XMLHttpRequest ಬಳಸಿ POST ರಿಕ್ವೆಸ್ಟ್ ಕಳುಹಿಸುವುದು
ಈಗ ನೋಡಿ, ನೀವು ಯಾವುದೇ ಅಂತರ್ಜಾಲದ ಪುಟ ನೋಡ್ತಾ ಇದ್ರೂ, ಅಲ್ಲಿ http ಕಾಣತ್ತೆ. ಉದಾಹರಣೆಗೆ ನೀವು ಈಗ ಓದುತ್ತಿರುವ ಬರಹದ (URL) ಬಾರ್ ನೋಡಿದರೆ, ನಿಮಗೆ http://sampada.net ಇರವುದು ಗಮನಕ್ಕೆ ಬರುತ್ತೆ, ಅಲ್ವಾ. ಇದು ಏನಪ್ಪಾ ಅಂದ್ರೆ,
ನಿಮ್ಮ ಬ್ರೌಸರ್ರು ಮತ್ತು ಸಂಪದ ಸರ್ವರ್ರು ಒಬ್ಬರಿಗೊಬ್ಬರು ಮಾತಾಡಿಕೊಳ್ಳೋಕ್ಕೆ http ಪ್ರೋಟೋಕಾಲ್ ಬಳಸತ್ತೆ ಅಂತ ಅರ್ಥ ಅಷ್ಟೇ ;-) ಇದು ಒತ್ತಟ್ಟಿಗಿರಲಿ. ಜನರಿಗೆ ವೆಬ್ಸೈಟನ್ನು ಬಳಸಲು ಅನುಕೂಲವಾಗಲಿ ಅಂತ ಈಗ ಎಲ್ಲೆಲ್ಲೂ Ajax ಅನ್ನೋ ಮಾಯೆಯನ್ನು ಬಳಸುತ್ತಾ ಇರುತ್ತಾರೆ. "Ajax" ಅಂದ್ರೆ ಜಾವಾಸ್ಕ್ರಿಪ್ಟ್ ಮೂಲಕ http ರಿಕ್ವೆಸ್ಟುಗಳನ್ನು ಕಳುಹಿ..ಆಮೇಲೆ ಏನೇನೇನೇನೋ ಮಾಡುವುದು ಅಂತ ಅಷ್ಟೇ ;-)
ಈ ಜಾವಾಸ್ಕ್ರಿಪ್ಟಿನ ಮೂಲಕ http ರಿಕ್ವೆಸ್ಟ್ ಕಳುಹಿಸಬಹುದು ಅಂದ್ನಲ್ಲ, ಅದು ಹೇಗೆ ಅಂದ್ರೆ.. XMLHttpRequest ಅನ್ನೋ ಜಾವಾಸ್ಕ್ರಿಪ್ಟ್ ಆಬ್ಜೆಕ್ಟ್ ಬಳಸಬೇಕು. ಇಷ್ಟು ದಿನ ಇದರ ಮೂಲಕ ಬರೀ GET ರಿಕ್ವೆಸ್ಟ್ ಬಳಸ್ತಾ ಇದ್ದೆ. ಈ ದಿನ POST ಹೇಗಪ್ಪಾ ಕಳುಹಿಸುವುದು ಅನ್ನೋ ಅನುಮಾನ ಬಂತು. ಹಾಗೆ ತಿಳಿದುಕೊಳ್ಳೋಕ್ಕೆ ಪ್ರಯತ್ನಿಸುತ್ತಾ ಇದ್ದಾಗ, ಈ ಕೊಂಡಿ ಸಿಕ್ತು..
ನೋಡಿ, Using POST method in XMLHTTPRequest(Ajax)
ನನ್ನ ಕೆಲವು ಅನುಮಾನ ಪರಿಹಾರ ಆಗಿದೆ. ಮುಂದೆ ನೀವು ಯಾವಾಗಲಾದರೂ XMLHttpRequest ಮೂಲಕ POST ರಿಕ್ವೆಸ್ಟ್ ಕಳುಹಿಸಬೇಕಿದ್ದರೆ ಈ ಬರಹ ನೆನಪಿನಲ್ಲಿಟ್ಟುಕೊಂಡಿರಿ.
ಕೊಕೊ - ಈ XMLHttpRequestಗೆ ಚಿಕ್ಚೊಕ್ವಾಗಿ (=Short and Sweet ಆಗಿ) XHR ಅಂತ ಹೇಳ್ತೀವಿ.
- Login or register to post comments
- 296 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ನನ್ನ ಇಷ್ಟದ ಟಾಪಿಕ್ ಬರೆದು ನನ್ನ ಮನಸ್ಸನ್ನು ಉಲ್ಲಾಸಗೊಳಿಸಿದ್ದಕ್ಕಾಗಿ... ನನ್ನಿ :)
ಇನ್ನು ಸರಳವಾಗಿ ಹೇಳ್ಬೇಕು ಅಂದ್ರೆ...
ಸಾಮಾನ್ಯವಾಗಿ ವೆಬ್ ಸೈಟ್ ಗಳಲ್ಲಿ ಲಿಂಕ್/ಬಟನ್ ಕ್ಲಿಕ್ ಮಾಡಿದಾಗ ನಮಗೆ ಏನು ಬೇಕು ಎಂದು ಸರ್ವರ್(ವೆಬ್ ಸೈಟ್ ಹೋಸ್ಟ್ ಮಾಡಿದ ಜಾಗ) ಗೆ ಸಂದೇಶ ಕಳುಹಿಸುತ್ತೆ. ಮತ್ತೆ ಉತ್ತರಕ್ಕಾಗಿ ಕಾಯುತ್ತಿರುತ್ತೆ. ಸರ್ವರ್ ನಿಂದ ಉತ್ತರ ಸಿಕ್ಕ ನಂತರ ಅದನ್ನ ನಮಗೆ ತೋರಿಸುತ್ತೆ. ಇದು ನಡೆಯುವಾಗ ಪುಟ ಒಮ್ಮೆ ರಿಫ್ರೆಶ್ ಆಗುತ್ತೆ.
AJAX ಅನ್ನು ಬಳಸಿದಾಗ, ಈ ತರಹ ಸಂದೇಶಗಳನ್ನು ಸರ್ವರ್ ಗೆ ಹಿಂದಿನಿಂದ(ನಡೆಯುತ್ತಿರುವ ಕೆಲಸಕ್ಕೆ ತೊಂದರೆ ಕೊಡದೆ) ಕಳಿಸುತ್ತದೆ. ಈ ಸಮಯದಲ್ಲಿ ವೆಬ್ ಪೇಜ್ ನ ಬೇರೆ ಕೆಲಸಗಳೂ ನಡೆಯುತ್ತಿರುತ್ವೆ. ಮತ್ತೆ ಉತ್ತರ ಸಿಕ್ಕಾಗ ಅದನ್ನು ಹಿಂದಿನಿಂದಲೇ ಸಂಸ್ಕ್ರಯಿಸಿ ನಮಗೆ ತೋರಿಸುತ್ತೆ, ಇದು ನಡೆಯುವಾಗ ಪುಟ ರಿಫ್ರೆಶ್ ಆಗೋದಿಲ್ಲ.
ಉತ್ತಮ ಉದಾಹರಣೆ:
ಸಂಪದದಲ್ಲಿ ಕಮೆಂಟ್ ಬರೆದು ಸಬ್ಮಿಟ್ ಮಾಡಿದಾಗ ಪುಟ ರಿಫ್ರೆಶ್ ಆಗುತ್ತೆ. ಆದರೆ ರೇಟಿಂಗ್(ಸ್ಟಾರ್) ಮಾಡಿದಾಗ ಪುಟ ರಿಫ್ರೆಶ್ ಆಗೋದಿಲ್ಲ ಅದೂ ಅಲ್ಲದೆ, ನಮ್ಮ ರೇಟಿಂಗ್ ಸೇವ್ ಆಗುವ ವರೆಗೆ ನಾವು ಆ ಪುಟದಲ್ಲಿ ಬೇರೆ ವಿಷಯಗಳನ್ನು ಓದುತ್ತಾ ಇರಬಹುದು.
AjAX ನನ್ನ ಮೆಚ್ಚಿನ ವಿಷಯ. ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದ.
ಅರರೆ, ನನ್ನಿ ನನ್ನಿ... ದಿಲ್ ಕುಶ್ ಆಯ್ತು..
ನನ್ನಿ ಹೇಳಿದ್ದು, ಈ ಬರಹವನ್ನೋದಿ ಟಿಪ್ಪಣಿ ಹಾಕಿದ ಅರವಿಂದ ಮತ್ತು ವಿನಯರಿಗೆ ;-)
AJAX ನಂಗೂ ತುಂಬ ಇಸ್ಟ. ಸಿಂಪಲ್ಲಾಗಿ ಇದರ ಬಗ್ಗೆ ಹೇಳೋದಾದ್ರೆ, ನಾವು ಒಂದು ಬಟನ್ ಒತ್ತಿದಾಗ, ಪೇಜ್ ರಿಲೋಡ್ ಆಗುತ್ತಲ್ವ? ಇದರಿಂದ ರಿಸ್ಪಾನ್ಸ್ ಲೇಟ್ ಆಗಿ ಬರುತ್ತೆ, ಇದನ್ನ ತಪ್ಪಿಸೋಕೆ ಮತ್ತು ಯುಸರ್ ಕೊಟ್ಟ ಡಾಟಾನ ಇನ್ನೂ ಸಬ್ಮಿಟ್ ಮಾಡಿಲ್ಲದೇ ಇರಬೇಕಾದರೆನೇ ಅದನ್ನ ಸರ್ವರ್‍ಗೆ ಕಳಿಸಿ, ಆ ಕೂಡಲೆನೇ ರಿಸ್ಪಾನ್ಸ್ ತುಗೊಳೋಕೆ AJAX ನೆರವಾಗುತ್ತದೆ.(google ನಲ್ಲಿ ನೀವಿನ್ನೂ ಟೈಪ್ ಮಾಡೋವಾಗಲೇ ಕೆಲ ಪದಗಳು ಲಿಸ್ಟ್ ಆಗುತ್ತವಲ್ಲವೇ, ಅದು AJAX ಬಳಸಿಯೇ ಮಾಡಿರೋದು) ನೀವು ಒಂದು ವೆಬ್‍ಸೈಟಲ್ಲಿ ಬಟನ್ ಒತ್ತಿರದಿದ್ದರೂ ಯಾವುದೇ ಅಕ್ಕರ ಟೈಪ್ ಮಾಡಿದ್ದರೂ ಸಾಕು, ಅದು ಆ ಸೈಟ್ ಓನರ್ ಗೆ ತಲುಪಬಹುದು, ಅದಕ್ಕೆ ಹುಶಾರಾಗಿರಿ!!. :)
ನಿಮಗೆ ಜಾವಾಸ್ಕ್ರಿಪ್ಟ್ ಗೊತ್ತಿದ್ದರಂತೂ ಅಜಾಕ್ಸ್ ತುಂಬಾ ಸಿಂಪಲ್, ಸ್ಯಾಂಪಲ್ ಕೋಡ್ ಇಲ್ಲಿದೆ ನೋಡಿ, http://www.w3schools...