ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

“ಆಧುನಿಕ ಮೌಲ್ಯಗಳು..”.

July 10, 2006 - 7:07pm — ritershivaram

ಇತ್ತೀಚೆಗೆ “ಸಂಪದ” ದ ಬ್ಲಾಗ್ ಬರಹಗಾರನಾದಮೇಲೆ, ನನ್ನ ಹಳೆಯ ಟಿಪ್ಪಣಿ ಮತ್ತು ಡೈರಿ ಪುಸ್ತಕಗಳನ್ನೆಲ್ಲ ತಿರುವಿ ಹಾಕುವಂತಾಯಿತು. ಲೇಖಕನಾಗಿ ಹಲವು ವರ್ಷಗಳ ನನ್ನ ಅನುಭವದಲ್ಲಿ ಹೇಳಬೇಕೆಂದರೆ, ಅವು ಬಹಳ ಕಚ್ಚಾ ಸಾಮಗ್ರಿಯನ್ನೊದಗಿಸುತ್ತವೆ, ಮತ್ತು ಹೊಚ್ಚ ಹೊಸ ವಿಷಯಗಳಿಗೆ ಇಂಬುಗೊಡುತ್ತ ಸಾರ್ವಕಾಲಿಕ ಮೌಲ್ಯಗಳನ್ನು ತೆರೆದಿಡುತ್ತವೆ. ಅಂತಹ ಬರಹಗಳನ್ನು ನಿಮ್ಮೊಂದಿಗೆ ಸಂಪದದಲ್ಲಿ ಹಂಚಿಕೊಳ್ಳುವ ತವಕವಿದೆ. ಅಂತಹ ಮೊದಲ ಪ್ರಯತ್ನವಿದು...

ವಿಜ್ಞಾನದಿಂದ ತಂತ್ರಜ್ಞಾನ. ತಂತ್ರಜ್ಞಾನದಿಂದ ನಮ್ಮ ಅವಶ್ಯಕತೆಗಳು ಮತ್ತು ಅವುಗಳ ಪೂರೈಕೆ. ಕಂಪ್ಯೂಟರ್ ನಮ್ಮ ದಿನ ನಿತ್ಯದ ಅಗತ್ಯಗಳನ್ನು ಅದೆಷ್ಟು ಸುಸೂತ್ರವಾಗಿ ಸಮರ್ಪ ಕವಾಗಿ ಪೂರೈಸಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲವಲ್ಲ... ಆದರೇನು! ಎಲ್ಲ ಅಗತ್ಯಗಳೂ ಮಾನಸಿಕ ಸ್ಥಿತಿಯನ್ನೇ ಅವಲಂಬಿಸಿವೆಯಲ್ಲ. ನಮಗೆ ಬೇಕಾದದ್ದು ಇತರರಿಗೆ ಬೇಡವಾದೀತು. ನಮಗೆ ಬೇಕಿಲ್ಲದ್ದೂ ಒಣಪ್ರತಿಷ್ಠೆಗಾಗಿಯೇ ಇರಬೇಕೆನಿಸೀತು. ಮೂಲಭೂತ ಅವಶ್ಯಕತೆಗಳ ಮಾತಂತಿರಲಿ, ಹಣ ಬರುವುದು ಹೆಚ್ಚಾದಂತೆಲ್ಲ ಐಷಾರಾಮದೊಂದಿಗೆ ಸಲ್ಲದ ವಿಷಯೋಪಭೋಗಗಳೂ ಬೆಂಬತ್ತಿದರೆ ಆಶ್ಚರ್ಯವೇನಿಲ್ಲ. ಅನೂಚಾನವಾಗಿ ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ಬಂದ ಮೌಲ್ಯಗಳು ಇಂದು, ಅಂತಹ ಮೌಲ್ಯಗಳಾಗಿಯೆ ಉಳಿದಿವೆ ಎಂಬ ನಂಬಿಕೆ ಎಲ್ಲಿದೆ? ಇಂದಿನ ಯುವಜನಾಂಗ ಇಂತಹ ಮೌಲ್ಯಗಳೆಂಬುದರ ಬಗ್ಗೆ ತಲೆಕೆಡಿಸಿ ಕೊಂಡಂತಿಲ್ಲ. ಅವರಿಗೆ ಅವು ಬೇಕಾಗಿಯೂ ಇಲ್ಲ. “ಹಿರಿಯರು ನಡೆದದ್ದೇ ದಾರಿ. ಆ ದಾರಿ ಸರಿಯಾಗಿರುತ್ತದೆ” ಎಂಬ ಮಾತೊಂದಿತ್ತು. “ಇದೀಗ ಕಿರಿಯರು ನಡೆದದ್ದೇ ದಾರಿ, ಆ ದಾರಿ ಎಲ್ಲಿಗೆ ಹೋಗುತ್ತದೆಂಬುದು ಅವರಿಗೇ ಗೊತ್ತಿದ್ದಂತಿಲ್ಲ...ಗೊತ್ತಿದ್ದರೂ ಗುರಿತಲುಪುವುದು ಭ್ರಮೆಯಷ್ಟೇ...’’ ಇಂತಹ ಮುಂದುವರಿದ ಪೀಳಿಗೆ ಬಗ್ಗೆ ಇಂದಿನ ದಿನಗಳಲ್ಲಿ ಹೆತ್ತವರ,ಹಿರಿಯರ ಆತಂಕ ಕಳವಳಕಾರಿಯಾಗಿದೆ; ಆಗುತ್ತಲೇ ಇದೆಯಲ್ಲ...ಎಷ್ಟೋ ಬಾರಿ, ನಮ್ಮ ನಂಬಿಕೆಗೆ ಒಂದಿಷ್ಟೂ ಅರ್ಹವೆನಿಸದ ಈ ವಿಚಿತ್ರ ಪ್ರಪಂಚದಲ್ಲಿ, ಇಂತಹ ಯುವಜನಾಂಗವೂ ಋಜುಮಾರ್ಗ ತೊರೆಯುವ ಸಂಭವವೇ ಹೆಚ್ಚು ಹೆಚ್ಚಾಗಿ ತೋರುತ್ತಿದೆ. ಯಾವಾಗಲೂ ನಂಬಿಕೆ ಹೊರತು ಪಡಿಸಿದರೆ ಬದುಕಿನ ಪರಿಕಲ್ಪನೆಯೇ ಅಸಾಧ್ಯವಾಗುತ್ತದೆ. ಯುವಜನಾಂಗವೂ ಅಷ್ಟೇ ಎಲ್ಲದರಲ್ಲೂ ಎಲ್ಲರಲ್ಲೂ ನಂಬಿಕೆ ಕಳೆದುಕೊಂಡರೆ ಅವನತಿ ಕಾದಿರುತ್ತದೆ. ಇನ್ನೂ ಹೇಳಬೇಕೆಂದರೆ, ಹೇರಳ ಹಣವಿಲ್ಲದೇನೆ ಯಾವೊಂದು ವ್ಯಕ್ತಿಗತ ನಂಬಿಕೆಗಳೂ ಕಾರ್ಯ ಗತವಾಗಲಾರವು ಎಂಬ ವಾದಕ್ಕೇ ಪುಷ್ಟಿದೊರಕುತ್ತಿರುವುದು ದುರಾದೃಷ್ಟಕರ ಸಂಗತಿ. ಯಾಕೆಂದರೆ, ಅಂಥವರಿಗೆ ಇಂದಿನ ನಮ್ಮ ರಾಜಕೀಯ ಸಾಮಾಜಿಕ ವಿದ್ಯಮಾನಗಳೂ ಅಂತಯೆ ಕಾಡುತ್ತವೆ ಎಂಬುದೇ ದುರಾದೃಷ್ಟಕರ ಸಂಗತಿ. ಧರ್ಮ-ಕರ್ಮದ ನಂಬಕೆ, ಅಗೋಚರವಾದ ಶಕ್ತಿಯೊಂದರ ನಂಬಿಕೆಯೂ ಇಲ್ಲದೆ ನಿರ್ಭಾವುಕ ನಡವಳಿಕೆ, ಸ್ವೇಚ್ಛಾಚಾರಗಳು ಕೃತಕ ಹಾಗೂ ಆಧುನಿಕ ಐಷಾರಾಮೀ ಜೀವನ ಶೈಲಿಗೇ ಮರುಳಾದ, ಸ್ವಾರ್ಥಪರತೆಯ ಸೋಗುಗಳಿಂದ ಕೂಡಿದ, ಪೊಳ್ಳು ನಂಬಿಕೆಗಳಲ್ಲಿ ಹುಟ್ಟುತ್ತಿರುವ ಮೌಲ್ಯಗಳೇ “ಆಧುನಿಕ ಮೌಲ್ಯಗಳು” ಎನಿಸಿವೆ ಎಂಬ ಗುಮಾನಿ ಈಗೀಗ ಹೆಚ್ಚುತ್ತಿದೆಯಲ್ಲವೇ...?

-ಎಚ್.ಶಿವರಾಂ ಜುಲೈ 10, 2006

  • ಚಿಂತನೆ
~.~
  • Login or register to post comments
  • 632 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ನಾನು ಯಾವ ಆತ್ಮ
  • ಕನಸ್ಸು
  • ರಾಜಕೀಯ
Syndicate content

ಲೇಖಕರು

ritershivaram's picture

ಪೂರ್ಣ ಹೆಸರು
ritershivaram

ಪರಿಚಯ

ನಿವೃತ್ತ ನೌಕರ(Bsnl). ಚಿಂತಕ,ಸಾಹಿತಿ ಮತ್ತು ಕಂಪ್ಯೂಟರ್ ಶಿಕ್ಷಕ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರಿಯ ಮೊಸರನ್ನದಲ್ಲೇಕೆ ಪ್ರೇಮದ ಕಲ್ಲು?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
  • ಬಸವಣ್ಣನಾಗಬೇಕೆಂದು ಬಯಸಿದ ಯಡಿಯೂರಪ್ಪ ಅಮೆರಿಕದಲ್ಲಿ ಮೂಗಬಸವನಾದದ್ದು!
  • ತಪ್ಪಿ ನಡೆಸ ಸರ್ಕಾರ
  • ನಿಸ್ವಾರ್ಥಿ ಪಾರಂಪರಿಕ ವೈದ್ಯರ ಮುಂದೆ ಸ್ವಾರ್ಥದ ‘ಪೇಟೆಂಟ್’ ಹಾವಳಿ!
  • ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator