ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇನ್ಸೆಪೆಕ್ಟರ್: "ಏನ್ರೀ ಕರಿಯಪ್ಪ ಸೌತ್ ಆಫ್ರಿಕಾಗೆ ಟ್ರಾನ್ಸ್ಫರ್ ಕೇಳಿದೀರಾ!"
ಕಾ.ಕ: "ಅಲ್ಲ ಸಾ, ಲಾಸ್ಟ್ ಇಯರ್ರು ಚೀರ್ ಲೀಡರ್ಸ್ ಪಕ್ಕದಾಗೇ ಡ್ಯೂಟಿ ಹಾಕಿದ್ರಿ. ಈ ವರ್ಸ ಬುಟ್ಬುಟ್ರಲ್ಲಾ ಸಾ. ಅದಕ್ಕೆ!"
ಇನ್ಸೆಪೆಕ್ಟರ್: "ಏಲ್ರೀ ನಿನ್ನೆ ಹಿಡಿದಿದ್ದ ಕೈದಿ ಕಾಣ್ತಾ ಇಲ್ವಲ್ಲಾ?"
ಕಾ.ಕ: "ಮೇಲಿಂದ ಆರ್ಡರ್ ಮಾಡಿದ್ರು, ಅದಕ್ಕೇ ಬುಟ್ಬುಟ್ಟೆ!"
ಇನ್ಸೆಪೆಕ್ಟರ್: "ಏನ್ ಆರ್ಡರ್ ಮಾಡಿದ್ರು?"
ಕಾ.ಕ: "ಕೈದಿಯ ಅಣ್ಣನ ಬಾರ್ ನಿಂದ ಎರ್ಡು ಕ್ವಾರ್ಟರ್ ಮತ್ತೆ ಕೋಳಿ ಬಿರ್ಯಾನಿ ಆರ್ಡರ್ ಬಂತು"
No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಹಾಸ್ಯ

asuhegde's picture

ಕಾನ್ಸ್ಟೇಬಲ್ ಕರಿಯಪ್ಪಾ...ಆಫ್ರಿಕಾಕ್ಕೆ ಹೋದ್ರಾ ಇಲ್ವಾ?
ಟೀವೀನಾಗೆ ಕ್ರಿಕೆಟ್ ನೋಡೋವಾಗ ಕರ್ರಗಿನ ಕಾನ್ಸ್ಟೇಬಲ್ ಒಬ್ರನ್ನ ನೋಡ್ದಂಗಾಗಿತ್ತು...
ಹಾಸ್ಯ ಸಖತ್ ಆಗಿದೆರೀ, ಸದ್ಯದ ಮದ್ರಾಸಿ ಕನ್ನಡಿಗರೇ...

:-)

ಉ: ಹಾಸ್ಯ

hpn's picture

ಅಲ್ಲ, 'ಸಧ್ಯದ मद्रासी ಕನ್ನಡಿಗ!' :P

ಉ: ಹಾಸ್ಯ

asuhegde's picture

ನಿಮ್ಮ "ಸಂಪದದಲ್ಲಿ ಕನ್ನಡದಲ್ಲೇ ಬರೆಯಬೇಕು" ಎಂಬ ನಿಯಮ ಮೀರುವ ಧೈರ್ಯ ಬರಲಿಲ್ಲವೇನೋ ನನಗೆ...
;)

ಉ: ಹಾಸ್ಯ

savithru's picture

ಉತ್ತರ ಭಾರತಕ್ಕೆ ಹೋದರೆ...

ಅಲ್ಲಿ ನಾವೆಲ್ಲರೂ ಅಂದ್ರೆ, ಕರ್ನಾಟಕ, ಆಂಧ್ರ, ಮಲಯಾಳಿ, ತಮಿಳ, ಎಲ್ಲರೂ ಮದ್ರಾಸಿಗಳೇ!!.
ಹಾಗಾಗಿ ಇವರು ಸಧ್ಯಕ್ಕಂತೂ ಅಲ್ಲ ಮುಂಚೆ , ನಂತರವೂ ಮದ್ರಾಸಿನೆ ! ;)

(ಹೀಗೀಗ ಸ್ವಲ್ಪ awareness ಬರ್ತಾ ಇದೆ.)

ಉ: ಹಾಸ್ಯ

Shashikanth. Birge's picture

>>>ಉತ್ತರ ಭಾರತಕ್ಕೆ ಹೋದರೆ...<<<

ನನಗು ಹಾಗೆ ಕರೀತಿದ್ರು ದಿಲ್ಲಿಲಿದ್ದಾಗ, ಸಾಬ್ ಮದ್ರಾಸಿ ಹೈ ಅಂತಿದ್ರು, ಒಂದಿನ ಕ್ಲಾಸ್ ತೊಗೊಂಡೆ,
ಆವತ್ತಿಂದ "ಸಾಬ್ ಮದ್ರಾಸಿ ನಹಿ ಹೈ" ಅಂತಿದ್ರು. (ಕರ್ನಾಟಕ ಅನ್ನೋದಕ್ಕೆ ಅವ್ರ ನಾಲಿಗೆನೆ ಹೊರಳ್ತಿರಲಿಲ್ಲ)

ಶಶಿ ಬಿರ್ಗೆ

ಉ: ಹಾಸ್ಯ

sb1966's picture

:)

ಉ: ಹಾಸ್ಯ

savithru's picture

ಶಶಿಕಾಂತ ಅವರೇ

ಇದರಲ್ಲಿ ಸಿಟ್ಟು ಮಾಡಿಕೊಳ್ಳುವ ವಿಷಯವೇನೂ ಇಲ್ಲ. ಉತ್ತರದವರಿಗೆ ದಕ್ಷಿಣದ ಕನ್ನಡ ತಮಿಳು, ತೆಲುಗು ಮಲಯಾಳೀ ಇತ್ಯಾದಿ ಭಾಷೆ/ಜನಗಳ ಬಗ್ಗೆ ಪರಿಚಯವಿಲ್ಲ. ದಕ್ಷಿಣದವರೆಲ್ಲಾ ಮದ್ರಾಸಿಗಳೇ/ ತಮಿಳರೇ ಅಂತ ಹೆಚ್ಚಿನವರು ಅನ್ಕೊಂಡಿದಾರೆ.

ನಾವು ನಿಧಾನವಾಗಿ ಪರಿಚಯ ಮಾಡಿಕೊಡಬೇಕು ಅಷ್ಟೇ.!

ನಂದು ಬೆಂಗಳೂರು ಅಂದಾಗ... ಒಬ್ಬ ಸಿಖ್ಖ್, ನನ್ನ ಜೊತೆ ತಮಿಳು ಬಗ್ಗೆ ಮಾತಾಡೋಕೆ ಶುರು ಮಾಡಿದ! ಆಗ ನಾನು ತಾಳ್ಮೆಯಿಂದಾನೆ ಬೆಂಗಳೂರು ಕರ್ನಾಟಕದಲ್ಲಿ ಇರೋದು.. ಅಲ್ಲಿ ಕನ್ನಡ ಮಾತಡೋದು ಅಂತ ಪರಿಚಯ ಮಾಡಿಕೊಟ್ಟ ಮೇಲೆ ಅವನಿಗೆ ಅರ್ಥ ಆಯ್ತು! :)

ಕೊಸರು:: ಅವರು ಮದ್ರಾಸಿ ಅನ್ನೋದನ್ನು ಬೈಯ್ಯುವ ರೀತಿಯಲ್ಲೂ ಬಳಸುತ್ತಾರೆ. ( ಇಲ್ಲಿ ಕೆಲವರು ಶೂದ್ರ / ಶೂದ್ರ ಮುಂಡೇದೂ ಅಂತಾರಲ್ಲ ಹಾಗೆ! )

ಉ: ಹಾಸ್ಯ

Shashikanth. Birge's picture

ಯಾವ ಡಿಪಾರ್ಟ್ಮೆಂಟ್ ನಲ್ಲಿ ಕೆಲ್ಸಕಿದ್ದಿರಾ??
ಪೋಲಿಸ್ನೋರ ಹಿಂದೆ ಬಿದ್ದಿದ್ದಿರಾ?

--
ಶಶಿ ಬಿರ್ಗೆ

ಉ: ಹಾಸ್ಯ

sb1966's picture

ನಾನು ಎಲ್ಲಾ ಟ್ರಾಫಿಕ್ ರೂಲ್ಸ್ ಅನುಸರಿಸ್ಕೊಂಡು ಗಾಡಿ ಓಡಿಸ್ತಾ ಇರೋದ್ರಿಂದ ಅವ್ರೇ ನನ್ನ ಹಿಂದೆ ಬಿದ್ದಿದ್ದಾರೆ ಸ್ವಾಮೀ! :)