ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ?

July 20, 2006 - 4:03pm — shreekant.mishrikoti

ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ? ಈ ಬಗ್ಗೆ ಹಿಂದೊಂದು 'ಎಲ್ಲೋ ಹುಟ್ಟಿ ಎಲ್ಲೋ ಬೆಳೆದು' ಸಣ್ಣ ಲೇಖನವನ್ನು ಬರೆದಿದ್ದೆ . ಮೊನ್ನೆ ಸಂಪದದಲ್ಲಿ ಬೇಂದ್ರೆಯವರ 'ಪರಾಗ' ಕವಿತೆಯ ಕುರಿತು ಒಂದು ಒಳ್ಳೆಯ ಲೇಖನ ನೋಡಿದೆ . ಇತ್ತೀಚೆಗೆ ಶ್ರೀ ಎಚ್. ಎಸ್. ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದರಲ್ಲಿ ಈ ಕೆಳಗಿನ ಕವನ ನೋಡಿದೆ. ಕವನ ತುಂಬ ಸರಳವಾಗಿದೆ . ಅದರೆ ಅದು ಕಾವ್ಯವನ್ನು ಅರ್ಥೈಸಿಕೊಳ್ಳುವ ಕುರಿತಾಗಿರುವದರಿಂದ ಕಾವ್ಯಾಸಕ್ತರಿಗೆ ಅನುಕೂಲವಾಗಬಹುದೆಂದು ಇಲ್ಲಿ ಕೊ(ಕು)ಟ್ಟಿದ್ದೇನೆ. ಹಾಡು ಹಾಡು ಎಂದರೆ ಇನ್ನೂ ಜಾಡು ಮೂಡದ ಕಾಡು ! ಹಿಡಿದದ್ದೇ ಹಾದಿ , ಅದೇ ಆದಿ . ರೊಟ್ಟಿ ಮುರಿಯುವದಕ್ಕೆ ಒಂದು ಮುಖವೇ ? ಹಲ್ಲೊಂದಿದ್ದರೆ ಹೇಗೂ ಸುಖವೇ. ಈ ಹಾಡು ತನಗೆ ತಾನೇ ಮೂಡಿ ಇಂದು ಕಾಡು ಹೀಗೆ ಹೋಗುವದು , ಹಾಗೆ ಹೋಗುವದು ಎಂದು ಇಲ್ಲೇನಿಲ್ಲ ಕಟ್ಟುಪಾಡು ! ಹೇಡಿಗಳು ಇದ ಕಂಡು ಹೆದರಿ ಹಿಂದಕೋಡಿದರೆ ಮೊಂಡು ಜನ ಇದರಲ್ಲಿ ಕಂಡ ಕಡೆ ನುಗ್ಗಿ ಮೈ ನೆಗ್ಗಿ - ನುಗ್ಗಿ , ಕೈ ಕಾಲು ಮಂಡಿ ನೋಯಿಸಿಕೊಂಡರೆ ಸೋಗಲಾಡಿ ಕಿಲಾಡಿ ಜನ ದೂರದಿಂದಲೇ ಇದರ ಚೂರು ಫೋಟೋ ಹಿಡಿದು ಕಟ್ಟು ಗಾಜಿನ ಮಧ್ಯೆ ಇಟ್ಟು ಕೊಂಡಾಡಿದರೆ ಶಕ್ತ ನುಗ್ಗಿ , ನಿಶ್ಶಕ್ತ ನೆಗ್ಗಿ ಒಬ್ಬನಿಗೆ ಬರೀ ಕೋತಿ , ಕೋಳಿ , ಹಾವು , ಹಂದಿ ಒಬ್ಬನಿಗೆ ಗಿಳಿ, ನವಿಲು, ಬೆಳ್ಳಕ್ಕಿ , ಜಿಂಕೆ . ಯಾರೋ ಪುಣ್ಯಾತ್ಮನಿಗೆ , ಜಲಪಾತಗೀತ - ಇದ್ದಕ್ಕಿದ್ದಂತೆ , ಅಥವಾ ಬೆಳಕನು ಕಂಡ ಯಾವ ಮುನಿಯೋ ಲಭ್ಯವಿದ್ದಂತೆ ಕಾಡಿನಲಿ ಕಂಡರೆ - ತಾವು ಕಂಡುದೆ ಸತ್ಯ ಎಂದು ಅವರೆಂದರೆ ನಮಗೇನು ತೊಂದರೆ ? - ಎಚ್. ಎಸ್. ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದು - ಪುಸ್ತಕದಿಂದ

  • ಕಾವ್ಯ ಮತ್ತು ಕವನ
~.~
  • Login or register to post comments
  • 855 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ-ಭಾಗ -೧
  • ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
  • ನಾನು ಮಾಡಿದ ಪುಸ್ತಕಗಳ ವಿಲೇವಾರಿ .
  • ನನ್ನ ಕಾವ್ಯ
  • ಸತ್ಯ ಎಷ್ಟು ಸರಳ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !
  • ಚಾ(ವ)ಡಿ ಪಟ್ಟಾಂಗ
  • ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 43 ಅತಿಥಿಗಳು ಆನ್ಲೈನ್ ಇರುವರು.


ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator