ಇಷ್ಟ
ಜೀವದಾಗಸದಲ್ಲಿ ನಗುವಿನಾಗರದಲ್ಲಿ ನನ್ನ ನೀ ನಿನ್ನತ್ತ ಸೆಳೆಯುತಿರುವೆ
ಯಾವುದನೂ ಹೇಳದೆಯೇ ಯಾರನೂ ಕೇಳದೆಯೇ ನನ್ನ ಮನವನೆತ್ತಲೋ ನೀ ಒಯ್ಯುತಿರುವೆ .
ಏನ ಹೇಳಲಿ ಕಂದ ನಿನ್ನ ನೋಟವು ಚಂದ,
ಆಡುವಾ ಮಾತುಗಳು ಅಂದಚಂದ.
ನಿನ್ನ ನಾ ನೋಡುತಿರೆ ಜಗವೆಲ್ಲ ಅಂದ ಮನಸುಗಳ ನಡುವಿಹುದು ಕಾಣದಾ ಸಂಬಂಧ .
ಸುಮ್ಮ ಸುಮ್ಮನೆ ಬರುವೆ ನೂರು ನೆನಪನು ತರುವೆ ,ನನ್ನೇಕೆ ಹೀಗೆ ನೀ ಕಾಡುತಿರುವೆ .?
ಅಲ್ಲಿ ನೋಡಲು ನೀನೆ ,ಎಲ್ಲಿ ನೋಡಲು ನೀನೆ ,ಕಾಡುವ ವಿದ್ಯೆಯಲಿ ನೀ ಪ್ರವೀಣೆ !
ನೀ ಮನಕೆ ಬಾರದ ದಿನಗಲೊಂದೂ ಇಲ್ಲ ನಿನ್ನದೇ ನೆನಪಲ್ಲಿ ಕಳೆವೆ ನಾ ದಿನವೆಲ್ಲ.
ಕಣ್ಣೆದುರು ನೀ ನಿಂತು ,ಮನದಲ್ಲಿ ನೀ ಬಂದು ,ಯೋಚನೆಯ ಮಾಡುವುದೇ ನನಗೀಗ ಕಷ್ಟ .
ನಿನ್ನ ಸಿಹಿ ನೆನಪುಗಳು ಕಷ್ಟವಾದರೂ ಇಷ್ಟ ,ಕಾರಣವೂ ತಿಳಿದಿಲ್ಲ ನೀನನಗೆ ಇಷ್ಟ....!!!:-)
--ಅಪೂರ್ವ ಚಂದ್ರ
- Login or register to post comments
- 158 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಆತ್ಮೀಯ
<<ಕಣ್ಣೆದುರು ನೀ ನಿಂತು ,ಮನದಲ್ಲಿ ನೀ ಬಂದು ,ಯೋಚನೆಯ ಮಾಡುವುದೇ ನನಗೀಗ ಕಷ್ಟ .
ನಿನ್ನ ಸಿಹಿ ನೆನಪುಗಳು ಕಷ್ಟವಾದರೂ ಇಷ್ಟ ,ಕಾರಣವೂ ತಿಳಿದಿಲ್ಲ ನೀನನಗೆ ಇಷ್ಟ....!!!>>ಕಣ್ಣೆದುರು>
ಏನ್ ಡಾಕ್ತ್ರೇ ಕಣ್ಣೆದುರಿಗೆ ನಿ೦ತು ಮನ್ಸಿನಲ್ಲಿ ಬ೦ದರೂ ಯೋಚನೆ ಮಾಡೋದು ಕಷ್ಟವೇ ಸಿಹಿ ನೆನಪುಗಳು ಕಷ್ಟವೇ? ಃಇಗೆ ಹೇಳಿ
ಕೊನೆ ನೀನೆನಗೆ ಇಷ್ಟ ಅ೦ದ್ರಲ್ಲ ಅದು ಚ೦ದ ಇದೆ .
ಚ೦ದ ಬರೆದಿದ್ದೀರ ಮು೦ದುವರೆಸಿಮ್ಮ.
ಹರೀಶ ಅತ್ರೇಯ