May 14, 2009 - 12:38pm
"ಇಕ್ಕಳ"
ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ನಿಂತರೆ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ಇವಗಿಲ್ಲ ಚಿಂತೆ
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಓದಿದರೆ ಹೇಳುವರು ಮತ್ತೊಮ್ಮೆ ಬರೆಯೊ
ಬರೆದಿಡಲು ಬೆದಕುವರು ಬರವಣಿಗೆ ಸರಿಯೋ
ಇವರ ಬಯಕೆಗಳೇನೋ ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ಲೇಖಕರು: ಶ್ರೀ ಕೆ.ಎಸ್.ನ
ಜನಾರ್ಧನನ್ನಾದರೂ ಮೆಚ್ಚಿಸಬಹುದು ಜನರನ್ನು ಮೆಚ್ಚಿಸುವುದು ಕಷ್ಟ ಅಲ್ಲವೇ?:)
ಇದು ನನಗೆ ಬಹಳ ಪ್ರಿಯವಾದ ಕವನ. ನಿಮ್ಮೊಂದಿಗೆ ಹಂಚಿಕೊಳ್ಳೋಣವೆನಿಸಿತು. ಇಲ್ಲಿ ಹಾಕಿದ್ದೇನೆ.
ಲೇಖನ ವರ್ಗ (Category):









ಪ್ರತಿಕ್ರಿಯೆಗಳು
ಉ: ನನ್ನ ಮೆಚ್ಚಿನ ಕವನ
ಉ: ನನ್ನ ಮೆಚ್ಚಿನ ಕವನ
ಉ: ನನ್ನ ಮೆಚ್ಚಿನ ಕವನ
ಉ: ನನ್ನ ಮೆಚ್ಚಿನ ಕವನ
ಉ: ನನ್ನ ಮೆಚ್ಚಿನ ಕವನ
ತು0ಬಾ ಸು0ದರವಾದ ಕವನಾ ಮ್ಯಾಡಮ್ ನನಗೂ ತು0ಬಾ ಇಷ್ಟವಾಯಿತು.