ಬ್ಲಾಗ್ ಸ್ಪಾಟ್ ಬಳಕೆದಾರರಿಗೊಂದು ಕಹಿ ಸುದ್ದಿ
ಬ್ಲಾಗ್ ಸ್ಪಾಟ್ ಡೊಮೈನು ಬಳಸುವ ಎಲ್ಲ ಬ್ಲಾಗುಗಳನ್ನು (ಉದಾ: kannada-kathe.blogspot.com) ಭಾರತದ ISPಗಳು (ಇಂಟರ್ನೆಟ್ ಸೌಲಭ್ಯ ಒದಗಿಸುವ ಕಂಪೆನಿಗಳು) ಬ್ಲಾಕ್ ಮಾಡಿದಂತಿದೆ. ಕೆಲವು ಮೂಲಗಳ ಪ್ರಕಾರ ಇದು ಭಾರತದ ಸರ್ಕಾರ ಜಾರಿಗೊಳಿಸಿರುವ ಆಜ್ಞೆ. ಉಗ್ರಗಾಮಿಗಳು ಬ್ಲಾಗ್‌ಸ್ಪಾಟನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ, ಆದ್ದರಿಂದ ಭಾರತದ ಸರಕಾರ ಐ ಎಸ್ ಪಿಗಳಿಗೆ blogspot ಬ್ಲಾಕ್ ಮಾಡುವಂತೆ ಆಜ್ಞೆಯಿತ್ತಿದೆ ಎಂಬ ಗುಲ್ಲು ಅಂತರಜಾಲದಾದ್ಯಂತ ಇಂದು ಹಬ್ಬಿದೆ. ಎಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ, ಆದರೆ ಅದು ನಿಜವೇ ಆಗಿದ್ದಲ್ಲಿ, ಹಾಗೆ ಬ್ಲಾಕ್ ಮಾಡುವುದರಿಂದ ಸರಕಾರಕ್ಕೂ ಇಲ್ಲಿನ ಜನತೆಗೂ ಹಾನಿಯೇ ಹೊರತು, ಬಹುಶಃ ಏನೂ ಸಾಧಿಸಿದಂತಾಗದು (ಏಕೆಂದರೆ ಪ್ರಾಕ್ಸಿ ಬಳಸಿ, ಅಥವಾ ಇನ್ನೊಬ್ಬರ ಕಂಪ್ಯೂಟರಿಗೆ ಲಾಗಿನ್ ಆಗಿ ಬ್ಲಾಗ್ ಸ್ಪಾಟ್ ಎಂದಿನಂತೆ ವೀಕ್ಷಿಸಬಹುದು).
ಹೆಚ್ಚಿನ ವಿವರ: ರೀಡಿಫ್ ಲೇಖನದಲ್ಲಿ, /. ಪುಟದಲ್ಲಿ.

- Login or register to post comments
- 1224 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
blogspot ಮಾತ್ರ ಅಲ್ಲ
ಕೆಲೆವೆಡೆ ಓದಿದಂತೆ blogspot ಮಾತ್ರ ಅಲ್ಲ, wordpress ಹಾಗೂ geocities ಕೂಡ ಕೆಲವೆಡೆ ಬ್ಲಾಕ್ ಮಾಡಿದ್ದಾರೆ. ಈ ಕೊಂಡಿಗಳನ್ನು ನೋಡಬಹುದು
ಬೋಯಿಂಗ್ ಬೋಯಿಂಗ್ ನಲ್ಲಿ ಲೇಖನ
ಇದರ ಕುರಿತಾದ ಬ್ಲಾಗ್
ಬ್ಲಾಕ್ ಮಾಡಿರುವ ISPಗಳ wiki ನಿಮ್ಮ ISP ಇದರಲ್ಲಿಲ್ಲದಿದ್ದರೆ ಸೇರಿಸಬಹುದು.
ಗೂಗಲ್ ಗುಂಪು
ತಿದ್ದುಪಡಿ - ಕೆಲವು ಗೆಳೆಯರಿಗೆ wordpressನಲ್ಲೇನೂ ತೊಂದರೆ ಇಲ್ಲ.
ದೊಡ್ಡ ಪಟ್ಟಣಗಳಿಂದ ದೂರ ಇರುವವರಿಗೂ ಏನೂ ತೊಂದರೆ ಕಂಡುಬಂದಿಲ್ಲ..
ಯಾರಾದರೂ ಪರೀಕ್ಷಿಸಿ ಹೇಳಿದರೆ ಉತ್ತಮ
-ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಟೈಪ್‌ಪ್ಯಾಡ್ ಮತ್ತು ಬ್ಲಾಗ್‌ಸ್ಪಾಟ್
ವರ್ಡ್‌ಪ್ರೆಸ್ ಡಾಟ್ ಕಾಮ್ ಬ್ಲಾಕ್ ಮಾಡಲಾಗಿಲ್ಲ. ಜಿಯೋಸಿಟೀಸ್, ಬ್ಲಾಗ್‌ಸ್ಪಾಟ್ ಮತ್ತು ಟೈಪ್‌ಪ್ಯಾಡ್ ಬ್ಲಾಕ್ ಆಗಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಸರ್ಕಾರದ ತಪ್ಪಿಲ್ಲ
ಈ ಸಿಎನ್ಎನ್ ಐಬಿಎನ್ ವರದಿ ಸರ್ಕಾರದ್ದು ಏನೂ ತಪ್ಪಿಲ್ಲ ಎಂಬುದು ತಿಳಿಯುತ್ತದೆ.
ಯಾರಿಗ್ ಗೊತ್ತು?
ಯಾರಿಗ್ ಗೊತ್ತು, ಸಾಹೇಬ್ರೆ. ಐ ಬಿ ಎನ್ ನಲ್ಲಿ ಹಾಗೆ ಸುದ್ದಿ ಬಂದ ಮಾತ್ರಕ್ಕೆ ನಿಜವಿರಲೇಬೇಕೆಂದೇನಿಲ್ಲ. ಎಲ್ಲ ISPಗಳೂ ಸಂಪೂರ್ಣ ಬ್ಲಾಕ್ ಮಾಡುತ್ತಿದ್ದವೆ ಸರಕಾರ ಸರಿಯಾಗಿ ಆದೇಶ ಹೊರಡಿಸಿದ್ದರೆ?
ಅಷ್ಟಕ್ಕೂ ಬ್ಲಾಕ್ ಮಾಡುವ ಪದ್ಧತಿ ಎಂಥದ್ದು? ಚೀನ, ಪಾಕಿಸ್ತಾನಕ್ಕೂ ನಮ್ಮ ಭಾರತಕ್ಕೂ ವ್ಯತ್ಯಾಸ ಏನು ಉಳಿಯಿತು? ಅಮೇರಿಕದವರ ವಿರುದ್ಧ ಇರಾಕ್ ದಾಳಿಯ ನಂತರವಂತೂ ನೂರಾರು ವೆಬ್ಸೈಟುಗಳು ತಲೆಯೆತ್ತಿಕೊಂಡಿವೆ... ಅಮೇರಿಕ ಅವುಗಳನ್ನು ಬ್ಲಾಕ್ ಮಾಡಿರುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಬರಿಯೋದಕ್ಕೂ ಓದೋದಕ್ಕೂ ದಾರಿ ಅಂತೂ ಇದ್ದೇ ಇದೆ!:)
ಬ್ಲಾಗ್ ಸ್ಪಾಟ್ ಬ್ಲಾಕ್ ಆಗಿದೆ ಅಂತ ಎಲ್ಲ ಸ್ನೇಹಿತರ ಜೊತೆ ಹಾಹಾಕಾರ ಹಂಚಿಕೊಂಡಾದಮೇಲೆ ಬ್ಲಾಗರ್ ನಲ್ಲಿ ಲಾಗ್ ಇನ್ ಆಗೋಕೆ ಏನೂ ತೊಂದರೆ ಇಲ್ಲ ಅನ್ನೋದು ಗೊತ್ತಾಯ್ತು. ಆದ್ದರಿಂದ ಎಂದಿನಂತೆ ಪೋಸ್ಟ್ ಗಳನ್ನ ಏರಿಸೋಕೆ ತೊಂಡರೆ ಏನೂ ಇಲ್ಲ. ಇನ್ನು ಬರೆದಿದ್ದನ್ನ ಓದೋಕೆ ನಮ್ಮ್ ಪ್ಲಾನೆಟ್ ಕನ್ನಡ ಇದ್ದೇ ಇದೆಯಲ್ಲ:) ಕನ್ನಡ ಗ್ರಹದಲ್ಲಿಲ್ಲ್ದೇರೋವ್ರು ಪ್ರಾಕ್ಸಿ ಸರ್ವರ್ ಮೊರೆ ಹೋಗ್ಬೇಕು ಅಷ್ಟೆ:) ರಂಗೋಲಿ ಕೆಳಗೆ ತೂರೋ ಜನ ನಾವು ಭಂಡ ಬ್ಲಾಗರ್ಸ್!
ಸೇತುವೆ ಕಡಿದು ಈಜಿಕೊಂಡು ಹೋಗು ಎಂದಂತೆ
ಹೆ ಹೆ. ನಮ್ಮ ಸರಕಾರದಲ್ಲಿ ಚುಕ್ಕಾಣಿ ಹಿಡಿದು ಕುಳಿತಿರುವವರ ಪೆಂಗತನ ತೋರಿಸುತ್ತದೆ.

ಸುಮ್ಮನೆ ಎಲ್ಲ ಬ್ಲಾಗುಗಳನ್ನು ಮತಿಭ್ರಷ್ಟರ ತರಹ ಬ್ಲಾಕ್ ಮಾಡಿ ಕುಳಿತಿದ್ದಾರೆ
ಸೇತುವೆ ಕಡಿದು ಈಜಿಕೊಂಡು ಹೋಗು ಎಂದಂತೆ - ಪ್ರಜಾಪ್ರಭುತ್ವ ಅಂದರೆ ಇಷ್ಟೇನ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಬ್ಲಾಗ್ ಸ್ಪಾಟ್ ಬ್ಲಾಕ್ ಮಾಡುವ ಬಗ್ಗೆ
ಅಂದರೆ, ಸರ್ಕಾರಕ್ಕೆ ಅಷ್ಟೂ ಗೊತ್ತಿಲ್ಲವೆ ಅಥವಾ ಭಯೋತ್ಪಾದಕರಿಗೆ/ಅವರ ಶುಭ ಚಿಂತಕರಿಗೆ, ಬ್ಲಾಗ್ ಸ್ಪಾಟ್ ಬ್ಲಾಕ್ ಮಾಡಿದರೂ ಪ್ರಾಕ್ಸಿ ಬಳಸಿ ಓದಬಹುದು ಎಂದು ಗೊತ್ತಿರಲಿಕ್ಕಿಲ್ಲ ಎಂಬುದು ಸರ್ಕಾರದ ಯೋಚನೆಯೆ?
ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ??
೧. ಸರ್ಕಾರದ ತಪ್ಪಿಲ್ಲ ಎನ್ನುವುದು ಸರಿಯಿಲ್ಲ ಎಂದು ನನ್ನ ಅಭಿಪ್ರಾಯ. ಸರ್ಕಾರದ ಆದೇಶ ಹೊತ್ತು ನಡೆಸಲಾಗುವ ಯಾವುದೇ ತಪ್ಪಿಗೂ ಪರೋಕ್ಷವಾಗಿ ಸರ್ಕಾರವೇ ಹೊಣೆ ಆಗುತ್ತದೆ.
೨.ಹಾಗೊಮ್ಮೆ ತಪ್ಪು ನಡೆದಿದ್ದೇ ಆದರೆ ಇನ್ನೂ ಏಕೆ ಸಮಜಾಯಶಿ ಬಂದಿಲ್ಲ??
೩.ತನ್ನ ಅದಕ್ಷತೆ ಮುಚ್ಚಿ ಹಾಕಲು ಈ ರೀತಿ ಕ್ರಮವೇ??
೪.ಇದೇ ರೀತಿಯ "ಭಾರತ ದ್ವೇಷಿಸುವವರ", ಮತಾಂಧ ಕೂಟಗಳು orkut ನಲ್ಲಿವೆ. ಹಾಗಾದರೆ ಅದನ್ನೂ ಏಕೆ ಬ್ಲಾಕ್ ಮಾಡಲಾಗಿಲ್ಲ??
ಈ ರೀತಿಯ ಕ್ರಿಯೆಗಳು ಹಾಸ್ಯಾಸ್ಪದವಾಗುತ್ತವೇ ಹೊರತು ಕಾರ್ಯಸಾಧುವಲ್ಲ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಲೈವ್‍ಜರ್ನಲ್.com
ಲೈವ್‍ಜರ್ನಲ್ ಡಾಟ್ ಕಾಮ್ ಇದೆಯಲ್ಲಾ...
ಬ್ಲಾಗುಗಳ ತಾಣಗಳಿಗೆ ಈಗ ಬೇಟಿ ಕೊಡಬಹುದು
ಬಹುಶಃ ಜನರ ಭಾರೀ ವಿರೋಧಕ್ಕೆ ಮಣಿದ ಸರ್ಕಾರಗಳು ಬ್ಲಾಗುಗಳ ಮೇಲಿನ ನಿರ್ಬಂದವನ್ನು ತೆಗೆದು ಹಾಕಿರಬೇಕು... ನಾವೀಗ ಬ್ಲಾಗುಗಳನ್ನು ಪ್ರಾಕ್ಸಿ ಸರ್ವರ್ ಉಪಯೊಗಿಸದೆ ಅಕ್ಸೆಸ್ ಮಾಡಬಹುದು.
ನೀವೂ ಪ್ರಯತ್ನಿಸಿ ನೋಡಿ....
http://kannada-kathe.blogspot.com/
http://chutuka.blogspot.com/
http://lekhana.blogspot.com/
ಧನ್ಯವಾದಗಳೊಂದಿಗೆ
ರಾಘವೇಂದ್ರ.ಎಸ್