ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಭಾರತೀಯ dogಗಳ speciality!

July 3, 2006 - 10:41am — shreeharsha4u

ನಮ್ಮ ಭಾರತದ dogಗಳ ಅದರಲ್ಲೂ ಕನ್ನಡದ ಕುನ್ನಿಗಳ speciality ಏನೆಂದರೆ ಅವುಗಳಿಗೆ ಯಾವುದೇ ಭಾರತೀಯ ಭಾಷೆಯನ್ನೂ ಮಾತನಾಡಲು ಬರುವುದಿಲ್ಲ. ಬೇಕಾದರೆ ನೀವೇ ಪರೀಕ್ಷಿಸಿ. ಈ ನಮ್ಮ dogಗಳು ಬೆಳಿಗ್ಗೆ ಆರು ಗಂಟೆಗೆ ಎದ್ದು garden city(?) ಬೆಂಗಳೂರಿನಲ್ಲಿ "walking" ಎನ್ನುವ ಹೆಸರಿಗೆ ಅವಮಾನ ಮಾಡುವಂತೆ ತೆವಳಿಕೊಂಡು ಸಾಗುವ ೪೦ ಇಂಚು ಸುತ್ತಳತೆಯ ಹೊಟ್ಟೆಯ ಯಜಮಾನನನ್ನು ದರದರನೆ ಎಳೆದುಕೊಂಡು ಹೋಗುತ್ತಿರುತ್ತವೆ. ಇಂಗ್ಲಿಷ್‌ನಲ್ಲಿ "estop" ಎಂದರೆ ಮಾತ್ರ ಬ್ರೇಕ್‌ ಹಾಕುವ ಇವು ಕನ್ನಡದಲ್ಲಿ "ನಿಲ್ಲು" ಎಂದರೆ ನಿಮ್ಮನ್ನೇ ತಾತ್ಸಾರದಿಂದ ಕಾಣುವ risk ಇದೆ! ತಿನ್ನು ತಿನ್ನು ಎಂದು ಸಾವಿರ ಸರಿ ಕೂಗಿದರೂ ತಟ್ಟೆಗೆ ಬಾಯಿ ಹಾಕದ ಇವು "eat" ಅಂದ ತಕ್ಷಣ ಗಬಗಬನೆ ತಟ್ಟೆ ಖಾಲಿ ಮಾಡುತ್ತವೆ. "Stop please, eat please, pee please" ಎಂದು ಪ್ಲೀಸಬೇಕಾಗಿಲ್ಲ ಎನ್ನುವುದೇ ಸಮಾಧಾನದ ಸಂಗತಿ. 10 ವರ್ಷ ಮನೆಪಾಠ ಹೇಳಿಸಿಕೊಂಡು ಕಲಿತರೂ ಮನುಷ್ಯರಿಗೆ ಸಾಧಿಸದ ಇಂಗ್ಲಿಷ್ ಎಂಬ ಬ್ರಹ್ಮವಿದ್ಯೆ ನಾಯಿಗಳಿಗೆ ಇಷ್ಟು ಸುಲಭವಾಗಿದ್ದು ಮಾತ್ರ ಆಶ್ಚರ್ಯ.
ನನಗೆ ಯಾವಾಗಲೂ ನಗು ತರಿಸುವ ಸಂಗತಿಯೆಂದರೆ ಭಾರತೀಯರು ತಮ್ಮ ಸಾಕು ನಾಯಿಗಳಿಗೆ ಇಡುವ ಹೆಸರುಗಳು. ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದರೂ, ಐದನೇ ಕ್ಲಾಸಿಗೇ ಓದಿಗೆ ಸಲಾಮ್ ನಮಸ್ತೆ ಅಂದಿದ್ದರೂ ನಾಯಿಗಳಿಗೆ ಹೆಸರಿಡುವಾಗ ಮಾತ್ರ ಅಮೆರಿಕನ್ನರನ್ನೂ ನಾಚಿಸುವಂತೆ ಹೊಸ ಹೊಸ ಇಂಗ್ಲಿಷ್‌ ಪದಗಳನ್ನು ಹುಡುಕುತ್ತೇವೆ. ಜಿಮ್ಮಿ ಜೂಲಿಯಿಂದ ಹಿಡಿದು happy, sad, tearsಗಳ ತನಕ ಭಾರತದಲ್ಲಿ ನಾಯಿಗಳು ನಾಮಕರಣ ಮಾಡಿಕೊಂಡಿವೆ. ಈ ನಾಯಿ ಬೆಕ್ಕುಗಳಿಗೆ ಇಂಗ್ಲಿಷ್‌ ಹೆಸರಿಡುವ ಪದ್ಧತಿ ಏಕಿರಬಹುದು? ಸ್ವಾತಂತ್ರಾಪೂರ್ವದಲ್ಲಿ ಬ್ರಿಟಿಷರ ಅನುಕರಣೆಯಾಗಿ ಹುಟ್ಟಿದ ಈ ಅಭ್ಯಾಸ ಹಾಗೆಯೇ ಉಳಿದುಕೊಂಡು ಬಂದಿದೆಯೇ? ಮದ್ರಾಸನ್ನು ಚೆನ್ನೈ ಮಾಡಿ, bangaloreಅನ್ನು ಬೆಂಗಳೂರು ಮಾಡಿದ ನಾವು ನಾಯಿಗಳ ಹೆಸರಿಡುವಾಗ ಮಾತ್ರ ಏಕೆ ಇನ್ನೂ ಗುಲಾಮರಾಗಿದ್ದೇವೆ? ನನಗೆ ಅನ್ನಿಸುವ ಪ್ರಕಾರ ನಾಯಿಗಳಿಗೆ ಇಂಗ್ಲಿಷ್ ಹೆಸರಿಡುವುದಕ್ಕೆ ಮತ್ತೊಂದು ಬಲವಾದ ಕಾರಣ ಇದೆ. ಈಗ ನೋಡಿ ಜಿಮ್ಮಿ, ವಿಕ್ಕಿ ಎಂದು ಹೆಸರಿಟ್ಟರೆ ಅದು ಭಾರತದಲ್ಲಿ ಯಾವುದೇ ಮನುಷ್ಯನ ಹೆಸರನ್ನೂ ಹೋಲುವುದಿಲ್ಲ. ಅದೇ ರಾಜು, ಸುಬ್ಬು ಎಂದೆಲ್ಲಾ ಇಟ್ಟರೆ ಅವರು ನಮ್ಮ ಆಚೀಚೆಯ ಸಂಭಂದಿಕರೇ ಆಗಿರಬಹುದು. ನಾಯಿಗಳಿಗೆ ಮನುಷ್ಯರ ಹೆಸರನ್ನು ಎಲ್ಲಾದರೂ ಇಡುವುದುಂಟೇ? ಬಹುಶ ಹೀಗೆ ಯಾರ ಹೆಸರಿಗೂ ಹೋಲದ ಹೊಸ ಹೆಸರನ್ನು ಪ್ರತೀ ಬಾರಿಯೂ ಹುಡುಕಬೇಕಾದ ಕಷ್ಟವನ್ನು ತಪ್ಪಿಸಲಿಕ್ಕಾಗಿಯೇ ಇಂಗ್ಲಿಷ್ ಹೆಸರಿಡುವ ಪದ್ಧತಿ ರೂಡಿಗೆ ಬಂದಿರಬಹುದು. ಆದರೆ ಹೊಸ ಹೊಸ ಇಂಗ್ಲಿಷ್‌ ಹೆಸರುಗಳನ್ನು ಹುಡುಕುವ ಭರಾಟೆಯಲ್ಲಿ ಅಪ್ಪಟ ದೇಸೀ ಹೆಸರುಗಳಾದ ನೀಲ,ಕೆಂಚ,ಕರಿಯಗಳನ್ನು ನಾಯಿಗಳು ಮರೆತಿದ್ದು ಮಾತ್ರ ದುಖದ ವಿಷಯ.

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 749 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 3, 2006 - 8:55pm — suchara

ಉ: ಭಾರತೀಯ dogಗಳ speciality!

suchara's picture

ನಮ್ಮ ನಾಯಿಗೆ ನಾವಿಟ್ಟಿದ್ದ ಹೆಸರು - ಕರಿಯ.
ಕಸ್ತೂರಿಯವರು ನಾಯಿಗಳ ಬಗ್ಗೆ ಬರೆದಿರುವ "ಅನುನಾಯಿಗಳು" ಓದಿನೋಡಿ, ಬಹಳ ಚೆನ್ನಾಗಿದೆ.
ಹಾಗೆಯೇ ವಿಷ್ಣುರವರ ಸಿನೆಮಾ ನಾಗ-ಕಾಳ-ಬೈರವ ಮರೆತಿರಾ ?

-ಸುಚರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 4, 2006 - 9:56am — Sunil Jayaprakash

ಉ: ಭಾರತೀಯ dogಗಳ speciality!

Sunil Jayaprakash's picture

ಸುಚರ wrote:
ನಮ್ಮ ನಾಯಿಗೆ ನಾವಿಟ್ಟಿದ್ದ ಹೆಸರು - ಕರಿಯ

ನಮ್ಮ ದೊಡ್ಡಪ್ಪನ ಮನೆಯ ಹತ್ತಿರ ಒಂದು ಬೀದಿ ನಾಯಿ ಇತ್ತು. ಆ ಬೀದಿಯ ಎಲ್ಲಾ ಮನೆಯವರೂ, ಸುಮಾರು ೨೫-೩೦ ಎಂದಿಟ್ಟುಕೊಳ್ಳಬಹುದು, ಆ ನಾಯಿಯನ್ನು ಪ್ರೀತಿಯಿಂದ ಬ್ಲಾಕಿ, blacky ಅಂತ ಕರೀತಿದ್ರು. ಬ್ಲಾಕಿ ಅಂದ ತಕ್ಷಣ ಬಾಲ ಅಲ್ಲಾಡಿಸಿಕೊಂಡು ಬಂದುಬಿಡುತ್ತಿತ್ತು.
ಬಹುಶಃ ಕರಿಯ ಎಂದೇನಾದರು ಹೇಳಿದ್ದರೆ, ವರ್ಣಾಧಾರಿತ ವ್ಯವಸ್ಥೆಯಿಂದ ತನಗೆ ಅನ್ಯಾಯವಾಗಿದೆ ಅಂತ ನ್ಯಾಯಲಯದ ಮೆಟ್ಟಿಲೇರುತ್ತಿತ್ತೋ ಏನೋ. ಈಚೆಗೆ ಕತ್ತೆಯನ್ನು ಕರೆದುಕೊಂಡು ಹೋಗಿದ್ದರಲ್ಲಾ ಹಾಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 3, 2006 - 9:32pm — ahoratra

ನಾವು ಇಟ್ಟ ನಾಯಿ ಹೆಸರುಗಳು

ahoratra's picture

೧]ಕನಕ, ೨]ಬಂಗಾರಿ, ೩]ಕುಮಾರ, ೪]ಕಾಲು(ಕಾಲಭೈರವ), ೫] ಮಧುರ, ೬] ಗೋಪಿ.

ಮಲ್ಲಿಗೆ ಎನ್ನುವ ಬೆಕ್ಕು.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 4, 2006 - 11:04am — benaka

ನಾಯಿ ಹಾಗೂ ಅನ್ವರ್ಥನಾಮ

benaka's picture

ನಾಯಿಗೆ ಅನ್ವರ್ಥನಾಮಕರಣ ಮಾಡುವುದೂ ಅಪರೂಪವೇನಲ್ಲ; ಉದಾ:

ಕಪ್ಪನೆಯ ನಾಯಿ - ಕರಿಯ
ಕೆಂಪು ನಾಯಿ - ಕೆಂಚ
ರೋಷದ ನಾಯಿ - ಭೈರ, ಕಾಳ, ನಾಗ ಇತ್ಯಾದಿ ಸಿನಿಮಾ ರೌಡಿ ಹೆಸರು.
ಚಿಕ್ಕ ನಾಯಿ - ಚಿಕ್ಕ
ಹೊಟ್ಟೆ ಉಬ್ಬಿದ ನಾಯಿ - ಡುಬ್ಬಿ
ದೈವ ಸ್ವರೂಪಿ ನಾಯಿಗಳು - ಎಂಕ, ನಾಣಿ, ಸೀನ, ದತ್ತ...ಇತ್ಯಾದಿ ಇತ್ಯಾದಿ

ಇವೆಲ್ಲ ಗಂಡು ನಾಯಿಯ ಹೆಸರುಗಳಾದರೂ, ಹೆಣ್ಣು ನಾಯಿಗೂ ಸ್ವಲ್ಪ ಇದೇ ಹೋಲಿಕೆಯ ಹೆಸರುಗಳಿವೆ. ಮೈಮೇಲೆಲ್ಲ ಚುಕ್ಕೆಗಳಿಗಿರುವ ನಮ್ಮ ಬೀದಿ ನಾಯೊಂದನ್ನು ಎಲ್ಲರೂ ಚಿಕ್ಕ ಎನ್ನುತ್ತಿದ್ದರು. ನಮ್ಮ ಮನೆಗೆ ಬಂದ ಚಿಕ್ಕ ಹುಡುಗನೊಬ್ಬ ಅದನ್ನು ಕರೆಯುತ್ತಾ ''ಚಿಕ್ಕ ಚಿಕ್ಕ ಚಿಕ್ಕ... ತ್ಚು ತ್ಚು ತ್ಚು.... ಬಾ ಬಾ ಬಾ..'' ಎಂದು ಎಷ್ಟು ಕರೆದರೂ ಬಾರದೆ ಕೋಪಗೊಂಡು " ಲೇಯ್, ಮೈಮೇಲೆಲ್ಲ ಚುಕ್ಕೆ ಚಿಕ್ಕ..ಬಾರೋ" ಎಂದು ಕಿರುಚತೊಡಗಿದಾಗ, ಮೆಲ್ಲನೆ ಪಕ್ಕದ ಮನೆಯ ಕಿಟಕಿ ತೆರೆದು ಚಿಕ್ಕೇಗೌಡರು ಇಣುಕಿದ್ದನ್ನು ಕಂಡು ನಮಗೆ ನಗು ತಡೆಯಲಾಗಲಿಲ್ಲ. ಚಿಕ್ಕೇಗೌಡರ ಮುಖದ ಮೇಲೆ ಮೊಡವೆಯ ಚುಕ್ಕೆಗಳು ಕಲೆಗಳಾಗಿ ಉಳಿದಿದ್ದವು. ಚುಕ್ಕೆ ಚಿಕ್ಕ ಬಾರೋ ಎಂದದ್ದು ಕೇಳಿ ಅವರಿಗೆ ಮೊದಲು ಭಯವಾಯ್ತೇನೋ; ನಿಜವಿಚಾರ ತಿಳಿದು ಹಲ್ಕಿರಿದು ಕಿಟಕಿಯ ಕದವಿಕ್ಕಿದರು! ಮೊದಲು ಹುಡುಗನನ್ನು ಒಳಗೆಳೆದು ತಂದದ್ದಾಯಿತು!
ಇನ್ನೊಮ್ಮೆ "ಭೈರ ಭೈರ.." ಎಂದು ನಾಯಿಯನ್ನು ಕರೆಯುತ್ತಿದ್ದರೆ, ದಾರಿಹೋಕ - ನಮ್ಮಜ್ಜಿಯ ಸಹಪಾಠಿ ಭೈರಾಭಟ್ಟರು ದುರುಗುಟ್ಟಿ ನೋಡಿ ದೂರು ಕೊಡಲು ಒಳಗೇ ಬರಬೇಕೆ? ಅದರಿಂದುತ್ತೇಜಿತರಾಗಿ ಮಕ್ಕಳು ನಾಯಿ ಇಲ್ಲದಿದ್ದರೂ ಭಟ್ಟರನ್ನು ಕಂಡರೆ ಎಲ್ಲೋ ನೋಡಿಕೊಂಡು 'ಭೈರ ಭೈರ' ಎನ್ನಲು ಶುರು ಮಾಡಿದ್ದರು.

ನಿಮ್ಮ

 

ಬೆನಕ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 4, 2006 - 5:17pm — ಭರದ್ವಾಜ

'ಬೌಬೌ' ವಿನೋದ

ಭರದ್ವಾಜ's picture

ನಿಮ್ಮ ಬ್ಲಾಗಿನ 'ಬೌ ಬೌ' ವಿನೋದ ಚೆನ್ನಗಿದೆ. ಹೀಹೇ ಮುಂದುವರೆಸಿ.
                                                                            ನಿಮ್ಮ 

                                                                           ಭರದ್ವಾಜ                                                    

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 5, 2006 - 9:54am — prashanth kota

ಗಣೇಶನ ಮದುವೆ ಯಲ್ಲಿ

prashanth kota's picture

ಅನಂತ್ ನಾಗ್ (ಗಣೇಶ) ಬೀದಿ ನಾಯಿ ತಂದು ಅದಕ್ಕೆ "ರಮಣಮೂರ್ತಿ" ಅಂತ ಕಂಜೂಸ್ ಮನೆ ಮಾಲೀಕನ ಹೆಸರೇ ಇಟ್ಟನಲ್ಲ.
ಕೆಲವೊಮ್ಮೆ, ಹಾಗೆ ಮನುಷ್ಯರ ಹೆಸರಿಟ್ಟರೆ, ನಾಯಿಗೆ ಬೆಜಾರಾದೀತು.
ಪ್ರಶಾಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೃಹತ್ ಬೆಂಗಳೂರಿನ ನಾಯಿಗಳು ಮತ್ತು ಚರಂಡಿಗಳು
  • ಬಾಲ ಅಲ್ಲಾಡಿಸಲು ಜಾಗದ ಕೊರತೆ
  • ಶುದ್ಧ ಕನ್ನಡ?
  • ದೇಸಗತಿ ಭಾಷೆಗಳು (ಕನ್ನಡವೂ ಸೇರಿದಂತೆ ಎಲ್ಲಾ ದೇಸೀ ಭಾಷೆಗಳು)ಗಳ ಬಗೆಗೆ ಬಂಡವಾಳಶಾಹಿಯ ದಾರ್ಷ್ಟ್ಯ ಬಯಲು: ಶ್ರೀಯುತ ಶೇಖರ್‍ಪೂರ್ಣರ ಪ್ರತಿಕ್ರಿಯೆ
  • ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
Syndicate content

ಲೇಖಕರು

shreeharsha4u's picture

ಪರಿಚಯ

ನನ್ನ ಅಪ್ಪ ಯಾವಾಗಲೂ ಹೇಳುತ್ತಿರುತ್ತಾರೆ. ಸಾಗರ ತಾಲ್ಲೂಕಿನಲ್ಲೇ ನಾನು "ಸೋಮಾರಿ ನಂ.೨" ಅಂತೆ.("ನಂ.೧" ಯಾರು ಅಂತ ಮಾತ್ರ ಇನ್ನೂ ಹೇಳಿಲ್ಲ.)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
  • ಕನ್ನಡಿಯೊಳಗಿನ ಗಂಟು
  • ಅಭಿಮಾನಿ
  • ಬಾರೋ ಸಾಧನಕೇರಿಗೆ...
  • ಹಿಂದಿಚಲನಚಿತ್ರ, ’ಮಧುಮತಿ’ ಯನ್ನು ಗೆಳೆಯರಜೊತೆ ನೋಡುವ ಸಂದರ್ಭ ಬಂತು. ವಾ...ಎಂತಹ ಮಧುರ ಚಿತ್ರೀಕರಣ ! ಈಗ ನೋಡಿದಂತಿದೆ !

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 9:46am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator