನ್ "ಅಡಿಯಲ್ಲು"
ಅಡಿಯಲ್ಲಿ ಅಂತ ಓದ್ಕೊಳ್ಳಿ.

-ಅನಿಲ್.

raghava's picture

ಕೆಲ್ವಂತೂ ಸಿಕ್ಕಾಬಟ್ಟೆ ಚೆನ್ನಾಗಿವೆ!

ಹತ್ತ್ನೇದ್ರದ್ದು ಒಂದ್ಕಾಪಿ ಕಳ್ಸ್ತೀರಾ? ಫುಲ್ಸೈಜ್ಫೋಟೋ ...

anil.ramesh's picture

ರಾಘವ,
ಚಿತ್ರ್ಗಳ್ನ ಮೆಚ್ಚಿದ್ಕೆ ಥ್ಯಾಂಕ್ಸ್. :)

>>ಹತ್ತ್ನೇದ್ರದ್ದು ಒಂದ್ಕಾಪಿ ಕಳ್ಸ್ತೀರಾ? ಫುಲ್ಸೈಜ್ಫೋಟೋ ...
ನಿಮ್ಮೈಲ್ ಐಡಿ ಕೊಡಿ. ಈಗ್ಲೇ ಕಳಿಸ್ತೀನಿ.

-ಅನಿಲ್.

anil.ramesh's picture

ರಾಘವ,
ಚಿತ್ರ್ಗಳ್ನ ಮೆಚ್ಚಿದ್ಕೆ ಥ್ಯಾಂಕ್ಸ್. :)

>>ಹತ್ತ್ನೇದ್ರದ್ದು ಒಂದ್ಕಾಪಿ ಕಳ್ಸ್ತೀರಾ? ಫುಲ್ಸೈಜ್ಫೋಟೋ ...
ನಿಮ್ಮೈಲ್ ಐಡಿ ಕೊಡಿ. ಈಗ್ಲೇ ಕಳಿಸ್ತೀನಿ.

-ಅನಿಲ್.

vinutha.mv's picture

ಸು೦ದರವಾದ ಚಿತ್ರಗಳು. ವೀವ್ ಪಾಯಿ೦ಟ ಚಿತ್ರದಲ್ಲಿ ನೀಲಿ ಬಣ್ಣ ಘಾಢವಾದಂತೆ ಕಾಣತ್ತಲ್ಲ? ಸೂರ್ಯಾಸ್ತದ ಚಿತ್ರವ೦ತೂ ಸಖತ್. ಥ್ಯಾ೦ಕ್ಸ ಚಿತ್ರಗಳನ್ನು ಹ೦ಚಿಕೊ೦ಡದ್ದಕ್ಕೆ.

anil.ramesh's picture

ವಿನುತ,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ. :)

>>ವೀವ್ ಪಾಯಿ೦ಟ ಚಿತ್ರದಲ್ಲಿ ನೀಲಿ ಬಣ್ಣ ಘಾಢವಾದಂತೆ ಕಾಣತ್ತಲ್ಲ?
ಹು. ಎಡಿಟ್ ಮಾಡಿದ್ದೀನಿ.

>>ಸೂರ್ಯಾಸ್ತದ ಚಿತ್ರವ೦ತೂ ಸಖತ್.
ಸೂರ್ಯಾಸ್ತದ ಚಿತ್ರವನ್ನು ಸೆರೆಹಿಡಿದ ಮೇಲೆ ಆದ ಖುಷಿ ಅಷ್ಟಿಷ್ಟಲ್ಲ.
ವೈಯಕ್ತಿಕವಾಗಿ ಈ ಚಿತ್ರ ನನಗೆ ತುಂಬಾ ಹಿಡಿಸಿತು.

-ಅನಿಲ್.

srani's picture

ಅನಿಲ್
ಫೋಟೋಸ್ ತುಂಬಾ ಚೆನ್ನಾಗಿವೆ.. ಸೂರ್ಯಾಸ್ತ, ವ್ಯೂ ಪಾಯಿಂಟ್.. Excellent!!

anil.ramesh's picture

ಶೋಭಾ,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ. :)

-ಅನಿಲ್.

manjunath s reddy's picture

ಫೋಟೋಗಳು ಸಕ್ಕತ್... :)

anil.ramesh's picture

ಫೋಟೋಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ ಮಂಜು. :)

-ಅನಿಲ್.

shaamala's picture

ಅನಿಲ್ ಅವರೇ,
ನಿಮ್ಮ ಚಿತ್ರಗಳು ಸೊಗಸಾಗಿವೆ. ಪ್ರವಾಸದ ಕಥನವೂ ಚೆನ್ನಾಗಿದೆ!
ರತಿ ಹೋಂ ಸ್ಟೇನಲ್ಲಿ ಸೌಕರ್ಯಗಳು ಚೆನ್ನಾಗಿತ್ತಾ? ಅವರ ಕಾಂಟಾಕ್ಟ್ ವಿಷಯಗಳು ನಿಮ್ಮ ಬಳಿ ಇದೆಯೇ? ಈ ಬೇಸಿಗೆಯಲ್ಲಿ ಭಾರತಕ್ಕೆ ಬಂದಾಗ ಒಂದೆರಡು ಕಡೆ ಪ್ರವಾಸ ಹೋಗುವ ಯೋಚನೆ ಇದೆ.

ಧನ್ಯವಾದಗಳು,
ಶಾಮಲ

anil.ramesh's picture

ಶಾಮಲ,
ಮೆಚ್ಚುಗೆಗೆ ಥ್ಯಾಂಕ್ಸ್.

>>ರತಿ ಹೋಂ ಸ್ಟೇನಲ್ಲಿ ಸೌಕರ್ಯಗಳು ಚೆನ್ನಾಗಿತ್ತಾ?
ಹು, ಸೌಕರ್ಯಗಳು ಚೆನ್ನಾಗಿತ್ತು. Actually ಅದು ಒಂದು ಮನೆ. ರತಿ ಅನ್ನುವವರು ಅಲ್ಲೇ ಇರ್ತಾರೆ.

>>ಅವರ ಕಾಂಟಾಕ್ಟ್ ವಿಷಯಗಳು ನಿಮ್ಮ ಬಳಿ ಇದೆಯೇ?
ಕಾಂಟ್ಯಾಕ್ಟ್ ನಂಬರ್‍ ನನ್ cousin ಹತ್ರ ಇದೆ. ಈವತ್ತು ಮಧ್ಯಾಹ್ನ ಅವ್ನು ದಾಂಡೇಲಿಗೆ ಹೋದ.
ಸೋಮ್ವಾರ ಬರ್ತಾನೆ. ಅವ್ನು ಬಂದ್ಮೇಲೆ ನಂಬರ್‍ ಕೊಡ್ತೀನಿ.

-ಅನಿಲ್.

shaamala's picture

ಧನ್ಯವಾದಗಳು ರಮೇಶ ಅವರೇ,
ಶಾಮಲ

Seetharmorab's picture

ಗಜರಾಜ ತುಂಬಾ ಚೆನ್ನಾಗಿ ಬಂದಿದ್ದಾನೆ. ಸೈಡಿಂದ ಪೂರ್ತಿ ತೆಗೀಬೇಕಾಗಿತ್ತು.

ಸೀತ ಆರ್. ಮೊರಬ್

anil.ramesh's picture

>>ಸೈಡಿಂದ ಪೂರ್ತಿ ತೆಗೀಬೇಕಾಗಿತ್ತು.
ಪೂರ್ತಿನೇ ಇತ್ತು. ಕ್ರಾಪ್ ಮಾಡಿದ್ದೀನಿ.

ಗಜರಾಜನನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

-ಅನಿಲ್.

manjunathams's picture

ಚಿತ್ರಗಳ ಸಮೇತ ನಿಮ್ಮ ಪ್ರವಾಸದ ಅನುಭವಗಳನ್ನ ಹಂಚಿಕೊಂಡಿದ್ದೀರಿ ,ಚೆನ್ನಾಗಿದೆ. ಹಿಂದಿನ ವರ್ಷ ನಾವು(ನಾನು,ನನ್ನ ಸ್ನೇಹಿತರಾದ ನಾಗರಾಜ್.ಪಿ, ನಾಗೇಶ) ಹೋಗಿದ್ದೆವು, ಈ ನಿಮ್ಮ ಲೇಖನದಿಂದ ಅದರ ನೆನಪು ಮರುಕಳಿಸಿದಂತಾಯಿತು, ಧನ್ಯವಾದಗಳು ಅನಿಲ್.

anil.ramesh's picture

ಮಂಜುನಾಥ್,
ಪ್ರತಿಕ್ರಿಯೆಗೆ ತುಂಬಾ ಧನ್ಯವಾದ.

>>ಈ ನಿಮ್ಮ ಲೇಖನದಿಂದ ಅದರ ನೆನಪು ಮರುಕಳಿಸಿದಂತಾಯಿತು,
ನಿಮ್ಮ ಅನುಭವ ಮತ್ತು ನೆನಪುಗಳನ್ನು ನಮ್ಮೊಂದಿಗೂ ಹಂಚಿಕೊಳ್ರಿ. ಓದೋಣ.

-ಅನಿಲ್.

manjunathams's picture

ಕುಶಾಲನಗರದ ನಿಸರ್ಗಧಾಮ,ಬೈಲುಕೊಪ್ಪದ ಬುದ್ದ ಮಂದಿರ,ಅಬ್ಬಿ ಫಾಲ್ಸ್, ಮತ್ತೆ ಮಡಿಕೇರಿಯ ಮಧ್ಯಭಾಗದಲ್ಲಿ ಒಂದು view point ಇದೆಯಲ್ಲಾ?(ಹೆಸರು ಮರೆತಿದ್ದೇನೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ) ಇವು ನಾವು ಕಂಡ ಮಡಿಕೇರಿ, ಕಂಬಿಬಾಣೆ ಎಂಬ ನನ್ನ ಸ್ನೇಹಿತನ ಊರಿಗೆ ಹೋದಾಗ ಮಡಿಕೇರಿ ದರ್ಶನ ಭಾಗ್ಯ ಕೂಡಿ ಬಂತು.

anil.ramesh's picture

ಇಷ್ಟೇನಾ ನಿಮ್ಮ ಅನುಭವ?
ವಿವರವಾಗಿ ಒಂದು ಲೇಖನ ಬರೀರಿ. ಚಿತ್ರಗಳನ್ನು ಹಂಚಿಕೊಳ್ಳಿ, :)

>>ಮಡಿಕೇರಿಯ ಮಧ್ಯಭಾಗದಲ್ಲಿ ಒಂದು view point ಇದೆಯಲ್ಲಾ?(ಹೆಸರು ಮರೆತಿದ್ದೇನೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ)
ರಾಜಾಸೀಟ್.

-ಅನಿಲ್.

ಗಣೇಶ's picture

ಅನಿಲ್,
ಮೊದಲ ಚಿತ್ರ ನೋಡಿ ನೀರೊಳಗೆ ಇಳಿಯುವ ಮನಸ್ಸಾಯಿತು. ಆದರೆ ಗಜರಾಜನ ಏರಿಯಾ. ಡೇಂಜರ್ ಎಂದು ಸೂರ್ಯ ಹೇಳಿದ. ಚಿತ್ರಗಳು ಚೆನ್ನಾಗಿವೆ.

ದ.ಕನ್ನಡದ ಕೆಲ ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿ ನಿನ್ನೆ ಬಂದೆ. ಸೌತಡ್ಕದ ಸಮೀಪ ಕೆಲ ನವಿಲುಗಳು ಕಾಣಸಿಕ್ಕವು.ನಮ್ಮ ಹುಡುಗರು ಕಾರು ನಿಲ್ಲಿಸಿ,ಕ್ಯಾಮರ ತೆಗೆದುಕೊಂಡು ಹೋದ ರಭಸಕ್ಕೆ ನವಿಲುಗಳು ಸೌತಡ್ಕದಿಂದ (ನಾರ್ತಡ್ಕಕ್ಕೆ :) ) ಓಡಿಹೋದವು :( .

ಒಂದಕ್ಕಿಂತ ಒಂದು ಉತ್ತಮ ಫೋಟೋಗಳನ್ನು ತೆಗೆಯುತ್ತಿರುವ ಸಂಪದಮಿತ್ರರಿಗೆ ನನ್ನಿ.
-ಗಣೇಶ.

palachandra's picture

>>ನವಿಲುಗಳು ಸೌತಡ್ಕದಿಂದ (ನಾರ್ತಡ್ಕಕ್ಕೆ Smiling ) ಓಡಿಹೋದವು
:D

anil.ramesh's picture

ಗಣೇಶ್,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.

>>ದ.ಕನ್ನಡದ ಕೆಲ ಪುಣ್ಯಕ್ಷೇತ್ರಗಳ ಯಾತ್ರೆ ಮಾಡಿ ನಿನ್ನೆ ಬಂದೆ.
ಯಾತ್ರೆಯ ಅನುಭವಗಳನ್ನು ಹಂಚಿಕೊಳ್ಳಿರಿ. :)

>>ಸೌತಡ್ಕದಿಂದ (ನಾರ್ತಡ್ಕಕ್ಕೆ :) ) ಓಡಿಹೋದವು :(
:D

-ಅನಿಲ್.

ಗಣೇಶ's picture

ಅನಿಲ್,
ಇಲ್ಲಿ ಧರ್ಮ/ದೇವರ ಬಗ್ಗೆ ಬರೆಯುವಾಗ ಬಹಳ ಜಾಗ್ರತೆ ಇರಬೇಕು. ನನ್ನ ತೀರ್ಥ( :) ) ಯಾತ್ರೆಯ ಅನುಭವ ಓದಿ ನಾಸ್ತಿಕರು ಆಸ್ತಿಕರಾಗಿ, ಆಸ್ತಿಕರು ನಾಸ್ತಿಕರಾಗಿ -ತನ್ಮೂಲಕ ರಿವರ್ಸ್ ವಾದ-ವಿವಾದ ಸುರುವಾಗಿ...ಬೇಡ ಬಿಡಿ
-ಗಣೇಶ.

anil.ramesh's picture

>>ಬೇಡ ಬಿಡಿ
ಸರಿ ಬಿಡಿ. ಅರ್ಥ ಆಯ್ತು. :)

-ಅನಿಲ್.

sm.sathyacharana's picture

ಅನಿಲ್..
ಚಿತ್ರಗಳೆಲ್ಲಾ ಚೆನ್ನಾಗಿದೆ..
ಹುಂ.. ಅಷ್ಟೇ ಸಾಲದು..
ಇದು ನನ್ನ ಜಿ-ಮೈಲ್ ಐಡಿ.. sm.sathyacharana
ದಯವಿಟ್ಟು ಮೈಲ್ ಮಾಡಲು ಮರೆಯದಿರಿ..

ನಿಮ್ಮೊಲವಿನ,
ಸತ್ಯ..

anil.ramesh's picture

ಸತ್ಯ,
ತುಂಬಾ ಥ್ಯಾಂಕ್ಸ್.

>>ದಯವಿಟ್ಟು ಮೈಲ್ ಮಾಡಲು ಮರೆಯದಿರಿ..
ಪಿಕಾಸ ಆಲ್ಬಮ್ ಕೊಂಡಿ ಕಳಿಸ್ತೀನಿ. ನೋಡಿ.

-ಅನಿಲ್.

rasikathe's picture

ಅನಿಲ್,
ತುಂಬಾ ಚೆನ್ನಾಗಿದೆ. ( ನಾನು ಬಂದಾಗ್,ನೀವು ಹೋಗಿರೋ ಸ್ಥಳಗಳಿಗೆಲ್ಲ ಕರೆದು ಕೊಂಡು ಹೋಗ್ಬೇಕಾಗತ್ತೆ ಅಷ್ಟೆ.- ಇಷ್ಟೊಂದು ಒಳ್ಳೇ ಚಿತ್ರಗಳನ್ನ ಹಾಕಿ, ಆಸೆ ತೋರಿಸಿದ್ದರ ಪರಿಣಾಮ. ನನಗೆ ನಿಮ್ಮ ಅಲ್ಬಂ ಮೈಲ್ ಮಾಡಿ)

~ಮೀನಾ

anil.ramesh's picture

ಡಾಕ್ಟ್ರೇ,
ತುಂಬಾ ಥ್ಯಾಂಕ್ಸ್.

>>ನಾನು ಬಂದಾಗ್,ನೀವು ಹೋಗಿರೋ ಸ್ಥಳಗಳಿಗೆಲ್ಲ ಕರೆದು ಕೊಂಡು ಹೋಗ್ಬೇಕಾಗತ್ತೆ ಅಷ್ಟೆ.- ಇಷ್ಟೊಂದು ಒಳ್ಳೇ ಚಿತ್ರಗಳನ್ನ ಹಾಕಿ, ಆಸೆ ತೋರಿಸಿದ್ದರ ಪರಿಣಾಮ.
ಅಷ್ಟೇ ತಾನೇ, ಕರೆದುಕೊಂಡು ಹೋದರಾಯ್ತು. :)

>>ನನಗೆ ನಿಮ್ಮ ಅಲ್ಬಂ ಮೈಲ್ ಮಾಡಿ
ಪಿಕಾಸ ಆಲ್ಬಮ್ ಕೊಂದಿ ಕಳಿಸ್ತೀನಿ. ನೋಡಿ.

-ಅನಿಲ್.

anil.ramesh's picture

>>ಪಿಕಾಸ ಆಲ್ಬಮ್ ಕೊಂದಿ
ಅಯ್ಯೋ! ಕೊಂದಿ ಅಲ್ಲ ಕೊಂಡಿ. :)

-ಅನಿಲ್.

createam's picture

ವ್ಯೂ ಪಾಯಿಂಟ್ ಚಿತ್ರ ಚೆನ್ನಾಗಿ ಬಂದಿದೆ. ಬೆಟ್ಟಗಳ layers ಮತ್ತು ನೀಲಿ ಬಣ್ಣ ಪ್ಲಸ್ ಪಾಯಿಂಟ್ಗಳು. Shadows ಜಾಸ್ತಿ ಆಯ್ತು ಅನ್ಸುತ್ತೆ. ಇನ್ನೂ close composition ಆಗಿದ್ರೆ ಚೆನ್ನಾಗಿರೋದು, ಇಲ್ದಿದ್ರೆ shadows ಕಡಿಮೆ ಇರುವ ಬೇರೆ composition ಪ್ರಯತ್ನಿಸಬಹುದು. ನಿಮಗೆ ಛಾಯಾಗ್ರಹಣದಲ್ಲಿ ಆಸಕ್ತಿ ಇದೆ ಅನ್ನೋದಕ್ಕಾಗಿ ಈ critique, ಇಲ್ದಿದ್ರೆ ಇದು ನಿಜಕ್ಕೂ ಒಳ್ಳೆಯ ಚಿತ್ರ.
ಹಾಗೆ ಇದನ್ನು 7.4mm ಅಲ್ಲಿ ತೆಗೆದಿದ್ದು ಅಂದ್ರೆ ತಪ್ಪಿರಬಹುದು. 7.4 mm ಅಂದ್ರೆ ತುಂಬಾ extreme wide angle. ಇದು ಅಂತಾ wide angle ತರ ಕಾಣ್ತಿಲ್ಲ. ಅಲ್ವಾ?

palachandra's picture

ಅನಿಲ್,
ಅದಿಕ್ಕೆ ನೋಡಿ ಒಬ್ಬರ ಅನಿಸಿಕೆ ತಗೋಬಾರ್ದು ಅನ್ನೋದು.

ಮನೋಜ್,
"ವ್ಯೂ ಪಾಯಿಂಟ್" ಬಗ್ಗೆ ನಿಮ್ಮ ಅಭಿಪ್ರಾಯ ಭಿನ್ನವಾಗಿದೆ, ನನ್ನಿ.

anil.ramesh's picture

>>ಅದಿಕ್ಕೆ ನೋಡಿ ಒಬ್ಬರ ಅನಿಸಿಕೆ ತಗೋಬಾರ್ದು ಅನ್ನೋದು.
ಹು. ಈಗ್ ತಿಳೀತ್.

-ಅನಿಲ್.

anil.ramesh's picture

ಮನೋಜ್,
ವ್ಯೂ ಪಾಯಿಂಟ್ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ ತುಂಬಾ ಹಿಡಿಸಿತು.

>>ಹಾಗೆ ಇದನ್ನು 7.4mm ಅಲ್ಲಿ ತೆಗೆದಿದ್ದು ಅಂದ್ರೆ ತಪ್ಪಿರಬಹುದು. 7.4 mm ಅಂದ್ರೆ ತುಂಬಾ extreme wide angle. ಇದು ಅಂತಾ wide angle ತರ ಕಾಣ್ತಿಲ್ಲ. ಅಲ್ವಾ?
ಟೆಕ್ನಿಕಲ್ ಆಗಿ ಹೇಳೋದಾದ್ರೆ, ನಿಮ್ಮ ಅಭಿಪ್ರಾಯ ಸರಿ ಅನ್ಸುತ್ತೆ.

ಆದ್ರೆ ಇದು ೪೦೦೦*೩೦೦೦ ಪಿಕ್ಸೆಲ್ ಚಿತ್ರ. ರೀಸೈಜ್ ಮಾಡಿದ್ದೀನಿ. ಅದಕ್ಕೆ ನಿಮಗೆ ಹಾಗೆ ಅನ್ನಿಸ್ತೇನೋ?

-ಅನಿಲ್.

ಸಂಗನಗೌಡ's picture

ಎಲ್ಲ ಪಾಪೆಗಳೂ ಚೆನ್ನಿವೆ, ವೀವ್‍ಪಾಯಿಂಟ್ ಪಾಪೆ ಇನ್ನೂ ಸಕ್ಕತ್ತಾಗಿದೆ.

anil.ramesh's picture

ಸಂಗನ,
ಮೆಚ್ಚುಗೆಗೆ ನನ್ನಿ.

-ಅನಿಲ್.

roopablrao's picture

ಅನಿಲ್
ಮಡಿಕೇರಿಯ ಫೋಟೋಸ್ ಸೂಪರ್
ನಿಮ್ಮ ಅನುಮತಿ ಇಲ್ಲದೆ ಫೋಟೊಗಳೆಲ್ಲಾ ನನ್ ಲ್ಯ್ಪಾಪ್ಟಾಪ್‌ನಲ್ಲಿ ಆರಾಮವಾಗಿ ಸೇರಿದೆ.

anil.ramesh's picture

ರೂಪ,
ಚಿತ್ರಗಳನ್ನು ಮೆಚ್ಚಿದ್ದಕ್ಕೆ ತುಂಬಾ ಧನ್ಯವಾದ.

>>ನಿಮ್ಮ ಅನುಮತಿ ಇಲ್ಲದೆ ಫೋಟೊಗಳೆಲ್ಲಾ ನನ್ ಲ್ಯಾಪ್ಟಾಪ್‌ನಲ್ಲಿ ಆರಾಮವಾಗಿ ಸೇರಿದೆ.
ಪರ್ವಾಗಿಲ್ಲ. ಫುಲ್ ರೆಸೊಲ್ಯೂಷನ್ ಚಿತ್ರಗಳು ನನ್ನ ಬಳಿ ಸುರಕ್ಷಿತವಾಗಿವೆ. :)

-ಅನಿಲ್.

ಅರವಿಂದ್'s picture

ಅನಿಲ್

ಮಡಿಕೇರಿನೂ ಸಕತ್, ಫೋಟೋಗಳು ಸೂಪರ್.
:)
:)
:)

ಅರವಿಂದ್