ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಅಮೃತವರ್ಷಿಣಿ , ದುರ್ಯೋಧನ , ಕರ್ಣ , ಭಾನುಮತಿ ಮತ್ತು ಬಿದ್ದು ಹೋದ ಮುತ್ತುಗಳು

June 28, 2006 - 5:33pm — shreekant.mishrikoti

ನೀವು ಅಮೃತವರ್ಷಿಣಿ ಚಲನಚಿತ್ರ ನೋಡಿರಬಹುದು . ಅಲ್ಲಿ ಈ ಪ್ರಸಂಗದ ಉಲ್ಲೇಖ ಇದೆ.
ಮೊನ್ನೆ ನಾನು ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಸೇಡಿಯಾಪು ಕೃಷ್ಣಭಟ್ಟರ ಲೇಖನಗಳ ಸಂಗ್ರಹ 'ವಿಚಾರ ಪ್ರಪಂಚ' ಕೊಂಡುಕೊಂಡೆ.

ಅದರಲ್ಲಿ ಭಾನುಮತಿಯ ನೆತ್ತ ಎಂಬ ಲೇಖನದಲ್ಲಿ ಈ ಬಗ್ಗೆ ಇತ್ತು. ಪಂಪಭಾರತದಲ್ಲಿ ಈ ಕುರಿತಾದ ಪದ್ಯ ಭಾಗವಿದೆ . ಅದನ್ನು ಅನೇಕ ವಿದ್ವಜ್ಜನರು ೧೭-೧೮ ಬಗೆಯಾಗಿ ಅರ್ಥವಿವರಣ ಮಾಡಿದ್ದಾರೆ. ಅವೆಲ್ಲವನ್ನು ಗಮನಿಸಿ ಈ ಪದ್ಯವನ್ನು ಸೇಡಿಯಾಪುರವರು ಸೂಕ್ಷ್ಮವಾಗಿ ಪರೀಕ್ಷಿಸಿ ಸರಿಯಾದ ಅರ್ಥವನ್ನು ತಿಳಿಸಿದ್ದಾರೆ.

ಈ ಪ್ರಸಂಗದ ಹಿನ್ನೆಲೆ ಹೀಗಿದೆ. ಮಹಾಭಾರತ ಯುದ್ಧಕ್ಕೆ ಮೊದಲು ಕರ್ಣನನ್ನು ಪಾಂಡವರ ಕಡೆಗೆ ಸೇರಿಕೊಳ್ಳುವಂತೆ ಶ್ರೀಕೃಷ್ಣ ಮನ ಒಲಿಸಹೋದಾಗ ಕರ್ಣನು ಹೇಳುವ ಮಾತಿದು .

ಪದ್ಯ ಹೀಗಿದೆ . ( ಪದವಿಭಾಗದ ನಂತರ)

ನೆತ್ತಮನಾಡಿ
ಭಾನುಮತಿ ಸೋತೊಡೆ
ಸೋಲಮನೀವುದೆಂದು ಕಾಡುತ್ತಿರೆ
ಲಂಬಣಂ ಪಱಿಯೆ
ಮುತ್ತಿನ ಕೇಡನೆ ನೋಡಿ ನೋಡಿ ಬಳ್ಕುತ್ತಿರೆ
ಏವಮಿಲ್ಲದಿವನಾವುದೊ ತಪ್ಪದೆ ಪೇೞಿಮೆಂಬ ಭೂಪೋತ್ತಮನಂ ಬಿಸುಟ್ಟು
ಇರದೆ ನಿಮ್ಮೊಳೆ ಪೊಕ್ಕೊಡೆ ಬೇಡನಲ್ಲನೇ ?

ಈ ಪದವಿಭಾಗವನ್ನು ಎಲ್ಲರೂ ಒಪ್ಪುತ್ತಾರೆ ಆದರೂ ಬೇರೆ ಬೇರೆ ಬೇರೆ ವಿಧವಾಗಿ ಅರ್ಥ ಮಾಡಿಕೊಂದಿದ್ದರೆ .

ನೆತ್ತ = ಲೆತ್ತ= ಪಗಡೆ
ಲಂಬಣ = ಹಾರ

ಈ ಮಾತನ್ನು ಹೇಳುತ್ತಿರುವನು ಕರ್ಣ .
ಅಲ್ಲಿ ಕರ್ಣ , ದುರ್ಯೋಧನ , ಭಾನುಮತಿ ಇದ್ದರು . ಇದು ಸ್ಪಷ್ಟ .
ಭಾನುಮತಿ ಸೋತೊಡೆ - ಯಾರೊಂದಿಗೆ ಆಟವಾಡಿ ಸೋತಳು ? ಸ್ಪಷ್ಟವಿಲ್ಲ .
ಸೋಲಮನಂ ಈವುದು - ಪಣಕ್ಕಿಟ್ಟದ್ದನ್ನು ಕೊಡು ಎಂದು ಕಾಡುತ್ತಿರಲು - ಏನು ಪಣದ ವಸ್ತು ? ಸ್ಪಷ್ಟವಿಲ್ಲ .ಯಾರು ಕಾಡಿದವರು ? ಗೆದ್ದವನು ತಾನೇ? ಅದು ಯಾರು ? ಸೋತ ಭಾನುಮತಿ ಪಣವನ್ನೊಪ್ಪಿಸದಿರಲು ಕಾರಣವೇನು? ( ಪಣದ ವಸ್ತು ಮುತ್ತಿನ ಹಾರ . ಸ್ತ್ರೀ ಸಹಜ ಲೋಭದಿಂದ ಅವಳು ಒಪ್ಪಿಸಲಿಲ್ಲ ಎಂದು ಅನೇಕರು ಅರ್ಥ ಮಾಡಿಕೊಂಡಿದ್ದಾರೆ) ಕ್ರೀಡಾನಿಯಮವನ್ನು ಏಕೆ ಅವಳು ಉಲ್ಲಂಘಿಸಿಯಾಳು ? ಆ ನೆತ್ತದಾಟಕ್ಕೆ ಪಣವಾಗಿದ್ದುದು 'ಅಲ್ಲಿ' ಅವಳು ಕೊಡಲಾರದ ವಸ್ತುವಾಗಿತ್ತು.

ಏವಮಿಲ್ಲದೆ ಇವನು ಆವುದೋ ತಪ್ಪದೆ ಪೇಳಿಂ ಈ ಸಾಲು ಅನೇಕರನ್ನು ದಾರಿತಪ್ಪಿಸಿದೆ . ಇದರ ಸರಿಯಾದ ಅರ್ಥ - "ತುಚ್ಛವೆಂಬ ಭಾವನೆ ಇಲ್ಲದೆ ಇವುಗಳನ್ನು ( ಈ ಮುತ್ತುಗಳನ್ನು) ತಪ್ಪದೆ ( ಬಿಡದೆ/ ಕಳೆದುಕೊಳ್ಳದೆ) ಆಯ್ದುಕೊಳ್ಳುವದೋ ? ಅಂತ" ಇದು ದುರ್ಯೋಧನನ ಉದ್ಗಾರ . ಇವನ್ನಾದರೂ ಬಿಡದೆ ಆಯ್ದುಕೊಳ್ಳುತ್ತೇನೆ ಎಂದರೆ ಪಣವಾಗಿದ್ದುದು ಇವಕ್ಕಿಂತ ಎಷ್ಟೋ ಮಿಗಿಲಾದ ಮುತ್ತುಗಳು ಎಂಬರ್ಥ . ಹಾಗಾದರೆ ಪಣವಾಗಿದ್ದ ಆ ಶ್ರೇಷ್ಠವಾದ ಮುತ್ತುಗಳು ಯಾವುವು ? ಅವು ಅಮೂಲ್ಯವಾದ ಮುತ್ತುಗಳು! ( ಚುಂಬನಗಳು) . ( ಆ ಕಾಲಕ್ಕೂ ಮುತ್ತು ಶಬ್ದಕ್ಕೆ ಎರಡೂ ಅರ್ಥಗಳು ಇದ್ದವು. ) ಭಾನುಮತಿ ಸೋತಿದ್ದಾಳೆ . ಪಣದಂತೆ ಚುಂಬನಗಳನ್ನು ಕೊಡಲು ಅಲ್ಲಿ ಇನ್ನೊಬ್ಬ ವ್ಯಕ್ತಿ ಇರುವುದರಿಂದ ಅವಳಿಗೆ ಸಂಕೋಚ . ಗೆದ್ದವನ ಒತ್ತಾಯ . ಈ ಎಳೆದಾಟ/ ಕೊಸರಾಟದಲ್ಲಿ ಹಾರವು ಹರಿದು , ಮುತ್ತುಗಳು ನೆಲದ ಮೇಲೆ ಚೆಲ್ಲಾಪಿಲ್ಲಿ. ತನಗೆ ಸಿಗಬೇಕಾಗಿದ್ದ ಮುತ್ತುಗಳಿಗೆ ಈ ಮುತ್ತುಗಳು ಬೆಲೆಯಲ್ಲಿ ಸಮವಲ್ಲದಿದ್ದರೂ ಇವೂ ಭಾನುಮತಿಯ ಮುತ್ತುಗಳೇ ಆಗಿರುವುದರಿಂದ ಇವನ್ನು ಆಯ್ದು ತನ್ನ ವಿಜಯ ಘೋಷಿಸಿಕೊಳ್ಳುವಾಸೆ ಭೂಪೋತ್ತಮ ದುರ್ಯೋಧನನಿಗೆ ! ಅಂಥ ದುರ್ಯೋಧನನನ್ನು ( ) ಬಿಟ್ಟು ಇರದೆ ( ಹಿಂದೆ ಮುಂದೆ ನೋಡದೆ ) ನಿಮ್ಮನ್ನು ಹೊಕ್ಕೊಡೆ - ನಿಮ್ಮನ್ನು ಸೇರಿದರೆ
ಬೇಡನಲ್ಲನೇ ( ಈ ಕರ್ಣನು )-ಅನಾಗರಿಕ ( ಬೇಡ ಶಬ್ದವನ್ನು ಜಾತಿವಾಚಕವಾಗಿ ತೆಗೆದುಕೊಳ್ಳಬಾರದು . ಅನಾರ್ಯ ಶಬ್ದವನ್ನು ಅನಾಗರಿಕ ಎಂಬರ್ಥದಲ್ಲಿ ಸಂಸ್ಕೃತದಲ್ಲಿ ಬಳಸುವ ಹಾಗೆ ) ನಾಗುವನಲ್ಲವೇ ?

ಪಣವನ್ನು ಗೆದ್ದವರಾರು ಎಂಬುದು ಈ ಪದ್ಯದಲ್ಲಿ ಹೇಳಿರುವದಿಲ್ಲವಾದ್ದರಿಂದ ಅನೇಕರು ಕರ್ಣ ಭಾನುಮತಿ ಆಟವಾಡುತ್ತಿದ್ದರು ಎಂದೆಲ್ಲ ತಪ್ಪು ಅರ್ಥ ಮಾಡಿದ್ದಾರೆ. ಪಣ ಏನೆಂದು ಇಲ್ಲಿ ಹೇಳಿಲ್ಲ . ಮುತ್ತಿನ ಹಾರವು ಹರಿದುಹೋದದ್ದನ್ನು ಹೇಳಿದೆಯೇ ಹೊರತು ಹಾರವು ಪಣವಾಗಿತ್ತೆಂದು ಹೇಳಿಯೇ ಇಲ್ಲ. ಗಂಡನ ಸೊತ್ತು ಹೆಂಡತಿಯದೂ , ಹೆಂಡತಿಯ ಸೊತ್ತು ಗಂಡನದೂ ಆಗಿರುವಾಗ ದಂಪತಿಗಳು 'ಕೊಡುವುದೇನು? ಕೊಂಬುದೇನು?' ಯಾವುದಾದರೂ ವಸ್ತುವನ್ನು ಪಣವಾಗಿಟ್ಟು ಆಡುವದೂ ಒಂದೇ ಪಣವಿಲ್ಲದೆ ಹುಸಿಯಾಟವಾಡುವದೂ ಒಂದೇ . ಅಂಥ ಆಟದಲ್ಲಿ ದ್ಯೂತಕ್ಕೆ ಉದ್ದೀಪನವೇ ಇಲ್ಲದಂತಾಗುತ್ತದೆ. ಆದ್ದರಿಂದ ದಂಪತಿಗಳ ಆ ನೆತ್ತದಲ್ಲಿ ಪಣವಾಗಿದ್ದುದು ದ್ರವ್ಯರೂಪವಾದ ಮುತ್ತು ಅಲ್ಲ , ಕ್ರಿಯಾರೂಪವಾದ 'ಮುತ್ತು'! ಅಲ್ಲಿ ಸಂಭಾವ್ಯತೆಯೂ ಹೆಚ್ಚು, ಔಚಿತ್ಯವೂ ಹೆಚ್ಚು , ಸರಸತೆಯೂ ಹೆಚ್ಚು!

ಬಳ್ಕುತ್ತಿರೆ - ಇಲ್ಲಿ ಬಳ್ಕು ಎಂಬುದನ್ನು ಬಾಗು ಎಂಬರ್ಥದಲ್ಲಿ ತೆಗೆದುಕೊಳ್ಳದೆ 'ಹೆದರಿ ನಡುಗುತ್ತಿರೆ ಅಂದು ಇತರರು ಅರ್ಥೈಸಿದ್ದಾರೆ . ಈ ಮೂಲಕವಾಗಿ ಕರ್ಣನು ಹೆದರಿ ನಡುಗಿದನು , ಗಂಡ ಏನು ತಿಳಿದುಕೊಂಡನೋ ಎಂದು ಭಾನುಮತಿ ಅಂಜಿದಳು ಹೀಗೆಲ್ಲ ಪಂಡಿತರು ದಾರಿ ತಪ್ಪಿದ್ದಾರೆ! ಪಂಪನು ತನ್ನ ಕಾವ್ಯದುದ್ದಕ್ಕೂ ಚಿತ್ರಿಸಿರುವ ಕರ್ಣನ ಧೀರ್‍ಅತೆಯಲ್ಲಿಯೂ ಉದಾತ್ತತೆಯಲ್ಲಿಯು ದುರ್ಯೋಧನ ಭಾನುಮತಿಯರ ಪರಸ್ಪರ ನಿಃಶಂಕಿತವಾದ ಪ್ರೇಮನಿಷ್ಠೆಯಲ್ಲಿಯೂ ಕೊರತೆ ಈ ಬಗೆಯ ಅರ್ಥವಿವರಣೆಯಿಂದ ಉಂಟಾಗುವದಲ್ಲವೇ? ರಾಜರಾಜನ ಪಟ್ಟಮಹಿಷಿಯ ಶೀಲದಲ್ಲಿ ಇಂಥ ಮುಚ್ಚುಮರೆಯ ವರ್ತನೆಯನ್ನು ಕಾಣಿಸುವದು ಉದಾತ್ತಚರಿತವಾದ ತನ್ನ ಕಾವ್ಯಕ್ಕೆ ಶೋಭೆಯೆಂದು ತಿಳಿದನೇ ಮಹಾಕವಿ ಪಂಪ? " ಅಯ್ಯೋ ಶಾಪಗ್ರಸ್ತ ಪದ್ಯರತ್ನವೇ ! ಎಂತೆಂತಹ ನಮ್ಮ ವಿದ್ವನ್ಮಣಿಗಳಿಂದ ಏನೇನೆಲ್ಲ ಹೇಳಿಸಿಬಿಟ್ಟೆ ನೀನು!" ಎಂದು ಸೇಡಿಯಾಪು ಕೃಷ್ಣಭಟ್ಟರು ಹಳಹಳಿಸಿದ್ದಾರೆ.

ಈ ಖಾಸಗೀ ವಿಷಯವನ್ನು ಕರ್ಣನೇಕೆ ಕೃಷ್ಣನ ಮುಂದೆ ಹೇಳುತ್ತಿದ್ದಾನೆ? ತನ್ನೊಡನೆ ದುರ್ಯೋಧನನ ಸ್ನೇಹ ಎಂತಹುದೆಂದರೆ ಅವನ ಏಕಾಂತಸ್ಥಾನದಲ್ಲೂ ತನಗೆ ಪ್ರವೇಶವಿತ್ತು . ತನ್ನ ನಿಷ್ಠೆಯಲ್ಲಿ , ನಿಶ್ಕಲಂಕತೆಯಲ್ಲಿ ಅಷ್ಟು ವಿಶ್ವಾಸ ಅವನಿಗೆ. ಅಂಥವನನ್ನು ಹೇಗೆ ಬಿಟ್ಟು ಬರುವದು . ಅದು ಅನಾಗರಿಕತನ ಅಲ್ಲವೇ ಎಂದು ಕೇಳುತ್ತಿದ್ದಾನೆ ಕರ್ಣ. ಅವನದು ಸ್ವಗತ ಮತ್ತು ಪ್ರಕಾಶಗಳೆರಡೂ ಮೇಳೈಸಿದ ಲೌಡ್ ಥಿಂಕಿಂಗ್ ( ವ್ಯಕ್ತ ಚಿಂತನ) ದಿಂದಾಗಿ ಅಸ್ಪಷ್ಟತೆ ಇಣುಕಿದೆ . ಆದರೆ ಈ ಅಸ್ಪಷ್ಟತೆ ವಿದ್ವಜ್ಜನರನ್ನೂ ದಾರಿತಪ್ಪಿಸಿದೆ.

ಸೇಡಿಯಾಪುರವರು ಹೀಗೆ ಹೇಳುತ್ತಾರೆ.
"ಈಗ ಇಲ್ಲಿ ಇಣುಕಿ ನೋಡಿರಿ . ಕಾಣುವದಿಲ್ಲವೇ ಮಹಾಕವಿತ್ವದ ಆಳ ? ಶಕ್ತಿ ಇದ್ದರೆ ನಾವು ಅದರೊಳಗೆ ಇಳಿಯಬಲ್ಲೆವು . ಈಜಬಲ್ಲೆವು , ಮುಳುಗಲೂ ಬಲ್ಲೆವು. ಆದರೆ ತಳವನ್ನು ಮುಟ್ಟಲಾರೆವು . ಅದಕ್ಕೆ ತಳವಿಲ್ಲ!
ಈ ಪದ್ಯದೊಳಗೆ ಅಡಕವಾಗಿರುವ ಲೆತ್ತದ ಪ್ರಸಂಗವು ಹಳಗನ್ನಡಸಾಹಿತ್ಯದಲ್ಲಿ ಮತ್ತೆಲ್ಲೂ ಕಾಣದ ಒಂದು ಅಪೂರ್ವ ಶೃಂಗಾರಪಿಂಡ. ಹೀಗಿದ್ದರೂ ಕರ್ಣನಲ್ಲಿ ಕೌರವನಿಗಿದ್ದ ಸೌಹಾರ್ದಾತಿಶಯದ ಪ್ರತಿಪಾದನೆಗಾಗಿ ಇಲ್ಲಿ ಇದರ ಕ್ಷೇಪಣವಗಿರುವುದರಿಂದ , ಶೃಂಗಾರವು ನೀರೊಳಗಿಟ್ಟ ಹೂವಾಗಿದೆ; ಹೂವನ್ನು ನಾವು ಕಾಣಬಹುದು. ಆದರೆ ಸುಗಂಧವನ್ನು ಯಥೇಷ್ಟವಾಗಿ ಆಸ್ವಾದಿಸಲಾರೆವು. ಅಥವಾ ಇದೊಂದು ತೆರೆಮರೆಯ ನೃತ್ಯ ; ಹೆಜ್ಜೆಯ ದನಿ , ಗೆಜ್ಜೆಯ ದನಿ ಕೇಳುತ್ತಿದೆ ; ಆದರೆ ಹಾವ ಬಾವ ರೂಪವಿಲಾಸ ಎಲ್ಲ ಅದೃಶ್ಯ! ಏನೀ ಮೋಡಿ? ಕರ್ಣನ ಆರ್ಜವದ ಅರುಣಪ್ರಭೆಯಲ್ಲಿ ಕ್ಷಣಕಲ ಮಿನುಗಿ ಮರೆಯಾಗುವ ಬೆಳಗಿನ ' ಬೆಳ್ಳಿ' ಈ ಶೃಂಗಾರ!

ಈ ನನ್ನ ಲೇಖನದಿಂದ ಈ ಪದ್ಯಪಾಷಾಣದ ವಿಮೋಚನೆಯಾದರೆ ನಾನು ಮಾಡಿದ್ದೊಂದು ಪುಣ್ಯಕಾರ್ಯವೆನಿಸುತ್ತದೆ"

  • ಕಾವ್ಯ ಮತ್ತು ಕವನ
~.~
  • Login or register to post comments
  • 1035 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಹಾಭಾರತದಲ್ಲಿ ಕರ್ಣ
  • ’ಸಖೇದಾಶ್ಚರ್ಯ’ ಮತ್ತು ’ಸನೇಕ’
  • ತಿರುಕರ ನುಡಿ ಮುತ್ತುಗಳು.
  • ಸರ್ವಭಾಷಾ ಸರಸ್ವತಿ
  • ಹನಿ ಹನಿ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 55 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator