22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಭಾರತ ನಮ್ಮ ಶತ್ರು ಅಲ್ಲ

May 10, 2009 - 5:06pm
abdul
ಈ ನುಡಿ ಮುತ್ತನ್ನು ಉದುರಿಸಿದವರು ಪಾಕ್ ಅಧ್ಯಕ್ಷ ಜರ್ದಾರಿ. ಅವರಿಗೆ ಈ ವಿಷಯ ಈಗ ಹೊಳೆಯಿತೋ ಅಥವಾ ಇದೇ ಅಭಿಪ್ರಾಯ ಪಾಕ ಆಡಳಿತಗಾರರಲ್ಲೂ ಇದೆಯೋ ಎನ್ನುವುದು ನಮಗೆ ಗೊತ್ತಿಲ್ಲ. ಸಾವಿರ ವರ್ಷ ಭಾರತದೊಂದಿಗೆ ಕಾದಾಡುವ ಅಭಿಲಾಷೆ ಹೊಂದಿದ್ದ ದಿವಂಗತ ಮಾಜಿ ಪ್ರಧಾನಿಯವರ ವಿಧುರ ಈ ಮಾತನ್ನು ಹೇಳಿ ನಮ್ಮನ್ನು ಸ್ವಲ್ಪ ಚಕಿತಗೊಳಿಸಿದ್ದಂತೂ ನಿಜವೇ. ಏಕೆಂದರೆ ಪಾಕಿಗಳಿಗೆ ನಮ್ಮನ್ನು ದ್ವೇಷಿಸುವ, ಪ್ರತಿಯೊಂದಕ್ಕೂ ನಮ್ಮ ಮೇಲೆ ಗೂಬೆ ಕೂರಿಸುವ ಪರಿಪಾಠ ಹಳೆ ಹವ್ಯಾಸ. ಈಗ ಈ ಹವ್ಯಾಸದಿಂದ ಸ್ವಲ್ಪ ಬಿಡುವು ತೆಗೆದುಕೊಳ್ಳಲು ಜರ್ದಾರಿ ನಿರ್ಧರಿಸಿದ್ದರೆ ಅದು ಅವರಿಗೂ ಅವರ ದೇಶಕ್ಕೂ ಉತ್ತಮ. ಈ ರೀತಿಯ ನಮ್ಮನ್ನು ತಬ್ಬಿಬ್ಬುಗೊಳಿಸುವ ರಾಜಕಾರಣಿಗಳ ಹೇಳಿಕೆಗಳ ವಿಷಯಕ್ಕೆ ಬರುವುದಾದರೆ ಇತ್ತೀಚಿನ ಎರಡು ಘಟನೆಗಳು ನೆನಪಾಗುತ್ತವೆ. ದೇಶದೆಲ್ಲೆಡೆ ಬಾಂಬ್ ಸ್ಫೋಟವಾದಾಗ "ಮುಸ್ಲಿಂ" ಭಯೋತ್ಪಾದಕರ ಕೆಲಸ ಎಂದು ಜರೆದಿದ್ದ ಭಾಜಪ ನಾಯಕರು ಹುತಾತ್ಮ ಹೇಮಂತ್ ಕರ್ಕರೆ pandora's box ತೆರೆದು ಎಲ್ಲರನ್ನೂ ದಿಗ್ಮೂಢರನ್ನಾಗಿಸಿದಾಗ ಉಲಿದಿದ್ದು ಭಯೋತ್ಪಾದಕರಿಗೆ ಧರ್ಮ ಇಲ್ಲ ಎಂದು. ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯ ಧ್ವಂಸದ ಉಸ್ತುವಾರಿ ತೆಗೆದುಕೊಂಡಿದ್ದ, ಧ್ವಂಸದ ಬಗ್ಗೆ ತನಗೆ ಲವಲೇಶವೂ ಪಶ್ಚಾತ್ತಾಪವಿಲ್ಲ ಎಂದು ಬೀಗಿದ್ದ ಕಲ್ಯಾಣ್ ಸಿಂಗ್ ಈಗ ಹೇಳುತ್ತಿರುವುದು ಬೇರೆಯೇ. ಮಸೀದಿಯ ಧ್ವಂಸ ಅವರ ನಿರ್ಧಾರವಲ್ಲ ಮತ್ತು ಅದರ ಬಗ್ಗೆ ನನಗೆ ಬಹಳ ಖೇದವಿದೆ ಎಂದು ಮುಸ್ಲಿಂ ನಾಯಕರ ಬಳಿ ಬಂದು ಅಲವತ್ತುಕೊಂಡು ಕ್ಷಮೆ ಕೋರಿದರು. ಹೀಗೆ ತಮಗೆ ಬೇಕಾದ ಸಮಯದಲ್ಲಿ ಬೇಡದ ಅವಾಂತರ ಸೃಷ್ಟಿಸಿ ನಂತರ ಶತ್ರುವನ್ನು ಮಿತ್ರ ಎನ್ನುವುದೂ, ಪಶ್ಚಾತ್ತಾಪ ಪಟ್ಟುಕೊಳ್ಳುವುದೂ ಬರೀ ಕಣ್ಣೊರೆಸುವ ತಂತ್ರವೋ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು.
ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Vyasraj on
ನೀವು ಬರೆದಿರುವ ಲೇಖನಕ್ಕೆ ಪೂರಕವಾಗಿ ಕೊಟ್ಟ ಎರಡು ಉದಾಹರಣೆಗಳು ಸಮಂಜಸವಾಗಿಲ್ಲ .... ಅವು ನನಗಂತೂ ಉಲ್ಟಾ ಭಾವನೆಗಳನ್ನು ತರಿಸಿದವು ... ಉದಾ : > ಇದರರ್ಥ ನನಗೆ 'ಭಾರತ ಪಾಕ್ ಶತ್ರು' ಅಂತ ಹೇಳ್ದಂಗಿತ್ತು ...

Submitted by abdul on
ಪಾಕ ಪ್ರಕಾರ ನಾವು ಅವರ ಶತ್ರು, ಈಗ ಅವರಿಗೆ ಜ್ಞಾನೋದಯವಾಗಿ ಸಮೀಕರಣ ಬದಲಾಗಿವೆ. ನನ್ನ ಉದ್ದೇಶ ತಾವು ತಿಳಿದ ಹಾಗಲ್ಲ. ಪ್ರತಿಕ್ರಿಯೆಗೆ ವಂದನೆಗಳು.

Submitted by Vyasraj on
ನಿಮ್ಮ ಉದ್ದೇಶ ಅಂತ ಹೇಳಿರ್ಲಿಲ್ಲ ...anyway smiley ಬಿಟ್ಟಿದ್ದಕ್ಕೆ ನೀವು ಆ ಥರ ತಿಳ್ಕೊಂಡ್ರಿ ಅಂತ ಕಾಣ್ಸುತ್ತೆ :)

Submitted by ಉಉನಾಶೆ on
ಕಲನ್ : ಮತ್ತು ಬ್ರಾಕೆಟ್ ) ಒಟ್ಟಿಗೆ ಹಾಕಿ :) ಸ್ಮೈಲಿಗೆ ಕಲನ್ ಬಿಟ್ಟು ಸೆಮಿಕಲನ್ ಹಾಕಿ ನೋಡಿ, ಕಣ್ಣು ಹೊಡೆಯೋ ಸ್ಟೈಲಿಗೆ ;)

Submitted by huchcha on
22 ನವಮ್ಬರ್ 2008. ಈ ಅಡತಾರಿ ಜರದಾರಿ ಹೀಂಗೇ ಹೆಳಿದ್ದಾ. ಭಾರತಾ ನಮ್ಮ್ ದುಸ್ಮನ್ ಅಲ್ಲಾ ಅಮ್ತ 26 ನವಮ್ಬರ್ 2008. ಬಾಂಬೆ ಒಳಗ್ ಬಯೊತ್ಪಾದನೆಯ ಕ್ರತ್ಯಾ. 10 ಮೆ 2009. ಈ ಅಡತಾರಿ ಜರದಾರಿ ಮತ್ತ್ ಹೆಳ್ಯಾನ್. ಬಾರತಾ ನಮ್ಮ್ ದುಸ್ಮನ್ ಅಲ್ಲಾ ಅಮ್ತ್ ಸ್ವಲ್ಪ್ ದಿನಾ ನಾವು ಎಚ್ಚರಾ ಇರ್ಬೆಕ್ರಿ

Submitted by abdul on
ಇಲ್ಲಿ ರಾಜಕಾರಣಿಗಳ ಎಡಬಿಡಂಗಿತನವನ್ನು ಎತ್ತಿ ತೋರಿಸುವ ಪ್ರಯತ್ನವಷ್ಟೇ ಮಾಡಿರುವುದು. ವಂದನೆಗಳು

Submitted by asuhegde on
"ಭಾರತ ನಮ್ಮ ಶತ್ರು ಅಲ್ಲಾ.." ಅಂತ ಅವರು ಕನ್ನಡದಲ್ಲಿ ಹೇಳಿದ್ದಾಗಿದ್ದರೆ, ಅವರು ಭಾರತವನ್ನು ತಮ್ಮ ಶತ್ರು ಅಲ್ಲ ಅಂತ ಹೇಳರೆಂದೆ ನಾನು ಖಂಡಿತಕ್ಕೂ ನಂಬುತ್ತಿರಲಿಲ್ಲ. "ಭಾರತ ನಮ್ಮ ಶತ್ರು...ಅಲ್ಲಾಹ್.." ಅಂತ ಓದಿ ಬಿಡ್ತಿದ್ದೆ. (ಈ ಲೇಖನದ ತಲೆಬರಹವನ್ನು ನಾನು ಮೊದಲನೇ ಬಾರಿಗೆ ಓದಿದಾಗ, ನನ್ನ ಮನಸ್ಸಿಗೆ ತೋರಿದ ಅರ್ಥ ಇದೇ ಆಗಿತ್ತು).