Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ನೆನಪು

July 23, 2006 - 10:32am — ಶ್ರೀನಿಧಿ

ಹೇ ರಾಧೆ,

ನಿನ್ನ ಬಳೆಗಳ ಮೆಲ್ದನಿಗಳಿಗೆ
ಝೇಂಕರಿಪ ಬೆಳ್ಳಿ ಕಾಲ್ಗೆಜ್ಜೆ,
ನನ್ನ ಮುರಳೀ ಗಾನಕ್ಕೆ ನಿನ್ನ ಗಾನವು ಬೆರೆತು
ತಂಪಾದ ಮಧುವನವು
ನೆನಪಿಲ್ಲವೇ ನಿನಗೆ ಹೇ ರಾಧೆ??

ನಿನ್ನ ಮಡಿಲ ಮಂಟಪದಿ
ತಲೆಯಿಟ್ಟು ಮಲಗಿರಲು ನಾ
ನಿನ್ನ ಕಂಗಳ ಕಾಡಿಗೆ ನನ್ನ ತುಟಿಗಳ ಮೇಲಿರಲು
ನಾನಿಟ್ಟ ಮುತ್ತುಗಳು
ಮರೆತುಹೋದವೇ ನಿನಗೆ ಹೇ ರಾಧೆ??

ನೀನಿರದ ಈ ದ್ವಾರಕೆಯಲಿ,
ನಿನ್ನ ನೆನಪಿನಾ ವಿರಹ,
ಬೆಳದಿಂಗಳೂ ನನಗೆ ಸಹ್ಯವಿಲ್ಲ ರಾಧೇ,
ನನ್ನ ಕನಸಲಾದರೂ ಇಂದು
ಬರಲಾರೆಯಾ ಹೇ ರಾಧೆ??

-ಶ್ರೀನಿಧಿ

(ರಾಧೆಯ ವಿರಹದ ಕುರಿತು ಅನೇಕ ಕವನಗಳನ್ನು ಓದಿದ ನನಗೆ ಕೃಷ್ಣನ ಮನದಲ್ಲಿ ರಾಧೆಯ ನೆನಪು ಹೇಗಿರಬಹುದು ಎಂದು ಯೋಚಿಸಿದಾಗ ಹೊಳೆದಿದ್ದು ಈ ಕವನ. ಚುಟುಕ ಬರೆಯಲು ಹೋದ ನಾನು ಕೊನೆಗೆ ಬರೆದಿದ್ದು ಈ ಕವನ.
ಸಂಧರ್ಭ:
ಕೃಷ್ಣ ಗೋಕುಲದಿಂದ ಬಂದು ಬಹಳ ವರ್ಷಗಳಾಗಿವೆ. ದ್ವಾರಕೆಯಲ್ಲಿ ನೆಲಸಿಯಾಗಿದೆ. ಸಾಗರ ಮಧ್ಯದಲ್ಲಿರುವ ದ್ವಾರಕೆಯಲ್ಲಿ ಬೆಳದಿಂಗಳ ರಾತ್ರಿ. ಇಂತಹ ಕಾಲದಲ್ಲಿ ರಾಧೆಯ ನೆನಪು ಕಾಡುತ್ತಿದೆ ಕೃಷ್ಣನಿಗೆ)

  • ಕಾವ್ಯ ಮತ್ತು ಕವನ
Ornamental seperator
  • Login or register to post comments
  • 908 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿನ್ನ ನೆನಪು..."
  • ನಲ್ಲನಲ್ಲೂಂದು ಕೋರಿಕೆ..
  • ನನ್ನ ಹಂಬಲ
  • ಸದಾ ನಿನ್ನ ಜೊತೆ
  • ಸೇರಿಗೆ ಸವಾಸೇರು
Syndicate content

ಲೇಖಕರು

ಶ್ರೀನಿಧಿ's picture

ಪೂರ್ಣ ಹೆಸರು
ಶ್ರೀನಿಧಿ ನರಸಿಂಹಾಚಾರ್

ಪರಿಚಯ

ಹುಟ್ಟಿದ್ದು ಬೆಂಗಳೂರಾದರೂ ಬಾಲ್ಯದ 13 ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಮತ್ತೆ ಬೆಂಗಳೂರು, ನಂತರ ಅಲ್ಲೇ ಕೆಲಸ. ಎಂ. ಎಸ್ ಕ್ಲೆಂಸನ್, ಯು.ಎಸ್.ಏ ಯಲ್ಲಿ ಮುಗಿಸಿ ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದೇನೆ.

ಹವ್ಯಾಸ- ಓದು, ಕರ್ನಾಟಕ ಶಾಸ್ತ್ರೀಯ ಸಂಗೀತ, ತತ್ವಶಾಸ್ತ್ರ, ಕ್ರಿಕೆಟ್, ಟಿ.ಟಿ,ಕನ್ನಡ ಚಲನಚಿತ್ರ(ತುಂಬಾ ವೀಕು).
ನೆಚ್ಚಿನ ಲೇಖಕರು/ಕವಿಗಳು - ತಾರಾಸು, ಭೈರಪ್ಪ, ಸತ್ಯಕಾಮ, ಮಾಸ್ತಿ, ಬೇಂದ್ರೆ, ಗೊರೂರು, ರಾಶಿ, ಅ.ರಾ. ಮಿತ್ರ, ನಯಸೇನ, ಇನ್ನೊ ಅನೇಕ!!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಮ್ಮಜಿಖಷೆಸ್ಸ ಖನಮ ಒಜಿ
  • ಅಂತಿಮ ಸಂಸ್ಕಾರ:ಹೊಸ ವಿಧಾನ
  • ದಾವೂದ್ ಇಬ್ರಾಹಿಂ ಬಂಧನ......ನಂತರ
  • ಪ್ರತ್ಯಕ್ಷ ನೋಡಿದರೂ...
  • ನಶಿಸುತ್ತಿರುವ ಶಬ್ದ ಬಳಕೆ
  • ಎಚ್ಚರ! ಡ್ಯೂಪ್ಲಿಕೇಟ್ Volvo ಸೇವೆ ಲಭ್ಯವಿದೆ
  • ಭಾರತದ ಜ್ಞಾನಾವತಾರ

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಯಾವನು ಎಲರಣುಗ ?
    May 12, 2008 - 8:30pm
  • kannadakanda
    ಉ: ಸರಿ
    May 12, 2008 - 8:24pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:15pm
  • kannadakanda
    ಉ: ಇವುಗಳ ತಿಳಿವು/ಅರ್ತ ಏನು?
    May 12, 2008 - 8:12pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:12pm
  • raghava
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:10pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 8:03pm
  • agilenag
    ಉ: ಏಕಾಕ್ಷರೀ
    May 12, 2008 - 8:01pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 7:26pm
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator