ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನಮ್ಮ ಜೀವ ಕೇವಲ ನಮಗೆ ಸೇರಿದ್ದೇ?

July 7, 2006 - 11:39am — shreeharsha4u

ಮೊನ್ನೆ ಪತ್ರಿಕೆಯಲ್ಲಿ ಹೆಲ್ಮೆಟ್‌ ಕಡ್ಡಾಯದ ಬಗ್ಗೆ ವರದಿಗಳನ್ನ ಓದುತ್ತಿದ್ದೆ. ಈ ಹೆಲ್ಮೆಟ್ ಕಡ್ಡಾಯ ಎನ್ನುವುದು ಒಂದು ರೀತಿಯ ಕಣ್ಣಾಮುಚ್ಚಾಲೆ. ಪ್ರತೀ ವರ್ಷವೂ ತಪ್ಪದೆ ನಡೆಯುವ, ಪ್ರತೀ ಹೊಸ ಸರ್ಕಾರ ಬಂದಾಗಲೂ ಜೀವ ಪಡೆಯುವ ಹೆಲ್ಮೆಟ್ ಆಟ ಸ್ವಲ ದಿನ ಪತ್ರಿಕೆಗಳಿಗೆ ಆಹಾರವಾಗಿ, ಹರಟುವ ಬಾಯಿಗಳಿಗೆ ಸ್ನ್ಯಾಕ್‌ ಆಗಿ ನಿಧಾನವಾಗಿ ಮೊದಲ ಪುಟದಿಂದ ಮೂರನೆ ಪುಟಕ್ಕೆ, ನಂತರ ಸಣ್ಣ ಸುದ್ದಿಯಾಗಿ ಕಾಣಿಸಿಕೊಂಡು ಕ್ರಮೇಣ ಕಣ್ಮರೆಯಾಗುತ್ತದೆ. ಹೆಲ್ಮೆಟ್ ಕಡ್ಡಾಯ ಬೇಕೇ ಬೇಡವೇ ಎಂಬ ತೀರ್ಮಾನ ಒತ್ತಟ್ಟಿಗಿರಲಿ. ಸಂಬಂಧಪಟ್ಟವರು ಅದರ ಬಗ್ಗೆ ಹೊಡೆದಾಡಲಿ. ನಾನೀಗ ಚರ್ಚಿಸಹೊರಟದ್ದು "ನಮ್ಮ ಜೀವ ರಕ್ಷಣೆ ನಮ್ಮ ಜವಾಬ್ಧಾರಿ, ಅದರ ಉಸಾಬರಿ ಸರ್ಕಾರಕ್ಕೆ ಬೇಡ" ಎನ್ನುವ ಹೆಲ್ಮೆಟ್ ವಿರೋಧಿಗಳ ಒಂದು ವಾದದ ಬಗ್ಗೆ.
ಒಮ್ಮೆ ಪ್ರಾಮಾಣಿಕವಾಗಿ ಯೋಚಿಸಿ ನೋಡಿ. "ಜೀವನ ಬೇಜಾರಾಯ್ತು, ಬದುಕಿದ್ದು ಸಾಕು, ಈಗ ಸಾಯುತ್ತೇನೆ" ಎಂದು ಜೀವನದ ಎಲ್ಲಾ ಹೊರೆಗಳನ್ನ ಕೆಳಗೆ ಬಿಸಾಡಿ ಹಾಯಾಗಿ ಸಾಯಲು ಎಂದಾದರೂ ಸಾಧ್ಯವೇ? ಮನುಷ್ಯ ಈ ಭೂಮಿಯ ಮೇಲೆ ಮೊದಲ ಹೆಜ್ಜೆ ಇಟ್ಟ ದಿನದಿಂದಲೂ ಜವಾಬ್ಧಾರಿಗಳನ್ನ ತಲೆಯ ಮೇಲೆ ಹೊತ್ತೇ ಬದುಕುತ್ತಾ ಇರುತ್ತಾನೆ. ನಮಗೆ ಇಷ್ಟ ಇರಲಿ ಬಿಡಲಿ, ಜವಾಬ್ಧಾರಿ ಎಂಬ ಲೋನನ್ನ ಯಾವ ಯಾವ ಬ್ಯಾಂಕಿನಿಂದ ತೆಗೆದುಕೊಂಡಿದ್ದೇವೋ, ಮರಳಿ ಆ ಬ್ಯಾಂಕುಗಳಿಗೆ ಪಾವತಿಸಲೇಬೇಕು. "ನಾನು free bird, ಸ್ವಚ್ಛಂದವಾಗಿ ಬದುಕುವುದಕ್ಕೇ ನಾನು ಹುಟ್ಟಿರುವುದು" ಎಂದು ಎಷ್ಟು ಹಾರಾಡಿದರೂ, responsibility ಎಂಬ ಬಲೆ ಒಂದಲ್ಲ ಒಂದು ಸಮಯದಲ್ಲಿ ಬಂದು ಮೈಮೇಲೆ ಬಿದ್ದೇ ಬೀಳುತ್ತದೆ. ಅಂತಹುದರಲ್ಲಿ ನಮ್ಮ ಜೀವ ನಮ್ಮ ಸೊತ್ತು ಮಾತ್ರ ಎಂದು ಹೇಗೆ ಹೇಳಲು ಸಾದ್ಯ? ನಮ್ಮ ಜೀವನದ ಬಗ್ಗೆ ಅಲಕ್ಷ್ಯ ಹೊಂದಿದರೆ ನಮ್ಮನ್ನು ನಂಬಿರುವವರು, ನಮ್ಮನ್ನು ಪ್ರೀತಿಸುವವರು, ಇವರೆಲ್ಲರಿಗೆ ಮೋಸ ಮಾಡಿದಂತೆ ಅಲ್ಲವೇ? ತಮ್ಮ ಮೊಮ್ಮಕ್ಕಳನ್ನ ಎತ್ತಿ ಆಡಿಸುವ ಕನಸು ಹೊತ್ತ ತಂದೆ ತಾಯಂದಿರು, ನಮ್ಮ ಜೊತೆ ಸಾಯಂಕಾಲಗಳನ್ನು ಕಳೆಯುವ ಕನಸು ಹೊತ್ತ ಸ್ನೇಹಿತರು, ಜೊತೆಯಲ್ಲಿ ಸಂಸಾರ ಮಾಡುವ ಕನಸು ಹೊತ್ತ ಪ್ರಿಯತಮ/ಮೆ ಮುಂತಾದವರ ಕನಸುಗಳಿಗೆ ಅರ್ಥವೇ ಇಲ್ಲವೇ?
ನಮ್ಮ ಜೀವದ ಮೇಲೆ ಅಧಿಕಾರವನ್ನ ನಮಗಿಂತ ಹೆಚ್ಚಾಗಿ ನಮ್ಮ ತಂದೆ ತಾಯಂದಿರು, ಬಂಧುಗಳು, ಸ್ನೇಹಿತರು ಹೊಂದಿರುತ್ತಾರೆ. ಏಕೆಂದರೆ ನಮಗೇನಾದರೂ ಆಗಿ ನಾವು ಸ್ವರ್ಗವಾಸಿಗಳಾದರೆ(ನಾನು ಸ್ವರ್ಗಕ್ಕೇ ಹೋಗುತ್ತೇನೆ, ನಿಮ್ಮ ಬಗ್ಗೆ ಗೊತ್ತಿಲ್ಲ) ವೇದನೆ ಅನುಭವಿಸುವವರು ಇವರು. ಮನಸಾರೆ ಪ್ರೀತಿಸುವ ಗಂಡ ಹೆಂಡತಿ, ಪ್ರಿಯತಮ/ಮೆಗೆ "ನಾನು ಸಾಯೋದು ನನ್ನ ಇಷ್ಟ, ನೀನ್ಯಾಕೆ ಅದರ ಬಗ್ಗೆ ತಲೆ ಕೆಡಿಸ್ಕೋಬೇಕು?" ಎಂದು ಹೇಳಿ ನೋಡಿ?
ಹೆಲ್ಮೆಟ್‌ ತೊಡದೆ ಇರುವುದಕ್ಕೆ "ಹೇರ್‌ಸ್ಟ್ಯೆಲ್‌ ಹಾಳಾಗುತ್ತದೆ" ಎಂಬ ಬಾಲಿಶ ಕಾರಣವನ್ನ ನಾನು ಬಹುಶ ಒಪ್ಪುತ್ತೇನೆ. ಆದರೆ ಈ ಮೇಲಿನ ಕಾರಣವನ್ನಲ್ಲ.

~.~
  • Login or register to post comments
  • 776 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 19, 2006 - 2:25pm — naasomeswara

`ಆಲ್ ಆರ್ ನನ್ ಫೆನಾಮಿನ`

naasomeswara's picture

ತಲೆಯಿದ್ದವರಿಗೆ ಹೆಲ್ಮೆಟ್  ಬೇಕು. ತಲೆಯಿಲ್ಲದೇ ಬರೀ ಬುರುಡೆ ಇರುವವರಿಗೂ ಹೆಲ್ಮೆಟ್ ಬೇಕು. ಹೇರ್ ಸ್ಟೈಲ್ ಹಾಳಾಗುತ್ತದೆ, ತಲೆನೋವು ಬರುತ್ತದೆ, ಕಳೆದು ಹೋಗುತ್ತದೆ, ಹೊತ್ತು ಕೊಂಡು ಹೋಗಲು ಭಾರ - ಇತ್ಯಾದೆ ಸಬೂಬು ಕೊಡಬಹುದು. ನಮ್ಮ ತುರುಬೇ ಒಂದು ಹೆಲ್ಮೆಟ್ ಹಾಗಿದೆ, ಅದರ ಮೇಲೆ ಇನ್ನೊಂದು ಯಾಕೆ ಎಂದು ಕೆಲವು ನಾರೀಮಣಿಯರು ಉವಾಚಿಸಬಹುದು. ಆದರೆ ಅಪಘಾತರಾಯ ಹೆಲ್ಮೆಟ್ ಇಲ್ಲದವರಿಗೆ ವಿನಾಯತಿಯನ್ನು ಕೊಡುವುಧಿಲ್ಲ. ಇದೊಂದು ರೀತಿ `ಆಲ್ ಆರ್ ನನ್ ಫೆನಾಮಿನ`. ಹಾಗಾಗಿ ರಾಜಕಾರಣಿಗಳ ರಾಜಕೀಯಕ್ಕೆ ಬೆಲೆ ಕೊಡದೆ ಹೆಲ್ಮೆಟ್ ಹಾಕಿಕೊಂಡುಬಿಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 18, 2008 - 3:08pm — kannadakanda

ಉ: ನಮ್ಮ ಜೀವ ಕೇವಲ ನಮಗೆ ಸೇರಿದ್ದೇ?

kannadakanda's picture

ಶ್ರೀಹರ್ಷ ಅವರೆ, ಜೀವನ ನಮಗಲ್ಲವಂತೆ. ನಾವೆಲ್ಲಾ ದೇವರಿಗಾಗಿ ಬದುಕುತ್ತೇವಂತೆ. ಆದರೆ ಹುಟ್ಟುವುದು ಸಾಯುವುದು ನಾವಂತೆ. ಅದಕ್ಕಾಗಿ ಸಂಸ್ಕೃತದಲ್ಲಿ ಜೀವತಿ ಪರಸ್ಮೈಪದ. ಅಂದರೆ ಬೇಱೆಯವರಿಗೆ ಬದುಕುವುದು. ಹುಟ್ಟುವುದು ಜಾಯತೇ=ಹುಟ್ಟಿಕೊಳ್ಳುತ್ತಾನೆ. ಹಾಗೆಯೇ ಮ್ರಿಯತೇ=ಸತ್ತುಕೊಳ್ಳುತ್ತಾನೆ. (ಆದರೆ ಕೊಂದುಕೊಳ್ಳುವುದಲ್ಲ). ಹುಟ್ಟು ಮತ್ತು ಸಾವು ನಮ್ಮಿಷ್ಟವಂತೆ. ಜೀವನ ನಮಗಾಗಿ ಅಲ್ಲವಂತೆ. ಹಿರಿಯರು ಹೇೞುತ್ತಾರೆ. ನನಗೆ ಗೊತ್ತಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೆಲ್ಮೆಟ್ ಇದ್ರೆ ಸಾಕಾ.. ???
  • ಕನಸು
  • ಹೆಲ್ಮೆಟ್ ಕಡ್ಡಾಯ - ನಿಮ್ಮ ಅಭಿಪ್ರಾಯದಲ್ಲಿ
  • ಮಂಕು ನೀಲಿ ಚುಕ್ಕೆ!
Syndicate content

ಲೇಖಕರು

shreeharsha4u's picture

ಪರಿಚಯ

ನನ್ನ ಅಪ್ಪ ಯಾವಾಗಲೂ ಹೇಳುತ್ತಿರುತ್ತಾರೆ. ಸಾಗರ ತಾಲ್ಲೂಕಿನಲ್ಲೇ ನಾನು "ಸೋಮಾರಿ ನಂ.೨" ಅಂತೆ.("ನಂ.೧" ಯಾರು ಅಂತ ಮಾತ್ರ ಇನ್ನೂ ಹೇಳಿಲ್ಲ.)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 45 ಅತಿಥಿಗಳು ಆನ್ಲೈನ್ ಇರುವರು.


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator