18
June
2013

ಸಂಪದದ ಮುಖಪುಟದಲ್ಲಿ ('ವಿಶೇಷ ಬರಹ'ವಾಗಿ) ಪ್ರಕಟವಾಗಲು ಬರಹ ಹೇಗಿರಬೇಕು?

April 13, 2009 - 5:45pm
ನಿರ್ವಹಣೆ
  • 'ಲೇಖನ'ಗಳಾಗಿ ಸೇರಿಸಿದ ಪುಟಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು.
  • ಫೋಟೋ ಇರುವ ಬರಹಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುವುದು.
  • ಒಂದಾದರೂ ಇನ್-ಲೈನ್ ಚಿತ್ರ ("ಸೇರಿಸಿರುವ ಚಿತ್ರಗಳು" ಆಯ್ಕೆ ಬಳಸಿ ಅಪ್ಲೋಡ್ ಮಾಡಿದ ಚಿತ್ರ) ಇರಬೇಕು.
  • ಬರಹದಲ್ಲಿ ಕನಿಷ್ಟ ಮುನ್ನೂರೈವತ್ತು ಪದಗಳಾದರೂ ಇರಬೇಕು.
  • ಲೇಖನದಲ್ಲಿ ಫಾರ್ಮ್ಯಾಟಿಂಗ್ ಸರಿಯಾಗಿರಬೇಕು, ಬಣ್ಣ ಬಣ್ಣದ ಫಾಂಟ್ ಇರಕೂಡದು, ವಿಪರೀತ ದಪ್ಪಗಾಗಿಸಿದ ಅಕ್ಷರಗಳು, italicised ಅಕ್ಷರಗಳು ಇರಕೂಡದು.
  • ಬರಹ ಬೇರೆಡೆ ಆಗಲೇ ಪ್ರಕಟವಾಗಿರಕೂಡದು.
  • ಬರಹ ಬೇರೆಲ್ಲಿಂದಲೋ ಆಯ್ದು ತೆಗೆದುಕೊಂಡದ್ದಾಗಿರಕೂಡದು.
  • ಬರಹದಲ್ಲಿ ಬೇರೆಡೆಯಿಂದ ತೆಗೆದುಕೊಂಡ ಚಿತ್ರಗಳು ಬಳಕೆಯಾಗಿದ್ದಲ್ಲಿ ಚಿತ್ರಕ್ಕೆ ಸರಿಯಾದ ಕ್ರೆಡಿಟ್ಸ್ ಇರಬೇಕು.
  • ಭರವಸೆಯ ಹೊಸ ಲೇಖಕರಿಗೆ ಹೆಚ್ಚು ಮಾನ್ಯತೆ ನೀಡಲಾಗುವುದು.
  • ಸಂಪದ ಸಮುದಾಯದಲ್ಲಿ ಬಹುಕಾಲ ತೊಡಗಿಕೊಂಡಿರುವ ಸದಸ್ಯರಿಗೆ ಮಾನ್ಯತೆ ನೀಡಲಾಗುವುದು.
  • ಸರಿಯಾದ ಟ್ಯಾಗ್ಸ್ ಹಾಕಿರುವ ಅಥವ ಸರಿಯಾದ ವರ್ಗಕ್ಕೆ ಸೇರಿಸಲ್ಪಟ್ಟಿರುವ ಬರಹಗಳಿಗೆ ಮಾನ್ಯತೆ ನೀಡಲಾಗುವುದು.
  • ಬರಹ MS-Wordನಿಂದ ನೇರ ಕಾಪಿ-ಪೇಸ್ಟ್ ಮಾಡಿರಕೂಡದು.
    • ಬರಹ ಮೂಲತಃ MS-Wordನಲ್ಲಿ ಟೈಪ್ ಮಾಡಿಟ್ಟುಕೊಂಡಿದ್ದರೆ ಹೇಗೆ ಅಪ್ಲೋಡ್ ಮಾಡಬೇಕು ಎಂಬುದರ ಕುರಿತು ಇಲ್ಲಿ ಓದಬಹುದು.


('ಸಂಪದ'ದಲ್ಲಿ ಮುಖಪುಟಕ್ಕೆ ಪ್ರಮೋಟ್ ಆಗುವ ಲೇಖನಗಳಿಗೆ ಯಾವ ಮಾನ್ಯತೆಗಳನುಸಾರ ಆಯ್ಕೆ ಮಾಡಲಾಗುತ್ತಿದೆ ಎಂಬ ಕುತೂಹಲ ನಿಮ್ಮೆಲ್ಲರಿಗೂ ಇದ್ದಿರಬಹುದು. ಹೆಚ್ಚು ಕಡಿಮೆ ಮೇಲೆ ಪಟ್ಟಿ ಮಾಡಿರುವಂತೆ ಅವು.

ಈ ಪಟ್ಟಿ ಯಾಕೆ ಇವತ್ತು, ಇಲ್ಲಿ? ಎಂಬ ಕುತೂಹಲ ಕೂಡ ನಿಮ್ಮೆಲ್ಲರಿಗಿದ್ದೀತು! ಬಹಳಷ್ಟು ಜನ ಈ ಬಗ್ಗೆ ವಿಚಾರಿಸುತ್ತಿದ್ದರು ಎಂಬ ಕಾರಣ ಒಂದು, ಮತ್ತೊಂದು ಎಲ್ಲರೂ ಭಾಗಿಯಾಗಿ ಈ ಕುರಿತು ಸಲಹೆಗಳು ನೀಡುತ್ತ ಬರಬಹುದು ಎಂಬುದು. 'ಸಂಪದ' ಸಮುದಾಯ ತನ್ನದೇ ಸಂಹಿತೆ ರೂಪಿಸಿಕೊಳ್ಳಬಹುದು, ಅದರ ಮೊದಲ ಹೆಜ್ಜೆ ಇದಾಗಬಹುದು. 

ಈಗ, 'ವಿಶೇಷ ಬರಹ'ವಾಗಿ ಪ್ರಕಟವಾಗುವ ಬರಹಗಳನ್ನು ಆಯ್ಕೆ ಮಾಡುವ ಸಂಹಿತೆಗೆ ಸದಸ್ಯರು ತಮ್ಮ ಸಲಹೆಗಳನ್ನು ನೀಡಬಹುದು. ಸೂಕ್ತವಾದ ಸಲಹೆಗಳನ್ನು ಆಧರಿಸಿ ಮೇಲಿನ ಪಟ್ಟಿಯನ್ನು ಉತ್ತಮಪಡಿಸಲಾಗುವುದು)

ಲೇಖನ ವರ್ಗ (Category): 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by anil.ramesh on
ಹಾಗೇ ಇನ್ನೊಂದು ವಿಷಯ, ’ವಿಶೇಷ ಬರಹ’ವಾಗಿ ಪ್ರಕಟವಾಗಬೇಕೆಂದು ಬರೆಯುವುದು ಬೇಡ. ಬರೆದದ್ದು ವಿಶೇಷವಾಗಿರುವಂತೆ ಲೇಖನವನ್ನು ಉತ್ತಮಪಡಿಸಿದರೆ ಚೆನ್ನಾಗಿರುತ್ತದೆ. -ಅನಿಲ್.

Submitted by asuhegde on
ಸಂಪದದ ಯಾವ ಪುಟದಲ್ಲಿ ಪ್ರಕಟವಾದರೂ ಚಿಂತಿಲ್ಲ ಅತಿ ಹೆಚ್ಚು ಜನರ ಮನಪಟಲವನ್ನು ಮುಟ್ಟಿದರೆ ಸಾಕು ಎಲ್ಲಿ ಪ್ರಕಟಗೊಂಡಿತೆಂಬುದೇ ಇಲ್ಲಿ ಮುಖ್ಯ ವಿಷಯವಲ್ಲ ಬರಹ ಹೇಗೆ ಸ್ವೀಕೃತವಾಯ್ತು ಎಂಬುದ ತಿಳಿದರೆ ಸಾಕು

Submitted by sada samartha on
ನಾವು ತಪ್ಪಾಗಿ ಎರಡು ಬಾರಿ ಬರೆಹವನ್ನು ಸೇವ್ ಮಾಡಿದ್ದಾಗ ಒಂದನ್ನು ಅಳಿಸಿ ಹಾಕಲು, ಅಥವಾ ಸೂಕ್ತ ತಿದ್ದುಪಡಿ ಮಾಡಲು ಅವಕಾಶವುಂಟೇ ? ದಯಮಾಡಿ ತಿಳಿಸುವಿರಾ ? - ಸದಾನಂದ

Submitted by mamatha.k on
ಆತ್ಮೀಯ ಸದಾನಂದರೆ, ಸಂಪದದಲ್ಲಿ ಬರಹಗಳನ್ನು ಎರಡು ಬಾರಿ ಸೇವ್ ಮಾಡಿದ್ದರೆ , ಅದನ್ನು ಸಂಪದದ ನಿರ್ವಾಹಕರು ಸರಿ ಪಡಿಸುತ್ತಾರೆ. ಒಂದನ್ನು ಅನ್ ಪಬ್ಲಿಷ್ ಮಾಡುತ್ತಾರೆ.