ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !

July 9, 2006 - 9:37pm — venkatesh

ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರ, ರಾಜಾರಾವ್, ಅಮೆರಿಕೆಯ ಟೆಕ್ಸಾಸ್ ವಿಶ್ವ ವಿದ್ಯಾನಿಲಯ, ಆಸ್ಟಿನ್ ನಲ್ಲಿ ಶನಿವಾರದಂದು ದೈವಾಧೀನರಾದರು. ೯೬ ವರ್ಷಹರೆಯದ ಹಾಸನದ ರಾಜಾರಾವ್, ನವೆಂಬರ್, ೮, ೧೯೦೮ ರಲ್ಲಿ ಬಹಳ ಹೆಸರುವಾಸಿಯಾದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರ ಶಿಕ್ಷಣ ಬಾಲ್ಯದಿಂದ ಪದವಿಯವರೆವಿಗೂ ಕನ್ನಡನೆಲದಲ್ಲೇ ನಡೆಯಿತು. ಸ್ನಾತಕೊತ್ತರ ಶಿಕ್ಷಣಕ್ಕಾಗೆ ಅವರು ಯುರೊಪಿನ ಸೋರ್ಬೊನಿಯದ, ಮೌಂಟ್ ಪೆಲೀರ್ ವಿಶ್ವವಿದ್ಯಾನಿಲಯದಲ್ಲಿ ಸಂಶೊಧನೆ ಮಾಡಲು ತಮ್ಮ ೧೯ ನೇ ವಯಸ್ಸಿನಲ್ಲೇ ಹಡಗಿನಲ್ಲಿ ಪ್ರಯಾಣ ಮಾಡಿದರು.ಅಲ್ಲಿ, ಅವರ ಶಿಕ್ಷಣವೆಲ್ಲಾ ಪ್ರೆಂಚ್ ಭಾಷೆಯಲ್ಲಿ ನಡೆಯಿತು.ಆದರೆ ಅವರು ಮುಂದೆ ಬರೆದ ಕಾದಂಬರಿಗಳೆಲ್ಲಾ ಹೆಚ್ಚಾಗಿ ಇಂಗ್ಲೀಷಿನಲ್ಲೇ ! ಫ್ರಾನ್ಸಿನಲ್ಲಿ ಕಳೆದ ೧೦ ವರ್ಷಗಳ ಜೀವನದಲ್ಲಿ, ೧೯೩೧ ರಲ್ಲಿ ಫ್ರೆಂಚ್ ಭಾಷಾ ತಜ್ಞೆ, 'ಕ್ಯಾಮಿಲ್ಲೆ ಮೌಲಿ'ಯವರ ಒಡನಾಟದಿಂದ ಪ್ರಾರಂಭವಾಗಿ ಮದುವೆಯಲ್ಲಿ ಕೊನೆಗೊಂಡಿತು.೧೯೩೯ ರಲ್ಲಿ ಕಾರಣಾಂತರಗಳಿಂದ ಮದುವೆ ಮುರಿಯಿತು. ೧೯೩೧-೩೨ ರಲ್ಲಿ ಅವರು ೪ ಕನ್ನಡ ಲೇಖನಗಳನ್ನು 'ಜಯಕರ್ಣಾಟಕ' ವೆಂಬ ನಿಯತಕಾಲಿಕಕ್ಕೆ ಬರೆದುಕೊಟ್ಟಿದ್ದರು.ವಿವಾಹ ವಿಚ್ಛೇದನದ ನಂತರ, ಬೇಸತ್ತ ಅವರು, ಭಾರತಕ್ಕೆ ಬಂದು ಕೆಲವುಕಾಲ ಆಶ್ರಮಗಳಲ್ಲಿ ಕಳೆದರು.೧೯೩೮ ರಲ್ಲಿ ಬರೆದ 'kantapura',ಅವರಿಗೆ ಅಂತರ ರಾಷ್ಟ್ರೀಯ ಖ್ಯಾತಿ ತಂದಿತ್ತು.ಈ ಕಾದಂಬರಿಯು ಬ್ರಿಟೀಷರ ಅಂದಿನ ಆಳ್ವಿಕೆಯ ವಿರುದ್ಧದ ಅಹಿಂಸಾತ್ಮಕ ಹೋರಾಟದ ಕುರಿತಾದ, ಗಾಂಧಿಜಿಯವರ ಬೋಧನೆಗಳ ಪ್ರಭಾವಗಳ ನೈಜ ಚಿತ್ರಣವಾಗಿದೆ.ರಾಯರು 'Tomorrow'ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದರು. ವಿಶ್ವಯುದ್ಧದನಂತರ ಅವರು ಫ್ರಾನ್ಸ್ ಗೆ ವಾಪಸ್ ಹೋದರು. ಅಲ್ಲಿಂದ ಅವರು ವಿಶ್ವದಾದ್ಯಂತ ಸುತ್ತಿದರು.೧೯೪೭ ರಲ್ಲಿ 'The cow of the Barricades' ಪ್ರಕಟಿಸಿದರು. ೧೯೫೦ ರಲ್ಲಿ ಅಮೆರಿಕಕ್ಕೆ ಭೇಟಿಮಾಡಿದರು.೧೯೬೫ ರಲ್ಲಿ ಅಲ್ಲಿನ ನಟಿ, 'ಕ್ಯಾಥರೀನ್ ಜೊನ್ಸ್' ರವರೊಡನೆ ಮರು ವಿವಾಹ ಮಾಡಿಕೊಂಡರು.೧೯೬೫ ರಿಂದ ೧೯೮೩ ರ ವರೆಗೆ ಭಾರತೀಯ ತತ್ವಶಾಸ್ತ್ರ ಮತ್ತು ಬೌದ್ಧ ಮತವನ್ನು ಟೆಕ್ಸಾಸ್ ವಿಶ್ವ ವಿದ್ಯಾನಿಲಯದಲ್ಲಿ, ಭೋಧಿಸುತ್ತಾ ಬಂದರು. ಅವರು ಬರೆದ ಕಾದಂಬರಿಗಳು :

೧. ೧೯೩೯ 'Changing India' (I. Singh ಜೊತೆ )
೨. ೧೯೪೮ 'Whither India' (I. Singh ಜೊತೆ)
೩. ೧೯೬೪ 'ಕೇಂದ್ರೀಯ ಅಕ್ಯಾಡಮಿ ಪ್ರಶಸ್ತಿ'.
೪. ೧೯೬೯ 'ಪದ್ಮ ಭೂಷಣ ಪ್ರಶಸ್ತಿ'.
೫. ೧೯೭೬ 'Comrade Kirillov'
೬ ೧೯೭೮' The Policeman and the Rose.
೭. ೧೯೮೮ ' The Chess master and his life.
೧೯೮೮ ' Neustadt International priZe' for
Literature, ಪ್ರಶಸ್ತಿ.
೮. ೧೯೯೩ ' On the Ganga Ghat'
೯. ೧೯೯೬ 'The meaning of india'
೧೦. ೧೯೯೬ ' Great Indian way'
೧೧. ೧೯೯೮ 'The Best of Raja rao'
೧೯೯೭ 'ಕೇಂದ್ರ ಸಾಹಿತ್ಯ ಅಕ್ಯಾಡಮಿ ಫೆಲೋ ಆಗಿ ಆಯ್ಕೆ.

ಅವರು ಇತ್ತೀಚೆಗೆ ಬರೆದ ' Daughter of the mountain' ಸಧ್ಯದಲ್ಲೇ ಬರಲಿದೆ.

ಆರ್. ಕೆ. ನಾರಾಯಣ್ ರಂತೆಯೆ, ಶ್ರೀ ರಾಜಾರಾಯರು ಭಾರತದ ಒಬ್ಬ ಖ್ಯಾತ ಇಂಗ್ಲೀಷ್ ಕಾದಂಬರಿಕಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರೊಬ್ಬ ಹುಟ್ಟುಕನ್ನಡಿಗರೆಂಬುದು ನಮಗೆ ಸಂತಸ ನೀಡುವ ಸಂಗತಿ !

  • ಪ್ರಚಲಿತ
~.~
  • Login or register to post comments
  • 725 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 10, 2006 - 3:40am — gvmt

"The Serpent and the Rope"

gvmt's picture

ಅವರ - "ಹಾವೂ ಹಗ್ಗವೂ" ಎನ್ನಬಹುದೆ? ಸರ್ಪರಜ್ಜುಕ ವಾಸಿಯೇನೊ - ಓದಿದ್ದೇನೆ. ಕಾಂತಾಪುರ ಕೂಡ. ಎರಡೂ ನನ್ನ ಪುಸ್ತಕ ರಾಶಿಯಲ್ಲಿ ಎಲ್ಲಿಯೋ ಸೇರಿವೆ. ಕಥೆಯೂ ಅರ್ಧಮರ್ಧ ಮರೆತಿದ್ದೇನೆ. "ಹಾವೂ .." ಹಿಡಿಸಿದಷ್ಟು ಕಾಂತಾಪುರ ಹಿಡಿಸಲಿಲ್ಲವೆಂದು ಜ್ಞಾಪಕ.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2006 - 7:59am — venkatesh

ಕನ್ನಡದ, ಹಾಸನದ, ರಾಜಾರಾಯರು ಇನ್ನಿಲ್ಲ !

venkatesh's picture

ಮೇಲಿನ ಕಾದಂಬರಿಗಳಪಟ್ಟಿಯಲ್ಲಿ ಪ್ರಶಸ್ತಿಗಳೂ ಸೇರಿವೆ.(ಸೀ.ನಂ.೩ ಮತ್ತು ೪)ಅವುಗಳನ್ನು ಗುರುತಿಸಿ.
ಅವರ ಇನ್ನೊಂದು ಬಹು ಚರ್ಚಿತ ಕಾದಂಬರಿ,ಎಂದರೆ, 'ಸರ್ಪೆಂಟ್ ಅಂಡ್ ದಿ ರೊಪ್' ಇದು ಅವರು ಭಾರತಕ್ಕೆ ಬಂದಾಗ, ೧೯೬೦ ರ ಕೆಲಕಾಲ ಯಾವ ಹವ್ಯಾಸವನ್ನೂ ಮಾಡದೆತಣ್ಣಗಿದ್ದ ಸಮಯದಲ್ಲಿ ಬರೆದ ಕಾದಂಬರಿ.ಇದೇ ಪುಸ್ತಕ ಅವರಿಗೆ ೧೯೬೪ ರಲ್ಲಿ, 'ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ'ಯನ್ನೂ ತಂದುಕೊಟ್ಟಿತು. ಅವರೇ ಹೇಳುವಂತೆ ಇದು ಅವರ ಆತ್ಮಕಥನದ ಒಂದು ತುಣುಕು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
  • ಕನ್ನಡತಿ, ಪ್ರೊ. ಮಾಲತಿರಾವ್ ರವರಿಗೆ ಅಭಿನಂದನೆಗಳು.
  • ನನ್ನ ಇತ್ತೀಚಿನ ಓದು
  • *'ಜೆ,' ರವರ ಕನಸಿನ ಕೂಸು, ಏರ್ ಇಂಡಿಯದ, ವಿಮಾನ ಹಾರಾಟ : ಇಂದಿನಿಂದ, ಬೊಂಬಾಯಿನಿಂದ ಎಲ್ಲೂ ನಿಲ್ಲಿಸದೆ, ನೇರವಾಗಿ ನ್ಯೂಯಾರ್ಕಿಗೆ !
  • ನಮ್ಮ "ಪಾಚಿ," ಯವರಿಗೆ ನೋಬೆಲ್ ಶಾಂತಿ ಪುರಸ್ಕಾರ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 2:22pm
  • createam
    ಉ: ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
    October 7, 2008 - 2:21pm
  • mahesha
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:16pm
  • savithasr
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:15pm
  • anivaasi
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:08pm
  • mahesha
    ಉ: ಕಡೇಹುಟ್ಟು
    October 7, 2008 - 1:51pm
  • mahesha
    ಉ: ಕಡೇಹುಟ್ಟು
    October 7, 2008 - 1:48pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:45pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:39pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:35pm
ಇನ್ನಷ್ಟು
ಈಗಿನಂತೆ 18 ಸದಸ್ಯರು ಮತ್ತು 166 ಅತಿಥಿಗಳು ಆನ್ಲೈನ್ ಇರುವರು.


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator