ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

'ಶಿವನುಟ್ಟ ಸೀರೆ'

August 16, 2005 - 8:14pm — gvmt

ಸಾಮಾನ್ಯ ಶಕೆಯ ೧೪೧೦ನೆಯ ವರ್ಷದಲ್ಲಿ ಹುಟ್ಟಿದ ಹಂಪೆಯ ಶಾಸನವೊಂದರಲ್ಲಿ [S. I. I. IV, ಸಂ. ೨೭೬, ಪುಟ ೬೦-೬೬, ಸಾಲು ೯೫-೯೫] ಈ ಕೆಳಕೊಂಡ ಪದ್ಯವಿದೆ.

ಅವನಿಯನಾಕ್ರಮಿಪುದು ದಾ
ನವಿಚಿತ್ರಂ ಲೋಕವಱಿಯೆ ಶುಚಿಯೆನಿಸಿರ್ದ್ದುಂ
ಶಿವನುಟ್ಟ ಸೀರೆಯಂ ಪಿಡಿ
ದವಗಡಿಪಳ್ಕೀರ್ತ್ತಿಲಕ್ಷ್ಮಿ ಲಕ್ಷ್ಮೀಧರನಾ

ಮೊದಲನೆಯ ದೇವರಾಯನ ಮಂತ್ರಿಯಾದ ಲಕ್ಷ್ಮೀಧರನು ಗಣಪತಿ ದೇವಾಲಯವನ್ನು ಮಾಡಿಸಿ ಈ ಶಾಸನವನ್ನು ಹಾಕಿಸಿದನು. ಶಾಸನದಲ್ಲಿ ಬರುವ ಲಕ್ಷ್ಮೀಧರಾಮಾತ್ಯನ ವಿಸ್ತಾರವಾದ ಪ್ರಶಸ್ತಿಯಲ್ಲಿ ಈ ಪದ್ಯವೂ ಸೇರಿದೆ. ಇದರಲ್ಲಿಯ "ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿದವಗಡಿಪಳ್" ವಾಕ್ಯಖಂಡದ ಅರ್ಥವನ್ನು ಬಿಡಿಸಲು ಕೊಂಚ ಅವಕಾಶವಿದೆ.

ಸೀರೆ ಎಂದರೆ ಬಟ್ಟೆ. ಗಂಡಸರ ಉಡುಗೆಗೂ ಸೀರೆಯೆಂಬ ವ್ಯವಹಾರವಿದೆ [ವಡ್ಡಾರಾಧನೆಯ ಭದ್ರಬಾಹುಭಟಾರರ ಕಥೆಯಲ್ಲಿನ "... ನಂದಿಮಿತ್ರನೆಂದನಯ್ಯ ಎನಗುಡಲಿಲ್ಲೇನುಮೊಂದು ದಮ್ಮಕ್ಕಾದೊಡಂ ಸೀರೆಯಂ ಕೊಂಡೀಯಿಂ..." ವಾಕ್ಯವನ್ನು ನೋಡಬಹುದು]. ನಮ್ಮ ಮಿಥಿಕಗಳಲ್ಲಿ ಶಿವನು ಆನೆಯ ತೊಗಲನ್ನು ಉಟ್ಟಿರುತ್ತಾನೆ ಇಲ್ಲ ಬತ್ತಲೆಯಿರುತ್ತಾನೆ. ಈ ಪದ್ಯದ ಸಂದರ್ಭಕ್ಕೆ ಶಿವನ ಬತ್ತಲೆವೇಷವು ಒಪ್ಪುತ್ತದೆ. ದಿಗಂಬರನಾದ ಶಿವನಿಗೆ ದಿಕ್ಕುಗಳೆ ಬಟ್ಟೆ. ಅವೆ ಶಿವನುಟ್ಟ ಸೀರೆ. ಕೀರ್ತಿಲಕ್ಷ್ಮಿಯು ದಿಕ್ಕುಗಳನ್ನು ಹಿಡಿದು ಅವಗಡಿಸಿದಳು, ಹರಡಿದಳು.

ನಮ್ಮಲ್ಲಿ "ಸೆರಗು ಹಿಡಿ" ಮಾತಿಗೆ "ಹಿಂಬಾಲಿಸು" ಎಂಬ ಧ್ವನಿಯಿದೆ. ಇದು ಹೊಗಳಿಕೆಯ ಮಾತಲ್ಲ. ಲಕ್ಷ್ಮೀಧರಾಮಾತ್ಯನ ಕೀರ್ತಿಲಕ್ಷ್ಮಿಯು ಪರಪುರುಷನಾದ ಶಿವನ ಬಟ್ಟೆಯನ್ನು ಹಿಡಿಯುವುದು ಆಕೆಯ ಪಾವಿತ್ರ್ಯಕ್ಕೆ ಕುಂದು ತರುವಂತಹ ಸಂಗತಿ. ಹಾಗಿರುವಲ್ಲಿ ಆಕೆ ಶಿವನ ಸೀರೆಯನ್ನು ಹಿಡಿದರೂ ಲೋಕಕ್ಕೆ ಶುಭ್ರಳಾಗಿಯೇ ಕಂಡಳು. ಅದರಿಂದ ಲಕ್ಷ್ಮೀಧರನ ಕೀರ್ತಿಗೆ ಯಾವ ಕಡಮೆಯೂ ಉಂಟಾಗಲಿಲ್ಲ.

ಲಕ್ಷ್ಮೀಧರನ ದಾನಗಳ ವಿಷಯ ಭೂಮಿಯಲ್ಲೆಲ್ಲಡೆ ಹರಡಿತ್ತು. ಅವನ ಧವಳಕೀರ್ತಿಯು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಪಿಸಿತ್ತು ಎಂಬುದೆ ಈ ಪದ್ಯದ ಆಶಯ.

  • ಪ್ರಬಂಧ
~.~
  • Login or register to post comments
  • 767 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 18, 2005 - 12:11am — hpn

'ಱಿ' ಎಂಬುದನ್ನು ಹೇಗೆ ಓದಿಕೊಳ್ಳುವುದು?

hpn's picture

'ಱಿ' ಎಂಬುದನ್ನು ಹೇಗೆ ಓದಿಕೊಳ್ಳುವುದು? (ಕ್ಷಮಿಸಿ ಹಳೆಗನ್ನಡ ಬಲ್ಲವನಲ್ಲ)

ಲಕ್ಷ್ಮೀಧರನ ಬಗ್ಗೆ ಇನ್ನಷ್ಟು ಮಾಹಿತಿ ದೊರಕುವುದೆ? ವಿಕಿಪೀಡಿಯಕ್ಕೆ ಸೇರಿಸುವೆ. Smiling

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2005 - 8:39am — gvmt

ಮಾರ್ನುಡಿ: ಱಿ' ಎಂಬುದನ್ನು ಹೇಗೆ ಓದಿಕೊಳ್ಳುವುದು?

gvmt's picture

'ರ' ನುಡಿಯುವ ಸ್ಥಾನದಲ್ಲಿಯೆ ನಾಲಗೆಯನ್ನು ಇನ್ನಷ್ಟು ಒತ್ತಿ ನುಡಿದರೆ 'ಱ' ಹೊರಡುತ್ತದೆ. ಱ ಱಾ ಱಿ ಱೀ ... ಹೀಗೆ. 'ಱ್ಱ'ವು ಹೆಚ್ಚು ಕಡಮೆ 'ಟ್ರ'ದಂತೆಯೆ ಕೇಳಿಸುವುದರಿಂದ 'ಱ'ದ ನುಡಿಕೆಯನ್ನು ಊಹಿಸಬಹುದು. 'ೞ'ದಂತೆ ಈ ಅಕ್ಷರವೂ ಈಗ ನಮ್ಮಲ್ಲಿ ಬಳಕೆಯಲ್ಲಿಲ್ಲ; ವಚನಕಾರರ ಕಾಲಕ್ಕಾಗಲೆ ಇವು ಆಡುಮಾತಿನಿಂದ ಬಿಟ್ಟುಹೋಗಿದ್ದವು (ಆದರೆ ಸಾಹಿತ್ಯದಲ್ಲಿ ೧೬ರ ಶತಕದವರೆಗೂ ಅಲ್ಲಲ್ಲಿ ಉಳಿದಿದ್ದವು!!) ಆಡುಮಾತಿನಲ್ಲಿ 'ಱ'ಕ್ಕೆ ಬದಲಾಗಿ 'ರ'ವೂ 'ೞ'ಕ್ಕೆ ಬದಲಾಗಿ 'ೞ'ವೂ ಬಂದವು. ನಾವಿಂದು "ತಿಳಿ" ಎಂಬರ್ಥದಲ್ಲಿ ಬಳಸುವ "ಅರಿ" ಮೂಲತಃ "ಅಱಿ"ಯಾಗಿದ್ದಿತು.

ತಮಿೞು, ಮಲೆಯಾಳಗಳಲ್ಲಿ 'ಱ' 'ೞ' ಗಳು ಈಗಲೂ ಚಾಲ್ತಿಯಲ್ಲಿವೆ; ಇವುಗಳ ಉಚ್ಚಾರಣೆಗೆ ನಾವು ಆಯಾ ಭಾಷೆಗಳ ಟೀವೀ ವಾರ್ತೆ/ಧಾರಾವಾಹಿಗಳಿಗೇ ಮೊರೆಹೋಗಬೇಕು Smiling

ಲಕ್ಷ್ಮೀಧರನ ಶಾಸನವನ್ನು ಬಿಟ್ಟು ಬೇರೆಲ್ಲೂ ಅವನ ವಿಷಯ ಬಂದಂತಿಲ್ಲ. ಶಾಸನದಲ್ಲಿರುವುದನ್ನು ನಿಮಗೆ ಅನುವಾದಿಸಿ ಕಳಿಸಿಕೊಡಬಲ್ಲೆ, ಬೇಕಾದ ಪಕ್ಷದಲ್ಲಿ.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 18, 2005 - 9:27am — tvsrinivas41

ಕಂಚಿಯಲ್ಲಿನ ಶಾಸನ

tvsrinivas41's picture

ಶಾಸನಗಳ ಬಗ್ಗೆ ನಿಮ್ಮ ಲೇಖನ ತುಂಬಾ ವಿಷಯಪೂರಿತವಾಗಿದೆ. ಹಳಗನ್ನಡದ ಅಕ್ಷರಗಳನ್ನು ಹೇಗೆ ಟೈಪಿಸಿದಿರಿ ಎಂದು ಕೇಳಬಹುದೇ?

ಹಾಗೇ, ಕಂಚಿಯಲ್ಲಿನ ಶಿವನ ದೇವಸ್ಥಾನದಲ್ಲಿ ಒಂದು ಶಾಸನ ಇದೆ. ಅದರಲ್ಲಿ ಕೆಲವು ಅಕ್ಷರಗಳನ್ನು ತಮಿಳು ಭಾಷಿಗರೂ ಮತ್ತು ಕನ್ನಡ ಭಾಷಿಗರೂ ಓದಬಹುದು.

ದಯವಿಟ್ಟು ಅದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ.

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 19, 2005 - 9:05pm — gvmt

ಮಾರ್ನುಡಿ: ಕಂಚಿಯಲ್ಲಿನ ಶಾಸನ

gvmt's picture

ಶ್ರೀನಿವಾಸರೆ,

ಕನ್ನಡ ಯೂನಿಕೋಡ್‌ನಲ್ಲಿ ಈ ಅಕ್ಷರಗಳು ಸೇರಿವೆ; ಬರಹದ ಲಿಪ್ಯಂತರಣದಲ್ಲೂ ಇವೆ.

ಕಂಚಿಯ ರಾಜಸಿಂಹೇಶ್ವರ ದೇವಸ್ಥಾನದಲ್ಲಿ ಚಾಲುಕ್ಯ ವಿಕ್ರಮಾದಿತ್ಯನ ಕನ್ನಡ ಶಾಸನವೊಂದಿದೆ. ನೀವು ಕೇಳುತ್ತಿರುವುದು ಇದರ ವಿಷಯವೆ? ಕಂಚಿಯಲ್ಲಿ ಬೇರೆ ಕನ್ನಡ ಶಾಸನಗಳೂ ಇದ್ದಾವು. "ತಮಿಳುನಾಡಿನ ಕನ್ನಡ ಶಾಸನಗಳು" ಪುಸ್ತಕವನ್ನು ಕನ್ನಡ ವಿ.ವಿಯು ಪ್ರಕಟಿಸಿದೆ. ಕಂಚಿಯಲ್ಲಿಯ ಎಲ್ಲ ಕನ್ನಡ ಶಾಸನಗಳ ಪಾಠವನ್ನು ಅದರಲ್ಲಿ ಕಾಣಬಹುದು.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2005 - 6:19am — tvsrinivas41

ಹೌದು

tvsrinivas41's picture

ಹೌದು. ನಾನು ಶಾಸನವನ್ನು ನೋಡಿರುವುದು ರಾಜಸಿಂಹೇಶ್ವರನ ದೇವಸ್ಥಾನದಲ್ಲೇ. ಕನ್ನಡ ವಿ.ವಿ. ಯವರು ಪ್ರಕಟಿಸಿರುವ ಆ ಪುಸ್ತಕವನ್ನು ಈ ಬಾರಿ ಬೆಂಗಳೂರಿಗೆ ಬಂದಾಗ ಕೊಳ್ಳುವೆ. ಉಪಯುಕ್ತ ಮಾಹಿತಿದೆ ಧನ್ಯವಾದಗಳು.

---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕ೦ಡೆನಾ ಶಿವನ ಸೌ೦ದರ್ಯವ
  • ಜೋಗಿಗೆ ಮನೆಯೆಲ್ಲಿ ಮಠವೆಲ್ಲಿ ; ಕೂತಲ್ಲೇ ಶಿವನ ಧ್ಯಾನ !
  • ಎಣ್ಮಯ ಎಂದರೆ ಯಾರು
  • ಎರಡು ಕವನ - ನಲ್ಲೆಯ ನಾಚಿಕೆ ಮತ್ತು ನಗು
  • ಮಂದಿರೆಯ ಸೀರೆ!
Syndicate content

ಲೇಖಕರು

gvmt's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹನಿಗವನಗಳು
    July 9, 2008 - 3:28pm
  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ನಿಮಗೆ ಒಂದು ವೇಳೆ ಒಳ್ಳೆಯ ಸಲಹೆ ದೊರೆತರೆ ಅದನ್ನು ಕೂಡಲೆ ಬೇರೆಯವರಿಗೆ ತಲುಪಿಸಿ. ಅದರಿಂದ ನಿಮಗೆ ಉಪಯೋಗವಾಗುವುದು ಅಷ್ಟರಲ್ಲೇ ಇದೆ ಬಿಡಿ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator